ಪೋಸ್ಟ್‌ಗಳು

ಅಕ್ಟೋಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೌರಾಣಿಕ-ಲೇಖನ : "ಕುಂತಿ" published in PRERANA on Nov 2013

‘ಕುತೂಹಲ’ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನು ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲೂ ಗುಟ್ಟಾದ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ “ಕುಂತಿ”ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳನ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ. ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತನೆಯೋ ಇಲ್ಲವೋ ಎಂಬ “ಕುತೂಹಲ”ವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸಿನ ಕುಂತಿಯು ಸ

ಅರಿಸ್ಟಾಟಲ್’ನ ಅನುಕರಣ ಸಿದ್ಧಾಂತ : ಎಂ.ಎ.ಕನ್ನಡ

ಅನುಕರಣಾವಾದ : 19ನೆಯ ಶತಮಾನದವರೆಗೆ ಯುರೋಪಿನ ಎಲ್ಲಾ ಭಾಷೆಗಳ ಸಾಹಿತ್ಯ ವಿಮರ್ಶೆಯಲ್ಲಿಯೂ ಅತ್ಯಂತ ಪ್ರಭಾವಶಾಲಿಯಾಗಿದ್ದ ಒಂದು ಮೌಖಿಕ ಪರಿಕಲ್ಪನೆ " ಅನುಕರಣಾವಾದ " ( THEORY OF IMITATION ). " ಪ್ಲೇಟೋ " ಮತ್ತು " ಅರಿಸ್ಟಾಟಲ್ " ಇಬ್ಬರೂ ಕಾವ್ಯದ ಸ್ವರೂಪವನ್ನು ಚರ್ಚಿಸುವ ಸಂದರ್ಭದಲ್ಲಿ "ಇಮಿಟೇಶನ್" ಶಬ್ದವನ್ನು ಬಳಸುತ್ತಾರೆ. ' ಇಮಿಟೇಶನ್ ’ ಎಂಬ ಶಬ್ದವು ಗ್ರೀಕ್ ಭಾಷೆಯ 'ಮಿಮೆಸಿಸ್’ ಶಬ್ದಕ್ಕೆ ಪರ್ಯಾಯವಾಗಿದೆ. ಪ್ಲೇಟೋ " ಅನುಕರಣ " ಶಬ್ದವನ್ನು ಅದರ ಸಂಕುಚಿತ ಅರ್ಥದಲ್ಲಿ "ಪ್ರತಿರೂಪ" ಅಥವಾ "ನಕಲು" ಎಂದು ಉಪಯೋಗಿಸುತ್ತಾನೆ. ಪ್ಲೇಟೋ ಹೇಳುತ್ತಾನೆ: ೧) ಕಲೆ ನಮ್ಮಲ್ಲಿನ ಹೀನ ವಾಸನೆಗಳಿಗೆ ಪುಷ್ಟಿ ನೀಡುತ್ತದೆ. ಕಾಮ ಕ್ರೋಧಗಳನ್ನು ಪೋಷಿಸುತ್ತವೆ. ೨) ಕಲಾವಿದರು ದೇವದೇವತೆಗಳನ್ನು ಮತ್ತು ಮಹಾ ಪುರುಷರನ್ನು  ಸಾಮಾನ್ಯರಂತೆ ಚಿತ್ರಿಸಿ ಅವರ ಮಹತ್ವಕ್ಕೆ ಚ್ಯುತಿ  ತರುತ್ತಾರೆ. ಈ ಕಾರಣಗಳಿಂದ ತಾತ್ವಿಕ ಮತ್ತು ನೈತಿಕ ನೆಲೆಗಳಲ್ಲಿ ಪ್ಲೇಟೋ ಕಲೆಯನ್ನು ನಿರಾಕರಿಸುತ್ತಾನೆ. ಆದರೆ ಪ್ಲೇಟೋವಿನ ವಿದ್ಯಾರ್ಥಿ " ಅರಿಸ್ಟಾಟಲ್ " ತನ್ನ ಗುರುವಿನ ಆರೋಪವನ್ನು ಅಲ್ಲಗೆಳೆದು,"ಕಲೆ"ಯ ಪಾತ್ರವನ್ನು ಸಮರ್ಥಿಸಲು "ಅನುಕರಣ"ದ ಪರಿಕಲ್ಪನೆಯನ್ನು ಉಪಯೋಗಿಸುತ್ತಾನೆ. ಆದರೆ ಅರಿಸ್ಟಾ

