ಪೋಸ್ಟ್‌ಗಳು

ಸೆಪ್ಟೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಿಪಾಯಿ ದಂಗೆ

ಪೀಠಿಕೆ :  1857 ರ ಪ್ರಥಮ ಸಂಗ್ರಾಮ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ. ಈ ದಂಗೆಯು ಭಾರತೀಯ ಸೈನಿಕರು ಮತ್ತು ಬ್ರಿಟಿಷ್  ಅಧಿಕಾರಿಗಳ ನಡುವಿನ ಜಗಳವಾಗಿತ್ತು.  ಆದರೆ ನಿಖರವಾದ ಕಾರಣವೆಂದರೆ ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಬಂದೂಕಿನ ತೋಟಾಗಳಿಗೆ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ್ದಾರೆ ಎಂಬ ಸುದ್ದಿಯೇ ಈ ದಂಗೆಗೆ ಕಾರಣವಾಯ್ತು. ಸಿಪಾಯಿ ದಂಗೆ: 1857ರಲ್ಲಿ ಬ್ರಿಟಿಷ್ ಸೈನ್ಯದ ಭಾರತೀಯ ಸೈನಿಕರು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಏಕೆಂದರೆ ಸೈನಿಕರು ಕಾಡತೂಸುಗಳನ್ನು ಬಂದೂಕಿಗೆ ತುಂಬುವ ಮೊದಲು ಹಲ್ಲಿನಿಂದ ಅದನ್ನು ಕಚ್ಚಿ ತೆಗೆಯಬೇಕಾಗಿದ್ದಿತು. ಅದರಲ್ಲಿ ಹಂದಿ ಮತ್ತು ದನದ ಕೊಬ್ಬು ಸವರಿದ್ದರೆ ಹಿಂದೂ ಮತ್ತು ಮುಸ್ಲಿಮ್ ಸೈನಿಕರಿಗೆ ಬಹಳ ತೊಂದರೆಯಾಗುತ್ತಿತ್ತು. ಹಸುಗಳು ಹಿಂದೂಗಳಿಗೆ ಪವಿತ್ರ ಪ್ರಾಣಿ ಮತ್ತು ಹಂದಿಗಳು ಮುಸ್ಲಿಮರಿಗೆ ಕಟ್ಟುನಿಟ್ಟಾಗಿ ನಿಷೇಧವಾದ ಕಾರಣ ಅವರಿಗೆ ಅದನ್ನು ಹಲ್ಲಿನಿಂದ ಕಚ್ಚಿ ತೆಗೆಯಲು ಆಗುತ್ತಿರಲಿಲ್ಲ. ಈ ಬಂಡಾಯವು ಉತ್ತರ ಭಾರತದ ತುಂಬಾ ಹರಡಿತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ ಝಾನ್ಸಿಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಷ್ ಸೈನಿಕರನ್ನು ಕೊಂದಿತು. ಮೀರತ್, ಕಾನ್ಪುರ್, ಲಕ್ನೋ ಮುಂತಾದ ಕಡೆಗಳಲ್ಲಿ ದಂಗೆಯೆದ್ದಿತು. ಬ್ರಿಟಿಷರು ಅಪಾರ ಸೈನ್ಯದ ನೆರವಿನೊಂದಿಗೆ ಈ ದಂಗೆಯನ್ನು ಹತ್ತಿಕ್ಕಿದರು. ದೇಶೀಯ ಪದ

ಜೈನ ಕವಿ "ಆಂಡಯ್ಯ" Andaiah (Jain Poet)

ಇಮೇಜ್
ಆಂಡಯ್ಯ ಒಬ್ಬ ಜೈನ ಕವಿ.  ಇವನ ಕಾಲ ಸುಮಾರು ಕ್ರಿ.ಶ. 1235.  ಇವನು ಧಾರವಾಡದವನು. ಕದಂಬ ವಂಶಕ್ಕೆ ಸೇರಿದ ಕಾಮದೇವ ಇವನ ಆಶ್ರಯದಾತ. ಆಂಡಯ್ಯನು ಪಂಪ-ರನ್ನರಂತೆ ರಾಮಾಯಣ-ಮಹಾಭಾರತವನ್ನು ಆಧರಿಸಿದ ಲೌಕಿಕ ಗ್ರಂಥಗಳನ್ನು ಬರೆದಿಲ್ಲ. ಬದಲಾಗಿ ಇವನ ಕೃತಿಯಾದ ‘ ಕಬ್ಬಿಗರ ಕಾವ’ ಒಂದು ಕಾಲ್ಪನಿಕ ಕೃತಿಯಾಗಿದೆ. ‘ಕಬ್ಬಿಗರ ಕಾವಂ’ ಎಂದರೆ ಸಂಸ್ಕೃತದ ಸಹಾಯವಿಲ್ಲದೇ ಅಚ್ಚ ಕನ್ನಡದಲ್ಲಿ ಬರೆದು ಕವಿಗಳನ್ನು ಕಾಪಾಡಿದವನು ಎಂಬರ್ಥ ಬರುತ್ತದೆ .  ಸಂಸ್ಕೃತದ ಒಂದೂ ಪದವನ್ನು ಬೆರೆಸದೇ, ಅಚ್ಚ ಕನ್ನಡದ ದೇಸೀ ಪದಗಳನ್ನು ಬಳಸಿ ಕಾವ್ಯ ರಚನೆ ಮಾಡಿರುವುದು ಇವನ ಹೆಗ್ಗಳಿಕೆ. ಈ ಕೃತಿಗೆ “ಕಾವನ ಗೆಲ್ಲ”, “ಮದನ ವಿಜಯ”, “ಸೊಬಗಿನ ಸುಗ್ಗಿ” ಅಂತ ಹೆಸರುಗಳಿವೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.  ಇದು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಒಂದು ಮಹತ್ವದ ಕೃತಿಯಾಗಿದೆ. ಆ ಕಾಲದಲ್ಲಿ ಕಾವ್ಯ ರಚನೆ ಕೇವಲ ಪಂಡಿತರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಕಾವ್ಯ ಅರ್ಥವಾಗಬೇಕು ಎಂದು ಭಾವಿಸಿದ ನಮ್ಮ ಕವಿಗಳು ಕವನದಲ್ಲಿ ದೇಸೀಯತೆಯನ್ನು ತಂದರು. ಅಲ್ಲದೇ ಸಂಸ್ಕೃತದಿಂದ ತದ್ಭವವನ್ನು ಮಾತ್ರ ಬಳಸಿದರು, ತತ್ಸಮ ಬಳಸುವುದಕ್ಕೆ ತಮಗೆ ತಾವೇ ನಿರ್ಬಂಧ ಹೇರಿಕೊಂಡರು.  ಅಂತಹ ಸಮಯದಲ್ಲಿ ಆಂಡಯ್ಯನ ಈ ಕೃತಿ ಪೂರ್ಣಗೊಂಡಿದ್ದು ಒಂದು ಮಹತ್ತರ ಸಾಧನೆಯಾಗಿದೆ. ಕಬ್ಬಿಗರ ಕಾವ :   “ಕನ್ನಡದೊಳ್ಪಿನ ನುಡಿಯಂ! ಮುನ್ನಿನದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!!