ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೀರು ಲೋಹದ ಚಿಂತೆ - ಕವನ ಸಂಕಲನ (ಎಂ.ಎ.ಕನ್ನಡ)

ಲೇಖಕರ ಪರಿಚಯ : 'ನೀರು ಲೋಹದ ಚಿಂತೆ' ಕವನ ಸಂಕಲನವನ್ನು ಬರೆದಿರುವವರು " ವಿಜಯಾ ದಬ್ಬೆ " ರವರು. ಇವರು ಆಧುನಿಕ ಮಹಿಳಾ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾದ ಲೇಖಕಿ.‌ ಕನ್ನಡದಲ್ಲಿ ಸ್ರ್ತೀ ಸಾಹಿತ್ಯವನ್ನು ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು. " ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ " ಎಂಬ ಕೂಗು ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ವಿಜಯಾ ದಬ್ಬೆ ರವರು ಬರವಣಿಗೆಗೆ ಇಳಿದರು. ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಗ್ರಂಥ ಸಂಪಾದನೆ, ಅನುವಾದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದರು. ಇವರನ್ನು ಕೇವಲ ಕವಿ ಎಂದೋ ಅಥವಾ ವಿಮರ್ಶಕಿಯೆಂದೋ ಗುರುತಿಸುವುದು ಕಷ್ಟ. ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವುದರಿಂದ ಇವರನ್ನು ಅನನ್ಯ ಲೇಖಕಿ ಎನ್ನಬಹುದಾಗಿದೆ. ಕನ್ನಡ ಎಂ.ಎ ಅನ್ನು ಮಾನಸ ಗಂಗೋತ್ರಿಯಲ್ಲಿ ಮುಗಿಸಿದ ವಿಜಯ ದಬ್ಬೆಯವರು ಮುಂದೆ ಸುಪ್ರಸಿದ್ಧ ಸಾಹಿತಿಯಾದ ಡಾ. ಹಾ.ಮಾ.ನಾಯಕರ ನೇತೃತ್ವದಲ್ಲಿ " ನಾಗಚಂದ್ರ: ಒಂದು ಅಧ್ಯಯನ " ಎಂಬ ವಿಷಯದ ಮೇಲೆ ಅಧ್ಯಯನ ಕೈಗೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ವಿಜಯ ದಬ್ಬೆ ರವರ ಕವನಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಭಾಷೆಯ ಹಿತಮಿತವಾದ ಬಳಕೆ ಅವರ ಕವನಗಳಲ್ಲಿ ಎದ್ದು ಕಾಣುವ ಗುಣ. ಮತ್ತೊಂದು ಗುಣವೆಂದರೆ ಸಮಾನತೆಯ ದೃಷ್ಟಿಕೋನ. ಸ್ತ್ರೀತ್ವದ ಬಗೆಗಿನ ಪಾಪಪ್ರಜ್ಞೆಯಾಗಲೀ, ಗಂಡಸರ ಮೇಲಿನ ವ್ಯಂಗ್ಯವಾ

