ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಿ.ಬಿ.ಷೆಲ್ಲಿಯ ಕಾವ್ಯ ಸಮರ್ಥನೆ

  ಕವಿ ಪರಿಚಯ  :  ಷೆಲ್ಲಿಯು ಇಂಗ್ಲೆಂಡಿನ ಒಂದು ಹಳ್ಳಿಯಲ್ಲಿ ಜನಿಸಿದ. ತಂದೆ ತಾಯಿಗೆ ಮೊದಲ ಮಗ ಷೆಲ್ಲಿ‌. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ  ಸಿಯಾನ್ ಹೌಸ್ ಅಕಾಡೆಮಿ  ಎಂಬ ಶಾಲೆ ಸೇರಿದ. ಅದ್ಭುತ ಪವಾಡದ ಕಥೆಗಳನ್ನು ಓದಿದ. ಸಹಪಾಠಿಗಳೊಂದಿಗೆ ಆಟಕ್ಕೆ ಸೇರದೇ ಶತಪಥ ತಿರುಗುತ್ತ ಚಿಂತನೆ ನಡೆಸಿದ. ಪರರ ದುಃಖ ಕಂಡು ಕಣ್ಣೀರು ಸುರಿಸುತ್ತಿದ್ದ.‌ ಪ್ರಕೃತಿ ಪ್ರೇಮಿಯಾಗಿದ್ದ. ಪುಸ್ತಕಗಳನ್ನು ಹೆಚ್ಚೆಚ್ಚು ಓದುತ್ತಿದ್ದ.  ನಂತರ  ಈಟಾನ್  ಎಂಬ ಶಾಲೆಗೆ ಸೇರಿದವನು, ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸಿದ. ರಸಾಯನ ಶಾಸ್ತ್ರದ ವ್ಯಾಸಂಗದ ಜೊತೆ ನಾಟಕದ ರಚನೆ, ಅಭಿನಯ ಸಹ ಮಾಡಿದ. ಆದರೂ ಅವನಿಗೆ ಪ್ರಯೋಗ ಶಾಲೆಯಲ್ಲಿ ರಸಾಯನ ಶಾಸ್ತ್ರದ ಪ್ರಯೋಗ ನಡೆಸುವುದೇ ಹೆಚ್ಚು ಇಷ್ಟದ ವಿಷಯವಾಗಿತ್ತು. "ರಾಜಕೀಯ ನ್ಯಾಯ" ಎಂಬ ಗ್ರಂಥದಿಂದ ಪ್ರೇರಿತನಾಗಿ ಕ್ರಾಂತಿಕಾರಕನಾಗಿ ಭಾಷಣ ಮಾಡಿದ. ಶಾಲೆಯ ವಿದ್ಯಾರ್ಥಿ ಸೇವಾ ಪದ್ಧತಿ ವಿರುದ್ಧ ತಿರುಗಿಬಿದ್ದ.  ಸ್ವಲ್ಪ ವರ್ಷಗಳಲ್ಲಿ " ನಾಸ್ತಿಕ್ಯದ ಅವಶ್ಯಕತೆ " ಎಂಬ ಕಿರುಹೊತ್ತಿಗೆ ಪ್ರಕಟಿಸಿದ. ಅದರಿಂದಾಗಿ ತಾನು ಓದುತ್ತಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಹೊರದೂಡಲ್ಪಟ್ಟ.  ಲಂಡನ್ನಿಗೆ ಬಂದವನು ಹ್ಯಾರಿಯೆಟ್‌ಳನ್ನು ವಿವಾಹವಾದ.  ಲಂಡನ್ನಿನಲ್ಲಿ ವಿಲಿಯಂ ಗಾಡ್ವಿಯನ್ನು ಭೇಟಿ ಮಾಡಿದ. ನಂತರ ತತ್ವಾಭ್ಯಾಸದ ಫಲವಾಗಿ " ದೇವಾಸ್ತಿಕ್ಯದ ಖಂಡನೆ

