ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಸಗಳ ಸಂಖ್ಯೆಯನ್ನು ಕುರಿತು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ನಡೆದಿರುವ ಚರ್ಚೆ

ಪೀಠಿಕೆ :  ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರಸ ಸಿದ್ದಾಂತಕ್ಕೆ ಅನನ್ಯವಾದ ಸ್ಥಾನವಿದೆ. ಭರತಮುನಿಯು ರಸ ಸಿದ್ಧಾಂತದ ಪ್ರಥಮ ಪ್ರವರ್ತಕ ಎನಿಸಿದ್ದಾನೆ‌. ಭರತನು ತನ್ನ ನಾಟ್ಯ ಶಾಸ್ತ್ರದಲ್ಲಿ 'ಈ ಮೂರುಲೋಕಗಳ ಭಾವದ ಅನುಕೀರ್ತನವೇ ನಾಟ್ಯ' ಎಂಬ ಒಂದು ಮಾತು ಹೇಳಿದ್ದಾನೆ. ನಾಟ್ಯದಂತೆ ಕಾವ್ಯವೂ ಮೂರು ಲೋಕಗಳ ಭಾವದ ಅನುಕೀರ್ತನವೇ ಆಗಿರುವುದರಿಂದ, ರಸ ಸಿದ್ಧಾಂತವನ್ನು ನಾಟಕದಂತೆಯೇ ಕಾವ್ಯಗಳಿಗೂ ಅನ್ವಯಿಸಿಕೊಳ್ಳಬಹುದು. 'ವಿಭಾವ, ಅನುಭಾವ, ವ್ಯಭಿಚಾರಿ (ಸಂಚಾರಿ)' ಭಾವಗಳ ಸಂಯೋಗದಿಂದ " ರಸ " ನಿಷ್ಪನ್ನವಾಗುತ್ತದೆ ಎಂದು ಭರತ ಹೇಳಿದ್ದಾನೆ.  " ರಸ " ಎಂಬುದು ಒಂದು ಬಗೆಯ ಚಿತ್ತ ಸ್ಥಿತಿ. ಅದು ಮನಸ್ಸನ್ನು ಏಕಾಗ್ರಗೊಳಿಸಿ ಸ್ವಾಸ್ಥ್ಯವನ್ನು ತರುತ್ತದೆ. ನಂತರ ಆ ಸ್ವಾಸ್ಥ್ಯದ ಸ್ಥಿತಿಯಲ್ಲಿಯೇ ಮನಸ್ಸು ಸ್ವಲ್ಪ ಕಾಲ ನಿಲ್ಲುವಂತೆ ಮಾಡುತ್ತದೆ. ವೇದೋಪನಿಷತ್ತುಗಳಲ್ಲಿ ರಸವೆಂಬ ಪದಕ್ಕೆ ಆತ್ಮಸಾಕ್ಷಾತ್ಕಾರ ಎಂಬರ್ಥವಿದೆ. ಅತ್ಯಂತ ಸರಳವಾದ ಮಾತಿನಲ್ಲಿ ಹೇಳುವುದಾದರೆ ಸುಂದರವಾದ ಕಾವ್ಯವನ್ನು ಓದಿ, ನಮಗೆ ನಾವೇ ಪಡುವ ಸಂತೋಷವೇ " ರಸ ". ಕಾವ್ಯರಸವು ಆನಂದಾತ್ಮಕ ಎಂಬ ಹೇಳಿಕೆಯು ತೈತ್ತರೀಯ ಉಪನಿಷಿತ್ತಿನ " ರಸೋ ವೈ ಸಃ " ಎಂಬ ವಾಕ್ಯದಲ್ಲಿದೆ.  ರಸಗಳ ಸಂಖ್ಯೆ :  ರಸಗಳ ಸಂಖ್ಯೆ ಎಷ್ಟು ಎಂಬ ವಿಚಾರವಾಗಿ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವಿಪುಲವಾದ ಚರ್ಚೆ ನಡೆದಿದೆ. ಭರತಮುನಿಯ

