ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Hunter's moon : "ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯರು" (ಮಾನಸಾ)

ಇಮೇಜ್
ನಾನು ಚಿಕ್ಕವಳಿದ್ದಾಗ ಶಾಲಾ ರಜದ ಸಮಯದಲ್ಲಿ ಬೆಳಿಗ್ಗೆ ಬೇಗ ಎದ್ದುಬಿಟ್ಟರೆ "ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ ಬಿಡು" ಅಂತ ಮನೆಯವರೆಲ್ಲಾ ಆಡಿಕೊಳ್ಳುತ್ತಿದ್ದರು. ಅಂದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದು ಸಾಧ್ಯವೇ ಇಲ್ಲ ಎನ್ನುವುದು ನಮ್ಮ ಅನಿಸಿಕೆ. ನಮಗೆ ಪ್ರಕೃತಿಯಲ್ಲಿ ಏನೋ ಒಂದು ನಿರೀಕ್ಷೆ ಇದೆ. ನಮ್ಮ ನಿರೀಕ್ಷೆಯಂತೆಯೇ ನಡೆದರೆ ಸರಿ. ಇಲ್ಲದಿದ್ದರೆ ಏನೇನೋ ಭಯಾನಕ ಕಲ್ಪನೆಗಳನ್ನು ಮಾಡಿಕೊಂಡು ಹೈರಾಣಾಗುತ್ತೇವೆ. ಪ್ರಕೃತಿಗೆ ಸಂಬಂಧಪಟ್ಟ ಎಲ್ಲಾ ಕಲ್ಪನೆಗಳೂ ಪ್ರಳಯದೊಂದಿಗೇ ಕೊನೆಯಾಗುವುದೊಂದು ವಿಶೇಷ. ಇನ್ನು ಪಶ್ಚಿಮದಲ್ಲಿ ಸೂರ್ಯ ಹುಟ್ಟುವುದನ್ನೇ ನಿರೀಕ್ಷಿಸಿರದ ನಾವು, ಆಕಾಶದಲ್ಲಿ ಇಬ್ಬರು ಸೂರ್ಯನನ್ನು ನೋಡಿದರೆ ಎಷ್ಟು ಹೆದರಿರಬಹುದು ಅಲ್ಲವೇ? ಬಾಹ್ಯಾಕಾಶದಲ್ಲಿ ಇಬ್ಬರು ಸೂರ್ಯ: ಅದು ಅಕ್ಟೋಬರ್ 2017ರ ಬೆಳಗ್ಗಿನ ಝಾವದ ಸಮಯ. ಅಮೆರಿಕಾದ ನ್ಯೂಯಾರ್ಕ್ ಸಿಟಿಯ ಜನರು ನೋಡುತ್ತಿದ್ದಂತೆಯೇ ಆಗಸದಲ್ಲಿ ಒಂದೇ ಸಮಯದಲ್ಲಿ ಎರಡು ಸೂರ್ಯ ಕಾಣಿಸಿಕೊಂಡಿತು. ನಾಸ್ಟ್ರಾಡಾಮಸ್ ಭವಿಷ್ಯವಾಣಿ ಮತ್ತು ಬಹು ಪುರಾತನವಾದ ಮಾಯನ್ ಸಂಸ್ಕೃತಿಗಳಲ್ಲಿ ಆಗಸದಲ್ಲಿ ಒಮ್ಮೆಲೇ ಇಬ್ಬರು ಸೂರ್ಯ ಅವತರಿಸುವ ಬಗ್ಗೆ ಪುರಾಣದ ಕಥೆಗಳಿವೆ. ಅದನ್ನೆಲ್ಲಾ ಓದಿರುವ ಜನರು ಈಗ ಈ ಇಬ್ಬರು ಸೂರ್ಯರನ್ನು ಒಟ್ಟಿಗೆ ನೋಡಿ ದಿಗಿಲಿಗೆ ಬಿದ್ದರು. ಪುರಾಣದ ಪ್ರಕಾರ ಒಬ್ಬ ಸೂರ್ಯ ನಾಶ ಮಾಡುವುದಕ್ಕೆ ಬಂದರೆ, ಮತ್ತೊಬ್ಬ ಸೂರ್ಯ ನಾಶದಿ