A C Bradley's ಕಾವ್ಯಕ್ಕಾಗಿ ಕಾವ್ಯ : ಎಂ.ಎ.ಕನ್ನಡ

ಕವಿ ಪರಿಚಯ: ಎ.ಸಿ. ಬ್ರ್ಯಾಡ್ಲೀ (1851) ಇಂಗ್ಲೀಷ್ ಸಾಹಿತ್ಯದ ವಿದ್ವಾಂಸ. ತಮ್ಮ ತಂದೆಯ ಇಪ್ಪತ್ತೊಂದು ಮಕ್ಕಳಲ್ಲಿ ಕೊನೆಯವರು.ಓದಿನ ನಂತರ "ಲಿವರ್ ಪೂಲ್" ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರು. ನಂತರ ಲಿವರ್ ಪೂಲ್, ಗ್ಲಾಸ್ಗೋ, ಎಡಿನ್ ಬರ್ಗ್, ಡರ್ಹಾಮ್ ವಿಶ್ವವಿದ್ಯಾನಿಲಯಗಳು ನೀಡಲು ಬಂದ ಗೌರವ ಡಾಕ್ಟರೇಟ್ ಅನ್ನು ನಿರಾಕರಿಸಿದರು. ಬ್ರಾಡ್ಲೀ ಮದುವೆ ಮಾಡಿಕೊಂಡಿಲ್ಲ, ಅವಿವಾಹಿತರು. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ರಿಸರ್ಚ್ ಫೆಲೋಶಿಪ್ ಸ್ಥಾಪಿಸಿದ್ದಾರೆ. ಬ್ರಾಡ್ಲೀ ಅವರು ಬರೆದಿರುವ " ಷೇಕ್ಸ್ ಪಿಯರಿಯನ್ ಟ್ರಾಜೆಡಿ " ಕೃತಿಯು ಎಲ್ಲರಿಂದಲೂ ಅತ್ಯಂತ ಕಟು ಟೀಕೆಗೆ ಒಳಗಾಗಿದ್ದರೂ, ಇಂದಿಗೂ ಸಹ ಅತ್ಯುತ್ತಮ ಮತ್ತು ಪ್ರಭಾವಿ ಕೃತಿಯಾಗಿದೆ. ಈ ಕೃತಿಯು ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣ ಕಂಡಿದೆ.  ಬ್ರಾಡ್ಲೀಯ ಸಿದ್ಧಾಂತವಾದ " ಕಾವ್ಯಕ್ಕಾಗಿ ಕಾವ್ಯ " ವಿಷಯವು, ಆತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ್ದ ಒಂದು ಆರಂಭಿಕ ಉಪನ್ಯಾಸವಾಗಿತ್ತು. ಮತ್ತು ಅದೇ ವರ್ಷ ಆತ ಅದನ್ನು ಪ್ರಕಟಿಸಿದ. ಬ್ರಾಡ್ಲೀಯ ಕೃತಿಗಳು:       ೧) ಷೇಕ್ಸ್ ಪಿಯರಿಯನ್ ಟ್ರಾಜೆಡಿ       ೨) ಆಕ್ಸ್ ಫರ್ಡ್ ಲೆಕ್ಚರರ್ಸ್       ೩) ಹೆಲೆನಿಕಾ       ೪) ಕಾವ್ಯಕ್ಕಾಗಿ ಕಾವ್ಯ್       ೫) ಮೆಮೋರಿಯಂ       ೬) ಟೆನಿಸನ್ ನ ಒ