ಶಾಸನ ಸಾಹಿತ್ಯದಲ್ಲಿ ದೇಕಬ್ಬೆ ಶಾಸನದ ಸ್ಥಾನ

ಪೀಠಿಕೆ :  ಶಾಸನಗಳಲ್ಲಿ ಹಲವು ಪ್ರಕಾರಗಳುಂಟು. ಅದರಲ್ಲಿ ಆತ್ಮಬಲಿಯೂ ಒಂದು. ಬೇರೆ ಬೇರೆ ಕಾರಣಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿದ್ದ ಅನೇಕ ಉದಾಹರಣೆಗಳುಂಟು. ಅವರಿಗೆ ಹಾಕಿಸುತ್ತಿದ್ದ ಶಾಸನಗಳಿಗೆ ಸ್ಮಾರಕ ಶಾಸನ ಎಂದು ಹೆಸರು. ವೀರರ ಪತ್ನಿಯರು ಸಹಗಮನ ಪ್ರಕಾರ ಮರಣ ಹೊಂದುತ್ತಿದ್ದರು. ಆಗ ಅವರಿಗೆ ಹಾಕಿಸುತ್ತಿದ್ದ ಸ್ಮಾರಕಗಳನ್ನು ಮಹಾಸತಿಕಲ್ಲು ಅಥವಾ ಮಾಸ್ತಿಕಲ್ಲು ಎಂದು ಕರೆಯುತ್ತಿದ್ದರು.  "ದೇಕಬ್ಬೆಯ ಶಾಸನ ಅಂತಹಾ ಒಂದು ಮಾಸ್ತಿಕಲ್ಲು" ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೆಳತೂರು ಗ್ರಾಮದ ಅಡ್ಡಕಟ್ಟೆ ಹೊಲದಲ್ಲಿರುವ ಮಹಾಸತಿ ಶಾಸನವನ್ನು ಪತ್ತೆ ಹಚ್ಚಿದವರು  ಬಿ.ಎಲ್.ರೈಸ್. ' ಎಪಿಗ್ರಾಫಿಯಾ ಕರ್ನಾಟಿಕಾ'ದ ಎರಡನೇ ಎರಡನೇ ಸಂಪುಟದಲ್ಲಿ ಶಾಸನದ ಪಠ್ಯವನ್ನು ಪ್ರಕಟಿಸಿದರು.  ನಂತರ ರೆವೆರೆಂಡ್ ಕಿಟ್ಟೆಲ್ ರವರು ಈ ಶಾಸನವನ್ನು ಎಪಿಗ್ರಾಫಿಯಾ ಇಂಡಿಕಾ ದಲ್ಲಿ ಪ್ರಕಟಿಸಿದರು.  ಈ ಶಾಸನದ ವಿಶೇಷತೆಯೆಂದರೆ ಇದು ಬೇರೆ ಶಾಸನಗಳಂತೆ ದೇವತಾ ಶ್ಲೋಕದಿಂದ ಪ್ರಾರಂಭವಾಗುವುದಿಲ್ಲ. ಗದ್ಯಕ್ಕಿಂತ ಪದ್ಯಭಾಗವೇ ಇದರಲ್ಲಿ ಹೆಚ್ಚು. ಇದರಲ್ಲಿ ಒಟ್ಟು 23 ಪದ್ಯಗಳಿವೆ.  ದೇಕಬ್ಬೆಯು ತನ್ನ ಪತಿಯ ಮರಣದ ಸುದ್ದಿ ಕೇಳಿದ ತಕ್ಷಣ ಇಹಲೋಕವನ್ನು ತ್ಯಜಿಸಲು ಸಿದ್ಧಳಾದಳು. ಚಿತೆಯನ್ನು ಸಿದ್ಧಪಡಿಸಿ ಉರಿಯುತ್ತಿದ್ದ ಚಿತೆ ಹೊಕ್ಕಳು. ತನ್ನ ಮಗಳ ಸ್ಮಾರಕವಾಗಿ ಆಕೆಯ ತಂದೆ ಶಾಸನ ಸಹಿತವಾದ ಈ ಶಿಲಾಸ್ತಂಭವನ್ನು ಮಾಡಿಸಿದ. 