ಭೂಮಿಯಂತಹಾ ಮತ್ತೊಂದು ಗ್ರಹ (ಮಾನಸಾ) ಆಗಸ್ಟ್ 2019

ಇಮೇಜ್
ಭೂಮಿ ನಮ್ಮ ಗ್ರಹ. ತಿಳಿದೋ ತಿಳಿಯದೆಯೋ ನಾವಿಲ್ಲಿ ಹುಟ್ಟಿಬಿಟ್ಟಿದ್ದೇವೆ. ಅನಂತ ಆಕಾಶದಲ್ಲಿ ದೂರದೂರದವರೆಗೂ ನಾವು ದೃಷ್ಟಿ ಹಾಯಿಸಿದರೂ ನಮ್ಮ ಕಣ್ಣಿಗೆ ಕಾಣಸಿಗುವುದು ನಕ್ಷತ್ರಗಳು ಮಾತ್ರ. ನಮ್ಮ ಸೌರವ್ಯೂಹದ ಇತರೆ ಗ್ರಹಗಳಲ್ಲಿ ಮನುಷ್ಯ ಬದುಕುವಂತಹ ವಾತಾವರಣ ಇಲ್ಲ ಅಂತ ನಮಗೆ ಈಗಾಗಲೇ ಗೊತ್ತಾಗಿದೆ. ಹಾಗಾಗಿ ಭೂಮಿ ಒಂದರಲ್ಲಿಯೇ ಜೀವಿಗಳು ಇರುವುದು, ಜೀವ ಇರುವುದು ಅಂತ ನಮ್ಮ ನಂಬಿಕೆ. ಭೂಮಿಯಂತಹ ಗ್ರಹ ಮತ್ತೊಂದಿಲ್ಲ ಅಂತ ಗಾಢವಾಗಿ ನಂಬಿದ್ದೇವೆ ನಾವುಗಳು. ಆದರೆ ನಮ್ಮ ಈ ನಂಬಿಕೆಯನ್ನು ಸುಳ್ಳು ಮಾಡುವಂತಹ ಸುದ್ದಿಯೊಂದು ಇದೀಗ ಬಂದಿದೆ. ಭೂಮಿಯಂತಹ ಮತ್ತೆರೆಡು ಗ್ರಹ: ನಮ್ಮ ಸೌರವ್ಯೂಹದಿಂದ ಕೆಲವೇ ಜ್ಯೋತಿ ವರ್ಷಗಳಷ್ಟು ದೂರದಲ್ಲಿರುವ ಒಂದು ನಕ್ಷತ್ರವನ್ನು ಸುತ್ತು ಹಾಕುತ್ತಿರುವ ಎರಡು ಗ್ರಹಗಳು ಥೇಟ್ ಭೂಮಿಯಂತೆಯೇ ಇವೆಯಂತೆ. ಅದೂ ಸಹ ನಮ್ಮ ಗೆಲಾಕ್ಸಿಯ ಪರಿಮಿತಿಯಲ್ಲಿಯೇ... ಆಶ್ಚರ್ಯ ಆಯ್ತಲ್ವಾ? ಆದರೆ ಈ ಗ್ರಹಗಳು ಭೂಮಿಗಿಂತಲೂ ದೊಡ್ಡದಾಗಿವೆಯಂತೆ. ಅಷ್ಟೇ ಅಲ್ಲ... ಈ ಗ್ರಹಗಳಲ್ಲಿಯೂ ಮನುಷ್ಯ ಬದುಕುವ ವಾತಾವರಣ ಇದೆಯಂತೆ. ಅಲ್ಲಿ ನೀರಿರುವ ಸುಳಿವು ಮತ್ತು ಆ ನೀರು ದ್ರವರೂಪದಲ್ಲಿಯೇ ಇರುವ ಕುರುಹು ಸಿಕ್ಕಿದೆಯಂತೆ. ಅವುಗಳೂ ಸಹ ತನ್ನ ಸೂರ್ಯನನ್ನು ನಿಗದಿತ ಅವಧಿಯಲ್ಲಿ ಸುತ್ತು ಹಾಕುತ್ತಿದೆಯಂತೆ. ಹಾಗಾಗಿ ಋತುಗಳೂ ಸಹ ಇರಬಹುದು. ಮನುಷ್ಯನಿಗೆ ಬೇಕಾದ ಎಲ್ಲವೂ ಅಲ್ಲಿದೆ. ಅಕಸ್ಮಾತ್ ನಮ್ಮ ಭೂಮಿಗೆ ಏನಾದರೂ ಗಂಡಾಂತರ ಒದಗ

