ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಾನಸಿಕ ದೂರ -ಅದರ ಸ್ವರೂಪ ವ್ಯಾಪ್ತಿ

ವ್ಯಕ್ತಿ ಪರಿಚಯ:  19ನೇ ಶತಮಾನದ ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬೆನೆಡೆಟ್ಟೋ ಕ್ರೋಚೆಯಷ್ಟೇ ಮಹತ್ವನಾದವನು ಎಡ್ವರ್ಡ್ ಬುಲ್ಲೋ . ಈತ ಸಹ ರಸ ಸಿದ್ದಾಂತಕ್ಕೆ ಸಂವಾದಿಯಾದ ಮಾನಸಿಕ ದೂರ (Physical Distance) ಎಂಬ ಸಿದ್ಧಾಂತ ಮಂಡಿಸಿದ್ದಾನೆ. ಇದು ಕಲೆಯಿಂದ ನಾವು ಪಡೆಯಬೇಕಾದ ಅನುಭವ ಮತ್ತು ಕಲೆಗಾರ ಲೋಕ ಸಂಬಂಧದಲ್ಲಿ ಕಲೆಯೊಂದಿಗೆ ಇರಿಸಿಕೊಳ್ಳಬೇಕಾದ ಸಂಬಂಧದ ಕುರಿತಾಗಿದೆ.  ಈ ಸ್ವರೂಪವನ್ನು ಬುಲ್ಲೋ ಒಂದು ಹೊಸ ಪರಿಭಾಷೆಯಲ್ಲಿ ಹಿಡಿದಿಡಲು ಪ್ರಯತ್ನಿಸಿ, ಅದನ್ನು "ಮಾನಸಿಕ ದೂರ" ಎಂದು ಕರೆದಿದ್ದಾನೆ. ಇದು ಇಂದಿಗೂ ಪರಿಗಣಿಸಬೇಕಾದ ಒಂದು ಮೌಲಿಕವಾದ ರಸ ತತ್ವವಾಗಿದೆ. ಪೀಠಿಕೆ :  ಕನ್ನಡದಲ್ಲಿ Physical Distance ಗೆ ಸಂವಾದಿಯಾಗಿ ಮಾನಸಿಕ ದೂರ ಎಂಬ ಪದವನ್ನು ಬಳಸುತ್ತೇವೆ. ಈ Physical Distance ಎನ್ನುವುದು ಲೋಕ ವಸ್ತುವನ್ನಾಗಲೀ, ಕಲಾವಸ್ತುವನ್ನಾಗಲಿ ಕುರಿತು ಕಲಾವಿದ ಮತ್ತು ಪ್ರೇಕ್ಷಕನ ಮಧ್ಯೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ. ಲೋಕದಲ್ಲಿ ನಾವು ವಸ್ತುಗಳನ್ನು ತೀರ ಹತ್ತಿರದಲ್ಲಿ ಇರಿಸಿಕೊಂಡು, ಎಂದರೆ ಕೇವಲ ವ್ಯಾವಹಾರಿಕ ಪ್ರಯೋಜನದ ದೃಷ್ಟಿಯಿಂದ ನೋಡುವುದು ನಮಗೆ ಸಹಜವಾದದ್ದು. ಈ ಸಂಬಂಧದಲ್ಲಿ ನಮಗೆ ಸೌಂದರ್ಯಾನುಭವ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ. ಆದ್ದರಿಂದ ವಸ್ತುವನ್ನು

ವ್ಯಕ್ತಿತ್ವ ನಿರಸನ (ಟಿಪ್ಪಣಿ)

