ಪೋಸ್ಟ್‌ಗಳು

ಡಿಸೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವನ: "ಆತ್ಮ"

ನಾ ಹೆಣ್ಣಲ್ಲ ನಾ ಗಂಡಲ್ಲ ಆದರೂ ಗಂಡೆಂದು ಹೆಣ್ಣೆಂದು ಅಭಿಮಾನ ಪಡುತ್ತೇನೆ.. ನನಗೆ ಶರೀರವಿಲ್ಲ ಅಹಂಕಾರವಿಲ್ಲ ಆದರೂ ಮಾಡಿದ್ದೆಲ್ಲ ನಾನೆಂದು ಅಭಿಮಾನ ಪಡುತ್ತೇನೆ.. ನನಗೆ ಹೆಸರಿಲ್ಲ ಅಲಂಕಾರವಿಲ್ಲ ಆದರೂ ನಾನು ಚಿರಂಜೀವಿಯೆಂದು ಅಭಿಮಾನ ಪಡುತ್ತೇನೆ.. ನನಗೆ ಸಂಬಂಧಗಳಿಲ್ಲ ನನಗೆಂದು ಯಾರಿಲ್ಲ ಆದರೂ ಎಲ್ಲರೂ ನನ್ನವರೆಂದು ಅಭಿಮಾನ ಪಡುತ್ತೇನೆ.. ನನಗೆ ಪ್ರೀತಿಯಿಲ್ಲ ದ್ವೇಷ ಮತ್ಸರಗಳಿಲ್ಲ ಆದರೂ ರಾಗ-ದ್ವೇಷಗಳಲ್ಲಿ ಮುಳುಗಿ ನರಳುತ್ತೇನೆ.. ನನಗೆ ಹಿಂದಿಲ್ಲ ಮುಂದಿಲ್ಲ ಆದರೂ ಎಲ್ಲೆಡೆ ನಾನಿದ್ದೇನೆಂದು ಭ್ರಮೆ ಪಡುತ್ತೇನೆ.. ನನಗೆ ಹುಟ್ಟಿಲ್ಲ ಸಾವಿಲ್ಲ ಆದರೂ ಎಲ್ಲರ ಮನಸ್ಸೂ ನಾನೆಂದು ಅಭಿಮಾನ ಪಡುತ್ತೇನೆ.. * * * * * * * * * * * * * * * * * * * * * * * * ಕೆ.ಎ.ಸೌಮ್ಯ ಮೈಸೂರು  

ವಾತಾಪಿ ಗಣಪತಿ : ಎಂ.ಎ.ಕನ್ನಡ

  ಬಾದಾಮಿಯ ಮೊದಲ ಹೆಸರು “ ವಾತಾಪಿ ”. ಉತ್ತರ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯಲ್ಲಿನ ಬಾದಾಮಿ ಪಟ್ಟಣವು ಕ್ರಿ.ಶ. ಆರನೇ ಶತಮಾನದಿಂದ ಕ್ರಿ.ಶ. ಎಂಟನೇ ಶತಮಾನದವರೆಗೂ ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯರ ಸಾಮ್ರಾಜ್ಯವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳನ್ನು ಒಳಗೊಂಡಿತ್ತು. ಇದು ದಕ್ಷಿಣ ಭಾರತದಲ್ಲಿಯೇ ವೈವಿಧ್ಯಮಯವಾದ ದೇವಾಲಯಗಳ ನಿರ್ಮಾಣಕ್ಕೆ ಸಾಕ್ಷಿಯಾದ ಪಟ್ಟಣವಾಗಿದೆ. “ ವಾತಾಪಿ ಗಣಪತಿಂ ಭಜೇಹಂ ” ಎಂಬ ಪ್ರಖ್ಯಾತವಾದ ಈ ರಚನೆ ಹಂಸಧ್ವನಿ ರಾಗದಲ್ಲಿದೆ. ಇದರ ರಚನಕಾರರು ಮುತ್ತುಸ್ವಾಮಿ ದೀಕ್ಷಿತರು.  ಇವರು ಕರ್ನಾಟಕದ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರು. ಮುತ್ತುಸ್ವಾಮಿ ದೀಕ್ಷಿತರು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಆ ರಚನೆಗಳಲ್ಲಿ ಎರಡು ಅಥವಾ ಮೂರು ರಚನೆಗಳು ಮಾತ್ರ ತೆಲುಗು ಅಥವಾ **ಮಣಿಪ್ರವಾಳದಲ್ಲಿದ್ದು, ಉಳಿದ ರಚನೆಗಳೆಲ್ಲಾ ಸಂಸ್ಕೃತದಲ್ಲಿದೆ. ಇವರ ರಚನೆಗಳು ಸಂಗೀತಸುಧೆಯಿಂದ ತುಂಬಿವೆ. ಮುತ್ತುಸ್ವಾಮಿ ದೀಕ್ಷಿತರ ಹುಟ್ಟೂರು ತಂಜಾವೂರಿನ ಬಳಿಯ ತಿರುವಾರೂರು. ಇವರು ನಮ್ಮ ದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿನ ದೇವಾನುದೇವತೆಗಳ ಬಗ್ಗೆ ಸಂಗೀತ ರಚಿಸಿದ್ದಾರೆ. “ವಾತಾಪಿ ಗಣಪತಿ”ಗೆ ಹಾಗೆ ಹೆಸರು ಬರಲು ಒಂದು ಕಾರಣವಿದೆ. ಚಾಲುಕ್ಯರು ಕರ್ನಾಟಕವನ್ನು ಆಳುತ್ತಿದ್ದ ಕಾಲದಲ್ಲಿ, ಚಾಲುಕ್ಯರ ಪ್ರಖ್ಯಾತ ದೊರೆಯಾದ ಇಮ್ಮಡಿ ಪುಲಿಕೇಶಿಯು ತನ್ನ ಸಾಮ್ರ