Commitment Phobia: Published in VK 25.06.2017

ಅವರೊಂದು ರೀತಿಯ ಸದಾ ಅತೃಪ್ತರು. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸಂಬಂಧಗಳಲ್ಲಂತೂ ನಂಬಿಕೆ ಎನ್ನುವುದೇ ಇಲ್ಲ. ಸದಾ ಪರಿಪೂರ್ಣತೆಯ ಹುಡುಕಾಟದಲ್ಲಿರುವ ಅವರಿಗೆ ಎಲ್ಲಿಯೂ ಪೂರ್ಣತೆ ಲಭ್ಯವಾಗದೇ ಕೈಗೆ ಸಿಕ್ಕಿದ್ದನ್ನೂ ಸಹ ದೂರ ತಳ್ಳುತ್ತಾರೆ. ತಮ್ಮ ಜೀವನ ಸಂಗಾತಿಯೊಂದಿಗೆ ಏಕಾಂತದಲ್ಲಿ ಇದ್ದಾಗಲೂ ಅವರಿಂದ ಹೇಗೆ ಬಿಡಿಸಿಕೊಳ್ಳುವುದು ಎಂದೇ ಯೋಚಿಸುತ್ತಿರುತ್ತಾರೆ. ಯಾರೊಂದಿಗೂ ಭಾವನಾತ್ಮಕವಾದ ಸಂಬಂಧ ಬೆಳೆಸಿಕೊಳ್ಳದೇ ಅಂತರ ಕಾಯ್ದುಕೊಂಡಿರುತ್ತಾರೆ. ಸ್ವಲ್ಪ ಭಿನ್ನಾಭಿಪ್ರಾಯ ಬಂದರೂ ಸಾಕು ಸಂಬಂಧವನ್ನೇ ಕಡಿದುಕೊಳ್ಳುತ್ತಾರೆ.

ಇದೊಂದು ರೀತಿಯ ಫೋಬಿಯಾ:

ಹಾಗಂತ ಅವರಿಗೆ ಭಾವನೆಗಳಿಲ್ಲವೆಂದಲ್ಲ. ಅವರಿಗೂ ಭಾವನೆಗಳಿವೆ, ಭಾವನೆ ಹಂಚಿಕೊಳ್ಳುವ ಮನಸ್ಸಿದೆ, ತಮ್ಮ ಭಾವನೆಯನ್ನು ಕೇಳುವ ಸಂಗಾತಿಯ ಅವಶ್ಯಕತೆಯೂ ಇದೆ. ಪ್ರೀತಿ, ಪ್ರೇಮ, ಕಾಮ ಎಲ್ಲದರಲ್ಲಿಯೂ ಆಸಕ್ತಿಯಿದೆ. ಆದರೆ ಇದಕ್ಕಾಗಿ ಯಾರನ್ನೂ ಬಿಟ್ಟಿರಲಾರದಂತೆ ಹಚ್ಚಿಕೊಳ್ಳಲು ಅವರು ತಯಾರಿಲ್ಲ. ಅಲ್ಲದೇ ತಮ್ಮ ಸಂಗಾತಿ ತಮ್ಮನ್ನು ಗಾಢವಾಗಿ ಇಷ್ಟ ಪಡುತ್ತಿದ್ದಾರೆ ಎಂದು ಗೊತ್ತಾದರೆ ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಿ ಬಿಡುತ್ತಾರೆ.
          
ಒಂದು ರೀತಿಯ ಭಯ ಅವರಿಗೆ!!!
          
