ಪೋಸ್ಟ್‌ಗಳು

Article about Triplets ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಲೇಖನ: "ಮೂರ್'ತಿ ಮಹಿಮೆ" (ಸಖಿ ಮ್ಯಾಗಜೀನ್)

ಇಮೇಜ್
  ಮೂರೂ ಮಕ್ಕಳು ಆಡುತ್ತಿರುತ್ತಾರೆ. ಒಬ್ಬಳು ಬೀಳುತ್ತಾಳೆ. ಇನ್ನೊಬ್ಬಳು ಎಬ್ಬಿಸುತ್ತಾಳೆ. ಬಿದ್ದವಳು ಅತ್ತರೆ ಮತ್ತೊಬ್ಬಳು ಸಮಾಧಾನ ಮಾಡುತ್ತಾಳೆ. ಕಣ್ಣ ಮುಂದೆಯೇ ಇದೆಲ್ಲಾ ನಡೆಯುತ್ತಿದ್ದರೂ ನನಗೆ ಬಿದ್ದವರ್ಯಾರು? ಅತ್ತವರ್ಯಾರು ಅಂತ ಗೊತ್ತಾಗೋಲ್ಲ. ಏಕೆಂದರೆ ಅವರು ತ್ರಿವಳಿಗಳು!! ಹೆಸರು ಸ್ನೇಹಾ, ಶೃತಿ, ಶ್ವೇತಾ. 'ಇವರಲ್ಲಿ ದೊಡ್ಡವರು ಯಾರು?' ಎಂದರೆ ಅಕ್ಷರಶಃ ತಬ್ಬಿಬ್ಬಾಗಿ ಹೋಗುತ್ತೇನೆ. ನನಗೂ ಅವರನ್ನು ತಕ್ಷಣಕ್ಕೆ ಗುರುತು ಹಿಡಿಯಲಾಗೋಲ್ಲ. 'ಅವರಮ್ಮಂಗೇ ಗುರುತು ಸಿಗೋಲ್ಲ ಅಂದ್ಮೇಲೆ ನಮಗೆಲ್ಲಿ ಗೊತ್ತಾಗುತ್ತೆ?' ಅಂತ ಜನ ಮುಂದೆ ಹೋಗ್ತಾರೆ. ಈ ಮಕ್ಕಳ ಹುಟ್ಟಿನ ಕಥೆ ತುಂಬಾ ಇಂಟರೆಸ್ಟಿಂಗ್‌. 1) ಮೊದಲ ಸಲ ಸ್ಕ್ಯಾನಿಂಗ್ ಮಾಡಿಸಿದಾಗ ' ಮಗು ಆರೋಗ್ಯವಾಗಿದೆ ' ಅಂದಿದ್ದರು. 2) ಎರಡನೇ ಸಲ ಸ್ಕ್ಯಾನಿಂಗ್ ಹೊತ್ತಿಗೆ ' ಕಳೆದ ಬಾರಿ ಗೊತ್ತಾಗಲಿಲ್ಲ. ಸಾರಿ ನಿಮಗೆ ಅವಳಿ ಮಕ್ಕಳು ' ಅಂದ್ರು. 3) ಮೂರನೆಯ ಸಲ ಸ್ಕ್ಯಾನಿಂಗ್‌ನಲ್ಲಿ ' ಅವಳಿ ಅಲ್ಲ ತ್ರಿವಳಿ ' ಅಂದ್ರು. ಬಹುಶಃ ಜಗತ್ತಿನ ಯಾವ ತಾಯಿಗೂ ಈ ಅನುಭವ ಆಗಿರಲಿಕ್ಕಿಲ್ಲ. ಪ್ರತೀ ಸಲವೂ ಹೀಗೆ ಒಂದೊಂದು ಮಗು ಹೆಚ್ಚಾಗ್ತಾ ಇರೋದನ್ನು ನೋಡಿ, ನಾನಂತೂ ನಾಲ್ಕನೆಯ ಸಲ ಸ್ಕ್ಯಾನಿಂಗ್ ಹೋದಾಗ 'ನಾಲ್ಕು ಮಕ್ಕಳು' ಅಂತಾರೆ ಅಂದ್ಕೊಂಡಿದ್ದೆ. ಹಾಗಾಗಲಿಲ್ಲ. ಮೂವರಲ್ಲಿ ಸ್ನೇಹಾ ಮೊದಲನೆಯವಳು. ಉಳಿದಿಬ್ಬರಿಗ