ಲೇಖನ: "12ನೇ ಶತಮಾನದ ಬಾಹ್ಯಾಕಾಶ ಮಾನವ" ANCIENT ASTRONAUT Published In MANASA- Oct 2017
ಲೇಖನ:
"12ನೇ ಶತಮಾನದ
ಬಾಹ್ಯಾಕಾಶ ಮಾನವ"
ಕೆಲವು
ದಿನಗಳ
ಕೆಳಗೆ
ನನ್ನ
ಮಿತ್ರರೊಬ್ಬರು
ಫೇಸ್ಬುಕ್ಕಿನಲ್ಲಿ
"ಹಳೆಯಬೀಡಿನ
ದೇವಸ್ಥಾನದ
ಕಂಬದಲ್ಲಿ
ಬಾಹ್ಯಾಕಾಶ
ಮನುಷ್ಯನ
ಚಿತ್ರವಿದೆಯಂತೆ,
12ನೇ ಶತಮಾನದಲ್ಲಿಯೇ ಇದರ
ಬಗ್ಗೆ
ಅರಿವು
ಇದ್ದದ್ದು ಬಹಳ
ಸೋಜಿಗ" ಅಂತ
ಅದರ
ಚಿತ್ರ
ಸಮೇತ
ಪೋಸ್ಟ್
ಹಾಕಿದ್ದರು. ಆ ಚಿತ್ರವೋ
ಇಪ್ಪತ್ತನೆಯ
ಶತಮಾನದಲ್ಲಿ
ಬಾಹ್ಯಾಕಾಶಕ್ಕೆ
ಹೋಗುವ
ಸ್ಪೇಸ್
ಸೂಟ್
ಧರಿಸಿದ
ಮನುಷ್ಯನದ್ದು!!
ಇದು
ಹೇಗೆ
ಸಾಧ್ಯ? ಆಗಿನ
ಜನರು
ಮುಂದಿನ
ಮಾನವ
ಜನಾಂಗ
ಸ್ಪೇಸ್
ಗೆ
ಹೋಗಬಲ್ಲರು
ಅಂತ
ಊಹಿಸಬಲ್ಲರೇ
ಹೊರತು, ಇಪ್ಪತ್ತನೇ
ಶತಮಾನದಲ್ಲಿ
ಜನರ
ಉಡುಗೆ
ತೊಡುಗೆಗಳು
ಹೀಗೆಯೇ
ಇರುತ್ತದೆ
ಅಂತ
ಖಡಾಖಂಡಿತವಾಗಿ
ಊಹಿಸಲು
ಸಾಧ್ಯವೇ? ಆ ಪೋಸ್ಟ್
ಓದಿದ
ಜನರೂ
ಸಹ
ಹಿಂದೆ
ಮುಂದೆ
ಯೋಚಿಸದೇ
"ಹೌದಾ? ನಿಜವಾ? ಅದ್ಭುತ!" ಅಂತ
ಪ್ರತಿಕ್ರಿಯಿಸುತ್ತಿದ್ದರು.
ಆದರೆ
ಗೊತ್ತಿರದೇ ಇರುವ
ವಿಷಯದ
ಬಗ್ಗೆ
ಪ್ರತಿಕ್ರಿಯಿಸುವುದು
ಎಷ್ಟು
ಸರಿ
ಅಂತ
ಆ ಚಿತ್ರದ
ಸತ್ಯಾಸತ್ಯತೆಯನ್ನು
ತಿಳಿಯಲು
ಹೊರಟೆ.
ಬಾಹ್ಯಾಕಾಶ
ಪ್ರವಾಸ
ಎಂಬ
ಪರಿಕಲ್ಪನೆ
ತೀರಾ
ಇತ್ತೀಚಿನದ್ದು.
ಅಂದರೆ
ಇಪ್ಪತ್ತನೇ
ಶತಮಾನದ್ದು. ಹಾಗಾದರೆ
ನಾಗರೀಕತೆ
ಬೆಳೆಯುವ
ಮೊದಲೇ
ಮಾನವನಿಗೆ
ಅಂತರಿಕ್ಷ
ಪ್ರವಾಸದ
ಕಲ್ಪನೆ
ಇರಲಿಲ್ಲವೇ? ಖಂಡಿತಾ
ಇತ್ತು. ತಾನು
ಬಾಹ್ಯಾಕಾಶಕ್ಕೆ
ಹೋಗದಿದ್ದರೂ,
ಬಾಹ್ಯಾಕಾಶಕ್ಕೆ
ಹೋಗುವವರನ್ನು
ಸನಾತನ
ಮಾನವ
ಪ್ರತಿದಿನ
ನೋಡುತ್ತಿದ್ದ.
