ಕವನ: "ಹೆಣ್ಣೆಂಬ ಹೆಮ್ಮೆ"

ಕವನ: "ಹೆಣ್ಣೆಂಬ ಹೆಮ್ಮೆ"

ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ ನಾನು..

ಏಕೆಂದರೆ....

ಬಸ್ಸಿನಲ್ಲಿ ಪುರುಷರ ಸೀಟಿನಲ್ಲಿ ಕುಳಿತಿದ್ದರೂ
ಯಾರೂ ಎಬ್ಬಿಸುವುದಿಲ್ಲವೆಂದು ಹೆಮ್ಮೆ ಪಡುತ್ತೇನೆ..

ಹಬ್ಬಗಳಂದು ಆಫೀಸಿಗೆ ಯೂನಿಫಾರಂ ಬಿಟ್ಟು ಕಲರ್ ಡ್ರೆಸ್ ಹಾಕಿ ಹೋದರೂ
ಯಾರೂ ಕೇಳುವುದಿಲ್ಲವೆಂದು ಹೆಮ್ಮೆ ಪಡುತ್ತೇನೆ..

ಎಲ್ಲರಿಗೂ ಸದಾ ಬೈಯ್ಯುವ ಬಾಸ್ ಹೆಣ್ಮಕ್ಕಳಿಗೆ ಬೈದರೆ ಒಳ್ಳೆಯದಾಗುವುದಿಲ್ಲವೆಂದು
ರೂಲ್ಸ್ ಮಾಡಿಕೊಂಡಿರುವುದಕ್ಕಾಗಿ ಹೆಮ್ಮೆ ಪಡುತ್ತೇನೆ..

ಗಂಡನಿಗೆ ಎಷ್ಟೇ ಸುಸ್ತಾಗಿದ್ದರೂ ನನ್ನೊಡನೆ ಬರುವಾಗ ಲಗ್ಗೇಜ್ ಗಳನ್ನು
ಅವರೇ ಹೊರುತ್ತಾರೆಂದು ಹೆಮ್ಮೆ ಪಡುತ್ತೇನೆ..

ಕೊನೆಯದಾಗಿ ನನಗೆ ಸಾರ್ವಜನಿಕವಾಗಿ ಕಣ್ಣೀರು ಹಾಕಲು
ಅವಕಾಶವಿದೆಯೆಂದು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ..


***********************

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮುದ್ದಣ ಮನೋರಮೆಯ ಸಲ್ಲಾಪ : ರಾಮಾಶ್ವಮೇಧಂ

ಭಾಷೆಯ ಉಗಮ (origin of language) : ಎಂ.ಎ.ಕನ್ನಡ