ಕೋಡಿಮಠದ ಶಾಸನದ ಭಾಷಿಕ ಮತ್ತು ಸಾಹಿತ್ಯಿಕ ಮಹತ್ವ

  ಪೀಠಿಕೆ :  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.                    ಶಾಸನ    : ಕೋಡಿಮಠದ ಶಾಸನ ಶಾಸನ ದೊರೆತ ಸ್ಥಳ  : ಶಿವಮೊಗ್ಗ ಜಿಲ್ಲೆಯ                                     ಶಿಕಾರಿಪುರ                                   ತಾಲ್ಲೂಕಿನ ಬಳ್ಳಿಗಾವೆ         ಶಾಸನದ ಕಾಲ   : ಕ್ರಿ ಶ 12 ನೇ ಶತಮಾನ      ಶಾಸನದ ಎತ್ತರ    : 8 ಅಡಿ ಎತ್ತರ                                4  ಅಡಿ 3 ಅಂಗುಲ ಅಗಲ     ಕಂಡುಹಿಡಿದವರು   : ಬಿ. ಎಲ್. ರೈಸ್     ಪ್ರಕಟಿಸಿದ ವರ್ಷ    : 1902 ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ. ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎಂಬ ಆಶಯ ಪದ್ಯವಿದೆ. ಕಲಚುರಿ ದೊರೆ ಬಿಜ್ಜಳನ ಬಿರುದುಗಳನ್ನು ಕೂಡ ಶಾಸನ ತಿಳಿಸುತ್ತದೆ.  'ಕಸಪಯ್ಯ ನಾಯಕ' ಬಿಜ್ಜಳನ ಕೈ ಕೆಳಗಿನ ಅಧಿಕಾರಿ. ಆತನನ್ನು ಬಣ್ಣಿಸುವ ಹಲವು ಪದ್ಯಗಳಿವೆ. ನಂತರ ಶಾಸನವು ಬಳ್ಳಿಗಾವೆಯ ಕೋಡಿಮಠದ ಶ್ರೇಷ್ಠತೆಯ ಬಗ್ಗೆ ತುಂಬಾ ಮನೋಹರವಾಗಿ ವರ್ಣಿಸುತ್ತದೆ. ದೊರೆ ಬಿಜ್ಜಳನು ದಕ್ಷಿಣದ ವಿಜಯ ಕೈಗೊಂಡು, ಬಳ್ಳಿಗಾವೆಯಲ್ಲಿ ಬೀಡು ಬಟ್ಟಾಗ ಎಲ್ಲಾ ಅಧಿಕಾರಿಗಳು ಒಂದುಗೂಡಿ ಬಿಜ್ಜಳನನ್ನು ಕಂಡರು.  ಕಸಪಯ್ಯ ನಾಯಕನು ಮಠದ ಹಿರಿಮೆಯನ್ನು ದೊರೆಗೆ ತಿಳಿಸಿದನು. ನಂತರ ಅಂತಹ ಮಹಿಮಾನ್ವಿ

ದೇಕಬ್ಬೆಯ ಶಾಸನದ ಹಿನ್ನೆಲೆಯಲ್ಲಿ ಸತಿ ಪದ್ಧತಿಯ ಪರಿಚಯ

ಪೀಠಿಕೆ :  ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ.  ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು.  ಚಿತೆಯನ್ನು ಸಿದ್ಧಪಡಿಸಲಾಯ್ತು.  ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು. ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು. ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ.  ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವುದು  ಸಹಗಮನ .