ಕವಿ ಮತ್ತು ಕಾವ್ಯದ ಮೇಲೆ William Wordsworth ನ ವಿಚಾರಧಾರೆ ಎಂ.ಎ.ಕನ್ನಡ

Wordsworth (1770) ಇಂಗ್ಲೀಷ್ ಭಾಷೆಯ ಒಬ್ಬ ಶ್ರೇಷ್ಠ ಕವಿ. ಕನ್ನಡ ನವೋದಯದ ಕವಿಗಳ ಮೆಚ್ಚುಗೆ ಪಡೆದವನು. Wordsworth ನಿಗೆ ಚಿಕ್ಕ ವಯಸ್ಸಿನಿಂದಲೂ ನಿಸರ್ಗದಲ್ಲಿ ಅಪಾರವಾದ ಪ್ರೇಮ. ಒಂದು ರೀತಿಯಾದ ಅಸಾಧಾರಣ ಆಕರ್ಷಣೆ. ಫ್ರಾನ್ಸಿನ ಮಹಾಕ್ರಾಂತಿಯ ತತ್ವಗಳಿಂದ ಆಕರ್ಷಿತನಾಗಿದ್ದವನು, ಈ ಕ್ರಾಂತಿಯಿಂದ ಉಂಟಾದ ಕ್ರೌರ್ಯ, ರಕ್ತಪಾತಗಳನ್ನು ಕಂಡು ರೋಸಿದವನು. 1839 ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ ಈತನಿಗೆ ಗೌರವ ಡಾಕ್ಟರೇಟ್ ನೀಡಿದೆ.  Wordsworth ಕಾವ್ಯ ಜೀವನದಲ್ಲಿ ಗಾಢ ಪ್ರಭಾವವನ್ನು ಬೀರಿದವರಲ್ಲಿ ಇಬ್ಬರು ಪ್ರಮುಖರು. ಅವರೆಂದರೆ ಒಬ್ಬಳು ಅವನ ತಂಗಿ ಡೊರೋಥಿ, ಮತ್ತೊಬ್ಬ ಶ್ರೇಷ್ಠ ಕವಿ-ವಿಮರ್ಶಕ ಎಸ್.ಟಿ.ಕೊಲರಿಜ್. 1798ರಲ್ಲಿ “ ಲಿರಿಕಲ್ ಬ್ಯಾಲೆಡ್ಸ್ ” ಎಂಬ Wordsworthನ ಕವನ ಸಂಕಲನ ಹೊರಬಂತು. ಈ ಕವನ ಸಂಕಲನವು “ರೊಮ್ಯಾಂಟಿಕ್ ಕಾವ್ಯ” ದ ಉದಯವನ್ನು ಸ್ಪಷ್ಟವಾಗಿ ಸಾರಿತು. ಇದರಲ್ಲಿ Wordsworth ಮತ್ತು ಕೊಲರಿಜ್ ಇಬ್ಬರ ಕವನಗಳೂ ಇವೆ.  Wordsworth ಅತಿ ಸಾಮಾನ್ಯ ಎನ್ನಿಸುವಂತಹ ವಿಷಯದ ಮೇಲೆಯೂ ಕವನ ಬರೆದಿದ್ದಾನೆ. ಈ ಮೂಲಕ ರೊಮ್ಯಾಂಟಿಕ್ ಚಳುವಳಿಯ ನಾಯಕನಾಗಿದ್ದಾನೆ. ಕಾವ್ಯಭಾಷೆಯ ಕೃತಕತೆ ನಿವಾರಿಸಿ ಕಾವ್ಯ ಭಾಷೆಯನ್ನು ಸಹಜಗೊಳಿಸಿದ್ದಾನೆ.  Wordsworth ಕವನಗಳು: ಪ್ರಿಲ್ಯೂಡ್ ದಿ ಡಫೋಡಿಲ್ಸ್ ಮೈಕೆಲ್ ರೆಸಲ್ಯೂಷನ್ ಅಂಡ್ ಇಂಡಿಪೆಂಡೆನ್ಸ್ Wordsworth ಪ್ರಕಾರ ಕವಿ-ಕಾವ್ಯದ ಉದ್ದೇಶ: ಕವ

ಸಂಸ್ಕೃತ ಮೃತ ಭಾಷೆಯೇ?