ಭಯ ಹೆಣ್ಣು ಗಂಡು ಇಬ್ಬರನ್ನೂ ಕಾಡುತ್ತದೆ. ಎಲ್ಲಿ ಒಬ್ಬರನ್ನೊಬ್ಬರು ಹಚ್ಚಿಕೊಂಡರೆ ಬಿಟ್ಟಿರಲಾಗುವುದಿಲ್ಲವೋ ಎಂಬ ಭಯ... ಏಕೆಂದರೆ ಪರಿಪೂರ್ಣತೆಯ ಹುಡುಕಾಟದಲ್ಲಿರುವ ಅವರಿಗೆ ಒಬ್ಬರ ಜೊತೆಯೇ ಜೀವನಪೂರ್ತಿ ಹೊಂದಿಕೊಂಡು ಬದುಕಿರುವುದು ಸಾಧ್ಯವಿಲ್ಲ. ಅಲ್ಲದೇ ಪಡೆದುಕೊಳ್ಳುವಾಗ ಇರುವ ಕುತೂಹಲ ಪಡೆದ ಮೇಲೆ ಇರುವುದಿಲ್ಲ. ಹಳೆಯದನ್ನು ಬಿಟ್ಟು ಹೊಸತನ್ನು ಪಡೆಯಲು ಹೊರಡುವಾಗ ಭಾವನಾತ್ಮಕ ಬಳ್ಳಿಗಳು ಕಾಲಿಗೆ ತೊಡರಿದರೆ ಎಂಬ ಭಯ ಅವರದ್ದು...
          
ಈಗಿನ ಯುವಜನತೆಯ ಯೋಚನೆಯೇನೆಂದರೆ ಯಾರೊಡನೆ ಸಂಬಂಧ ಬೆಳೆಸುತ್ತಾರೆಯೋ ತಮಗೆ ಬೇಡವೆಂದಾಗ ಅದನ್ನು ಕಿತ್ತುಹಾಕುವಂತಿರಬೇಕು. ಅಲ್ಲಿ ಯಾವುದೇ ಬಂಧನ ಇರಬಾರದು. ಒಬ್ಬರನ್ನು ಹೊಂದುವವರೆಗೆ ಮಾತ್ರವೇ ಅವರ ಕುತೂಹಲ. ಹೊಂದಿದ ಮೇಲೆ ಮತ್ತೊಬ್ಬರನ್ನು ಹೊಂದುವ ಆಸೆ. ಕಾರಣದಿಂದಾಗಿ ಅವರು ಬೇಡವೆಂದಾಕ್ಷಣ ಕೇವಲ ಅವರ ಕೆಟ್ಟ ಅಭ್ಯಾಸಗಳೇ ಎದ್ದು ಕಾಣತೊಡಗುತ್ತವೆ. ಹೊಂದಾಣಿಕೆ ಇಲ್ಲದ ಕಡೆ ಇರಬಾರದು ನಿಜ. ಆದರೆ ಪೋಬಿಯಾಗೆ ಒಳಗಾದವರು ಬೇಕಂತಲೇ ತಮ್ಮ ಸಂಗಾತಿಗಳಲ್ಲಿ ಕೆಟ್ಟ ಗುಣಗಳನ್ನು ಮಾತ್ರ ಹೊರತೆಗೆಯುತ್ತಾರೆ. ನೆಪದಿಂದ ದೂರ ಸರಿಯುತ್ತಾರೆ. ಆತ್ಮೀಯತೆಯನ್ನೂ ಅನುಮಾನದಿಂದ ನೋಡುವ ಕೆಟ್ಟ ಚಾಳಿ ಇವರದ್ದು.

