ಭೂಮಿಯಂತಹಾ ಮತ್ತೊಂದು ಗ್ರಹ (ಮಾನಸಾ) ಆಗಸ್ಟ್ 2019

ಭೂಮಿ ನಮ್ಮ ಗ್ರಹ. ತಿಳಿದೋ ತಿಳಿಯದೆಯೋ ನಾವಿಲ್ಲಿ ಹುಟ್ಟಿಬಿಟ್ಟಿದ್ದೇವೆ. ಅನಂತ ಆಕಾಶದಲ್ಲಿ ದೂರದೂರದವರೆಗೂ ನಾವು ದೃಷ್ಟಿ ಹಾಯಿಸಿದರೂ ನಮ್ಮ ಕಣ್ಣಿಗೆ ಕಾಣಸಿಗುವುದು ನಕ್ಷತ್ರಗಳು ಮಾತ್ರ. ನಮ್ಮ ಸೌರವ್ಯೂಹದ ಇತರೆ ಗ್ರಹಗಳಲ್ಲಿ ಮನುಷ್ಯ ಬದುಕುವಂತಹ ವಾತಾವರಣ ಇಲ್ಲ ಅಂತ ನಮಗೆ ಈಗಾಗಲೇ ಗೊತ್ತಾಗಿದೆ. ಹಾಗಾಗಿ ಭೂಮಿ ಒಂದರಲ್ಲಿಯೇ ಜೀವಿಗಳು ಇರುವುದು, ಜೀವ ಇರುವುದು ಅಂತ ನಮ್ಮ ನಂಬಿಕೆ. ಭೂಮಿಯಂತಹ ಗ್ರಹ ಮತ್ತೊಂದಿಲ್ಲ ಅಂತ ಗಾಢವಾಗಿ ನಂಬಿದ್ದೇವೆ ನಾವುಗಳು. ಆದರೆ ನಮ್ಮ ಈ ನಂಬಿಕೆಯನ್ನು ಸುಳ್ಳು ಮಾಡುವಂತಹ ಸುದ್ದಿಯೊಂದು ಇದೀಗ ಬಂದಿದೆ. ಭೂಮಿಯಂತಹ ಮತ್ತೆರೆಡು ಗ್ರಹ: ನಮ್ಮ ಸೌರವ್ಯೂಹದಿಂದ ಕೆಲವೇ ಜ್ಯೋತಿ ವರ್ಷಗಳಷ್ಟು ದೂರದಲ್ಲಿರುವ ಒಂದು ನಕ್ಷತ್ರವನ್ನು ಸುತ್ತು ಹಾಕುತ್ತಿರುವ ಎರಡು ಗ್ರಹಗಳು ಥೇಟ್ ಭೂಮಿಯಂತೆಯೇ ಇವೆಯಂತೆ. ಅದೂ ಸಹ ನಮ್ಮ ಗೆಲಾಕ್ಸಿಯ ಪರಿಮಿತಿಯಲ್ಲಿಯೇ... ಆಶ್ಚರ್ಯ ಆಯ್ತಲ್ವಾ? ಆದರೆ ಈ ಗ್ರಹಗಳು ಭೂಮಿಗಿಂತಲೂ ದೊಡ್ಡದಾಗಿವೆಯಂತೆ. ಅಷ್ಟೇ ಅಲ್ಲ... ಈ ಗ್ರಹಗಳಲ್ಲಿಯೂ ಮನುಷ್ಯ ಬದುಕುವ ವಾತಾವರಣ ಇದೆಯಂತೆ. ಅಲ್ಲಿ ನೀರಿರುವ ಸುಳಿವು ಮತ್ತು ಆ ನೀರು ದ್ರವರೂಪದಲ್ಲಿಯೇ ಇರುವ ಕುರುಹು ಸಿಕ್ಕಿದೆಯಂತೆ. ಅವುಗಳೂ ಸಹ ತನ್ನ ಸೂರ್ಯನನ್ನು ನಿಗದಿತ ಅವಧಿಯಲ್ಲಿ ಸುತ್ತು ಹಾಕುತ್ತಿದೆಯಂತೆ. ಹಾಗಾಗಿ ಋತುಗಳೂ ಸಹ ಇರಬಹುದು. ಮನುಷ್ಯನಿಗೆ ಬೇಕಾದ ಎಲ್ಲವೂ ಅಲ್ಲಿದೆ. ಅಕಸ್ಮಾತ್ ನಮ್ಮ ಭೂಮಿಗೆ ಏನಾದರೂ ಗಂಡಾಂತರ ಒದಗ...