ಸಂಸ್ಕೃತ ಎಂದರೆ “ ಸಮ್ಯಕ್ ಕೃತಂ ” ಇದರರ್ಥ ಒಪ್ಪವಾಗಿ ಮಾಡಲ್ಪಟ್ಟಿದ್ದು ಅಂತ . ಸಂಸ್ಕೃತ ಇಂದಿನ ಭಾಷೆಯಲ್ಲ. ಅದು ಇಂಡೋ ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಬಹು ಪುರಾತನವಾದ ಮತ್ತು ಭಾರತದ ಶಾಸ್ತ್ರೀಯ ಭಾಷೆ. ಅತಿ ಪುರಾತನ ಗ್ರಂಥಗಳಾದ ವೇದ-ಉಪನಿಷತ್‍ಗಳು ಇದೇ ಭಾಷೆಯಲ್ಲಿ ಇದೆಯೆಂದರೆ ಸಂಸ್ಕೃತವು ಎಷ್ಟು ಹಿಂದಿನಿಂದಲೇ ರೂಢಿಯಲ್ಲಿತ್ತು ಅಂತ ಊಹಿಸಬಹುದು.   ಯುರೋಪಿನಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೊಂದಿರುವ ಸ್ಥಾನಮಾನವನ್ನು ಭಾರತದಲ್ಲಿ ಸಂಸ್ಕೃತ ಹೊಂದಿದೆ. ಇದು ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೇ ಹಿಂದೂ , ಬೌದ್ಧ ಮತ್ತು ಜೈನ ಧರ್ಮಗಳ ಪಾರಂಪರಿಕ ಭಾಷೆಯೂ ಆಗಿದೆ. ಈ ಭಾಷೆಯು ಅತ್ಯಂತ ಸಂಪದ್ಭರಿತ ಭಾಷೆಯಾಗಿದ್ದು , ಈ ಭಾಷೆಯಲ್ಲಿ ಇಲ್ಲದಿರುವುದೇ ಇಲ್ಲ ಎನ್ನಬಹುದಾಗಿದೆ. ವೇದ , ಪುರಾಣ , ಉಪನಿಷತ್‍ಗಳು , ಇತಿಹಾಸ , ಭೂಗೋಳ , ವಿಜ್ಞಾನ , ಜ್ಯೋತಿಷ್ಯ , ಖಗೋಳಶಾಸ್ತ್ರ ಮುಂತಾದ ಕೃತಿಗಳು ಸಂಸ್ಕೃತದಲ್ಲಿ ರಚನೆಯಾಗಿವೆ ಎಂದರೆ ಸಂಸ್ಕೃತದ ವಿಶಾಲತೆಯ ಅರಿವಾಗುತ್ತದೆ. ಸಂಸ್ಕೃತವನ್ನು "ದೇವ ಭಾಷೆ" ಅಂತಲೂ ಕರೆಯುತ್ತಾರೆ. ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತುಂಬಾ ಕಡಿಮೆ. ಆದರೆ ಆಧುನಿಕ ಭಾರತೀಯ ಭಾಷೆಯಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವಾಗಿವೆ. ಸಂಸ್ಕೃತವು ಎಲ್ಲಾ ಭಾರತೀಯ ಭಾಷೆಗಳ ತಾಯಿಯಾಗಿದೆ. ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ ವ