ಕೋಡಿಮಠ ಒಂದು ಸಾಂಸ್ಕೃತಿಕ ಕೇಂದ್ರ

ಪೀಠಿಕೆ :  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.                    ಶಾಸನ    : ಕೋಡಿಮಠದ ಶಾಸನ ಶಾಸನ ದೊರೆತ ಸ್ಥಳ  : ಶಿವಮೊಗ್ಗ ಜಿಲ್ಲೆಯ                                     ಶಿಕಾರಿಪುರ                                   ತಾಲ್ಲೂಕಿನ ಬಳ್ಳಿಗಾವೆ         ಶಾಸನದ ಕಾಲ  : ಕ್ರಿ ಶ 12 ನೇ ಶತಮಾನ      ಶಾಸನದ ಎತ್ತರ    : 8 ಅಡಿ ಎತ್ತರ                                4  ಅಡಿ 3 ಅಂಗುಲ ಅಗಲ     ಕಂಡುಹಿಡಿದವರು   : ಬಿ. ಎಲ್. ರೈಸ್     ಪ್ರಕಟಿಸಿದ ವರ್ಷ    : 1902 ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ.   ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎಂಬ ಆಶಯ ಪದ್ಯವಿದೆ. ಕಲಚುರಿ ದೊರೆ ಬಿಜ್ಜಳನ ಬಿರುದುಗಳನ್ನು ಕೂಡ ಶಾಸನ ತಿಳಿಸುತ್ತದೆ.  'ಕಸಪಯ್ಯ ನಾಯಕ' ಬಿಜ್ಜಳನ ಕೈ ಕೆಳಗಿನ ಅಧಿಕಾರಿ. ಆತನನ್ನು ಬಣ್ಣಿಸುವ ಹಲವು ಪದ್ಯಗಳಿವೆ. ನಂತರ ಶಾಸನವು ಬಳ್ಳಿಗಾವೆಯ ಕೋಡಿಮಠದ ಶ್ರೇಷ್ಠತೆಯ ಬಗ್ಗೆ ತುಂಬಾ ಮನೋಹರವಾಗಿ ವರ್ಣಿಸುತ್ತದೆ. ದೊರೆ ಬಿಜ್ಜಳನು ದಕ್ಷಿಣದ ವಿಜಯ ಕೈಗೊಂಡು, ಬಳ್ಳಿಗಾವೆಯಲ್ಲಿ ಬೀಡು ಬಟ್ಟಾಗ ಎಲ್ಲಾ ಅಧಿಕಾರಿಗಳು ಒಂದುಗೂ

ದೇಕಬ್ಬೆ ಶಾಸನ : ಟಿಪ್ಪಣಿ

ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ.  ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು .  ಚಿತೆಯನ್ನು ಸಿದ್ಧಪಡಿಸಲಾಯ್ತು.  ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು. ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು. ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ.  ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವುದು ಸಹಗಮನ . ಆ ದೃಷ್ಟಿಯಿಂದ ದೇಕಬ್ಬೆಯ

ಬಳ್ಳಿಗಾವೆಯ ಕೋಡಿಮಠದ ಶಾಸನ (ಟಿಪ್ಪಣಿ)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.                    ಶಾಸನ    : ಕೋಡಿಮಠದ ಶಾಸನ ಶಾಸನ ದೊರೆತ ಸ್ಥಳ : ಶಿವಮೊಗ್ಗ ಜಿಲ್ಲೆಯ                                     ಶಿಕಾರಿಪುರ                                   ತಾಲ್ಲೂಕಿನ ಬಳ್ಳಿಗಾವೆ         ಶಾಸನದ ಕಾಲ   : ಕ್ರಿ ಶ 12 ನೇ ಶತಮಾನ     ಶಾಸನದ ಎತ್ತರ    : 8 ಅಡಿ ಎತ್ತರ                                4  ಅಡಿ 3 ಅಂಗುಲ ಅಗಲ     ಕಂಡುಹಿಡಿದವರು   : ಬಿ. ಎಲ್. ರೈಸ್     ಪ್ರಕಟಿಸಿದ ವರ್ಷ    : 1902 ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ.  ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎಂಬ ಆಶಯ ಪದ್ಯವಿದೆ. ಕಲಚುರಿ ದೊರೆ ಬಿಜ್ಜಳನ ಬಿರುದುಗಳನ್ನು ಕೂಡ ಶಾಸನ ತಿಳಿಸುತ್ತದೆ.  ' ಕಸಪಯ್ಯ ನಾಯಕ ' ಬಿಜ್ಜಳನ ಕೈ ಕೆಳಗಿನ ಅಧಿಕಾರಿ. ಆತನನ್ನು ಬಣ್ಣಿಸುವ ಹಲವು ಪದ್ಯಗಳಿವೆ. ನಂತರ ಶಾಸನವು ಬಳ್ಳಿಗಾವೆಯ ಕೋಡಿಮಠದ ಶ್ರೇಷ್ಠತೆಯ ಬಗ್ಗೆ ತುಂಬಾ ಮನೋಹರವಾಗಿ ವರ್ಣಿಸುತ್ತದೆ. ದೊರೆ ಬಿಜ್ಜಳನು ದಕ್ಷಿಣದ ವಿಜಯ ಕೈಗೊಂಡು, ಬಳ್ಳಿಗಾವೆಯಲ್ಲಿ ಬೀಡು ಬಟ್ಟಾಗ ಎಲ್ಲಾ ಅಧಿಕಾರಿಗಳು ಒಂದುಗೂಡಿ ಬಿಜ್ಜಳನನ್ನು ಕಂಡರು.  ಕಸಪಯ್ಯ ನಾಯಕನು ಮಠದ ಹಿರಿಮೆಯನ್ನು ದೊರೆಗೆ ತಿಳಿಸಿದನು. ನಂತರ ಅಂತಹ ಮಹಿಮಾನ್ವಿತ ಸ್ಥಳದಲ್ಲಿ ಧರ್ಮಕಾರ್ಯವೊಂದನ

