ಟಿ.ಎಸ್.ಎಲಿಯಟ್ (ಟಿಪ್ಪಣಿ)

ಟಿ.ಎಸ್.ಎಲಿಯಟ್ ಶ್ರೇಷ್ಠ ಕವಿಯಾಗಿ, ನಾಟಕಕಾರನಾಗಿ, ಅತ್ಯುತ್ತಮ ವಿಮರ್ಶಕನಾಗಿ, ಪತ್ರಿಕಾ ಸಂಪಾದಕನಾಗಿ, ಉಪನ್ಯಾಸಕನಾಗಿ ಆಧುನಿಕ ಆಂಗ್ಲ ಸಾಹಿತ್ಯದಲ್ಲಿ ಒಂದು ಹೊಸ ಮನ್ವಂತರವನ್ನೇ ಸೃಷ್ಟಿಸಿದನು. ಆತನ 'waste land' ಮಹಾಕಾವ್ಯ 20ನೇ ಶತಮಾನದ ಆಂಗ್ಲ ಸಾಹಿತ್ಯದ ಒಂದು ಮಹತ್ವದ ಕೃತಿಯಾಗಿದ್ದು, ಆತನ ಕೃತಿಗಳ ಪ್ರಭಾವ ಯೂರೋಪ್ ಅಮೆರಿಕಗಳಿಗಷ್ಟೇ ಸೀಮಿತವಾಗದೆ ಇಡೀ ಜಗತ್ತಿನ ಸಾಹಿತ್ಯದ ಮೇಲೆ ದಟ್ಟವಾದ ಪ್ರಭಾವ ಬೀರಿದೆ.

ಹೆಸರು                 : ಟಿ ಎಸ್ ಎಲಿಯಟ್

ಹುಟ್ಟಿದ ವರ್ಷ       : 1888

ಹುಟ್ಟಿದ ಸ್ಥಳ          : ಅಮೆರಿಕಾದ ಸೇಂಟ್ ಲೂಯಿಸ್ 

                               ನಗರ

ಕೃತಿಗಳು                : ವೇಸ್ಟ್ ಲ್ಯಾಂಡ್, ಪೊಯಮ್ಸ್, 

                              ಸೆಲೆಕ್ಟೆಡ್ ಏಜೆನ್ಸಿಸ್, ಕಲೆಕ್ಟೆಡ್ 

                              ಪೊಯಮ್ಸ್, ಡಿಫಿಕಲ್ಟೀಸ್ ಆಫ್ 

                              ಎ ಸ್ಟೇಟ್ಸ್ ಮೆನ್

ಪ್ರಶಸ್ತಿ                  : ವೇಸ್ಟ್ ಲ್ಯಾಂಡ್ ಮತ್ತು ಆತನ ಸಮಗ್ರ 

                              ಸಾಹಿತ್ಯ ಕೊಡುಗೆಗಾಗಿ ನೊಬೆಲ್


ಈತನದ್ದು ಇಂಗ್ಲೀಷ್ ಮೂಲದ ಕುಟುಂಬ. ಈತನ ಕುಟುಂಬದ ಒಬ್ಬ ವ್ಯಕ್ತಿ 17ನೇ ಶತಮಾನದಲ್ಲಿ ಇಂಗ್ಲೆಂಡ್ ಬಿಟ್ಟು ಅಮೆರಿಕಾದ ಮೆಸ್ಯಾಚ್ಯುಸೆಟ್‌ಗೆ ಬಂದನು. ನಂತರ ಇವನ ಕುಟುಂಬ ಅಮೇರಿಕಾದಲ್ಲಿ ನೆಲೆಸಿತು. 

ಎಲಿಯಟ್‌ನು ಸೇಂಟ್ ಲೂಯಿಸ್ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದನು. ಶಾಲಾ ಪತ್ರಿಕೆಯಲ್ಲಿ ಆತನ ಮೊದಲ ಪದ್ಯಗಳು ಪ್ರಕಟವಾದವು. ಹಾರ್ವರ್ಡ್ ವಿಶ್ವವಿದ್ಯಾ ನಿಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ತತ್ವಶಾಸ್ತ್ರದ ವಿಭಾಗದಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಪ್ರಾರಂಭಿಸಿದನು. 

ಆ ಸಮಯದಲ್ಲಿ ತಾನು ಬರೆದಿದ್ದ ಪ್ರಾರಂಭಿಕ ಕವನಗಳನ್ನು ಸಂಕಲಿಸಿ ಪ್ರಕಟಿಸಿದನು. ಈ ನಡುವೆ ತತ್ವಶಾಸ್ತ್ರದ ಉಪನ್ಯಾಸ ಕೇಳುವ ಸಲುವಾಗಿ, ಇಟಲಿಗೆ ಹೋಗಿದ್ದಾಗ ಮೊದಲನೇ ಮಹಾಯುದ್ಧದ ಮುನ್ಸೂಚನೆ ಸಿಕ್ಕಿತು. ಆದ್ದರಿಂದ ಎಲಿಯಟ್ ಕೂಡಲೇ ಇಂಗ್ಲೆಂಡಿಗೆ ಹಿಂತಿರುಗಿ ಬಂದು ಆಕ್ಸ್‌ಫರ್ಡ್ನ‌ಲ್ಲಿ ವೃತ್ತಿ ಪ್ರಾರಂಭಿಸಿದನು. 

ನಂತರ ಪ್ರೊಟೆಸ್ಟೆಂಟ್ ಆಗಿದ್ದ ಕವಿ ಎಲಿಯಟ್, ರೋಮನ್ ಕ್ಯಾಥೋಲಿಕ್ ಆಗಿ ದೀಕ್ಷೆ ತೆಗೆದುಕೊಂಡನು. ನಂತರ ಬ್ರಿಟಿಷ್ ಪೌರತ್ವ ಸ್ವೀಕಾರ ಮಾಡಿದನು.

ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್‌ಗೆ ಭಾಜನನಾದನು. 1957ರಲ್ಲಿ ತನ್ನ ಕಾರ್ಯದರ್ಶಿ ಆಗಿದ್ದ ವ್ಯಾಲೆರಿಯೊಂದಿಗೆ ವಿವಾಹವಾದನು. 

ಆನಂತರ ಎಲಿಯಟ್‌ನ ಸಾಹಿತ್ಯಿಕ ಸಾಧನೆಯನ್ನು ಗಮನಿಸಿದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಹರಿದು ಬಂದಿತು. ನಿರಂತರವಾಗಿ ಸಾಹಿತ್ಯ ಕೃಷಿ ಮಾಡುತ್ತಲೇ ಬಂದ ಟಿ.ಎಸ್‌.ಎಲಿಯಟ್ 1965ರಲ್ಲಿ ನಿಧನನಾದನು

**********

ಕೆ.ಎ.ಸೌಮ್ಯ

ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)