ಮದುವೆ ಎಂಬ ಅದ್ಭುತ ವ್ಯವಸ್ಥೆ

‘ಮದುವೆ’ ಎಂಬ ಪರಿಕಲ್ಪನೆಗೆ ನಮ್ಮ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಹೇಗೆಂದರೆ ಮದುವೆ ಆಗಿಲ್ಲದವರನ್ನು ನಮ್ಮ ಜನರು ಕನಿಕರದಿಂದ ನೋಡುವಾಗ “ಮದುವೆ” ಎಂಬ ಪದದ ಅರ್ಥ ತಿಳಿಯುತ್ತದೆ. ಜೊತೆಗೆ ‘ಮದುವೆ’ ಎಂಬ ಪದಕ್ಕೆ ಸಮಾಜ ಕೊಡುವ ಗೌರವವೂ ಅರಿವಾಗುತ್ತದೆ. ಹಾಗಾದರೆ ಮದುವೆಯೇ ಮಾಡಿಕೊಳ್ಳದೇ ಬದುಕಲು ಸಾಧ್ಯವಿಲ್ಲವೇ? ಯಾಕಿಲ್ಲ.. ಎಷ್ಟೋ ಜನ ತಮ್ಮ ಧ್ಯೇಯಕ್ಕಾಗಿ ಮದುವೆ ಮಾಡಿಕೊಳ್ಳದೇ ಹಾಗೇ ಉಳಿದಿದ್ದಾರೆ. ಆದರೆ ಯಾರೋ ಒಬ್ಬ ವಿವೇಕಾನಂದ, ಎಲ್ಲೋ ಒಬ್ಬರು ವಾಜಪೇಯಿ, ಅಬ್ದುಲ್ ಕಲಾಂ ನಂಥವರು ಮದುವೆ ಮಾಡಿಕೊಳ್ಳದೇ ಬ್ರಹ್ಮಚಾರಿಗಳಾಗಿ ಉಳಿದಿದ್ದಾರೆಂದು ಹೇಳಲು ನಾವು ಸಂತೋಷ ಪಡುತ್ತೇವೆ ಹೊರತು, ನಮ್ಮ ಅಣ್ಣ-ತಮ್ಮ , ನಮ್ಮ ಮಕ್ಕಳು, ಅಕ್ಕ-ತಂಗಿಯರು ಮದುವೆಯಾಗದೇ ಇರುವರೆಂದರೆ ನಮಗೆ ನಿಜಕ್ಕೂ ತುಂಬಾ ಸಂಕಟವಾಗುತ್ತದೆ. ಏಕೆಂದರೆ... ಮದುವೆ ಎಂಬ ಪರಿಕಲ್ಪನೆಯ ಹಿಂದೆ ಮದುವೆಯಾದರೆ ಅವರು ಸುಖವಾಗಿರ್ತಾರೆ ಎಂಬ ನಂಬಿಕೆಯಿದೆ. ಎಷ್ಟು ದಿನ ಅಂತ ನಮ್ಮ ಅಣ್ಣ-ತಮ್ಮಂದಿರು ನಾರದನ ಹಾಗೆ ಬೇಜವಾಬ್ದಾರಿಯಾಗಿ ಅಲೆಯುವುದು? ಅವರಿಗೂ ಮದ್ವೆಯಾಗಿ ಮಕ್ಕಳಾದರೆ ಜವಾಬ್ದಾರಿ ಬರುತ್ತದೆ ಅನ್ನುವುದು ಗಂಡಿನ ಬಗೆಗಿನ ಅಭಿಪ್ರಾಯವಾದರೆ... ಶತಶತಮಾನಗಳಿಂದಲೂ ಹೆಣ್ಣು ಗಂಡಿನ ಆಶ್ರಯದಲ್ಲೇ ಇರುವುದು, ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಗಂಡ, ಮುಪ್ಪಿನಲ್ಲಿ ಮಕ್ಕಳಾಸರೆಯಲ್ಲಿ ಇರಬೇಕು, ಆದ್ದರಿಂದಲೇ ಅವಳಿಗೆ ಮದುವೆ ಮಾಡಬೇಕು ಎನ್ನುವುದು ಹೆಣ್ಣಿನ ಬ