ಆಧುನಿಕ ಕನ್ನಡ ಕಾವ್ಯದಲ್ಲಿ ಸಮಾಜ : ಡಿ.ಆರ್.ನಾಗರಾಜ್

ಡಿ.ಆರ್.ನಾಗರಾಜ್ :  ಡಿ.ಆರ್.ನಾಗರಾಜ್ ರವರು ದೊಡ್ಡಬಳ್ಳಾಪುರದಲ್ಲಿ ಹುಟ್ಟಿದರು. ಪ್ರಸ್ತುತ ಲೇಖನವನ್ನು ಅವರ ಸಂಶೋಧನಾ ಕೃತಿಯಾದ "ಶಕ್ತಿ ಶಾರದೆಯ ಮೇಳ" ಎಂಬ ಗ್ರಂಥದಿಂದ ಆರಿಸಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಆನರ್ಸ್ ಮತ್ತು ಎಂ.ಎ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಸೇವೆ ಆರಂಭಿಸಿದವರು, ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಭಾರತೀಯ ಭಾಷಾ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.  ಡಿ.ಆರ್.ನಾಗರಾಜ್ ಅವರು ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಸಂಪಾದಕರಾಗಿ, ಪ್ರಾಧ್ಯಾಪಕರಾಗಿ ಇನ್ನೂ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಹೆಸರು : ಡಿ.ಆರ್.ನಾಗರಾಜ್ ಹುಟ್ಟಿದ ಸ್ಥಳ : ದೊಡ್ಡಬಳ್ಳಾಪುರ DOB : 20th Feb 1954 ತಂದೆ : ರಾಮಯ್ಯ ತಾಯಿ : ಅಕ್ಕಯ್ಯಮ್ಮ ನಂತರ ಡಿ.ಆರ್.ನಾಗರಾಜ್ ರವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ , ಬೆಂಗಳೂರು ವಿಶ್ವವಿದ್ಯಾಲಯದ ತೌಲನಿಕ ಸಾಹಿತ್ಯ ಕೇಂದ್ರ ವಿದ್ವಾಂಸರು, ಬೆಂಗಳೂರು ವಿಶ್ವವಿದ್ಯಾಲಯದ ಕೈಲಾಸಂ ಪೀಠದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಡಿ.ಆರ್.ನಾಗರಾಜ್ ಅವರ ಕೃತಿಗಳು :  ಅಮೃತ ಮತ್ತು ಗರುಡ ಶಕ್ತಿ ಶಾರದೆಯ ಮೇಳ ಪಾಶ್ಚಾತ್ಯ ಸಾಹಿತ್ಯ ದರ್ಶನ ಉರ್ದು ಸಾಹಿತ್ಯ ಪ್ರಶಸ್ತಿಗಳು :  ವರ್ಧಮಾನ ಪ್ರಶಸ್ತಿ ಶಿವರಾಮ ಕಾರಂತ ಪ್ರಶಸ್ತಿ ಆರ್ಯಭಟ ಪ್ರಶಸ್ತಿ ಕೇಂದ್