Met Gala published in Manasa (July 2019)

ಇಮೇಜ್
ನಾವು ನಮ್ಮದೇ ಪ್ರಪಂಚ ಎಂದುಕೊಂಡಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಭೂಮಿಯ ಮೇಲೆ ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಎಷ್ಟೋ ವಿಷಯಗಳು ನಮ್ಮನ್ನು ತಲುಪದೇ ಹೋಗುತ್ತವೆ. ಕೆಲವು ವಿಷಯಗಳು ತಡವಾಗಿ ತಲುಪುತ್ತವೆ. ಆಗ ಇಷ್ಟು ದಿನ ಇದು ಗೊತ್ತೇ ಇರಲಿಲ್ವಲ್ಲ ಅಂತ ಕಣ್ಣು ಕಣ್ಣು ಬಿಡುವಂತಾಗುತ್ತದೆ. ಈ ಗೊತ್ತಿಲ್ಲದ ಸಂಗತಿಗೆ ಹೊಸ ಸೇರ್ಪಡೆ ಎಂದರೆ ಕಳೆದ ಮೇ ತಿಂಗಳಿನಲ್ಲಿ ಅಮೆರಿಕಾದಲ್ಲಿ ನಡೆದ "ಮೆಟ್ಗಾಲ" ಎಂಬ ಫ್ಯಾಷನ್ ಕಾರ್ಯಕ್ರಮ. ಪ್ರತೀ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ಈ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಫ್ಯಾಷನ್ ಪ್ರಿಯರು ಆಗಮಿಸುತ್ತಾರೆ. ಫ್ಯಾಷನ್ ಕಾರ್ಯಕ್ರಮ ಎಂದ ಮೇಲೆ ಎಲ್ಲರೂ ಸುಂದರವಾಗಿ ಡ್ರೆಸ್ ಮಾಡಿಕೊಂಡು ಬಂದು ಮಿಂಚುತ್ತಾರೆ, ಕಣ್ತುಂಬ ನೋಡಿ ಸಂತೋಷಿಸಬಹುದು ಎಂದುಕೊಂಡರೆ ಅದು ಕೇವಲ ಭ್ರಮೆಯಷ್ಟೇ. ಏಕೆಂದರೆ ಇಲ್ಲಿಗೆ ಬರುವವರ ವೇಷಭೂಷಣ ಬಹಳ ವಿಚಿತ್ರವಾಗಿರುತ್ತದೆ. ಈ ಬಾರಿಯ ಮೆಟ್ಗಾಲದಲ್ಲಿನ ಪ್ರಿಯಾಂಕಾ ಛೋಪ್ರಾಳ ಒಂದು ಫೋಟೋ ಭಾರಿ ಸದ್ದು ಮಾಡಿತು. ವಿಚಿತ್ರ ಕೇಶ ವಿನ್ಯಾಸ ಮತ್ತು ಉಡುಪಿನಿಂದ ಅವಳ್ಯಾರು ಎಂದೇ ಅರ್ಥವಾಗದೇ ಪರದಾಡುವಂತಾಯ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಸಹ ಹಾಜರಿದ್ದರೂ ಅವಳ ಉಡುಪು ಸರ್ವೇ ಸಾಧಾರಣದಂತೆ ಸಾಮಾನ್ಯವಾಗಿದ್ದರಿಂದ ಅವಳು ಭಾಗವಹಿಸಿದ್ದೇ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಿ ನೋಡಿದರೂ ಬರೀ ಪ್ರಿಯಾಂಕಾಳದ್ದೇ ಸದ್ದು-ಸು

ಬ್ರೇಕಪ್ ನೋವು ಎನಿಸಲೇ ಇಲ್ಲ (VK 2.6.19)