ಹಲ್ಮಿಡಿ ಶಾಸನದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ ಸಂಗತಿ

ಪೀಠಿಕೆ :  ಹಲ್ಮಿಡಿ ಶಾಸನವು ಕನ್ನಡದ ಮೊಟ್ಟಮೊದಲ ಉಪಲಬ್ಧ ಶಾಸನವಾಗಿದೆ. ಈ ಶಾಸನವನ್ನು ಸಂಪಾದಿಸಿದವರು ಎಂ.ಎಚ್.ಕೃಷ್ಣ ಅವರು. ಈ ಶಾಸನವು ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳಿ ದೊರೆತಿದೆ. ಈ ಶಾಸನದ ಕಾಲ ಸುಮಾರು ಕ್ರಿ.ಶ. 450. ಈ ಶಾಸನದ ಕಾಲದಲ್ಲಿ ಕದಂಬ ವಂಶದ ಕಾಕುತ್ಸ್ಥವರ್ಮನು ಆಳ್ವಿಕೆ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ.  ಶಾಸನವು ಗದ್ಯ ರೂಪದಲ್ಲಿ ಇರುವುದರಿಂದ ಕನ್ನಡ ಗದ್ಯ ಇತಿಹಾಸದ ಅಧ್ಯಯನಕ್ಕೆ ನಾವು ಹಲ್ಮಿಡಿ ಶಾಸನವನ್ನು ಗಮನಿಸಲೇಬೇಕಾಗುತ್ತದೆ.  ಇದೊಂದು ಪ್ರಶಸ್ತಿ ಶಾಸನವಾಗಿದ್ದು, ವೀರನೊಬ್ಬನ ಶೌರ್ಯಕ್ಕೆ ಮೆಚ್ಚಿ ಆತನಿಗೆ ಉಡುಗೊರೆ ನೀಡಿರುವ ವಿವರಗಳನ್ನು ಒಳಗೊಂಡ ಶಾಸನವಾಗಿದೆ. 'ವಿಜ ಅರಸ' ಎಂಬುವವನೇ ಆ ಗೌರವಕ್ಕೆ ಪಾತ್ರನಾದ ವ್ಯಕ್ತಿ. ಆತ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಪಲ್ಮಿಡಿ ಮತ್ತು ಮೂನವಳ್ಳಿ ಗ್ರಾಮಗಳನ್ನು ಬಾಳ್ಗಚ್ಚು ಕೊಡುಗೆಯಾಗಿ ನೀಡಿರುವುದಾಗಿ ಶಾಸನದಿಂದ ತಿಳಿದುಬರುತ್ತದೆ.  ಹಲ್ಮಿಡಿ ಶಾಸನದ ಚಾರಿತ್ರಿಕ ಮಹತ್ವ :  ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳ್ವಿಕೆ ನಡೆಸುತ್ತಿದ್ದ ಎಂದು ತಿಳಿದು ಬರುತ್ತದೆ. ಈ ಶಾಸನ ಸಿಗುವವರೆಗೆ ಬಾದಾಮಿಯ ಚಾಳುಕ್ಯರ ಅರಸನಾದ ಮಂಗಳೇಶನ ವೈಷ್ಣವ ಗುಹಾಶಾಸನವೇ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿಯಲಾಗಿತ್ತು. ಈಗ ಹಲ್ಮಿಡಿ ಶಾಸನವು ' ಕನ್ನಡದ ಪ್ರಾಚೀನತಮ ಶಾಸನ ' ಎಂಬ ಬಿರುದಿಗೆ ಪಾತ

