ಪೋಸ್ಟ್‌ಗಳು

ಮೇ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲೇಖನ: "ಪ್ರಿಮಾನಿಷನ್- ಒಂದು ಎಚ್ಚರಿಕೆ" Premonitions- published in manasa

           ನೀವೊಂದು ಸಿನೆಮಾ ನೋಡಿರುತ್ತೀರಿ . ಕೆಲವು ಗೆಳೆಯರು ಪ್ಯಾರಿಸ್ . ಗೆ ಹೋಗಲು ವಿಮಾನ ನಿಲ್ದಾಣಕ್ಕೆ ಬರುತ್ತಾರೆ . ಅವರಲ್ಲಿ ಒಬ್ಬನಿಗೆ ವಿಮಾನ ಹತ್ತುವ ಮುಂಚೆಯೇ ಆ ವಿಮಾನ ಅಪಘಾತಕ್ಕೀಡಾಗಿ ಎಲ್ಲರೂ ಸತ್ತಂತೆ ಕನಸು ( ಸುಪ್ತ ಪ್ರಜ್ಞೆಯಲ್ಲಿ ) ಕಾಣುತ್ತದೆ . ಅವನು ತನ್ನ ಗೆಳೆಯರನ್ನು ಆ ವಿಮಾನ ಹತ್ತದಂತೆ ತಡೆಯಲು ಯತ್ನಿಸುತ್ತಾನೆ .  ಯಾರೂ ಅವನ ಮಾತು ನಂಬುವುದಿಲ್ಲ .  ಆದರೂ ಅವನ ಕೆಲವು ಗೆಳೆಯರು ಅವನ ಮಾತು ಕೇಳಿ ವಿಮಾನ ಹತ್ತುವುದಿಲ್ಲ . ನಂತರ ಕೆಲವೇ ಸೆಕೆಂಡ್ ಗಳಲ್ಲಿ ಎಲ್ಲರೂ ಕೆಳಗಿನಿಂದ ನೋಡುನೋಡುತ್ತಿದ್ದಂತೆಯೇ ಮೇಲಕ್ಕೇರಿದ ವಿಮಾನದಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಾ ಕೆಳಗೆ ಬೀಳುತ್ತದೆ . ಕಂಡ ಕನಸು ನಿಜವಾಗುತ್ತದೆ .            ಇದನ್ನೇ " ಪ್ರಿಮಾನಿಷನ್ " ಎನ್ನುವುದು . ಅಂದರೆ ಮುಂದೇನೋ ನಡೆಯಬಾರದ್ದು ನಡೆಯಲಿದೆ ಅಂದರೆ ಯಾವುದೋ ಅಪಾಯ ಕಾದಿದೆ ಎಂದು ನಮ್ಮ ಸುಪ್ತ ಮನಸ್ಸಿಗೆ ಮೊದಲೇ ತಿಳಿಸುವ ಎಚ್ಚರಿಕೆ .  ಪ್ರಿಮಾನಿಷನ್ ಸಾಧಾರಣವಾಗಿ ಕನಸಿನಲ್ಲೇ ಕಾಣುವುದಾದರೂ , ಕೆಲವೊಮ್ಮೆ ನಾವು ಎಚ್ಚರವಿದ್ದಾಗಲೂ ನಾವು ಕಾಣಬಹುದಾಗಿದೆ . ಅಂದರೆ ನಾವು ಎಚ್ಚರವಿದ್ದಾಗ ಕಂಡದ್ದನ್ನು , ನಮಗೆ ನಿಜಕ್ಕೂ ಎಚ್ಚರವಾದಾಗ ಕನಸಲ್ಲಿ ಕಂಡಿರಬಹುದು ಎಂದು ಭ್ರಮಿಸುತ್ತೇವೆ .            ಪ್ರಿಮಾನಿಷನ್