ಪೋಸ್ಟ್‌ಗಳು

ಜನವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Sad Fishing @ VK on 26.01.2020

ಇಮೇಜ್
ಯಾವುದೇ ವಿಷಯವಿರಲಿ ನಮ್ಮ ಯುವ ಜನತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೇನೇ ಸಮಾಧಾನ. ಖುಷಿಯೇ ಇರಲಿ ಅಥವಾ ದುಃಖವೇ ಇರಲಿ ಎಲ್ಲರಿಗೂ‌ ಆ ವಿಷಯ ತಿಳಿಸಬೇಕು ಎನ್ನುವ ಹಪಾಹಪಿ. ಹಾಗಾಗಿ ಜನರು ಹಿಂದೆ ಮುಂದೆ ಯೋಚಿಸದೇ ತಮಗೆ ಅನ್ನಿಸಿದ್ದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿಬಿಡುತ್ತಾರೆ. ಮತ್ತು ಓದುಗರ ಅನುಕಂಪ ಬಯಸುತ್ತಾರೆ. ಆದರೆ ನೋವಿನ ಭರದಲ್ಲಿ ತಮ್ಮೆಲ್ಲಾ ಗುಟ್ಟುಗಳನ್ನೂ ತಾವಾಗಿಯೇ ಜಗಜ್ಜಾಹೀರು ಮಾಡುವುದರಿಂದ ಮುಂದೆ ತಾವು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಆಲೋಚನೆ ಆ ಸಂದರ್ಭದಲ್ಲಿ ಅವರಿಗೆ ಬರುವುದಿಲ್ಲ. "ಸ್ಯಾಡ್ ಫಿಶಿಂಗ್" ಎನ್ನುವುದು ಒಂದು ಹೊಸ ಟ್ರೆಂಡ್ ಆಗಿದ್ದು, ಯುವ ಜನತೆ ತಮ್ಮೆಲ್ಲಾ ನೋವುಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟು ಮತ್ತೊಬ್ಬರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜಾಲತಾಣದ ಸಹೃದಯ ಓದುಗರು ಇದನ್ನು ಓದಿ ತನ್ನ ಬಗ್ಗೆ ಅನುಕಂಪದಿಂದ ಎರಡು ಮಾತುಗಳನ್ನಾಡಲಿ ಎನ್ನುವುದು ಅವರ ಆಶಯ.‌ ಅಲ್ಲದೇ ಯುವಜನರು ತಮ್ಮ ಭಾವನಾತ್ಮಕ ಸಮಸ್ಯೆಗಳಿಂದ ಹೊರಬರಲು ಪರಿಹಾರಕ್ಕಾಗಿಯೂ ಜಾಲತಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ಬದಲು ಜನರ ಚುಚ್ಚುಮಾತುಗಳಿಂದ ಪರಿಹಾರ ಬಯಸಿದವರು ಭ್ರಮನಿರಸರಾಗುತ್ತಿದ್ದಾರೆ. ಜೊತೆಗೆ ಅದೇ ಸಂದರ್ಭದಲ್ಲಿ ತಮ್ಮ ಬಗ್ಗೆ ಅರಿತವರಿಂದ ದೌರ್ಜನ್ಯಕ್ಕೂ ಒಳಗಾಗುತ್ತಿದ್ದಾರೆ. ಹೇಗೆ ಗೊತ್ತೇ? ನೀವೇ ಬಾಯಿ ಬಿಡದಿದ್ದರೆ