ಹಲ್ಮಿಡಿ ಶಾಸನದ ಐತಿಹಾಸಿಕ, ಭಾಷಿಕ, ಸಾಂಸ್ಕೃತಿಕ ಮಹತ್ವ

ಪೀಠಿಕೆ :  ಕನ್ನಡ ಶಾಸನಗಳಲ್ಲಿ ಹಲ್ಮಿಡಿ ಶಾಸನವು ತನ್ನ ಕಾಲದ ದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ಶಾಸನಗಳ ಅಧ್ಯಯನಕ್ಕೆ ತೊಡಗುವ ಯಾವ ವಿದ್ಯಾರ್ಥಿಯೇ ಆಗಲಿ, ಈ ಶಾಸನವನ್ನು ಅದರ ಪ್ರಾಚೀನತೆಯ ಕಾರಣಕ್ಕಾಗಿ ಪರಿಚಯಿಸಿಕೊಂಡೇ ಮುಂದೆ ಸಾಗಬೇಕಿದೆ.  ಹಲ್ಮಿಡಿ ಶಾಸನವು ಒಂದು ದಾನಶಾಸನವಾಗಿದೆ.  ಈ ಶಾಸನವು ಬೇಲೂರು ತಾಲ್ಲೂಕಿನ ಹನುಮಿಂಡಿ ಗ್ರಾಮದಲ್ಲಿ ದೊರೆತಿದೆ. ಗ್ರಾಮಸ್ಥರಿಂದ ಅಲಕ್ಷ್ಯಕ್ಕೆ ಒಳಗಾಗಿದ್ದ ಶಾಸನವನ್ನು ಮೈಸೂರು ಶಾಸನ‌ ಇಲಾಖೆಯು ಸಂರಕ್ಷಿಸಿದೆ. ಹಲ್ಮಿಡಿ ಶಾಸನದ ಪಾಠವನ್ನು ಹಲವು ಬಾರಿ ಪ್ರಕಟಿಸಲಾಗಿದೆ.  ಮೊದಲ ಬಾರಿ ಶಾಸನದ ಪಾಠ ಪ್ರಕಟವಾದದ್ದು ಮೈಸೂರು ಶಾಸನ ಇಲಾಖೆಯ 1936ರ ವಾರ್ಷಿಕ ವರದಿಯಲ್ಲಿ.     ಎರಡನೇ ಬಾರಿ ಶಾಸನದ ಪಾಠ ಪ್ರಕಟವಾದದ್ದು ಸ್ವಲ್ಪ ಪರಿಷ್ಕಾರದೊಂದಿಗೆ 'ಪ್ರಬುದ್ಧ ಕರ್ನಾಟಕ'ದ ಮಾಲಿಕೆಯಲ್ಲಿ.   ಮೂ ರನೇ ಬಾರಿ ಶಾಸನದ ಪಾಠ ಪ್ರಕಟವಾದದ್ದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ 'ಎಪಿಗ್ರಾಫಿಯಾ ಕರ್ನಾಟಿಕಾ'ದ ಪರಿಷ್ಕೃತ ಆವೃತ್ತಿಯಲ್ಲಿ. ಈ ಪಾಠವು ಪ್ರಬುದ್ಧ ಕರ್ನಾಟಕ'ದಲ್ಲಿ ಪ್ರಕಟಿಸಿದ ಶಾಸನ ಪಾಠಕ್ಲೆ ಅನುಗುಣವಾಗಿದೆ.    ನಾಲ್ಕನೆ ಬಾರಿ ಶಾಸನದ ಪಾಠ ಪ್ರಕಟವಾದದ್ದು  ಜಿ.ಎಸ್.ಗಾಯಿ ಅವರ 'ಹಲ್ಮಿಡಿ ಶಾಸನ: ಒಂದು ಅಧ್ಯಯನ' ಎಂಬ ಲೇಖನದಲ್ಲಿ ಪ್ರಕಟವಾಗಿದೆ.  ಶಾಸನ ಪ್ರಕಟಿಸಿದವರು : ಎಂ.ಎಚ್.ಕೃಷ್ಣ ಶಾಸನ ದೊರೆತ ಸ್ಥಳ : ಹಲ್ಮಿಡಿ ಎಂಬ ಒಂ

