ಸಿಪಾಯಿ ದಂಗೆ

ಪೀಠಿಕೆ

1857 ರ ಪ್ರಥಮ ಸಂಗ್ರಾಮ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ. ಈ ದಂಗೆಯು ಭಾರತೀಯ ಸೈನಿಕರು ಮತ್ತು ಬ್ರಿಟಿಷ್  ಅಧಿಕಾರಿಗಳ ನಡುವಿನ ಜಗಳವಾಗಿತ್ತು. 

ಆದರೆ ನಿಖರವಾದ ಕಾರಣವೆಂದರೆ ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಬಂದೂಕಿನ ತೋಟಾಗಳಿಗೆ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ್ದಾರೆ ಎಂಬ ಸುದ್ದಿಯೇ ಈ ದಂಗೆಗೆ ಕಾರಣವಾಯ್ತು.

ಸಿಪಾಯಿ ದಂಗೆ:

1857ರಲ್ಲಿ ಬ್ರಿಟಿಷ್ ಸೈನ್ಯದ ಭಾರತೀಯ ಸೈನಿಕರು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಏಕೆಂದರೆ ಸೈನಿಕರು ಕಾಡತೂಸುಗಳನ್ನು ಬಂದೂಕಿಗೆ ತುಂಬುವ ಮೊದಲು ಹಲ್ಲಿನಿಂದ ಅದನ್ನು ಕಚ್ಚಿ ತೆಗೆಯಬೇಕಾಗಿದ್ದಿತು. ಅದರಲ್ಲಿ ಹಂದಿ ಮತ್ತು ದನದ ಕೊಬ್ಬು ಸವರಿದ್ದರೆ ಹಿಂದೂ ಮತ್ತು ಮುಸ್ಲಿಮ್ ಸೈನಿಕರಿಗೆ ಬಹಳ ತೊಂದರೆಯಾಗುತ್ತಿತ್ತು. ಹಸುಗಳು ಹಿಂದೂಗಳಿಗೆ ಪವಿತ್ರ ಪ್ರಾಣಿ ಮತ್ತು ಹಂದಿಗಳು ಮುಸ್ಲಿಮರಿಗೆ ಕಟ್ಟುನಿಟ್ಟಾಗಿ ನಿಷೇಧವಾದ ಕಾರಣ ಅವರಿಗೆ ಅದನ್ನು ಹಲ್ಲಿನಿಂದ ಕಚ್ಚಿ ತೆಗೆಯಲು ಆಗುತ್ತಿರಲಿಲ್ಲ. ಈ ಬಂಡಾಯವು ಉತ್ತರ ಭಾರತದ ತುಂಬಾ ಹರಡಿತು.

ಹೆಚ್ಚು ಕಡಿಮೆ ಅದೇ ಸಮಯಕ್ಕೆ ಝಾನ್ಸಿಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಷ್ ಸೈನಿಕರನ್ನು ಕೊಂದಿತು. ಮೀರತ್, ಕಾನ್ಪುರ್, ಲಕ್ನೋ ಮುಂತಾದ ಕಡೆಗಳಲ್ಲಿ ದಂಗೆಯೆದ್ದಿತು. ಬ್ರಿಟಿಷರು ಅಪಾರ ಸೈನ್ಯದ ನೆರವಿನೊಂದಿಗೆ ಈ ದಂಗೆಯನ್ನು ಹತ್ತಿಕ್ಕಿದರು. ದೇಶೀಯ ಪದಾತಿದಳದ ಸಿಪಾಯಿಯಾದ ಮಂಗಲ್ ಪಾಂಡೆಯನ್ನು ನೇಣಿಗೇರಿಸಲಾಯ್ತು. 

ಮಂಗಲ್ ಪಾಂಡೆಯವರು ಭಾರತದ ಪ್ರಥಮ ಸ್ವಾತಂತ್ರ ಹೋರಾಟಗಾರ ಎಂದೇ ಪ್ರಸಿದ್ಧರಾದವರು. ಬ್ರಿಟಿಷ್ ಸೈನ್ಯವು ಬಂಡುಕೋರರನ್ನು ಮುತ್ತಿಗೆ ಹಾಕಿ, ಅವರು ವಶಪಡಿಸಿಕೊಂಡಿದ್ದ ದೆಹಲಿಯನ್ನು ವಾಪಸ್ ಪಡೆದರು.

ಕೊನೆಯ ಮುಖ್ಯ ಕಾಳಗವು ಗ್ವಾಲಿಯರ್ ನಲ್ಲಿ ನಡೆಯಿತು. ರಾಣಿ ಲಕ್ಷ್ಮೀ ಬಾಯಿ ಈ ಕಾಳಗದಲ್ಲಿಯೇ ಹತಳಾದಳು. ನಂತರ ಅಲ್ಲಲ್ಲಿ ಕಾಳಗಗಳು ನಡೆದರೂ ಬಂಡಾಯವನ್ನು ಹತ್ತಿಕ್ಕಲಾಯಿತು.

ಉಪಸಂಹಾರ:

ಈ ದಂಗೆಯು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮುಖ್ಯ ತಿರುವಾಗಿದ್ದು, ಬ್ರಿಟಿಷರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಆಳ್ವಿಕೆಯನ್ನು ರದ್ದುಗೊಳಿಸಿ ನೇರ ಬ್ರಿಟನ್ನಿನ ರಾಜಮನೆತನದ ಅಡಿಯಲ್ಲಿ ಭಾರತವನ್ನು ಆಳತೊಡಗಿದರು. ಈ ನೇರ ಆಡಳಿತ ಪದ್ಧತಿಯ ಅಡಿಯಲ್ಲಿ “ಮಹಾರಾಣಿ ವಿಕ್ಟೋರಿಯಾ” ಭಾರತದ ರಾಜರುಗಳು, ಜನರಿಗೆ ಸಮಾನತೆಯನ್ನು ನೀಡುವುದಾಗಿ ಭರವಸೆ ನೀಡಿದಳು. ಆದರೆ ಸಿಪಾಯಿ ದಂಗೆಯಿಂದ ಭಾರತೀಯರಲ್ಲಿ ಮೂಡಿದ್ದ ಅವಿಶ್ವಾಸದಿಂದಾಗಿ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ.

**************
ಕೆ.ಎ.ಸೌಮ್ಯ
ಮೈಸೂರು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)