ಭಾಷೆಯ ಉಗಮ (origin of language) : ಎಂ.ಎ.ಕನ್ನಡ

ಇಮೇಜ್
“ ಭಾಷೆ ” ಎಂದರೆ ಮಾಹಿತಿಯ ಸಂವನಕ್ಕಾಗಿ ರೂಪಿತವಾಗಿರುವ ಒಂದು ಸಂಕೇತಗಳ ಮಾಧ್ಯಮ. ಈ ಸಂಕೇತಗಳು ಉಚ್ಚರಿತವಾಗಬಹುದು ಅಥವಾ ಲಿಖಿತ ರೂಪದಲ್ಲಿರಬಹುದು. ಮಾನವ ತನ್ನ ಭಾವನೆ , ಚಿಂತನೆ , ಆಲೋಚನೆಗಳನ್ನು ಮತ್ತೊಬ್ಬರ ಬಳಿ ಹಂಚಿಕೊಳ್ಳಲು ರೂಢಿಸಿಕೊಂಡಿರುವ ಹಲವು ಮಾಧ್ಯಮಗಳಲ್ಲಿ “ ಭಾಷೆ ” ಪ್ರಧಾನವಾದುದು. ಪ್ರಾಣಿಗಳಲ್ಲಿ ಮನುಷ್ಯ ಅತ್ಯಂತ ವೇಗವಾಗಿ ವಿಕಸಿತಗೊಂಡ ಪ್ರಾಣಿ. ಭಾಷೆಯು ಮನುಷ್ಯನನ್ನು ಪ್ರಾಣಿ ಜಗತ್ತಿನಿಂದ ಬೇರ್ಪಡಿಸುತ್ತದೆ. ಭಾಷೆಯಿಂದ ಚಿಂತನೆ ಮಾಡಲು ಸಾಧ್ಯ. “ ಭಾಷೆ ” ಮತ್ತು “ ಚಿಂತನೆ ” ಇಲ್ಲದಿದ್ದರೆ ಅವನು ಇತರ ಪ್ರಾಣಿಗಳಂತೆ ಇದ್ದು ಬಿಡುತ್ತಿದ್ದ. ಹಾಗೆಂದ ಮಾತ್ರಕ್ಕೆ ಪ್ರಾಣಿಗಳು ಮಾತನಾಡುವುದೇ ಇಲ್ಲವೆಂದಲ್ಲ. ಪ್ರಾಣಿಗಳಲ್ಲಿಯೂ ಸಹ ಪರಸ್ಪರ ಸಂವಹನಕ್ಕಾಗಿ ಸಂಕೇತಗಳ ಭಾಷೆಯೊಂದಿದೆ.  ಅಲ್ಲದೇ ಗಿಡಮರಗಳಿಗೂ ಸಹ ಸಂವಹನ ಸಾಧ್ಯವಿದೆ.  ಉದಾಹರಣೆಗೆ ಗಿಡಗಳು ಕೀಟಗಳ ಆಕ್ರಮಣ ಮುಂತಾದ ಅಪಾಯಗಳನ್ನು ಅನೇಕ ಮಾರ್ಗಗಳಲ್ಲಿ ಅಂದರೆ ತಮ್ಮ ಎಲೆಗಳನ್ನು ಮಡಿಚುವುದರ ಮೂಲಕ , ಹೂಗಳನ್ನು ಮಡಿಚುವುದರ ಮೂಲಕ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಈ ಆಕ್ರಮಣದ ಬಗ್ಗೆ ಸಂದೇಶ ರವಾನಿಸುತ್ತವೆ. ಅದರೆ ಅವುಗಳ ಭಾಷೆಗೆ ವ್ಯಾಕರಣವಿಲ್ಲ. ಯಾವ ಭಾಷೆಯೂ ಯಾರಿಗೂ ಹುಟ್ಟಿದೊಡನೆ ಬರುವುದಿಲ್ಲ. ಭಾಷೆಯು ಮೂಲತಃ ಮನುಷ್ಯನಿಗೆ ಅನುಕರಣೆಯಿಂದ ಲಭ್ಯವಾಗುತ್ತದೆ. ನಾವು ಪ್ರತಿಯೊಂದು ಭಾಷೆಯನ್ನೂ ಕಷ್ಟಪಟ್ಟು ಕಲಿಯಬೇಕಾಗುತ್ತದೆ. ಆದರೆ