ಕಪ್ಪೆ ಅರಭಟ್ಟನ ಶಾಸನ

ಪೀಠಿಕೆ :  ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿಗೆ ಸಮೀಪದ ಬಂಡೆಗಲ್ಲಿನ ಮೇಲೆ ದೊರೆತಿದೆ. ಈ ಶಾಸನವು ಕನ್ನಡದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲಿನ ಶಾಸನದಲ್ಲಿ ಒಂದಾಗಿದೆ. ಈ ಶಾಸನ ಹಾಕಿಸುವಾಗ ಯಾವ ರಾಜ ಆಡಳಿತ ನಡೆಸುತ್ತಿದ್ದ ಎಂಬ ಮಾಹಿತಿ ನಮಗೆ ಲಭ್ಯವಿಲ್ಲ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿವೆ.  ಇದು ಪದ್ಯವೇ ಅಥವಾ ಗದ್ಯವೇ ಎನ್ನುವುದರ ಬಗ್ಗೆ ಕೂಡ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಇದರಲ್ಲಿ ಪ್ರಾಚೀನ ಕನ್ನಡದ ಅವಶ್ಯ ಲಕ್ಷಣವಾದ ಪ್ರಾಸ ಇರದೇ ಇರುವುದರಿಂದ ಇದನ್ನು ಗದ್ಯವೆಂದೇ ತಿಳಿಯಬೇಕಾಗಿದೆ. ನಂತರ ಬರುವ ಮೂರು ತ್ರಿಪದಿಗಳಲ್ಲಿ ಕಪ್ಪೆ ಅರಭಟ್ಟನ ಸ್ವಭಾವ ಚಿತ್ರಣ ಮೂಡಿ ಬಂದಿದೆ. ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಜೀವನ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಅದರಂತೆ ಜೀವಿಸಿದ ವ್ಯಕ್ತಿಯ ಚಿತ್ರಣ ಇಲ್ಲಿದೆ. ಇದನ್ನು ನೋಡಿದರೆ ಈ ಶಾಸನ ಕಪ್ಪೆ ಅರಭಟ್ಟ ಬದುಕಿದ್ದಾಗ ಹಾಕಿಸಿದಂತೆ ಕಾಣುವುದಿಲ್ಲ. ಬಹುಶಃ ಅವನ ಮರಣದ ನಂತರ ಹಾಕಿಸಿರಬಹುದೆಂದು ತೋರುತ್ತದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು . ಶಾಸನದ ಕಾಲ ಸುಮಾರು ಕ್ರಿ.ಶ.7ನೇ ಶತಮಾನ .  ಈ ಶಾಸನ ಪ್ರಕಟಿಸಿದವರು ಜೆ.ಎಫ್.ಫ್ಲೀಟ್ . ಕಪ್ಪೆ ಅರಭಟ್ಟನ ಶಾಸನದ ಮಹತ್ವ : ಕರ್ನಾಟಕದ ಪ್ರಾಚೀನ ಜನಜೀವನದಲ್ಲಿ ವೀರಜೀವನಕ್ಕೆ ತುಂಬಾ ಪ್ರಾಶಸ್ತ್ಯವಿದ್ದುದನ್ನು ಶಾಸನ ಎ

ಹಲ್ಮಿಡಿ ಶಾಸನ (ಟಿಪ್ಪಣಿ)

ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ಈ ಶಾಸನ ಕಂಡು ಬಂದಿದೆ. ಇದೊಂದು ವೀರಗಲ್ಲು . ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳುತ್ತಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ. ಈತನ ಕಾಲ ಐದನೆಯ ಶತಮಾನ. ಹಾಗಾಗಿ ಈ ಶಾಸನ ಹುಟ್ಟಿದ ಕಾಲ ಸುಮಾರು ಕ್ರಿ.ಶ.450. ಹಲ್ಮಿಡಿ ಶಾಸನದ ಕಾಲ --> ಕ್ರಿ.ಶ.450 ಹಲ್ಮಿಡಿ ಶಾಸನ ಗಾತ್ರದಲ್ಲಿ ಚಿಕ್ಕದಾದರೂ, ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ಮಹತ್ವದ್ದೆಂದು ಭಾವಿಸಬೇಕಾಗಿದೆ. ಹಲ್ಮಿಡಿ ಶಾಸನ ನಮಗೆ ದೊರೆಯುವವರೆಗೂ ಚಾಲುಕ್ಯ ರಾಜ ಮಂಗಳೇಶನ ವೈಷ್ಣವ ಗುಹಾಶಾಸನವನ್ನೇ ಕನ್ನಡದ ಪ್ರಾಚೀನತಮ ಶಾಸನ ಎಂದು ತಿಳಿಯಲಾಗಿತ್ತು. ಹಲ್ಮಿಡಿ ಶಾಸನ ದೊರೆತ ಮೇಲೆ ಅದು ಕನ್ನಡದ ಪ್ರಾಚೀನ ಶಿಲಾಶಾಸನ ಎಂಬ ಮನ್ನಣೆ ದೊರಕಿಸಿಕೊಂಡಿತು.  ಹಲ್ಮಿಡಿ --> ಕನ್ನಡದ ಮೊಟ್ಟಮೊದಲ ಶಾಸನ ಈ ಶಾಸನದ ಮೂಲಕ ಐದು ಆರನೆಯ ಶತಮಾನಗಳಷ್ಟು ಹಿಂದೆ ಕನ್ನಡ ಭಾಷೆಯ ರಚನೆಗಳು ಯಾವ ರೀತಿಯಲ್ಲಿ ಇದ್ದವೆಂದು ನಾವು ತಿಳಿಯಬಹುದಾಗಿದೆ. ಕನ್ನಡ ಭಾಷೆಯ ಆರಂಭದ ಶಾಸನಗಳು ಪದ್ಯನಿಬದ್ಧವಾಗಿದ್ದರೆ, ಹಲ್ಮಿಡಿ ಶಾಸನ ಗದ್ಯನಿಬದ್ಧವಾಗಿದೆ. ಕನ್ನಡ ಸಾಹಿತ್ಯದಲ್ಲಿ ಗದ್ಯದ ಉಗಮ ಮತ್ತು ವಿಕಾಸಗಳನ್ನು ಕುರಿತು ಚರ್ಚೆ ಮಾಡುವಾಗ ಅವಶ್ಯಕವಾಗಿ ಹಲ್ಮಿಡಿ ಶಾಸನವನ್ನು ಗಮನಿಸಬೇಕಾಗುತ್ತದೆ‌  ಈ ಶಾಸನದಲ್ಲಿ ವೀರನೊಬ್ಬನಿಗೆ ಗೌರವ ಸಮರ್ಪಣೆ ಮಾಡಿದ ಸಂಗತಿಯಿದೆ. ' ವಿಜ ಅರಸ ' ಎ

