"ಜಾಹಿರಾತು ನಿಜವಲ್ಲ"- published in Vishwavani on 13.09.2016
ಲೇಖನ : " ಜಾಹಿರಾತು ನಿಜವಲ್ಲ " ಬಣ್ಣ ಬಣ್ಣದ ಜಾಹೀರಾತಿಗೆ ಮರುಳಾಗದವರು ಯಾರು ? ನಾವೇ ಎಷ್ಟೋ ಸಲ ನಾವು ನೋಡುವ ಪ್ರೊಗ್ರಾಮಿಗಿಂತಲೂ ಕೆಲವು ಜಾಹೀರಾತುಗಳನ್ನು ನೋಡಲಿಕ್ಕಾಗಿ ಟಿವಿ ಮುಂದೆ ಕೂತಿರುತ್ತೀವಿ ಅಲ್ವಾ ? ಆದರೆ ಜಾಹೀರಾತು ಹೇಳುವುದೆಲ್ಲಾ ನಿಜವಾ ? ಉದಾಹರಣೆಗೆ , ತೀರಾ ಇತ್ತೀಚೆಗಷ್ಟೇ ಗ್ರೀನ್ ಟೀ ಎಂಬ ಪ್ರಾಡಕ್ಟ್ ಬಗ್ಗೆ ಟಿವಿಯಲ್ಲಿ ನಾವೆಲ್ಲರೂ ನೋಡ್ತಿದ್ದೀವಿ . ಇದು ಕೊಬ್ಬು ಕರಗಿಸುತ್ತೆ ಅನ್ನುವುದೊಂದೇ ಪಾಯಿಂಟ್ ಸಾಕು ಜನರು ಈ ಹಳ್ಳದಲ್ಲಿ ಬೀಳೋಕ್ಕೆ . ಎಷ್ಟೋ ಜನ ದಿಢೀರ್ ಅಂತ ತಮ್ಮ ಅಭ್ಯಾಸವನ್ನು ಗ್ರೀನ್ ಟೀಗೆ ಬದಲಾಯಿಸಿಕೊಂಡು ಇನ್ನು ನಾವು ಸೇಫ್ ಎಂದುಕೊಂಡರು . ಅವರಿನ್ನೂ ಉಸಿರು ಬಿಟ್ಟಿಲ್ಲ , ಆಗಲೇ ಬಂತು ಬೆಚ್ಚಿ ಬೀಳಿಸುವಂತಹ ಸುದ್ದಿ ಬಂತು ಪತ್ರಿಕೆಗಳಲ್ಲಿ . ಗ್ರೀನ್ ಟೀಯಲ್ಲಿ ಕೇವಲ ಒಳ್ಳೆಯ ಅಂಶಗಳು ಮಾತ್ರವಲ್ಲ , ಕೆಟ್ಟ ಅಂಶಗಳೂ ಸಹ ಇವೆ , ಅದು ಕುಡಿದರೆ ಹಾಗೆ ಆಗುತ್ತೆ , ಹೀಗೆ ಆಗುತ್ತೆ ಅಂತ . ಈ ಸುದ್ದಿ ಓದಿ ಗ್ರೀನ್ ಟೀ ಬಳಸುತ್ತಿದ್ದವರು ಮೂರ್ಚೆ ತಪ್ಪುವುದೊಂದು ಬಾಕಿ . ಆಗ ನಮಗನ್ನಿಸುತ್ತೆ , ಏನೇ ಆದರೂ ನಮ್ಮ ಹಳೆಯ ಅಭ್ಯಾಸವೇ ಯಾವತ...