ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲೇಖನ: "ಸತ್ತವರನ್ನು ನೆನಪಿಸುವ ಹ್ಯಾಲೋವೀನ್ ಹಬ್ಬ"

ಇಮೇಜ್
ಜನರ ದೈನಂದಿನ ಅಥವಾ ವಿಶೇಷ ಆಚರಣೆಗಳು ದೇಶದಿಂದ-ದೇಶಕ್ಕೆ, ಪ್ರದೇಶದಿಂದ-ಪ್ರದೇಶಕ್ಕೆ ಬದಲಾಗುತ್ತದೆ. ಆದರೂ ಅವುಗಳ ಉದ್ದೇಶ ಮಾತ್ರ ಒಂದೇ ಇರುತ್ತದೆ. ಒಂದೇ ಆಚರಣೆಯನ್ನು ನಾವು ಹಲವು ರೀತಿಯಲ್ಲಿ ಆಚರಿಸುತ್ತೇವೆ. ಉದಾಹರಣೆಗೆ ಹೊಸವರ್ಷದ ಆಚರಣೆಯನ್ನು ತೆಗೆದುಕೊಂಡರೆ ಎಲ್ಲಾ ದೇಶದವರೂ, ಎಲ್ಲಾ ಧರ್ಮದವರೂ ಹೊಸವರ್ಷ ಆಚರಿಸುತ್ತಾರೆ. ಆದರೆ ಆಚರಿಸುವ ರೀತಿ ಮಾತ್ರ ಬೇರೆ ಬೇರೆಯಷ್ಟೇ. ಏಕೆಂದರೆ ನಾವೆಲ್ಲರೂ ಒಂದೇ ಮಾನವ ಜಾತಿಗೆ ಸೇರಿದ್ದೇವೆ. ಅರಿತೋ ಅರಿವಿಲ್ಲದೆಯೋ ವಿಶ್ವಾಂದ್ಯಂತ ನಮ್ಮ ಆಚರಣೆಗಳು ಸಮಾನತೆ ಹೊಂದಿವೆ. ಅದೇ ರೀತಿ ನಾವು ಮಹಾಲಯ ಅಮಾವಾಸ್ಯೆಯಲ್ಲಿ ಪಿತೃಗಳನ್ನು ನೆನೆಸಿಕೊಂಡ ಹಾಗೆ ಪಾಶ್ಚಾತ್ಯರೂ ಸಹ ಒಂದು ಆಚರಣೆ ಮೂಲಕ ಗತಿಸಿ ಹೋದ ತಮ್ಮ ಹಿರಿಯರನ್ನು ನೆನೆಸಿಕೊಳ್ಳುತ್ತಾರೆ. ಆ ಮೂಲಕ‌ ತಮ್ಮ ಹಿರಿಯರ ಜೀವನ ವಿಧಾನವನ್ನು ತಮ್ಮ ಮಕ್ಕಳಿಗೆ ಪರಿಚಯಿಸುತ್ತಾರೆ. ಅದೇ "ಹ್ಯಾಲೋವೀನ್ ಹಬ್ಬ". ಅಕ್ಟೋಬರ್ ಮೂವತ್ತೊಂದರಂದು ಇದನ್ನು ಪ್ರಪಂಚದಾದ್ಯಂತ ಕೆಲವು ದೇಶಗಳಲ್ಲಿ ಆಚರಿಸಲಾಗುತ್ತದೆ. "ಹ್ಯಾಲೋವೀನ್"ನ ನಿಜವಾದ ಅರ್ಥ 'ಹ್ಯಾಲೋವ್ ಈವ್' ಎಂದರೆ 'ಸಂತರ ಸಾಯಂಕಾಲ' ಎಂದು. ಬೆಳಕಿನ ಅರ್ಧ ವರ್ಷ ಮುಕ್ತಾಯವಾದ ನಂತರ ಕತ್ತಲೆಯ ಅರ್ಧ ವರ್ಷ ಶುರುವಾಗುವ ಮೊದಲನೇ ದಿನ ಇದನ್ನು ಆಚರಿಸಲಾಗುತ್ತದೆ. ಈ ಆಚರಣೆ ಇದೀಗ ವಿಶ್ವದ ಗಮನ ಸೆಳೆದಿದೆ. ಭೂತಗಳ ವೇಷ: ಈ ಆಚರಣೆಯಲ್ಲಿ ಹಲವು ಸ್ವಾ

