ಪೋಸ್ಟ್‌ಗಳು

ಮಾರ್ಚ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮದುವೆಗೆ ಯಾರ ಒಪ್ಪಿಗೆ ಬೇಕು? (ವಿಜಯ ಕರ್ನಾಟಕ)

ಇಮೇಜ್
           ಅವಳಿಗೆ ಮನೆಯಲ್ಲಿ ಉಸಿರಾಡಲೂ ಸಹ ಆಗದ ಹಾಗೆ ಮಾಡಿ ಬಿಟ್ಟಿದ್ದರು. ಒಬ್ಬೊಬ್ಬ ಗಂಡು ಬಂದು ನೋಡಿಕೊಂಡು ಹೋದಾಗಲೂ ಮನೆಯ ಎಲ್ಲರ ದೃಷ್ಟಿ ಅವಳ ಮೇಲೆ. ಅವಳ ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲ ಬಂದ ಗಂಡುಗಳೆಲ್ಲಾ ಅವಳನ್ನು ಒಪ್ಪಿಕೊಂಡು ಬಿಡುತ್ತಿದ್ದರು. ಈಗ ಚೆಂಡು ಅವಳ ಅಂಗಳದಲ್ಲಿ!! ಅವಳು ಹೂ ಎನ್ನಲೂ ಆಗದೇ ಉಹುಂ ಎನ್ನಲೂ ಆಗದೇ ಕಣ್ಣು ಕಣ್ಣು ಬಿಡುತ್ತಿದ್ದಳು. ಕಾಲ ಬದಲಾಗಿದೆ ನಿಜ. ಮೊದಲಾಗಿದ್ದರೆ ಮದುವೆಯ ವಿಚಾರದಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯ ಕೇಳುತ್ತಲೇ ಇರಲಿಲ್ಲ. ಆದರೆ ಈಗ ಅವಳ ತೀರ್ಮಾನವೇ ಅಂತಿಮ. ಅವಳ ಇಷ್ಟಕ್ಕೆ ವಿರುದ್ಧವಾಗಿ ಯಾರೂ ಆಕೆಯನ್ನು ಯಾರಿಗೂ ಮದುವೆ ಮಾಡಿ ಕೊಡಲು ಸಾಧ್ಯವಿಲ್ಲ. ಆದರೆ ತನ್ನಿಷ್ಟದ ಗಂಡು ಸಿಗುವವರೆಗೂ ಕಾಯುವ ತಾಳ್ಮೆ ಆಕೆಗೆ ಇರುವಷ್ಟು ಮನೆಯವರಿಗಿಲ್ಲ. ಅವರಿಗೆ ಒಟ್ಟು ತಮ್ಮ ಮನೆಯ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿ ಬಿಡಬೇಕಷ್ಟೇ. ಮದುವೆ ಎಂಬ ಒಂದು ಪದವೇ ಹೆಚ್ಚಿನದು ಅವರಿಗೆ. "ಮಗಳಿಗೆ ಇನ್ನೂ ಮದುವೆ ಮಾಡಿಲ್ವಾ?" ಎಂಬ ಜನರ ಕೊಂಕು ಮಾತನ್ನು ತಪ್ಪಿಸಿಕೊಳ್ಳಬೇಕು ಎನ್ನುವುದೊಂದೇ ಅವರ ಉದ್ದೇಶ. ಹೇಗಿದ್ದರೂ ಮದುವೆಯಾದ ಮೇಲೆ ಎಲ್ಲವೂ ಸರಿಯಾಗುತ್ತೆ ಎಂಬ ಆಶಾಭಾವ ಅವರದ್ದು. ಆದರೆ ಆಕೆಯ ಭಾವವೇ ಬೇರೆ. ಮದುವೆಯ ನಂತರವೇ ತನ್ನ ನಿಜವಾದ ಜೀವನ ಶುರುವಾಗುತ್ತದೆ ಎಂಬ ಅರಿವು ಆಕೆಗಿದೆ. ಬೆಳಿಗ್ಗೆ ತಡವಾಗಿ ಏಳುವ ತನ್ನ ದಿನಚರಿ ಮದುವೆಯ