ಇಮೇಜ್
ಬ್ರೇಕಪ್ ಆಗಿದೆ.....!!! ಹೌದು. ವಿಧಿಯಿಲ್ಲ ಒಪ್ಪಿಕೊಳ್ಳಲೇಬೇಕು. ಅವನನ್ನು ಮರೆತು ಹೊಸ ಜೀವನ ಶುರು ಮಾಡಲೇ ಬೇಕು. ಘಳಿಗೆ ಘಳಿಗೆಗೂ ನೆನಪಾಗುತ್ತಿದ್ದ ಅವನ ನೆನಪು ಈಗಿಲ್ಲ. ಆದರೆ ನನ್ನ ಪ್ರೀತಿ ನೆನೆದು ಬಹಳ ನೋವಾಗುತ್ತಿದೆ. ಪ್ರತೀ ಬಾರಿಯೂ ನಮ್ಮಿಬ್ಬರ ನಡುವೆ ಜಗಳವಾದಾಗ ನಾನೇ ಮುಂದಾಗಿ ಅವನನ್ನು ಮಾತನಾಡಿಸಿಬಿಡುತ್ತಿದ್ದೆ. ಆದರೆ ಈ ಬಾರಿ ಯಾಕೋ ಹಾಗೆ ಮಾಡಬೇಕು ಅಂತ ಅನ್ನಿಸುತ್ತಿಲ್ಲ. ಇವನೊಂದಿಗೆ ಇದ್ದು ಕಣ್ಣೀರು ಹಾಕುವುದಕ್ಕಿಂತ ದೂರಾಗುವುದೇ ಒಳ್ಳೆಯದು ಎನಿಸುತ್ತಿದೆ. ಆದರೆ ಹಾಗೆ ನಿರ್ಧಾರ ಮಾಡುವುದು ಸುಲಭ. ಅದರಂತೆ ನಡೆದುಕೊಳ್ಳುವುದು ಕಷ್ಟ. ಈ ಮನಸ್ಸೋ... ಕ್ಷಣಕ್ಕೊಂದು ಬಾರಿ ಬಣ್ಣ ಬದಲಾಯಿಸುತ್ತದೆ. ಒಮ್ಮೆ ಅವನು ಮಾಡಿದ್ದು ಸರಿ ಎಂದರೆ, ಮತ್ತೊಮ್ಮೆ ನಾನು ಮಾಡಿದ್ದೇ ಸರಿ ಎನ್ನುತ್ತದೆ. ಯಾರು ಸರಿಯೋ ಯಾರು ತಪ್ಪೋ? ನನ್ನ ಮನಸ್ಸಿಗೆ ನೋವಾದದ್ದಂತೂ ನಿಜ ತಾನೇ? ಅಂತ ಹೇಳಿಕೊಂಡು ಅದರ ಬಾಯಿ ಮುಚ್ಚಿಸುತ್ತೇನೆ. ಈಗ ಅವನ ಅನುಪಸ್ಥಿತಿಯಲ್ಲಿ ಮನಸ್ಸು ಹಿಂದೆ ನಡೆದದ್ದನ್ನೇ ನೆನೆಸುತ್ತಾ ಕೊರಗದಂತೆ ಮಾಡಲು ದಾರಿ ಹುಡುಕಬೇಕಿದೆ. ಒಮ್ಮೊಮ್ಮೆ ಈ ಮನಸ್ಸು ಸಹ ಯಾವುದೇ ವಿಲನ್ನಿಗೂ ಕಡಿಮೆ ಇಲ್ಲದ ಹಾಗೆ ಐಡಿಯಾ ಕೊಡುತ್ತದೆ. 'ಅವನಿಲ್ಲದಿದ್ರೆ ಏನಂತೆ, ಅವನಂತಹಾ ನೂರಾರು ಹುಡುಗರು ಸಿಗ್ತಾರಪ್ಪ' ಅಂತ ನಮ್ಮನ್ನೇ ಹಳ್ಳಕ್ಕೆ ಬೀಳಿಸಲು ನೋಡುತ್ತದೆ. ಆದರೆ ಯಾರನ್ನೋ ಮರೆಯಲು ನಾವು ಮತ್ಯಾರನ್ನೋ ಇಷ್ಟ ಪಡು