ಕವಿ ಹಿಂದಿನ ಸಂಪ್ರದಾಯದೊಡನೆ ಎಂತಹ ಸಂಬಂಧವನ್ನು ಇಟ್ಟುಕೊಳ್ಳುತ್ತಾನೆ ಎನ್ನುವುದು ಮುಖ್ಯ. ಹಿಂದಿನದೆಲ್ಲ ಒಪ್ಪಿಕೊಂಡು ಒಟ್ಟಾಗಿ ನುಂಗಬೇಕೆಂದಲ್ಲ ಅಥವಾ ಹಿಂದಿನದಲ್ಲಿಯೇ ತನಗೆ ಬೇಕಾದ ಒಂದೆರಡು ಆರಿಸಿಕೊಂಡು ಅದನ್ನು ಅನುಕರಿಸುತ್ತಾನೆ ಎಂದಲ್ಲ. ತನ್ನ ನಾಡಿನಲ್ಲಿ ಹರಿದು ಬರುತ್ತಿರುವ ಮುಖ್ಯ ಪ್ರವಾಹವನ್ನು ಆತ ಪ್ರಜ್ಞಾಪೂರ್ವಕವಾಗಿ ಕಾಣಬೇಕು. ಆತ ತನ್ನ ವೈಯುಕ್ತಿಕ ವೈಚಿತ್ರಗಳನ್ನು ದಾಟಿ ಮೇಲೇರಬೇಕಾಗುತ್ತದೆ. ತನ್ನ ಪರಿಮಿತ ವ್ಯಕ್ತಿತ್ವದ 'ಅಹಮ್' ಅನ್ನು ಕಳೆದುಕೊಂಡು ಸಮಷ್ಟಿ ಮನಸ್ಸಿಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾಗುತ್ತದೆ. ತನ್ನ ವೈಯುಕ್ತಿಕತೆಗಿಂತಲೂ ಹೆಚ್ಚು ಮೌಲ್ಯವುಳ್ಳ ಆ ಇನ್ನೊಂದಕ್ಕೆ ತನ್ನನ್ನು ನಿರಂತರವಾಗಿ ಅರ್ಪಿಸಿಕೊಳ್ಳುತ್ತಾ ಹೋಗುತ್ತಾನೆ ಕವಿ. ನಿಜವಾಗಿ ಕಲಾವಿದನ ಪ್ರಗತಿ ಈ ಆತ್ಮಾರ್ಪಣೆಯನ್ನು ಅವಲಂಬಿಸಿದೆ. ಇದೇ ವ್ಯಕ್ತಿತ್ವ ನಿರಸನ ಸಿದ್ಧಾಂತ. ಅಂದರೆ ಇದು ವ್ಯಕ್ತಿತ್ವದ ನಾಶವಲ್ಲ. ಬದಲಿಗೆ ಪರಿಮಿತವಾದ ವೈಯುಕ್ತಿಕ ವೈಚಿತ್ರದಿಂದ ಪಾರಾಗಿ, ಇನ್ನೊಂದು ದೊಡ್ಡ ತತ್ವಕ್ಕೆ ತನ್ನನ್ನು ಅರ್ಪಿಸಿಕೊಳ್ಳುವುದು. ಇಂತಹ ಸಮರ್ಪಣೆಯಿಂದಲೇ ಮಹತ್ತರವಾದ ಕಾವ್ಯವು ಸೃಷ್ಟಿಯಾಗುತ್ತದೆ ಎನ್ನುತ್ತಾನೆ ಎಲಿಯಟ್. ಕಾವ್ಯಕ್ಕೂ ಕವಿಗೂ ಇರುವ ಸಂಬಂಧ ಇಲ್ಲಿ ಬರುತ್ತದೆ. ಪ್ರಾಮಾಣಿಕ ವಿಮರ್ಶೆ ಕಾವ್ಯವನ್ನು ಕುರಿತು ಇರುತ್ತದೆಯೇ ಹೊರತು ಕವಿಯನ್ನಲ್ಲ. "Honest Criticism is directed not upon the poet bu

ಮಾನಸಿಕ ದೂರ (ಟಿಪ್ಪಣಿ)

ಕನ್ನಡದಲ್ಲಿ 'Physical Distance' ಎನ್ನುವುದಕ್ಕೆ ಸಂವಾದಿಯಾಗಿ 'ಮಾನಸಿಕ ದೂರ', 'ಮನೋದೂರ' ಎಂಬ ಪದ ಬಳಕೆಯಲ್ಲಿದೆ. ಈ 'Physical Distance' ಅಥವಾ 'ಮಾನಸಿಕ ದೂರ' ಎನ್ನುವುದು ಲೋಕ ವಸ್ತುವನ್ನಾಗಲೀ ಅಥವಾ ಕಲಾವಸ್ತುವನ್ನಾಗಲೀ ಕುರಿತು ಕಲಾವಿದ ಮತ್ತು ಪ್ರೇಕ್ಷಕರಿಗೆ ಇರಬೇಕಾದ ಒಂದು ವಿಶಿಷ್ಟ ಸಂಬಂಧವನ್ನು ಸೂಚಿಸುತ್ತದೆ. ಮಾನಸಿಕ ದೂರ --> ಕಲಾ ವಸ್ತುವನ್ನು ಕುರಿತು ಕಲಾವಿದ ಮತ್ತು ಪ್ರೇಕ್ಷಕರ ನಡುವೆ ಇರುವ ಒಂದು ವಿಶಿಷ್ಟ ಸಂಬಂಧ. ಲೋಕದಲ್ಲಿ ನಾವು ವಸ್ತುಗಳನ್ನು ' ಹತ್ತಿರ 'ದಲ್ಲಿರಿಸಿ, ಅಂದರೆ ಕೇವಲ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ನಮಗೆ ಅದರಲ್ಲಿ ಸೌಂದರ್ಯ ಕಾಣಿಸುವುದಿಲ್ಲ. ಏಕೆಂದರೆ ಈ ವ್ಯಾವಹಾರಿಕ ಸಂಬಂಧದಲ್ಲಿ ಲಾಭ, ನಷ್ಟ, ಸುಖ, ದುಃಖ, ಇಷ್ಟ, ಅನಿಷ್ಟ ಇತ್ಯಾದಿ ಭಾವನೆಗಳೇ ಪ್ರಧಾನವಾಗಿರುತ್ತದೆ.  ಆದ್ದರಿಂದ ಈ ವರ್ತುಲದಿಂದ ವಸ್ತುವನ್ನು ' ದೂರ' ಇರಿಸಿ ವೈಯಕ್ತಿಕವಲ್ಲದ ಒಂದು ನೆಲೆಯಿಂದ ನೋಡಿದಾಗ, ಸೌಂದರ್ಯಾನುಭವ ಲಭಿಸುತ್ತದೆ‌. ಆದ ಕಾರಣ ಯಾವ ಒಂದು ನಿಯತವಾದ ದೂರದಲ್ಲಿ ಇರಿಸಿಕೊಂಡು ನೋಡಿದರೆ ವಸ್ತು ನಮಗೆ ಸೌಂದರ್ಯಾನುಭವಕಾರಿಯಾಗಿ ತೋರುವುದೋ, ಆ ಒಂದು ದೂರವನ್ನೇ ಎಡ್ವರ್ಡ್ ಬುಲ್ಲೋ  "ಮಾನಸಿಕ ದೂರ" ಎನ್ನುತ್ತಾನೆ. ಇದಕ್ಕಾಗಿ ಬುಲ್ಲೋ ಕೊಡುವ ಒಂದು ಚಿಕ್ಕ ಉದಾಹರಣೆ ಎಂದರೆ, ಕಾಡಿನಲ್ಲಿ ಹೋಗುವಾಗ ಥಟ್ಟನೆ ನಮ್ಮದುರ