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಕವಿ ಪರಿಚಯ: ಪಕ್ಷಿಕಾಶಿ ಕವನ ಸಂಕಲನದ ಕವಿ ರಾಷ್ಟ್ರಕವಿ ಕುವೆಂಪು ರವರು.  ರಾಷ್ಟ್ರಕವಿ ಎನ್ನುವುದು ಸರ್ಕಾರ ಅವರಿಗೆ ಕೊಟ್ಟ ಬಿರುದಾದರೆ, ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಎಂಬುದು ಅವರ ಕಾವ್ಯನಾಮ. ಬೇಂದ್ರೆಯವರು ಹೇಳುವ ಹಾಗೆ ಕುವೆಂಪುರವರು " ಯುಗದ ಕವಿ.. ಜಗದ ಕವಿ.." ಎಂದೇ ಪ್ರಸಿದ್ಧರು.  ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆ ಕವಿಯ ಬದುಕನ್ನೇ ಬದಲಾಯಿಸಿತು. ತಮ್ಮ ಮೊದಲ ಕೃತಿಯಾದ ಅಮಲನ ಕಥೆಯನ್ನು " ಕಿಶೋರ ಚಂದ್ರವಾಣಿ " ಎಂಬ ಕಾವ್ಯನಾಮದಿಂದ ಅಚ್ಚು ಹಾಕಿಸಿದರು. ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆಯಲು ಆರಂಭಿಸಿದರು.‌ 1922 ರಿಂದ 1985 ವರೆಗೆ ಸುಮಾರು ಅರವತ್ತು ವರ್ಷಗಳಷ್ಟು ಕಾಲ ನಿರಂತರವಾಗಿ ಬರೆದರು. ನಾಟಕ, ಕಾವ್ಯ, ಮಕ್ಕಳ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.‌ 1945 ರಲ್ಲಿ ಬರೆದಿದ್ದ " ಶ್ರೀರಾಮಾಯಣ ದರ್ಶನಂ " ಮಹಾಕಾವ್ಯಕ್ಕೆ 1968 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪಕ್ಷಿಕಾಶಿ ಕವನಗಳು: ಪಕ್ಷಿಕಾಶಿಯಲ್ಲಿ ಸುಮಾರು 47 ಕವನಗಳಿವೆ. ಅವುಗಳ ಆಶಯಕ್ಕೆ ತಕ್ಕಂತೆ ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ: * ಸೂರ್ಯೋದಯ ಕುರಿತ ಗೀತೆಗಳು    (ಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ.      ಈ ಜಗಹೃದಯ, ಭಾದ್ರಪದದ ಸುಪ್ರಭಾತ,      ಈ

ನವೋದಯ ಕಾವ್ಯದ ಸ್ವರೂಪ ಮತ್ತು ಲಕ್ಷಣಗಳು

ಪೀಠಿಕೆ : ಇಂಗ್ಲೀಷ್ ಸಾಹಿತ್ಯದಿಂದ ಪ್ರಭಾವಗೊಂಡು ಹುಟ್ಟಿದ ಹೊಸ ಸಾಹಿತ್ಯ ಪ್ರಕಾರಕ್ಕೆ ' ನವೋದಯ ' ಸಾಹಿತ್ಯ ಎಂದು ಕರೆಯಲಾಗಿದೆ. ದಾಖಲಾತಿಯ ಕಾರಣಕ್ಕೆ ಬಿ.ಎಂ.