ಹೊಸ ಕವಿ, ಹೊಸ ಕಾವ್ಯ - ಪಿ. ಲಂಕೇಶ್

ಕವಿ ಪರಿಚಯ :  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ‌ ಕಂಡ ಅನನ್ಯ ಲೇಖಕ ಪಿ. ಲಂಕೇಶ್. ಸಾಮಾಜಿಕ ಕಳಕಳಿಯ ಜೊತೆಗೆ ಸೃಜನಶೀಲ ಪ್ರತಿಮಯನ್ನು ಪ್ರಾಮಾಣಿಕವಾಗಿ ದುಡಿಸಿಕೊಂಡ ಅಪರೂಪದ ಸಾಹಿತಿ. ಎಡಪಂಥೀಯ ನಿಲುವಿನೊಂದಿಗೆ ತಮ್ಮ ಪ್ರಜ್ಞೆ ರೂಪಿಸಿಕೊಂಡ ಲಂಕೇಶ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ, ಕಥೆ, ಕಾದಂಬರಿ, ನಾಟಕಕಾರರಾಗಿ, ವಿಮರ್ಶಕ, ಅನುವಾದಕರಾಗಿ, ನಟರಾಗಿ, ಸಿನೆಮಾ ನಿರ್ದೇಶಕರಾಗಿ, ಪತ್ರಕರ್ತರಾಗಿ ತಮ್ಮ ಛಾಪು ಮೂಡಿಸಿದವರು. ಕನ್ನಡ ನವ್ಯ ಸಾಹಿತ್ಯ ಕಾಲಘಟ್ಟದಲ್ಲಿ ತಮ್ಮ ಸೃಜನಶೀಲ ಬರಹಗಳ ಮೂಲಕ ಆರೋಗ್ಯಕರ ಸಂವಾದವನ್ನು ಹುಟ್ಟು ಹಾಕಿದ ಮಹತ್ವದ ಚಿಂತಕ.‌ ಹೆಸರು   :           ಪಿ. ಲಂಕೇಶ್ DOB    :            1935 ಸ್ಥಳ      :             ಶಿವಮೊಗ್ಗ ವಿದ್ಯಾಭ್ಯಾಸ :     ಇಂಗ್ಲಿಷ್ ಎಂ.ಎ ನಿರ್ದೇಶನ :        ಎಲ್ಲಿಂದಲೋ ಬಂದವರು, ಪಲ್ಲವಿ,                           ಖಂಡವಿದೆಕೋ ಮಾಂಸವಿದೆಕೋ ಪತ್ರಿಕೆ :               ಲಂಕೇಶ್ ಪತ್ರಿಕೆ ಕವನ ಸಂಕಲನ : ಇಂಚರ, ತಲೆಮಾರು ಆತ್ಮಕಥೆ       :       ಹುಳಿ ಮಾವಿನಮರ ಪ್ರಶಸ್ತಿಗಳು   :       ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,                             ಕೇಂದ್ರ ಸಾಹಿ