ಹೇಗಂತೀರಾ? ನಾವು
ಪೂಜಿಸುತ್ತಿದ್ದ
ದೇವರು
ಯಾವಾಗಲೂ
ಅಂತರಿಕ್ಷದಲ್ಲಿಯೇ
ಓಡಾಡುತ್ತಿದ್ದದು
ಅಲ್ಲವೇ? ಅವರು
ನೆಲೆಸಿದ್ದು
ಬೇರೆ
ಲೋಕದಲ್ಲಿ, ಅವರು
ಹೋಗುತ್ತಿದ್ದುದು
ಬೇರೆ
ಲೋಕಗಳಿಗೆ. ಅಂದರೆ
ಭೂಮಿಯನ್ನು
ಬಿಟ್ಟು
ಅವರು
ಬೇರೆ
ಗ್ರಹ
ಅಥವಾ
ಲೋಕಕ್ಕೆ
ಪ್ರಯಾಣಿಸುತ್ತಿದ್ದರು.
ಹಾಗಾದರೆ ಮಾನವನಿಗೆ
ಸಾಧ್ಯವಾಗದ್ದು
ದೇವರಿಗೆ
ಮಾತ್ರ
ಸಾಧ್ಯವಾದದ್ದು
ಹೇಗೆ?
ಎರಿಕ್
ವಾನ್
ಡಾನಿಕೇನ್
ಎಂಬುವವನು
ತನ್ನ
ಪುಸ್ತಕವಾದ "ಚಾರಿಯೆಟ್ಸ್
ಆಫ್
ಗಾಡ್ಸ್" ನಲ್ಲಿ
ಈ ಬಗ್ಗೆ
ಬರೆದಿದ್ದಾನೆ.
ಅಂತರಿಕ್ಷ
ಜೀವಿಗಳು
(ಅವುಗಳ
ವಿಶಿಷ್ಠ
ಶಕ್ತಿಯಿಂದಾಗಿ
ನಾವು
ಅವುಗಳನ್ನು
ದೇವರು
ಎಂದು
ತಿಳಿದಿದ್ದೆವು
ಎಂಬುದು
ಲೇಖಕರ
ಅಭಿಪ್ರಾಯ) ಭೂಮಿಗೆ
ಆಗಾಗ
ಭೇಟಿ
ನೀಡುತ್ತಿದ್ದವು
ಮತ್ತು
ಹಾಗೆ
ಬರುವಾಗ
ಅವು
ಅಂತರಿಕ್ಷದಲ್ಲಿಯೇ
ಓಡಾಡುತ್ತಿದ್ದವು.
ಅವುಗಳು
ಭೂಮಿಗೆ
ಭೇಟಿ
ನೀಡುತ್ತಿದ್ದ
ಸಂದರ್ಭದಲ್ಲಿ
ಮನುಷ್ಯ
ಇನ್ನೂ
ಕಾಡು
ಮನುಷ್ಯನಾಗಿದ್ದ.
ಈಗ
ನಮಗೇನು
ತಂತ್ರಜ್ಞಾನ
ಸಿಕ್ಕಿದೆ, ನಾವು
ಮುಂದುವರೆದ
ನಾಗರೀಕ
ಜೀವಿ
ಅನ್ನಿಸಿಕೊಂಡಿದ್ದೇವೆ
ಇವೆಲ್ಲವೂ
ಆ ಅಂತರಿಕ್ಷ
ಜೀವಿಗಳದ್ದೇ
ಕೊಡುಗೆಯಾಗಿದೆ.
ಆದರೆ
ಅವುಗಳು
ಅಂದು
ನಮಗೆ
ನೀಡಿದ್ದ
ತಂತ್ರಜ್ಞಾನ
ಫಲಪ್ರದವಾಗಲು
ನಾವು
ಇಪ್ಪತ್ತನೇ
ಶತಮಾನದವರೆಗೂ
ಕಾಯಬೇಕಾಯಿತು.
ಅಂದ
ಮೇಲೆ
ಯಾವ
ಮುನ್ಸೂಚನೆಯೂ
ಇಲ್ಲದೇ
ಮನುಷ್ಯ
ಗಾಳಿ
ಮತ್ತು
ನೀರಿನಲ್ಲಿ
ಚಲಿಸಬಲ್ಲ
ವಾಹನ
ಕಂಡುಹಿಡಿಯುವ
ಬಗ್ಗೆಯೇ
ಅರಿವು
ಇರದೇ
ಇದ್ದ
ಆ ಕಾಲದಲ್ಲಿಯೇ
, ತನ್ನ ಮುಂದಿನ ಜನಾಂಗ
ಹತ್ತಾರು
ಶತಮಾನಗಳ
ನಂತರ
ಬಾಹ್ಯಾಕಾಶಕ್ಕೆ
ಹೋಗುವಾಗ
ಹೀಗೆಯೇ
ತನ್ನ
ವಸ್ತ್ರ
ವಿನ್ಯಾಸ
ಮಾಡಿಕೊಳ್ಳುತ್ತದೆ
ಎಂದು
ಹೇಗೆ
ತಾನೇ
ಊಹಿಸಲು
ಸಾಧ್ಯ?
