ಸಿಪಾಯಿ ದಂಗೆ
ಪೀಠಿಕೆ : 1857 ರ ಪ್ರಥಮ ಸಂಗ್ರಾಮ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ. ಈ ದಂಗೆಯು ಭಾರತೀಯ ಸೈನಿಕರು ಮತ್ತು ಬ್ರಿಟಿಷ್ ಅಧಿಕಾರಿಗಳ ನಡುವಿನ ಜಗಳವಾಗಿತ್ತು. ಆದರೆ ನಿಖರವಾದ ಕಾರಣವೆಂದರೆ ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಬಂದೂಕಿನ ತೋಟಾಗಳಿಗೆ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ್ದಾರೆ ಎಂಬ ಸುದ್ದಿಯೇ ಈ ದಂಗೆಗೆ ಕಾರಣವಾಯ್ತು. ಸಿಪಾಯಿ ದಂಗೆ: 1857ರಲ್ಲಿ ಬ್ರಿಟಿಷ್ ಸೈನ್ಯದ ಭಾರತೀಯ ಸೈನಿಕರು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಏಕೆಂದರೆ ಸೈನಿಕರು ಕಾಡತೂಸುಗಳನ್ನು ಬಂದೂಕಿಗೆ ತುಂಬುವ ಮೊದಲು ಹಲ್ಲಿನಿಂದ ಅದನ್ನು ಕಚ್ಚಿ ತೆಗೆಯಬೇಕಾಗಿದ್ದಿತು. ಅದರಲ್ಲಿ ಹಂದಿ ಮತ್ತು ದನದ ಕೊಬ್ಬು ಸವರಿದ್ದರೆ ಹಿಂದೂ ಮತ್ತು ಮುಸ್ಲಿಮ್ ಸೈನಿಕರಿಗೆ ಬಹಳ ತೊಂದರೆಯಾಗುತ್ತಿತ್ತು. ಹಸುಗಳು ಹಿಂದೂಗಳಿಗೆ ಪವಿತ್ರ ಪ್ರಾಣಿ ಮತ್ತು ಹಂದಿಗಳು ಮುಸ್ಲಿಮರಿಗೆ ಕಟ್ಟುನಿಟ್ಟಾಗಿ ನಿಷೇಧವಾದ ಕಾರಣ ಅವರಿಗೆ ಅದನ್ನು ಹಲ್ಲಿನಿಂದ ಕಚ್ಚಿ ತೆಗೆಯಲು ಆಗುತ್ತಿರಲಿಲ್ಲ. ಈ ಬಂಡಾಯವು ಉತ್ತರ ಭಾರತದ ತುಂಬಾ ಹರಡಿತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ ಝಾನ್ಸಿಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಷ್ ಸೈನಿಕರನ್ನು ಕೊಂದಿತು. ಮೀರತ್, ಕಾನ್ಪುರ್, ಲಕ್ನೋ ಮುಂತಾದ ಕಡೆಗಳಲ್ಲಿ ದಂಗೆಯೆದ್ದಿತು. ಬ್ರಿಟಿಷರು ಅಪಾರ ಸೈನ್ಯದ ನೆರವಿನೊಂದಿಗೆ ಈ ದಂಗೆಯನ...