ವಾಸ್ತವದ ರಾಜಮಾರ್ಗ : Realism

ಜಿ. ಎಸ್. ಅಮೂರ :  ಜಿ.ಎಸ್. ಅಮೂರ ರವರು ಬೊಮ್ಮನಹಳ್ಳಿಯಲ್ಲಿ ಹುಟ್ಟಿದರು. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದರು. ಮಹಾರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹೆಸರು   : ಜಿ. ಎಸ್. ಅಮೂರ ಹುಟ್ಟಿದ ಸ್ಥಳ : ಬೊಮ್ಮನಹಳ್ಳಿ ಹುಟ್ಟಿದ ದಿನಾಂಕ : 1925 ಕೃತಿಗಳು :  ಕೃತಿ ಪರೀಕ್ಷೆ, ಮಹಾಕವಿ ಮಿಲ್ಟನ್ ಜಿ.ಎಸ್.ಆಮೂರ ಅವರು ಕನ್ನಡದ ಮಹತ್ವದ ವಿಮರ್ಶಕರಾಗಿ ಹೆಸರಾಗಿದ್ದಾರೆ. ಪ್ರಸ್ತುತ ಲೇಖನವು "ಕನ್ನಡ ಕಾದಂಬರಿಯ ಬೆಳವಣಿಗೆ" ಎಂಬ ಪುಸ್ತಕದಲ್ಲಿ ಪ್ರಕಟವಾಗಿತ್ತು. ಎಚ್.ಎಸ್.ರಾಘವೇಂದ್ರರಾವ್ ಅವರು ಸಂಪಾದಕರಾಗಿರುವ "ಶತಮಾನದ ಸಾಹಿತ್ಯ ವಿಮರ್ಶೆ" ಎಂಬ ಪುಸ್ತಕದಿಂದ ಈ ಲೇಖನವನ್ನು ಪಠ್ಯಕ್ಕೆ ತೆಗೆದುಕೊಳ್ಳಲಾಗಿದೆ. ಕನ್ನಡ ಕಾದಂಬರಿಯ ಆರಂಭಿಕ ಹಂತಗಳಾದ ನವೋದಯ ಮತ್ತು ಪ್ರಗತಿಶೀಲ ನೆಲೆಗಳಲ್ಲಿ, ಪಾಶ್ಚಾತ್ಯ ಮತ್ತು ಭಾರತೀಯ ತತ್ತ್ವ ಚಿಂತನೆಗಳೆರಡನ್ನೂ ಸಮೀಕರಿಸಿ ವಿಶ್ಲೇಷಿಸಿರುವ ಈ ಲೇಖನ ವಿಮರ್ಶಾ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಭಾವಿಸಲಾಗಿದೆ.  ಪೀಠಿಕೆ :  ಜಿ.ಎಸ್.ಅಮೂರ ಅವರ "ಕನ್ನಡ ಕಾದಂಬರಿಯ ಬೆಳವಣಿಗೆ" ಎಂಬ ಪುಸ್ತಕದಿಂದ ಈ ಲೇಖನವನ್ನು ಆರಿಸಿಕೊಳ್ಳಲಾಗಿದೆ. ಕನ್ನಡ ಕಾದಂಬರಿಯ ಆರಂಭಿಕ ಹಂತಗಳ ಹಿನ್ನಲೆಯಲ್ಲಿ ವಿ

