ಪೋಸ್ಟ್‌ಗಳು

ಜೂನ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Commitement Phobia- part 2 Published in VK 15.06.2017

ಲೇಖನ : " ಪ್ರೀತಿ ಪ್ರೇಮ ಓಕೆ .... ಮದುವೆಗೆ ನಾಟ್ ಓಕೆ "           ಸುಮಾರು ವರ್ಷದ ಕೆಳಗೆ ಹೆಣ್ಣುಮಕ್ಕಳಿಗೆ ಇದ್ದ ಕನಸೊಂದೇ ... ಒಬ್ಬ ಒಳ್ಳೆಯ ಹುಡುಗನನ್ನು ಮದುವೆಯಾಗಿ ಲೈಫಲ್ಲಿ ಸೆಟಲ್ ಆಗಿಬಿಡಬೇಕು ಎನ್ನುವುದು . ಹುಡುಗಿಯರ ಪ್ರಕಾರ ಲೈಫಲ್ಲಿ ಸೆಟಲ್ ಎಂದರೆ ಮದುವೆ ಅಂತಲೇ ಅರ್ಥವಿತ್ತು . ಆದರೆ ಈಗ ಕಾಲ ಬದಲಾಗಿದೆ . ವಯಸ್ಸುಇಪ್ಪತ್ತೈದು ದಾಟಿದರೂ ಯಾಕೋ ಹೆಣ್ಣುಮಕ್ಕಳು ಮದುವೆಗೆ ಮನಸ್ಸು ಮಾಡುತ್ತಿಲ್ಲ . ತಮ್ಮ ಓದಿಗೆ , ಕೆಲಸಕ್ಕೆ ಕೊಡುವ ಮಹತ್ವವನ್ನು ಅವರು ತಮ್ಮ ಮದುವೆಗೆ ನೀಡುತ್ತಿಲ್ಲ . ಮದುವೆ ಎಂದರೆ ಈಗ ಅವರಿಗೆ ತಮ್ಮ ಜೀವನದಲ್ಲಿ ನಡೆಯಲೇಬೇಕಾದ ಒಂದು ಪ್ರಕ್ರಿಯೆ ಆಗಿಲ್ಲ . ಅದಿಲ್ಲದೆಯೂ ಬದುಕಬಹುದು ಎಂದು ತೋರಿಸಲು ಹೊರಟಿದ್ದಾರೆ . ಸಾಮಾನ್ಯವಾಗಿ ಮಹಾನಗರಗಳಲ್ಲಿ ಒಂಟಿಯಾಗಿ ವಾಸಿಸುವ ಹೆಣ್ಣುಮಕ್ಕಳಿಗೆ ಧೈರ್ಯ , ಆತ್ಮವಿಶ್ವಾಸ ಜಾಸ್ತಿ . ತಾನೇ ದುಡಿದು ತಿನ್ನುವುದರಿಂದ ಮತ್ತು ತನ್ನ ಬಾಳನ್ನು ತಾನೇ ರೂಪಿಸಿಕೊಳ್ಳುವುದರಿಂದ ಬೇರೆ ಯಾರೋ ಬಂದು ತಮ್ಮ ಬಾಳು ಬೆಳಗುತ್ತಾರೆ ಎಂಬ ಮೂಢನಂಬಿಕೆ ಅವರಿಗಿಲ್ಲ . ಹಾಗಾದರೆ ಹೆಣ್ಣುಮಕ್ಕಳು ಗಂಡಸರ ಸಾಹಚರ್ಯವಿಲ್ಲದೇ ಒಂಟಿಯಾಗಿ ಬದುಕಲು ಹೊರಟಿದ್ದಾರೆಯೇ ? ಮದುವೆ ಮಾತ್ರ ಬೇಡ :           ಹಾಗೇನೂ ಇಲ್ಲ . ಅವರು ಮದುವೆ ಮಾತ್ರ ಬೇಡ ಎನ್ನುತ್ತಿ