ಬಾಲ್ಯದ ಭಯಾನಕ ಅನುಭವ      
          
ರೀತಿಯ ನಡವಳಿಕೆಗೆ ಅವರ ಬಾಲ್ಯದಲ್ಲಿ ಆಗಿದ್ದ ಕೆಟ್ಟ ಅನುಭವಗಳೇ ಕಾರಣ. ಸದಾ ಜಗಳವಾಡುವ ಅಥವಾ ಒಬ್ಬರನ್ನೊಬ್ಬರು ಮಾತನಾಡಿಸದ ಅಪ್ಪ-ಅಮ್ಮನನ್ನು ನೋಡುತ್ತಾ ಬೆಳೆದ ಮಗು ಕ್ರಮೇಣ ಯಾರನ್ನೂ ನಂಬದ ಸ್ಥಿತಿಗೆ ತಲುಪುತ್ತದೆ. ಕ್ಷಣದಲ್ಲಿ ಏನಾಗುತ್ತದೆಯೋ, ಯಾವಾಗ ಅವರಿಬ್ಬರೂ ಮತ್ತೆ ಕಿತ್ತಾಡುತ್ತಾರೋ ಎಂದು ಅರಿಯದೇ ಕ್ಷಣಕ್ಷಣವೂ ಆತಂಕದಿಂದಲೇ ಕಳೆಯುತ್ತದೆ. ಅನುಭವವು ಸಾಮಾಜಿಕ ಭದ್ರತಾ ವ್ಯವಸ್ಥೆಯಾದ ಮದುವೆಯ ಮೇಲೆಯೂ ಅಪನಂಬಿಕೆ ಇಡುವ ಹಾಗೆ ಮಾಡುತ್ತದೆ. ಎಷ್ಟೇ ವಯಸ್ಸಾದರೂ ಭಯ ಮನದೊಳಗೇ ಅವಿತು ಕೂತು ತಾವೂ ಸಹ ಮದುವೆಯಾಗಲು ಹಿಂದೇಟು ಹಾಕುವಂತೆ ಮಾಡುತ್ತದೆ.

ಫೋಬಿಯಾಕ್ಕೆ ಮದ್ದಿಲ್ವಾ?
          
ಯಾಕಿಲ್ಲ? ಫೋಬಿಯಾಕ್ಕೆ ಒಳಗಾದವರು ಖಂಡಿತಾ ಇದರಿಂದ ಹೊರಬಂದು ಎಲ್ಲರಂತೆ ಸಾಮಾನ್ಯವಾದ ಜೀವನ ನಡೆಸಬಹುದು.

*** ಕ್ಷಣ ಬದುಕನ್ನು ಆನಂದಿಸಿ. ನಿಮ್ಮೊಂದಿಗೆ ಇರುವವರೊಂದಿಗೆ ಬೇರೇನೂ ಯೋಚಿಸದೇ ಕೇವಲ ನಿಮ್ಮಿಬ್ಬರ ಸುಖ ಸಂತೋಷಗಳನ್ನು ಮಾತ್ರ ಯೋಚಿಸಿ.

*** ಪ್ರತಿನಿತ್ಯ ಧ್ಯಾನದಲ್ಲಿ ತೊಡಗಿಕೊಳ್ಳಿ. ಇದು ಚಂಚಲವಾದ ಮನಸ್ಸನ್ನು ಶುದ್ಧಿಗೊಳಿಸಿ ಅನಗತ್ಯ ಆತಂಕ ನಿವಾರಿಸಿ ಸಮಾಧಾನ ನೀಡುತ್ತದೆ.

*** ಮೊಟ್ಟಮೊದಲನೆಯದಾಗಿ ಸಂಗಾತಿಯೊಡನೆ ಆತ್ಮೀಯತೆ ಬೆಳೆಸಿಕೊಳ್ಳಿ. ಆತ್ಮೀಯತೆ ಇದ್ದಲ್ಲಿ ಅಪನಂಬಿಕೆಗೆ ಜಾಗ ಇರುವುದಿಲ್ಲ. ಮುಕ್ತ ಮನಸ್ಸಿನಿಂದ ಅವರೊಡನೆ ಭಾವನೆಗಳನ್ನು ಹಂಚಿಕೊಂಡಾಗ ಸಿಗುವ ಆನಂದ ಮತ್ತೆಲ್ಲೂ ದೊರಕಲು ಸಾಧ್ಯವಿಲ್ಲ.

*** ಎಲ್ಲಕ್ಕಿಂತ ಹೆಚ್ಚಾಗಿ ಯಾರೂ ಪರಿಪೂರ್ಣರಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಿ...!


           **********

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)