ಪೋಸ್ಟ್‌ಗಳು

ಫೆಬ್ರವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"ಸಾಗರಗಳ ಸಮ್ಮಿಲನ" (Pacific and Atlantic ocean Meet) Dec 2017

ಇಮೇಜ್
ಫೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳು ದಕ್ಷಿಣ ಅಮೇರಿಕಾದ ದಕ್ಷಿಣದ ತುತ್ತತುದಿಯ ಕೇಪ್ ಹಾರ್ನ್ ಎಂಬಲ್ಲಿ ಸೇರುತ್ತವೆ . ಪನಾಮಾ ಕಾಲುವೆ ಎಂಬ ಕೃತಕ ಕಾಲುವೆ ಇವೆರೆಡೂ ಸಾಗರಗಳನ್ನು ಬೆಸೆಯುತ್ತದೆ . ಆದರೆ ಎರಡೂ ಸಾಗರದ ನೀರು ಬೆರೆಯದೇ ಬೇರೆ ಬೇರೆಯಾಗಿಯೇ ಕಾಣುತ್ತದೆ .  ಚಿತ್ರ ನೋಡಿದರೆ ನಂಬಲು ಅಸಾಧ್ಯ ಎನಿಸುತ್ತದೆಯಲ್ಲವೇ ? ಯಾರೋ ಫೋಟೋಶಾಪ್ ಮಾಡಿರಬೇಕು ಎಂಬ ಅನುಮಾನವೂ ಬರುತ್ತದೆ . ಆದರೆ ಇದು ನಿಜಕ್ಕೂ ನೈಜವಾಗಿ ನಡೆಯುವ ಒಂದು ವಿಚಿತ್ರ ಪ್ರಾಕೃತಿಕ ವಿದ್ಯಮಾನ. ಎರಡೂ ಸಾಗರದ ವಿಭಿನ್ನ ಬಣ್ಣದ ನೀರು ಅಕ್ಕಪಕ್ಕದಲ್ಲೇ ಹರಿಯುತ್ತಿದ್ದರೂ ಸಹ ಒಂದಾಗದೇ ದೇಶದ ಗಡಿಯ ಚಿತ್ರದ ಹಾಗೆ ಕಾಣುತ್ತದೆ . ಕಾವ್ಯಾತ್ಮಕವಾಗಿ ಹೇಳುವುದಾದರೆ ಜೊತೆಗಿದ್ದರೂ ಒಟ್ಟಿಗೆ ಬೆಸೆಯದ ಈ ಸಮುದ್ರಗಳು ಕೋಪ ಮಾಡಿಕೊಂಡ ಪ್ರೇಮಿಗಳ ಹಾಗೆ ಕಾಣುತ್ತವೆ . ಒಟ್ಟಿನಲ್ಲಿ ಎಂದೂ ಕಂಡು ಕೇಳಿರದ ಹಾಗೆ ತೋರುವ   ಈ ವಿದ್ಯಮಾನ ಎಲ್ಲರ ಗಮನ ಸೆಳೆಯುತ್ತಿದೆ . ಸಮುದ್ರದ ನೀರು ಬೆರೆಯದಿರಲು ಕಾರಣವೇನು ?            ಸಾಮಾನ್ಯ ಜನರು ಇದನ್ನು ನೋಡಿ ಖುಷಿಪಟ್ಟರು , ಅಚ್ಚರಿಪಟ್ಟರು , ನಂತರ ಸುಮ್ಮನಾದರು . ಆದರೆ ಸಂಶೋಧಕರು ಈ ಬಗ್ಗೆ ತಲೆ ಕೆಡಿಸಿಕೊಂಡರು . ಈ ಭೂಮಿ ಮೇಲಿನ ಎಲ್ಲಾ ಪ್ರಕ್ರಿಯೆಗೂ ಒಂದು ಕಾರಣ ಅಂತ ಇರಲೇಬೇಕು . ಈ ಪ್ರಕ್ರಿಯೆಗೂ ಏ