ಶ್ರೀ ಅವರ 'ಇಂಗ್ಲೀಷ್ ಗೀತಗಳು' ಕವನ ಸಂಕಲನವನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಘಟ್ಟವಾದ 'ನವೋದಯದ' ಪ್ರಾತಿನಿಧಿಕ ಕವನ ಸಂಕಲನವೆಂದು ಪರಿಗಣಿಸಲಾಗಿದೆ. ಈ ಮೂಲಕ ಬಿ.ಎಂ.ಶ್ರೀ ಅವರನ್ನು ನವೋದಯದ ಹರಿಕಾರ ಎಂದು ಗುರುತಿಸಲಾಗಿದೆ. ಬಿ.ಎಂ.ಶ್ರೀ-----> ನವೋದಯದ ಹರಿಕಾರ. ಇಂಗ್ಲೀಷ್ ಗೀತಗಳು: ಇಂಗ್ಲೀಷ್ ಗೀತಗಳು  ಆಧುನಿಕ ಕನ್ನಡ ಸಾಹಿತ್ಯಕ್ಕೆ ಒಂದು ಸ್ಪಷ್ಟವಾದ ಮಾದರಿಯ ಮಾರ್ಗವನ್ನು ತೋರಿಸಿತು ಎನ್ನಬಹುದು. ಆಗ ಆ ಮಾರ್ಗದ ಅವಶ್ಯಕತೆಯೂ ಇತ್ತು. ' ಇಂಗ್ಲೀಷ್ ಗೀತಗಳು ' ಕವನ ಸಂಕಲನದಲ್ಲಿನ ಕವನಗಳು ಇಂಗ್ಲೀಷ್ ಸಾಹಿತ್ಯದ ಅನುವಾದ ಅನ್ನುವುದಕ್ಕಿಂತ ಪ್ರೇರಣೆ ಪಡೆದು ರಚಿಸಿದ ಕವನಗಳು ಎನ್ನಬಹುದು. ಆದರೆ ಅವುಗಳಿಗೆ ಪ್ರೇರಣೆಯಾಗಿ ಪಡೆದಿದ್ದು ಪ್ರಸಿದ್ಧರ ಕವನಗಳನ್ನಲ್ಲ. ಬಿ.ಎಂ.ಶ್ರೀ ಅವರ ಪ್ರಕಾರ ಅವರ ಉದ್ದೇಶ ಇದ್ದಿದ್ದು ಇಷ್ಟೇ. ಇಂಗ್ಲೀಷಿನಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಹೊಸ ಸಾಹಿತ್ಯ ಪ್ರಕಾರವನ್ನು ಸೃಜಿಸುವುದು. ಅದನ್ನು "ಇಂಗ್ಲೀಷ್ ಗೀತಗಳು" ಯಶಸ್ವಿಯಾಗಿ ಮಾಡಿತು. ಭಾಷೆಯ ಶೈಲಿ, ಕಥಾವಸ್ತು, ಛಂದಸ್ಸು ಮೊದಲಾದ ವಿಷಯಗಳಲ್ಲಿ ಹೊಸ ಸಂಗತಿಗಳನ್ನು ಪ್ರಸ್ತಾಪಿಸಿತು‌. ಇದು ಕವ

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾಷೆಯ ಮೂಲರೂಪವನ್ನು ಪೂರ್ವದ ಹಳೆಗನ್ನಡ ಎಂದುಕೊಂಡರೆ, ನಂತರದ ರೂಪವನ್ನು ಹಳೆಗನ್ನಡ ರೂಪ ಎಂದೂ, ಅದರ ಮುಂದಿನ ಸ್ವರೂಪವನ್ನು ನಡುಗನ್ನಡ ಸ್ವರೂಪವೆಂದು, ಅದರ ನಂತರದ ರೂಪವನ್ನು ಹೊಸಗನ್ನಡ ರೂಪವೆಂದು ಗುರುತಿಸಲಾಗುತ್ತದೆ. * ಪೂರ್ವದ ಹಳೆಗನ್ನಡ * ಹಳೆಗನ್ನಡ * ನಡುಗನ್ನಡ * ಹೊಸಕನ್ನಡ " ಮಧ್ಯಕಾಲೀನ ಕನ್ನಡ ಸಾಹಿತ್ಯ " ದ ಕಾಲದ ಭಾಷೆಯನ್ನು ನಡುಗನ್ನಡ ಭಾಷೆ ಎಂದು ಗುರುತಿಸಬಹುದಾಗಿದೆ. ಈ ಭಾಷೆಯ ಮೊದಲ ಹಂತವು ವಚನಕಾರರ ಉಗಮದೊಂದಿಗೆ ಆರಂಭವಾಗಿದೆ. ಸಂಸ್ಕೃತದ ಪ್ರಭಾವ : ಕನ್ನಡ ಮಾತ್ರವಲ್ಲ, ಇತರ ಎಲ್ಲಾ ಭಾರತೀಯ ಭಾಷೆಗಳ ಮೇಲೆಯೂ ಸಂಸ್ಕೃತ ಪ್ರಭಾವ ಬೀರಿದ್ದ ಕಾಲವದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ಸಹ ಸಂಸ್ಕೃತದಿಂದ ಸ್ವತಂತ್ರವಾಗಿ ಯೋಚಿಸಲಾರದಷ್ಟು ಅನಿವಾರ್ಯತೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಸಾಹಿತ್ಯವು ಕೇವಲ ರಾಜಪರಂಪರೆಗಷ್ಟೇ ಸೀಮಿತವಾಗಿದ್ದುದರಿಂದ ಭಾಷೆಯು ಕ್ಲಿಷ್ಟವೂ, ಸಂಕೀರ್ಣವೂ ಆಗಿತ್ತು. ಸಾಹಿತ್ಯಕ್ಕೆ ಸಂಸ್ಕೃತ-ಪ್ರಾಕೃತಗಳೇ ಮೂಲ ಆಕರಗಳಾದುದರಿಂದ ಭಾಷೆಯು ಸಹಜವಾಗಿ ಸಾಕಷ್ಟು ಪ್ರೌಢವಾಗಿತ್ತು. ಜನಸಾಮಾನ್ಯನಂತೂ ಸಾಹಿತ್ಯದಿಂದ ತುಂಬಾ ದೂರ ಉಳಿದುಬಿಟ್ಟಿದ್ದ.  ಒಟ್ಟಿನಲ್ಲಿ ಸಂಸ್ಕೃತ ಭಾಷೆಯ ಶಿಷ್ಟತೆ ಕನ್ನಡ ಸಾಹಿತ್ಯದ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಯಾವುದೇ ಒಂದು ಸೃಜನಶೀಲ ಭಾಷೆಯ ಬೆಳವಣಿಗೆಗೆ ಈ ರೀತಿಯ ಪ್ರಭಾವ-ಪ್ರೇರಣೆಗಳು ಅವಶ್ಯಕ. ಇದರಿಂದ ಭಾಷೆ ಪಡೆದುಕೊಂಡಷ್ಟೂ ಗಟ್ಟಿಗ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)

ಪೀಠಿಕೆ : ಕಾವ್ಯಮೀಮಾಂಸೆ ಎಂದರೆ ಕಾವ್ಯವನ್ನು ಕುರಿತ ಚರ್ಚೆ ಎಂದರ್ಥ. ಕಾವ್ಯ ಎಂದರೇನು? ಅದು ಹೇಗೆ ನಿರ್ಮಿತಿಯಾಗುತ್ತದೆ? ಏಕೆ ನಿರ್ಮಿತಿಯಾಗುತ್ತದೆ? ಎಂಬ ಸಂಗತಿಗಳನ್ನು ಕುರಿತ ಚರ್ಚೆಯೇ " ಕಾವ್ಯ ಮೀಮಾಂಸೆ ". ಶಬ್ದಾರ್ಥ ಸಹಿತವಾದದ್ದು ಕಾವ್ಯ. ಆ ಕಾವ್ಯದ ಶಬ್ದಾರ್ಥ ಸ್ವರೂಪವನ್ನು ಕುರಿತ ಚರ್ಚೆಯೇ ಕಾವ್ಯಮೀಮಾಂಸೆ. ಕಾವ್ಯ ಅಥವಾ ಸಾಹಿತ್ಯದಲ್ಲಿ ನಮ್ಮ ಲೌಕಿಕ ವ್ಯವಹಾರದ ಮಾತುಗಳೇ ಕಂಡುಬಂದರೂ, ಅವು ಲೋಕ ಮತ್ತು ಶಾಸ್ತ್ರದಲ್ಲಿ ಕಂಡುಬರುವ ಶಬ್ದಾರ್ಥಕ್ಕಿಂತ ಭಿನ್ನವಾದ, ವಿಶಿಷ್ಟವಾದ ಒಂದು ಉಕ್ತಿ ವೈಚಿತ್ರ್ಯ ಹೊಂದಿರುತ್ತದೆ. ಯಾವ ಕಾರಣದಿಂದಾಗಿ ಕಾವ್ಯದ ಶಬ್ದಾರ್ಥವು ಲೌಕಿಕ ವ್ಯವಹಾರದ ಶಬ್ದಾರ್ಥದಿಂದ ಬೇರೆಯಾದ ಅರ್ಥ ಹೊಂದಿರುತ್ತದೆ‌ ಎಂಬ ರಹಸ್ಯ ಶೋಧನೆಯೇ "ಕಾವ್ಯ ಮೀಮಾಂಸೆಯ" ಮೊದಲ ಹೆಜ್ಜೆ. ಹೀಗೆ ಶಬ್ದಾರ್ಥಸಹಿತವಾದ ಕಾವ್ಯದ ಸ್ವರೂಪವನ್ನು ಕುರಿತು ಹಿಂದಿನಿಂದ ಇಂದಿನವರೆಗೂ ಸೂತ್ರಗಳು, ವ್ಯಾಖ್ಯಾನಗಳು ಬರುತ್ತಲೇ ಇವೆ. ಒಂದೊಂದು ಕಾಲದಲ್ಲಿಯೂ ಅಂದಂದಿನವರು ಕಾವ್ಯದ ಯಾವುದೋ ಲಕ್ಷಣವನ್ನು ಎತ್ತಿ ಹಿಡಿದು ಅದೇ ಕಾವ್ಯದ ಆತ್ಮ ಎಂದು ಹೇಳುತ್ತಾ ಬಂದಿದ್ದಾರೆ. ಏಕೆಂದರೆ ಇದುವರೆಗೂ ಯಾರಿಂದಲೂ ಕಾವ್ಯವನ್ನು ಕುರಿತು ಸಮರ್ಪಕವಾದ ಕೊನೆಯ ಸೂತ್ರವನ್ನು ಹೇಳಲು ಸಾಧ್ಯವಾಗಿಲ್ಲ.  ಭಾರತೀಯ ಕಾವ್ಯ

ಜಿ.ಎಸ್.ಶಿವರುದ್ರಪ್ಪ ರವರ ಭಾರತೀಯ ಕಾವ್ಯ ಮೀಮಾಂಸೆ (ಎಂ.ಎ.ಕನ್ನಡ)

ಭಾರತೀಯ ಕಾವ್ಯ ಮೀಮಾಂಸೆ ಕವಿ-ಕಾವ್ಯ-ಸಹೃದಯ ವಿಚಾರವನ್ನು ಕುರಿತ ಚರ್ಚೆಯನ್ನು " ಕಾವ್ಯ ಮೀಮಾಂಸೆ " ಎಂದು ಕರೆಯಲಾಗಿದೆ. ಮೀಮಾಂಸೆ ಎಂದರೆ ಚಿಂತನೆ-ಚರ್ಚೆ ಎಂದರ್ಥ. ಆದರೆ "ಕಾವ್ಯ ಮೀಮಾಂಸೆ" ಎಂಬ ಮಾತು ಬಳಕೆಗೆ ಬಂದದ್ದು ತೀರಾ ಇತ್ತೀಚೆಗೆ. ಅಂದರೆ ಸುಮಾರು 9 ನೇ ಶತಮಾನದ ವೇಳೆಗೆ. ಕಾವ್ಯ ವಿಚಾರವನ್ನು ಕುರಿತ ಚರ್ಚೆಗೆ ಕಾವ್ಯ ಮೀಮಾಂಸೆ ಎಂಬ ಹೆಸರು ಕಾಣಿಸಿಕೊಳ್ಳುವುದು "ರಾಜಶೇಖರ" ನಲ್ಲಿ. ಅವನ ಕೃತಿಯ ಹೆಸರೇ ಕಾವ್ಯ ಮೀಮಾಂಸೆ. ರಾಜಶೇಖರನ ಕೃತಿಯ ಹೆಸರು-----> ಕಾವ್ಯಮೀಮಾಂಸೆ . ಇಂದು ಕಾವ್ಯಮೀಮಾಂಸೆಯನ್ನು ಇಂಗ್ಲೀಷಿನ Poetics ಪದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಆದರೆ ಇದಕ್ಕೂ ಮೊದಲಿನ‌ ಕಾವ್ಯ ಶಾಸ್ತ್ರಕ್ಕೆ "ಅಲಂಕಾರ ಶಾಸ್ತ್ರ" ಎಂದೇ ಹೆಸರಿತ್ತು. ಉದಾ: "ಭಾಮಹ" ನ ಕೃತಿ------> ಕಾವ್ಯಾಲಂಕಾರ "ವಾಮನ" ನ ಕೃತಿ-------> ಕಾವ್ಯಾಲಂಕಾರ ಸೂತ್ರ "ರುದ್ರಟ"ನ ಕೃತಿ----------> ಕಾವ್ಯಾಲಂಕಾರ . ಇದಕ್ಕೆ ಹಿಂದಿನ ಶಾಸ್ತ್ರಕಾರರಿಗೆ ಕಾವ್ಯದ ಬಗ್ಗೆ ಇದ್ದ ಕಲ್ಪನೆಯೇ ಕಾರಣ ಎನ್ನಬಹುದು. "ಕಾವ್ಯ" ಎಂದರೆ ಒಂದಲ್ಲ ಒಂದು ಬಗೆಯ ಅಲಂಕಾರದಿಂದ ಅಥವಾ ಉಕ್ತಿ ವೈಚಿತ್ರದಿಂದ ಕೂಡಿರುವಂಥದ್ದು ಎಂದು ಭಾವಿಸಿದ್ದರು. ಅಲ್ಲದೇ ಕಾವ್ಯವು ಅಲಂಕಾರದಿಂದಲೇ ಗ್ರಾಹ್ಯವಾಗುತ್ತದೆ ಎಂದು ತಿಳಿದಿದ್ದರು.