ಕಪ್ಪೆ ಅರಭಟ್ಟ (ಟಿಪ್ಪಣಿ)

ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ವಿಜಾಪುರ ಜಿಲ್ಲೆಯ ಬಾದಾಮಿ ತಾಲೂಕಿನ ಬಾದಾಮಿಗೆ ಸಮೀಪವಿರುವ ತಟ್ಟುಕೋಟೆ ಎಂಬಲ್ಲಿ ಬಂಡೆಗಲ್ಲಿನ ಮೇಲೆ ಕೊರೆದಿರುವ ಶಾಸನವಾಗಿದೆ. ಈ ಶಾಸನ ಯಾವ ರಾಮ ಮನೆತನದ ಕಾಲದಲ್ಲಿ ಹುಟ್ಟಿತು, ಆಗ ಆಳ್ವಿಕೆಯಲ್ಲಿದ್ದ ರಾಜ ಯಾರು ಎಂಬ ಬಗ್ಗೆ ಶಾಸನದಲ್ಲಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಕರ್ನಾಟಕದಲ್ಲಿ ವಿರಳವಾಗಿ ದೊರೆಯುವ ಬಂಡೆಗಲ್ಲು ಶಾಸನಗಳಲ್ಲಿ ಇದೂ ಒಂದಾಗಿದೆ. ಕನ್ನಡ ಭಾಷೆಯಲ್ಲಿರುವ ಈ ಶಾಸನ ಕಪ್ಪೆ ಅರಭಟ್ಟ ಎಂಬುವವನನ್ನು ಕೀರ್ತಿಸಿದೆ.  ಆದರೆ ಇದು ಪದ್ಯವೇ ಅಥವಾ ಗದ್ಯವೇ ಎಂಬ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇದೆ.  ಇದರಲ್ಲಿ ತನ್ನ ಪ್ರಾಣಕ್ಕಿಂತಾ ಹೆಚ್ಚಾಗಿ ತಾನು ನಂಬಿಕೊಂಡು ಬಂದಿರುವ ಶ್ರದ್ಧೆ, ಸ್ವಾಭಿಮಾನವೇ ದೊಡ್ಡದು ಎಂದು ಸಾರುವ ವ್ಯಕ್ತಿ ಚಿತ್ರಣವನ್ನು ಶಾಸನದಲ್ಲಿ ಕಾಣಬಹುದಾಗಿದೆ. ಬಹುಶಃ ಇದನ್ನು ವ್ಯಕ್ತಿಯ ಮರಣದ ನಂತರ ಹಾಕಿಸಿರಬಹುದಾದ ಸಾಧ್ಯತೆಯಿದೆ. ಹಾಗಾಗಿ ಇದು ಪ್ರಶಸ್ತಿ ಶಾಸನವಲ್ಲ. ಇದೊಂದು ವೀರಗಲ್ಲು ಎಂದೇ ಭಾವಿಸಬೇಕಾಗುತ್ತದೆ.   "...ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನ ವರ್ಜಿತನ್ ಕಲಿಯುಗ ವಿಪರೀತನ್..." ಭಾವಾರ್ಥ :  ಶಾಸನದ ಕೇಂದ್ರ ವ್ಯಕ್ತಿ ಕಪ್ಪೆ ಅರಭಟ್ಟ. ಈತ ಒಳ್ಳೆಯವರಿಗೆ ಒಳ್ಳೆಯವು. ಕೆಟ್ಟವರಿಗೆ ಬೇಡವಾದವನು.  "ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯನ್ ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತ ಪೆರನಲ್ಲ..."  ಭಾವಾರ್ಥ

ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ

ಪೀಠಿಕೆ :  ಶಾ ಸನ ಎಂಬುದು ' ಶಾಸ್ ' ಎಂಬ ಸಂಸ್ಕೃತ ಧಾತುವಿನಿಂದ ನಿಷ್ಪನ್ನವಾದ ಪದ. ಇದರರ್ಥ ಆಜ್ಞೆ.  ಶಾಸನ >>> ಶಾಸ್ (ಸಂಸ್ಕೃತ) >>> ಆಜ್ಞೆ ರಾಜಾಜ್ಞೆಗಳನ್ನು ಶಾಸನ ಎಂದು ಕರೆಯಲಾಗುತ್ತದೆ. ಮೂಲದಲ್ಲಿ ರಾಜಾಜ್ಞೆಗಳನ್ನು ಮಾತ್ರವೇ "ಶಾಸನ" ಎಂದು ಕರೆಯುತ್ತಿದ್ದರು. ನಂತರ ಈ ಪದದ ವ್ಯಾಪ್ತಿ ಹಿರಿದಾಯಿತು. ರಾಜನಲ್ಲದ ಇತರರು ಹಾಕಿಸಿದ ಬರಹಗಳನ್ನು ಕೂಡ ಶಾಸನಗಳೆಂದು ಕರೆಯುವ ರೂಢಿ ಬಂದಿತು. ಯಾವುದೇ ಒಂದು ವಿಷಯವಾಗಲೀ ಕಲ್ಲು ಅಥವಾ ಮರ ಅಥವಾ ಲೋಹಗಳ ಮೇಲೆ ಕೆತ್ತಿಸಿದ ಬರಹಗಳು " ಶಾಸನ " ದ ವ್ಯಾಪ್ತಿಗೆ ಸೇರತೊಡಗಿದವು. ಇಂಗ್ಲೀಷಿನಲ್ಲಿ ಇದಕ್ಕೆ Inscription, Epigraph ಎನ್ನುತ್ತಾರೆ. ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ :  ಶಾಸನ ಎಂಬುದು ಸಂಸ್ಕೃತ ಪದ. ಇದನ್ನು ಕಾನೂನು ಎಂಬರ್ಥದಲ್ಲಿ ಇಂದಿಗೂ ನಾವು ಬಳಸುತ್ತಿದ್ದೇವೆ. 'ಶಾಸಕ' ಎಂಬ ಪದವೂ ಇದರೊಂದಿಗೆ ಸಂಬಂಧ ಇರಿಸಿಕೊಂಡಿದೆ. 'ಶಾಸಕ' ಎಂದರೆ ಕಾನೂನು ರೂಪಿಸುವವನು, ಕಾನೂನು ಅನುಸಾರ ಅಧಿಕಾರ ನಡೆಸುವವರು ಎಂಬರ್ಥ ಬರುತ್ತದೆ.  ಶಾಸನ ಎಂಬ ಪದದ ಅರ್ಥ ಶಾಸ್ ಎಂಬ ಧಾತುವಿನಿಂದ ಬಂದಿದ್ದು. 'ಶಾಸ್' ಎಂಬ ಪದದಿಂದ ನಿಷ್ಪನ್ನವಾದ 'ಶಾಸನ' ಪದಕ್ಕೆ ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ.  "ಶಾಸನ ಎಂಬ ಪದ ರಾಜಾಜ್ಞೆಗಳನ್ನು ತಿಳಿಸುವ ಬರಹಗಳನ್ನು ಹೇಳುತ್ತದೆ&

ಕರ್ನಾಟಕದಲ್ಲಿ ಶಾಸನ ಅಧ್ಯಯನದ ಇತಿಹಾಸ ಮತ್ತು ಸ್ವರೂಪ

ಪೀಠಿಕೆ :  ಶಾಸನ ಅಧ್ಯಯನವು ಪಾಶ್ಚಾತ್ಯರಲ್ಲಿಯೇ ತಡವಾಗಿ ಆರಂಭವಾಯಿತು. ಏಕೆಂದರೆ ಶಾಸನ ಶಾಸ್ತ್ರದ ಅಧ್ಯಯನವೇ ಹೊಸ ಕ್ಷೇತ್ರ. ಹಾಗಾಗಿ ಭಾರತದಲ್ಲಿ 18ನೇ ಶತಮಾನದ ಅಂತ್ಯದಲ್ಲಿ ಅಧ್ಯಯನ ಆರಂಭವಾಯಿತು. ಕನ್ನಡ ಶಾಸನ ಪ್ರಕಟಣೆಯ ಪ್ರಥಮ ಉಲ್ಲೇಖವನ್ನು 18ನೇ ಶತಮಾನದ ಕಡೆಯಲ್ಲಿ ಕಾಣುತ್ತೇವೆ. ಈವರೆಗೂ ಕನ್ನಡದಲ್ಲಿ ಸುಮಾರು 25,000 ಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಕನ್ನಡದಲ್ಲಿ ಶಾಸನ ಅಧ್ಯಯನ :  ಕನ್ನಡ ಶಾಸನಗಳ ಅಧ್ಯಯನ ಆರಂಭವಾಗಿದ್ದು  18ನೇ ಶತಮಾನದಲ್ಲಿ. ಬಂಗಾಳದ Royal Asiatic Society ಪ್ರಕಟಿಸುತ್ತಿದ್ದ Asiatic Researches ಎಂಬ ಸಂಶೋಧನಾ ಬರಹಗಳ ಪತ್ರಿಕೆಯಲ್ಲಿ 1791ರಲ್ಲಿ ಕನ್ನಡ ಶಾಸನಗಳ ಕುರಿತ ಲೇಖನವೊಂದು ಪ್ರಕಟವಾಯಿತು.  ಸರ್ ವಿಲಿಯಮ್ ಜೋನ್ಸ್ ಇದರ ಕರ್ತೃ.  ಈ ಲೇಖನವು ತಾಮ್ರಪಟದ ಮೇಲೆ ಕೆತ್ತಿದ್ದ ವಿವರಕ್ಕೆ ಸಂಬಂಧಿಸಿತ್ತು. ಕಂಚಿಯಲ್ಲಿ ದೊರೆತಿದ್ದ ಈ ತಾಮ್ರಪಟವು ವಿಜಯನಗರ ದೊರೆಗಳು ಕಂಚಿಯ ದೇವಸ್ಥಾನಕ್ಕೆ ಕೊಟ್ಟಿದ್ದ ದತ್ತಿಯನ್ನು ಕುರಿತು ಈ ಶಾಸನ ಹೇಳುತ್ತದೆ.  ಈ ಲೇಖನವೇ "ಕನ್ನಡ ಶಾಸನಗಳನ್ನು ಕುರಿತ ಮೊಟ್ಟಮೊದಲ ಪ್ರಕಟಣೆ"  ಕರ್ನಲ್ ಮೆಕೆಂಜಿ ಎಂಬ ಸೈನ್ಯಾಧಿಕಾರಿ ಶಾಸನಗಳ ಸಂಗ್ರಹ ಮತ್ತು ಪ್ರಕಟಣೆಗೆ ತನ್ನದೇ ಆದ ಸೇವೆ ಸಲ್ಲಿಸಿದ್ದಾನೆ. ಮೈಸೂರು ಸಂಸ್ಥಾನದಲ್ಲಿ ಈತನನ್ನು ಭೂಪರಿವೀಕ್ಷಣೆಗೆ ಸರ್ವೆ ಅಧಿಕಾರಿಯಾಗಿ ನೇಮಿಸಿದ ಸಂದರ್ಭದಲ್ಲಿ ಈತ ಊರೂರಿನಲ್ಲಿ ದೊರೆಯುತ್ತಿದ್ದ ತಾಡೆಯೋಲೆ