ಮದುವೆಯಾದ ನಂತರ ಬದಲಾಗುವ ಹೆಂಡತಿ VK

ಇಮೇಜ್
ಮದುವೆಯಾದ ಮೇಲೆ ಮುಗಿಯಿತು, ಇನ್ನು ಗಂಡ ತನ್ನವನೇ ಎಂಬ ತುಂಟ ನಿರ್ಲಕ್ಷ್ಯ ಹೆಂಡತಿಯದ್ದು. ತಾನು ಈಗ ಹೇಗೇ ಇದ್ದರೂ ಗಂಡನಾದವನು ತನ್ನನ್ನು ಇದ್ದ ಹಾಗೆಯೇ ಒಪ್ಪಬೇಕು ಎಂಬುದು ಅವಳ ವಾದ. ಮದುವೆಗೆ ಮುಂಚೆ ಮಾಡುತ್ತಿದ್ದ ಡಯಟ್ ಈಗ ಮಾಡಬೇಕು ಅಂತ ಅನ್ನಿಸುವುದಿಲ್ಲ ಅವಳಿಗೆ. ತನ್ನ ಡ್ರೆಸ್ ಬಗ್ಗೆ ವಹಿಸುತ್ತಿದ್ದ ಅತಿಯಾದ ಕಾಳಜಿ ಈಗಿಲ್ಲ. ಎಲ್ಲಿಗೆ ಹೋಗಬೇಕೆಂದರೂ ಯಾವುದೋ ಒಂದು ಡ್ರೆಸ್ ತೆಗೆದು ಮೈಗೆ ಸುತ್ತಿಕೊಂಡು ಹೊರಡುತ್ತಿದ್ದಾಳೆ ಆಕೆ. ತಾನು ಹೇಗೆ ಕಾಣುತ್ತಿರಬಹುದು ಎಂಬ ಕುತೂಹಲವೇ ಆಕೆಗೆ ಇಲ್ಲ. ಹೇಗಿದ್ದರೇನು? ಮದುವೆ ಆಗಿ ಆಯ್ತಲ್ಲ ಎಂಬುದೇ ಅವರ ತುಂಟ ಉತ್ತರ. ಮದುವೆ ಆಗುವವರೆಗೂ ಅತಿಯಾಗಿ ಕಾಳಜಿ ವಹಿಸಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳುವ ಮಹಿಳೆಯರು ಮದುವೆಯ ನಂತರ ಡ್ರೆಸ್ ಸೆನ್ಸ್ ಅನ್ನು ಮರೆತುಬಿಡುತ್ತಾರೆ. ಮದುವೆಯಾದ ನಂತರ ಪ್ರತೀ ಮಹಿಳೆ ಈ ರೀತಿಯ ಮನೋಭಾವಕ್ಕೆ ಒಳಗಾಗುತ್ತಾಳೆ. ಚಿಕ್ಕಂದಿನಿಂದಲೂ ಆಕೆಗೆ ಮದುವೆಯೇ ಆಕೆಯ ಜೀವನದ ಪರಮೋದ್ದೇಶ ಎಂದು ಹೇಳಿಕೊಟ್ಟಿರುವುದರಿಂದಲೋ ಏನೋ? ಮದುವೆಯ ನಂತರ ತಾನು ಚಂದ ಕಂಡು ಸಾಧಿಸುವುದೇನಿದೆ ಎಂಬ ಅಭಿಪ್ರಾಯ ಬಹುತೇಕರದ್ದು. ಮಕ್ಕಳಾದ ಮೇಲೆ ಅಂತೂ ಯಾರಿಗಾಗಿ ತಾನು ಅಲಂಕಾರ ಮಾಡಿಕೊಳ್ಳಬೇಕು ಎಂಬ ಹತಾಶೆ ಎದುರಾಗುತ್ತದೆ. ಜೀವನದಲ್ಲಿ ಜವಾಬ್ದಾರಿ ಹೆಚ್ಚುತ್ತಾ ಹೋದಂತೆ ತನ್ನ ಕಡೆ ಗಮನ ಕೊಡುವುದನ್ನೇ ಕಡಿಮೆ ಮಾಡಿಬಿಡುತ್ತಾಳೆ ಹೆಣ್ಣು. ಪರಿಣಾಮ ಆಕೆಯ ಸೌಂದರ್ಯದ ಜೊತೆ ಆರ

