ಪೌರಾಣಿಕ-ಲೇಖನ : shoorpanakhi
ರಾಮಾಯಣದ ಎಲ್ಲಾ ಘಟನೆಗಳಿಗೂ ಮೂ¯ ಕಾರಣರಾದವರು ಇಬ್ಬರು. ಒಬ್ಬಳು ರಾಮನನ್ನು ಕಾಡಿಗಟ್ಟಿದ ಕೈಕೇಯಿಯಾದರೆ ಮತ್ತೊಬ್ಬಳು ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖಿ. ಶೂರ್ಪನಖಿ ಲಂಕಾಧಿಪತಿ ರಾವಣನ ತಂಗಿ. ರಾಮಾಯಣದ ಅನುಸಾರ ಶೂರ್ಪನಖಿಗೆ ಮದುವೆಯಾಗಿರುತ್ತದೆ. ಆದರೆ ಅವಳ ಗಂಡನನ್ನು ರಾವಣನೇ ಕೊಲ್ಲಿಸಿರುತ್ತಾನೆ. ಹಾಗಾಗಿ ಅಣ್ಣನ ಮೇಲಿನ ಕೋಪದಿಂದ ದಂಡಕಾರಣ್ಯದಲ್ಲಿ ತಿರುಗುತ್ತಿರುತ್ತಾಳೆ. ಹೀಗೆ ಅರಣ್ಯದಲ್ಲಿ ತಿರುಗಾಡುತ್ತಿದ್ದಾಗ ಪಂಚವಟಿಯಲ್ಲಿ ಕಂಡ ರಾಮನಿಗೆ ಮನಸೋಲುತ್ತಾಳೆ ಶೂರ್ಪನಖಿ. ಆದರೆ ತನ್ನ ಮನದಾಸೆಯನ್ನು ರಾಮನಲ್ಲಿ ಹೇಳಿ. ನಂತರ ಆ ಬಯಕೆಯು ಕೈಗೂಡದೆ ತನ್ನ ಕಿವಿ-ಮೂಗು ಕಳೆದುಕೊಳ್ಳುತ್ತಾಳೆ. ಆದ ಅಪಮಾನ ತಾಳಲಾಗದೇ ಈ ಬಗ್ಗೆ ತನ್ನ ಅಣ್ಣ ಖರಾಸುರನಿಗೆ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ಧ ಮಾಡಿ ಮಡಿಯುತ್ತಾನೆ. ನಂತರ ಶೂರ್ಪನಖಿಯು ಲಂಕೆಯಲ್ಲಿರುವ ತನ್ನ ಅಣ್ಣ ರಾವಣನಲ್ಲಿಗೆ ದೂರು ಕೊಡಲು ಹೋದವಳು, ಸೀತೆಯ ಗುಣ ಮತ್ತು ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ-ರಾವಣರ ಯುದ್ಧದಲ್ಲಿ ಕೊನೆಯಾಗುತ್ತದೆ. ಕಾಡಿನಲ್ಲಿ ತಿರುಗಾಡುತ್ತಿದ್ದಾಗ ಶೂರ್ಪನಖಿ ರಾಮನನ್ನು ಕಂಡು ಇಷ್ಟ ಪಟ್ಟದ್ದು ತಪ್ಪಲ್ಲ. ಹೆಣ್ಣು-ಗಂಡುಗಳು ಭಿನ್ನಲಿಂಗಿಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆಗೊಳಗಾಗುವುದು ಸಹಜ. ಆದರೆ ಪ್ರೀತಿಸಲು ಅಥವಾ ಪ್ರೇಮ...