ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವನ: "ಹೆಣ್ಣೆಂಬ ಹೆಮ್ಮೆ"

ಕವನ: "ಹೆಣ್ಣೆಂಬ ಹೆಮ್ಮೆ" ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ ನಾನು.. ಏಕೆಂದರೆ.... ಬಸ್ಸಿನಲ್ಲಿ ಪುರುಷರ ಸೀಟಿನಲ್ಲಿ ಕುಳಿತಿದ್ದರೂ ಯಾರೂ ಎಬ್ಬಿಸುವುದಿಲ್ಲವೆಂದು ಹೆಮ್ಮೆ ಪಡುತ್ತೇನೆ.. ಹಬ್ಬಗಳಂದು ಆಫೀಸಿಗೆ ಯೂನಿಫಾರಂ ಬಿಟ್ಟು ಕಲರ್ ಡ್ರೆಸ್ ಹಾಕಿ ಹೋದರೂ ಯಾರೂ ಕೇಳುವುದಿಲ್ಲವೆಂದು ಹೆಮ್ಮೆ ಪಡುತ್ತೇನೆ.. ಎಲ್ಲರಿಗೂ ಸದಾ ಬೈಯ್ಯುವ ಬಾಸ್ ಹೆಣ್ಮಕ್ಕಳಿಗೆ ಬೈದರೆ ಒಳ್ಳೆಯದಾಗುವುದಿಲ್ಲವೆಂದು ರೂಲ್ಸ್ ಮಾಡಿಕೊಂಡಿರುವುದಕ್ಕಾಗಿ ಹೆಮ್ಮೆ ಪಡುತ್ತೇನೆ.. ಗಂಡನಿಗೆ ಎಷ್ಟೇ ಸುಸ್ತಾಗಿದ್ದರೂ ನನ್ನೊಡನೆ ಬರುವಾಗ ಲಗ್ಗೇಜ್ ಗಳನ್ನು ಅವರೇ ಹೊರುತ್ತಾರೆಂದು ಹೆಮ್ಮೆ ಪಡುತ್ತೇನೆ.. ಕೊನೆಯದಾಗಿ ನನಗೆ ಸಾರ್ವಜನಿಕವಾಗಿ ಕಣ್ಣೀರು ಹಾಕಲು ಅವಕಾಶವಿದೆಯೆಂದು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ.. ***********************

ಕವನ: "ನಾನು-ನೀನು"

ನೀನೇ ನಾನಾಗಿ ನಾನೇ ನೀನಾಗಿ ನಿನ್ನೊಳಗೆ ನಾನೋ ನನ್ನೊಳಗೆ ನೀನೋ ಅರಿಯುವ ಪರಿಯೆಂತು ಗೆಳೆಯಾ .. ನನ್ನಲ್ಲಿ ನಾನಿರದೆ ನಿನ್ನಲ್ಲಿ ನೀನಿರದೆ ನನ್ನಲ್ಲಿರುವ ನಿನ್ನನ್ನು ನಿನ್ನಲ್ಲಿರುವ ನನ್ನನ್ನೂ ಗುರುತಿಸುವ ಪರಿಯೆಂತು ಗೆಳೆಯಾ .. ಕನ್ನಡಿಯ ಮುಂದೆ ನಿನ್ನ ಪ್ರತಿರೂಪ ನನ್ನ ಕಣ್ಣಿನಲ್ಲಿ ನಿನ್ನದೇ ಪ್ರತಿಬಿಂಬ ಸದಾ ನನ್ನಲ್ಲೇ ಇರುವ ನಿನ್ನನ್ನು ಕಳೆದುಕೊಳ್ಳುವ ಪರಿಯೆಂತು ಗೆಳೆಯಾ ... ನಾ ನಕ್ಕರೆ ಅದಕೆ ನೀ ಕಾರಣ ಅತ್ತರೂ ನೀನೇ ಕಾರಣ ಮೈಮರೆಯಲು ಬೇಕು ನಿನ್ನ ಧ್ಯಾನ ನನ್ನ ಮಾತೇ ಕೇಳದ ನನ್ನ ಮನಸು ನಿನ್ನ ವಶವಾಗಿರುವ ಬಗೆಯನ್ನು ತಿಳಿಸುವೆಯಾ ಗೆಳೆಯಾ ....