ಟಿ.ಎಸ್.ಎಲಿಯಟ್ (ಟಿಪ್ಪಣಿ)

ಟಿ.ಎಸ್.ಎಲಿಯಟ್ ಶ್ರೇಷ್ಠ ಕವಿಯಾಗಿ, ನಾಟಕಕಾರನಾಗಿ, ಅತ್ಯುತ್ತಮ ವಿಮರ್ಶಕನಾಗಿ, ಪತ್ರಿಕಾ ಸಂಪಾದಕನಾಗಿ, ಉಪನ್ಯಾಸಕನಾಗಿ ಆಧುನಿಕ ಆಂಗ್ಲ ಸಾಹಿತ್ಯದಲ್ಲಿ ಒಂದು ಹೊಸ ಮನ್ವಂತರವನ್ನೇ ಸೃಷ್ಟಿಸಿದನು. ಆತನ ' waste land ' ಮಹಾಕಾವ್ಯ 20ನೇ ಶತಮಾನದ ಆಂಗ್ಲ ಸಾಹಿತ್ಯದ ಒಂದು ಮಹತ್ವದ ಕೃತಿಯಾಗಿದ್ದು, ಆತನ ಕೃತಿಗಳ ಪ್ರಭಾವ ಯೂರೋಪ್ ಅಮೆರಿಕಗಳಿಗಷ್ಟೇ ಸೀಮಿತವಾಗದೆ ಇಡೀ ಜಗತ್ತಿನ ಸಾಹಿತ್ಯದ ಮೇಲೆ ದಟ್ಟವಾದ ಪ್ರಭಾವ ಬೀರಿದೆ. ಹೆಸರು                  : ಟಿ ಎಸ್ ಎಲಿಯಟ್ ಹುಟ್ಟಿದ ವರ್ಷ        : 1888 ಹುಟ್ಟಿದ ಸ್ಥಳ           : ಅಮೆರಿಕಾದ ಸೇಂಟ್ ಲೂಯಿಸ್                                 ನಗರ ಕೃತಿಗಳು                 : ವೇಸ್ಟ್ ಲ್ಯಾಂಡ್, ಪೊಯಮ್ಸ್,                                ಸೆಲೆಕ್ಟೆಡ್ ಏಜೆನ್ಸಿಸ್, ಕಲೆಕ್ಟೆಡ್                                ಪೊಯಮ್ಸ್, ಡಿಫಿಕಲ್ಟೀಸ್ ಆಫ್                                ಎ ಸ್ಟೇಟ್ಸ್ ಮೆನ್ ಪ್ರಶಸ್ತಿ                   : ವೇಸ್ಟ್ ಲ್ಯಾಂಡ್ ಮತ್ತು ಆತನ ಸಮಗ್ರ                                ಸಾಹಿತ್ಯ ಕೊಡುಗೆಗಾಗಿ ನೊಬೆಲ್ ಈತನದ್ದು ಇಂಗ್ಲೀಷ್ ಮೂಲದ ಕುಟುಂಬ. ಈತನ ಕುಟುಂಬದ ಒಬ್ಬ ವ್ಯಕ್ತಿ 17ನೇ ಶತಮಾನದಲ್ಲಿ ಇಂಗ್ಲೆಂಡ್ ಬಿಟ್ಟು ಅಮೆರಿಕಾದ ಮೆಸ್ಯಾಚ್ಯುಸೆಟ್‌ಗೆ ಬಂದನು. ನಂತರ ಇವನ ಕುಟುಂಬ ಅಮೇರಿಕಾದಲ್ಲಿ ನೆಲೆಸಿತು.  ಎಲಿಯ