ಮುದ್ದಣ ಮನೋರಮೆಯ ಸಲ್ಲಾಪ : ರಾಮಾಶ್ವಮೇಧಂ

ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು by ಎಸ್.ವಿ.ರಂಗಣ್ಣ  ಲೇಖಕರ ಪರಿಚಯ : ಪ್ರೊಫೆಸರ್ ಎಸ್.ವಿ.ರಂಗಣ್ಣನವರು ಆಧುನಿಕ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ದುಡಿದ ಮಹನೀಯರಲ್ಲಿ ಒಬ್ಬರು. ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅವರು ಮಾಡಿದ ಸೇವೆ ಅನುಪಮವಾದುದು. ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯ ಮಾನದಂಡಗಳಿಂದ ಅಳೆದು ಅದರ ಅಧ್ಯಯನಕ್ಕೆ ಹೊಸ ರೂಪ ಕೊಟ್ಟವರು.  ವಿದ್ಯಾರ್ಥಿ ದಿಸೆಯಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದರೂ, ಎ.ಆರ್.ಕೃಷ್ಣಶಾಸ್ತ್ರಿಗಳ ಒತ್ತಾಸೆಯಿಂದ ಕನ್ನಡದ ಕಡೆ ತಿರುಗಿದರು. ಎಸ್.ವಿ.ರಂಗಣ್ಣನವರು 25ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ವಿಮರ್ಶೆ, ನಾಟಕ, ಕಾವ್ಯ ಹೀಗೆ ಇನ್ನೂ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಇವರ ಕೃತಿ ರಚಿತವಾಗಿದೆ.  ವಿಮರ್ಶಕರಾಗಿ ಎಸ್.ವಿ.ರಂಗಣ್ಣನವರದ್ದು ಗಮನಾರ್ಹ ಸಾಧನೆ. ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳನ್ನು ‌ಅಧ್ಯಯನಕ್ಕೆ ಎತ್ತಿಕೊಂಡು, ಅವುಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡಿ ಬೆಲೆ ಕಟ್ಟಿರುವುದು ಅವರ ವಿಮರ್ಶೆಯಲ್ಲಿ ಎದ್ದು ಕಾಣುವ ಗುಣ.  ಎಸ್.ವಿ.ರಂಗಣ್ಣನವರ ವಿಮರ್ಶಕನ‌ ದೃಷ್ಟಿ ಹರಿತವಾದುದು. ಅಲ್ಲಿ ದಾಕ್ಷಿಣ್ಯಕ್ಕೆ ಎಡೆ ಇಲ್ಲ. ಅವರ ವಿಮರ್ಶೆಯ ಗುಣದಿಂದ ಆವರೆಗೂ ಕವಿ ಮತ್ತು ಕಾವ್ಯಗಳು ಹೊಂದಿದ್ದ ಸ್ಥಾನಮಾನಗಳು ಪಲ್ಲಟಗೊಳ್ಳಬ

ರತ್ನಾಕರನ ಭೋಗ ಯೋಗದ ತೊಡಕು by ಜಿ ಎಸ್ ಶಿವರುದ್ರಪ್ಪ

 ಜಿ.ಎಸ್.ಶಿವರುದ್ರಪ್ಪ: ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಜನಿಸಿದರು. ಶ್ರೀಯುತರು ಹೊಸಗನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಹೆಸರು :  ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ DOB :   feb 7th 1926 ಸ್ಥಳ :     ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ               ಈಸೂರು ಗ್ರಾಮ ಪ್ರಶಸ್ತಿ :  ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ               ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿಗಳು : ಸಾಮಗಾನ, ಚೆಲುವು ಒಲವು, ದೀಪದ                 ಹೆಜ್ಜೆ, ತೆರೆದ ದಾರಿ, ಪ್ರೀತಿ ಇಲ್ಲದ ಮೇಲೆ,                 ಪೂರ್ವ ಪಶ್ಚಿಮ, ನವೋದಯ,                 ಕಾವ್ಯಾರ್ಥ ಚಿಂತನೆ,                  ಮಾಸ್ಕೋದಲ್ಲಿ 22 ದಿನ. ಜಿ.ಎಸ್.ಎಸ್ ಅವರು ಕುವೆಂಪು ಅವರ ಮಾರ್ಗದರ್ಶನದಲ್ಲಿ "ಸೌಂದರ್ಯ ಸಮೀಕ್ಷೆ" ಎಂಬ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರೆ. ಜಿ.ಎಸ್.ಎಸ್ ರವರು ತಮ್ಮ ಹದಿನೈದನೇ ವಯಸ್ಸಿನಿಂದಲೇ ಬರವಣಿಗೆಯನ್ನು ಆರಂಭಿಸಿದರು. ಶ್ರೇಷ್ಠ ಕವಿ ಮತ್ತು ಉತ್ತಮ ವಿಮರ್ಶಕರು ಕೂಡ ಆಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ.  "ಉತ್ತಮ ಕವಿ ವಿಮರ್ಶಕ ಆಗಲಾರ : ಉತ್ತಮ ವಿಮರ್ಶಕ ಕವಿ ಆಗಲಾರ" ಎಂಬ ಮಾತಿಗೆ ಇವರು ಅಪವಾದ.  ವಿಮರ್ಶೆಯಲ್ಲಿ ಜಿ.ಎಸ್.ಎಸ್ ಅವರ ವಿಶಿಷ್ಠ ಛ