ಮದುವೆಗೆ ಯಾರ ಒಪ್ಪಿಗೆ ಬೇಕು? (ವಿಜಯ ಕರ್ನಾಟಕ)

ಇಮೇಜ್
           ಅವಳಿಗೆ ಮನೆಯಲ್ಲಿ ಉಸಿರಾಡಲೂ ಸಹ ಆಗದ ಹಾಗೆ ಮಾಡಿ ಬಿಟ್ಟಿದ್ದರು. ಒಬ್ಬೊಬ್ಬ ಗಂಡು ಬಂದು ನೋಡಿಕೊಂಡು ಹೋದಾಗಲೂ ಮನೆಯ ಎಲ್ಲರ ದೃಷ್ಟಿ ಅವಳ ಮೇಲೆ. ಅವಳ ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲ ಬಂದ ಗಂಡುಗಳೆಲ್ಲಾ ಅವಳನ್ನು ಒಪ್ಪಿಕೊಂಡು ಬಿಡುತ್ತಿದ್ದರು. ಈಗ ಚೆಂಡು ಅವಳ ಅಂಗಳದಲ್ಲಿ!! ಅವಳು ಹೂ ಎನ್ನಲೂ ಆಗದೇ ಉಹುಂ ಎನ್ನಲೂ ಆಗದೇ ಕಣ್ಣು ಕಣ್ಣು ಬಿಡುತ್ತಿದ್ದಳು. ಕಾಲ ಬದಲಾಗಿದೆ ನಿಜ. ಮೊದಲಾಗಿದ್ದರೆ ಮದುವೆಯ ವಿಚಾರದಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯ ಕೇಳುತ್ತಲೇ ಇರಲಿಲ್ಲ. ಆದರೆ ಈಗ ಅವಳ ತೀರ್ಮಾನವೇ ಅಂತಿಮ. ಅವಳ ಇಷ್ಟಕ್ಕೆ ವಿರುದ್ಧವಾಗಿ ಯಾರೂ ಆಕೆಯನ್ನು ಯಾರಿಗೂ ಮದುವೆ ಮಾಡಿ ಕೊಡಲು ಸಾಧ್ಯವಿಲ್ಲ. ಆದರೆ ತನ್ನಿಷ್ಟದ ಗಂಡು ಸಿಗುವವರೆಗೂ ಕಾಯುವ ತಾಳ್ಮೆ ಆಕೆಗೆ ಇರುವಷ್ಟು ಮನೆಯವರಿಗಿಲ್ಲ. ಅವರಿಗೆ ಒಟ್ಟು ತಮ್ಮ ಮನೆಯ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿ ಬಿಡಬೇಕಷ್ಟೇ. ಮದುವೆ ಎಂಬ ಒಂದು ಪದವೇ ಹೆಚ್ಚಿನದು ಅವರಿಗೆ. "ಮಗಳಿಗೆ ಇನ್ನೂ ಮದುವೆ ಮಾಡಿಲ್ವಾ?" ಎಂಬ ಜನರ ಕೊಂಕು ಮಾತನ್ನು ತಪ್ಪಿಸಿಕೊಳ್ಳಬೇಕು ಎನ್ನುವುದೊಂದೇ ಅವರ ಉದ್ದೇಶ. ಹೇಗಿದ್ದರೂ ಮದುವೆಯಾದ ಮೇಲೆ ಎಲ್ಲವೂ ಸರಿಯಾಗುತ್ತೆ ಎಂಬ ಆಶಾಭಾವ ಅವರದ್ದು. ಆದರೆ ಆಕೆಯ ಭಾವವೇ ಬೇರೆ. ಮದುವೆಯ ನಂತರವೇ ತನ್ನ ನಿಜವಾದ ಜೀವನ ಶುರುವಾಗುತ್ತದೆ ಎಂಬ ಅರಿವು ಆಕೆಗಿದೆ. ಬೆಳಿಗ್ಗೆ ತಡವಾಗಿ ಏಳುವ ತನ್ನ ದಿನಚರಿ ಮದುವೆಯ