"ಡ್ರಾಗನ್ ಫ್ಲೈ: ಶನಿಗ್ರಹದಲ್ಲೊಂದು ಸುತ್ತು" (Dragon fly Mission)

ಇಮೇಜ್
ಸದಾ ಹೊಸತನ್ನು ಹುಡುಕಾಡುವುದು ಮನುಷ್ಯನ ಲಕ್ಷಣಗಳಲ್ಲಿ ಒಂದು. ಹಾಗೆಯೇ ಕೈಗೆ ಸಿಕ್ಕ ವಸ್ತುವಿನ ಮೇಲೆ ನಿರ್ಲಕ್ಷ್ಯ ವಹಿಸಿ ಮತ್ತೆ ಹೊಸದನ್ನು ಹುಡುಕಲು‌ ಹೊರಡುವುದೂ ಸಹ ಅವನ‌ ಲಕ್ಷಣವೇ. ಮಾನವ ಮೊದಲ ಬಾರಿಗೆ ಈ ಭೂಮಿ ಮೇಲೆ ಜನ್ಮ ತಾಳಿದಾಗ ಭೂಮಿ ಸ್ವರ್ಗ ಸದೃಶವಾಗಿತ್ತು. ಆದರೆ ತನ್ನದೇ ದುರಾಸೆಗಳಿಂದ ಭೂಮಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ ನರಕಕ್ಕಿಂತಲೂ ಕಡೆಯಾಗಿಸಿದ್ದಾನೆ. ಈಗ ಕುಡಿಯಲು ನೀರಿಲ್ಲದೇ, ವಾತಾವರಣ ವೈಪರೀತ್ಯದಿಂದ ಬದುಕಲು ಆಗದೇ ಪರದಾಡುತ್ತಿದ್ದಾನೆ. ಹವಾಮಾನ ಹೊಂದಿರುವ ಮತ್ತೊಂದು ಗ್ರಹ ಸಿಕ್ಕರೆ ಹಾರಿಬಿಡೋಣ ಎಂದುಕೊಳ್ಳುತ್ತಿದ್ದಾನೆ. ಅದಕ್ಕಾಗಿ ಸೌರವ್ಯೂಹದ ಒಳಗೆ ಮತ್ತು ಸೌರವ್ಯೂಹದ ಹೊರಗೂ ಸಹ ಹುಡುಕಾಟ ನಡೆಸುತ್ತಲೇ ಇದ್ದಾನೆ. ಆದರೆ ಕೊಟ್ಟ ಗ್ರಹವನ್ನು ಇಟ್ಟುಕೊಳ್ಳಲು ಬಾರದವರಿಗೆ ಮತ್ತೊಂದು ಗ್ರಹ ಸಿಕ್ಕರೆ ಅದನ್ನೂ ಹಾಳುಗೆಡುವುದಿಲ್ಲ ಅಂತ ಗ್ಯಾರಂಟಿ ಏನಿದೆ? ಹೊಸಗ್ರಹದ ಅನ್ವೇಷಣೆ ಇದೇ ಮೊದಲಲ್ಲ: ಜೀವಿಸಲು ಇರುವ ಅತ್ಯುತ್ತಮ ವಾತಾವರಣ ಹೊಂದಿರುವ ಭೂಮಿಯನ್ನು ಸರ್ವನಾಶ ಮಾಡಿದ ಮೇಲೆ ಬಹಳ ನಿಧಾನವಾಗಿ ಮನುಷ್ಯನಿಗೆ ಬೇರೆ ಗ್ರಹಗಳ ಮೇಲೆ ಗಮನ ಹರಿದಿದೆ. ಮನಸ್ಸು ಮಾಡಿದರೆ ಈ ಭೂಮಿಯನ್ನೇ ಮೊದಲಿನ ಹಾಗೆ ಸುಂದರವಾಗಿಸಬಹುದು. ಆದರೆ ಜನರಿಗೆ ಅದು ಬೇಕಿಲ್ಲ. ಬದಲಿಗೆ ದೂರದಲ್ಲೆಲ್ಲೋ ಮನುಷ್ಯ ಜೀವಿಸುವಂತಹ ವಾತಾವರಣ ಹೊಂದಿರುವ ಮತ್ತೊಂದು ಭೂಮಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಹುಡುಕಾಟ ಇದೇ ಮೊದಲಲ್