ಕನ್ನಡ ಶಾಸನಗಳು- ಮಹತ್ವ

ಚರಿತ್ರೆಯ ರಚನೆಯಲ್ಲಿ ಶಾಸನಗಳ ಮಹತ್ವ ಶಾಸನಗಳು ಹಲವಾರು ಕಾರಣಗಳಿಂದಾಗಿ ಮಹತ್ವದ ಸ್ಥಾನ ಪಡೆಯುತ್ತವೆ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು.  ದೀರ್ಘಕಾಲದ ಬಾಳಿಕೆ ಅಧಿಕೃತವಾದ ದಾಖಲೆ ವಿಷಯವನ್ನು ಸಾರ್ವಜನಿಕರಿಗೆ ಪ್ರಚುರ ಪಡಿಸುವಲ್ಲಿ ಮಹತ್ವದ ಪಾತ್ರ ಶಾಸನಗಳು ಪುರಾತತ್ವ ಶೋಧನೆಯ ಮಹತ್ವದ ಅಂಗ.‌ ಬರಹ ರೂಪದ ಇತರ ಆಧಾರಗಳಿಗಿಂತಾ ಶಾಸನದ ಆಧಾರ ಹೆಚ್ಚು ವಿಶ್ವಾಸಾರ್ಹವಾದುದು.‌ ಏಕೆಂದರೆ ಬೇರೆಲ್ಲಾ ಮೂಲಗಳು ನಶಿಸುವ, ತಿದ್ದಲ್ಪಡುವ, ವೈಭವೀಕರಿಸುವ ಅಪಾಯಕ್ಕೆ ತುತ್ತಾಗುತ್ತವೆ. ಆದರೆ ಶಾಸನಗಳಿಗೆ ಈ ಅಪಾಯ ಇಲ್ಲ.  "ಹಿಂದೂ ಜನಾಂಗದ ಅಧಿಕೃತ ಚರಿತ್ರೆ ಇಲ್ಲದಿರುವಾಗ, ಆಕಸ್ಮಿಕಗಳ ಮೂಲಕ ಆಗಾಗ ಪತ್ತೆಯಾಗುವ ಎಲ್ಲಾ ಅಸಲಿ ಸ್ಮಾರಕಗಳಿಗೆ ನ್ಯಾಯವಾಗಿ ಪ್ರಾಮುಖ್ಯತೆ ಸಲ್ಲುತ್ತದೆ" ಎನ್ನುತ್ತಾನೆ ಕೋಲ್ ಬ್ರೂಕ್ ಎಂಬ ವಿದ್ವಾಂಸ.  "ಭರತ ಖಂಡದ ಶ್ರೀಮಂತಿಕೆ ಶಾಸನ ರೂಪದ ಅವಶೇಷಗಳಲ್ಲಿ ಭದ್ರವಾಗಿದೆ. ಆ ಶಾಸನಗಳೇ ಈ ದೇಶದ ಪ್ರಾಚ್ಯ ಯುಗ ಸಂಬಂಧವಾದ ಎಲ್ಲಾ ಸಂಶೋಧನಾ ಪಥಗಳಲ್ಲಿ ಐತಿಹಾಸಿಕ ಫಲಿತಾಂಶಗಳಿಗೆ ಖಚಿತವಾದ ಬುನಾದಿಯಾಗಿದೆ" ಎಂದು ಫ್ಲೀಟ್ ಅಭಿಪ್ರಾಯ ಪಡುತ್ತಾರೆ.  "ಶಾಸನಗಳು ಭಾರತದ ಇತಿಹಾಸದ ಜೀವನಾಡಿ" ಎಂದು ವಿದ್ವಾಂಸರು ಬಣ್ಣಿಸಿದ್ದಾರೆ. ಇಂತಹ ಮಾತುಗಳಲ್ಲಿ ಶಾಸನಗಳ ಮಹತ್ವವು ಚರಿತ್ರೆಯ ರಚನೆಯಲ್ಲಿ ಎಷ್ಟಿದೆ ಅಂತ ಅಂದಾಜಾಗುತ್ತದೆ.  "ಪ್ರಾಚೀನ ಭಾರತದ ರಾಜಕೀಯ, ಸಾಮಾಜಿಕ, ಆರ್