ವ್ಯಕ್ತಿತ್ವ ನಿರಸನ (ಟಿಪ್ಪಣಿ)
ಕವಿ ಹಿಂದಿನ ಸಂಪ್ರದಾಯದೊಡನೆ ಎಂತಹ ಸಂಬಂಧವನ್ನು ಇಟ್ಟುಕೊಳ್ಳುತ್ತಾನೆ ಎನ್ನುವುದು ಮುಖ್ಯ. ಹಿಂದಿನದೆಲ್ಲ ಒಪ್ಪಿಕೊಂಡು ಒಟ್ಟಾಗಿ ನುಂಗಬೇಕೆಂದಲ್ಲ ಅಥವಾ ಹಿಂದಿನದಲ್ಲಿಯೇ ತನಗೆ ಬೇಕಾದ ಒಂದೆರಡು ಆರಿಸಿಕೊಂಡು ಅದನ್ನು ಅನುಕರಿಸುತ್ತಾನೆ ಎಂದಲ್ಲ. ತನ್ನ ನಾಡಿನಲ್ಲಿ ಹರಿದು ಬರುತ್ತಿರುವ ಮುಖ್ಯ ಪ್ರವಾಹವನ್ನು ಆತ ಪ್ರಜ್ಞಾಪೂರ್ವಕವಾಗಿ ಕಾಣಬೇಕು. ಆತ ತನ್ನ ವೈಯುಕ್ತಿಕ ವೈಚಿತ್ರಗಳನ್ನು ದಾಟಿ ಮೇಲೇರಬೇಕಾಗುತ್ತದೆ. ತನ್ನ ಪರಿಮಿತ ವ್ಯಕ್ತಿತ್ವದ 'ಅಹಮ್' ಅನ್ನು ಕಳೆದುಕೊಂಡು ಸಮಷ್ಟಿ ಮನಸ್ಸಿಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾಗುತ್ತದೆ. ತನ್ನ ವೈಯುಕ್ತಿಕತೆಗಿಂತಲೂ ಹೆಚ್ಚು ಮೌಲ್ಯವುಳ್ಳ ಆ ಇನ್ನೊಂದಕ್ಕೆ ತನ್ನನ್ನು ನಿರಂತರವಾಗಿ ಅರ್ಪಿಸಿಕೊಳ್ಳುತ್ತಾ ಹೋಗುತ್ತಾನೆ ಕವಿ. ನಿಜವಾಗಿ ಕಲಾವಿದನ ಪ್ರಗತಿ ಈ ಆತ್ಮಾರ್ಪಣೆಯನ್ನು ಅವಲಂಬಿಸಿದೆ. ಇದೇ ವ್ಯಕ್ತಿತ್ವ ನಿರಸನ ಸಿದ್ಧಾಂತ. ಅಂದರೆ ಇದು ವ್ಯಕ್ತಿತ್ವದ ನಾಶವಲ್ಲ. ಬದಲಿಗೆ ಪರಿಮಿತವಾದ ವೈಯುಕ್ತಿಕ ವೈಚಿತ್ರದಿಂದ ಪಾರಾಗಿ, ಇನ್ನೊಂದು ದೊಡ್ಡ ತತ್ವಕ್ಕೆ ತನ್ನನ್ನು ಅರ್ಪಿಸಿಕೊಳ್ಳುವುದು. ಇಂತಹ ಸಮರ್ಪಣೆಯಿಂದಲೇ ಮಹತ್ತರವಾದ ಕಾವ್ಯವು ಸೃಷ್ಟಿಯಾಗುತ್ತದೆ ಎನ್ನುತ್ತಾನೆ ಎಲಿಯಟ್. ಕಾವ್ಯಕ್ಕೂ ಕವಿಗೂ ಇರುವ ಸಂಬಂಧ ಇಲ್ಲಿ ಬರುತ್ತದೆ. ಪ್ರಾಮಾಣಿಕ ವಿಮರ್ಶೆ ಕಾವ್ಯವನ್ನು ಕುರಿತು ಇರುತ್ತದೆಯೇ ಹೊರತು ಕವಿಯನ್ನಲ್ಲ. "Honest Criticism is directed not u...