ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲೇಖನ: "12ನೇ ಶತಮಾನದ ಬಾಹ್ಯಾಕಾಶ ಮಾನವ" ANCIENT ASTRONAUT Published In MANASA- Oct 2017

ಲೇಖನ : "12 ನೇ ಶತಮಾನದ ಬಾಹ್ಯಾಕಾಶ ಮಾನವ "                   ಕೆಲವು ದಿನಗಳ ಕೆಳಗೆ ನನ್ನ ಮಿತ್ರರೊಬ್ಬರು ಫೇಸ್ಬುಕ್ಕಿನಲ್ಲಿ " ಹಳೆಯಬೀಡಿನ ದೇವಸ್ಥಾನದ ಕಂಬದಲ್ಲಿ ಬಾಹ್ಯಾಕಾಶ ಮನುಷ್ಯನ ಚಿತ್ರವಿದೆಯಂತೆ , 12 ನೇ ಶತಮಾನದಲ್ಲಿಯೇ ಇದರ ಬಗ್ಗೆ ಅರಿವು ಇದ್ದದ್ದು ಬಹಳ ಸೋಜಿಗ " ಅಂತ ಅದರ ಚಿತ್ರ ಸಮೇತ ಪೋಸ್ಟ್ ಹಾಕಿದ್ದರು . ಆ ಚಿತ್ರವೋ ಇಪ್ಪತ್ತನೆಯ ಶತಮಾನದಲ್ಲಿ ಬಾಹ್ಯಾಕಾಶಕ್ಕೆ ಹೋಗುವ ಸ್ಪೇಸ್ ಸೂಟ್ ಧರಿಸಿದ ಮನುಷ್ಯನದ್ದು !! ಇದು ಹೇಗೆ ಸಾಧ್ಯ ? ಆಗಿನ ಜನರು ಮುಂದಿನ ಮಾನವ ಜನಾಂಗ ಸ್ಪೇಸ್ ಗೆ ಹೋಗಬಲ್ಲರು ಅಂತ ಊಹಿಸಬಲ್ಲರೇ ಹೊರತು , ಇಪ್ಪತ್ತನೇ ಶತಮಾನದಲ್ಲಿ ಜನರ ಉಡುಗೆ ತೊಡುಗೆಗಳು ಹೀಗೆಯೇ ಇರುತ್ತದೆ ಅಂತ ಖಡಾಖಂಡಿತವಾಗಿ ಊಹಿಸಲು ಸಾಧ್ಯವೇ ? ಆ ಪೋಸ್ಟ್ ಓದಿದ ಜನರೂ ಸಹ ಹಿಂದೆ ಮುಂದೆ ಯೋಚಿಸದೇ " ಹೌದಾ ? ನಿಜವಾ ? ಅದ್ಭುತ !" ಅಂತ ಪ್ರತಿಕ್ರಿಯಿಸುತ್ತಿದ್ದರು . ಆದರೆ ಗೊತ್ತಿರದೇ ಇರುವ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದು ಎಷ್ಟು ಸರಿ ಅಂತ ಆ ಚಿತ್ರದ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟೆ .                      ಬಾಹ್ಯಾಕಾಶ ಪ್ರವಾಸ ಎಂಬ ಪರಿಕಲ್ಪನೆ ತೀರಾ ಇತ್ತೀಚಿನದ್ದು . ಅಂದರೆ ಇಪ್ಪತ್ತನೇ ಶತಮಾನದ್ದು . ಹಾಗಾದರೆ ನಾಗರೀಕತೆ ಬೆಳೆಯುವ ಮೊದಲೇ ಮಾನವನ