ಅಮ್ಮನ ದಿನ: published in VK 09/05/2015

         ಅವಳೆಂದರೆ ಎಲ್ಲರಿಗೂ ಇಷ್ಟ .. ಎಲ್ಲರಿಗೂ ಕಷ್ಟ ಬಂದಾಗ ಅವಳೇ ಬೇಕು .. ಮನೆಯಲ್ಲಿ ಏನು ಹುಡುಕಬೇಕಿದ್ದರೂ ಅದಕ್ಕೇ ಅವಳೇ ಸರಿ ಅಂತ ಎಲ್ಲರ ತೀರ್ಮಾನ . ಯಾಕೆಂದರೆ ಎಲ್ಲರ ವಸ್ತುಗಳನ್ನು ಅವಳು ಜೋಪಾನ ಮಾಡಿರುತ್ತಾಳೆ ಅಂತ ಎಲ್ಲರ ನಂಬಿಕೆ . ನಮಗೆ ಶೀತವಾದರೆ ನೆಗಡಿಯಾದರೆ ಅವಳ ಕಷಾಯ ಬೇಕು . ನಮಗೆ ಹೊರಗೆಲ್ಲಾದರೂ ಬೇಸರವಾದರೆ ಅವಳ ಸಮಾಧಾನ ಬೇಕು . ನಮಗೆ ಸಂತೋಷವಾದರೆ ಅವಳ ಪ್ರೋತ್ಸಾಹದ ನುಡಿಗಳು ಬೇಕು .           ಒಟ್ಟಿನಲ್ಲಿ ನಮಗೆ ಜೀವನದಲ್ಲಿ ಏನೇ ಬರಲಿ ನೋವೇ ಬರಲಿ ನಲಿವೇ ಬರಲಿ ಅದನ್ನ ಅವಳಲ್ಲಿ ಹಂಚ್ಕೊಂಡ್ರೇನೇ ಸಮಾಧಾನ . ನಮಗೆ ಬೇಸರವಾದಾಗ ಅವಳು ಅದನ್ನು ಗಮನಿಸಿ ನಮ್ಮನ್ನು ರಮಿಸಬೇಕು , ಮಳೆ ಬರ್ತಿದ್ದಾಗ ನಮಗೆ ಇಷ್ಟವಾದ ಬೋಂಡಾವನ್ನು ನಾವು ಕೇಳದೇ ಮಾಡಿ ತಂದ್ಕೊಡಬೇಕು , ನಮ್ಮ ಇಷ್ಟ ಕಷ್ಟಗಳನ್ನೆಲ್ಲಾ ಅವಳು ಗಮನಿಸ್ತಾ ಇರಬೇಕು , ಅದಕ್ಕೆ ಸ್ಪಂದಿಸ್ತಾ ಇರ್ಬೇಕು ಅಂತ ಬಯಸ್ತೀವಿ ..           ಆದರೆ ......           ಒಂದು ಕ್ಷಣವಾದರೂ ಅವಳೂ ನಮ್ಮ ಬಗ್ಗೆ ಇದೇ ಥರ ಯೋಚಿಸಿರಬಹುದಲ್ವಾ ಅಂತ ನಾವ್ಯಾಕೆ ಯೋಚಿಸೋಲ್ಲ ? ಅವಳೂ ಸಹ ಮಳೆ ಬರ್ತಿದ್ದಾಗ ಮಕ್ಕಳೇ ತನಗೆ ಕಾಫಿ ಮಾಡಿ ತಂದು ಕೊಡಲಿ ಅಂತ ಬಯಸ್ತಿರಬಹುದಲ್ವಾ ?   ತನ್ನ ಸ್ವಲ್ಪ ಮುಖ ಸಪ್ಪಗಿದ್ದರೂ ಮಕ್ಕಳೋ ಗಂಡನೋ ಅದನ್ನ ಗಮನ