ಇದರ
ಬಗ್ಗೆ
ಹೆಚ್ಚಿನ
ಸಂಶೋಧನೆ
ನಡೆಸಿದಾಗ
ತಿಳಿದು
ಬಂದ
ವಿಷಯವೇನೆಂದರೆ,
ಆ ಬಾಹ್ಯಾಕಾಶ
ಮನುಷ್ಯನ
ಚಿತ್ರ
ಇರುವುದು
ಸ್ಪೇನಿನ
ಸಲಮಂಕಾ
ಎಂಬ
ಊರಿನ
ಶತಮಾನದಷ್ಟು
ಹಳೆಯದಾದ
ಚರ್ಚ್
ಒಂದರ
ಗೋಡೆಯ
ಮೇಲೆ. ಮೊದಲೇ
ತಿಳಿಸಿದಂತೆ
ಹಳೆಯಬೀಡಿನಲ್ಲಲ್ಲ.
ಆದರೆ
ಆ ಚರ್ಚ್
ನಿರ್ಮಾಣವಾಗಿರುವುದು
ಹನ್ನೆರಡನೇ
ಶತಮಾನದಲ್ಲಿ.
ಅಂದ
ಮೇಲೆ
ಹನ್ನೆರಡನೇ
ಶತಮಾನದ
ಚರ್ಚಿನ
ಗೋಡೆಯ
ಮೇಲೆ
ಇಪ್ಪತ್ತನೇ
ಶತಮಾನದ
ಬಾಹ್ಯಾಕಾಶ
ಮಾನವನ
ಚಿತ್ರ
ಹೇಗೆ
ಮೂಡಲು
ಸಾಧ್ಯ
ಅಂತ
ಎಲ್ಲರು
ತಲೆಕೆಡಿಸಿಕೊಂಡರು.
ಒಟ್ಟಿನಲ್ಲಿ
ತಿಳಿಯುತ್ತಾ
ಹೋದಷ್ಟೂ
ವಿಷಯ
ಜಟಿಲವಾಗುತ್ತಲೇ
ಹೋಯಿತು.
ಕೊನೆಗೆ
ತಿಳಿದುಬಂದದ್ದೇನೆಂದರೆ,
ಸ್ಪೇನಿನ
ಸಲಮಂಕಾದಲ್ಲಿ
ಒಂದೇ
ರೀತಿಯ
ಎರಡು
ಚರ್ಚುಗಳಿದ್ದವು.
ಮೊದಲನೇ
ಚರ್ಚ್
ಅನ್ನು
ಹನ್ನೆರಡನೇ
ಶತಮಾನದಲ್ಲಿ
ನಿರ್ಮಾಣ
ಮಾಡಿದ್ದರೆ, ಮತ್ತೊಂದನ್ನು
ಹದಿನಾರನೇ
ಶತಮಾನದಲ್ಲಿ
ನಿರ್ಮಾಣ
ಮಾಡಲಾಗಿತ್ತು.
ನಾವು
ಕಂಡ
ಬಾಹ್ಯಾಕಾಶ
ಮನುಷ್ಯನ
ಚಿತ್ರ
ಇರುವುದು
ಈ ಹೊಸದಾಗಿ
ನಿರ್ಮಾಣ
ಮಾಡಿದ
ಚರ್ಚಿನಲ್ಲಿ
ಎಂದು
ಗೊತ್ತಾಯಿತು.
ಎಲ್ಲರೂ
'ಉಫ್' ಎಂದು
ನೆಮ್ಮದಿಯ
ನಿಟ್ಟುಸಿರು
ಬಿಟ್ಟರು. ಆದರೆ
ಸಮಸ್ಯೆ
ಇನ್ನೂ
ಬಗೆಹರಿದಿರಲಿಲ್ಲ.
ಇಪ್ಪತ್ತನೇ
ಶತಮಾನದ
ವ್ಯಕ್ತಿಯ
ಉಡುಗೆ
ತೊಡುಗೆಗಳನ್ನು
ಹದಿನಾರನೇ
ಶತಮಾನದಲ್ಲಿಯೇ
ಅಷ್ಟು
ನಿಖರವಾಗಿ
ಹೇಗೆ
ಊಹಿಸಲು
ಸಾಧ್ಯ
ಎಂಬ
ಅನುಮಾನ
ಮತ್ತೊಮ್ಮೆ
ಶುರುವಾಯಿತು.
ಈ ಬಗ್ಗೆ
ಶೋಧನೆ
ನಡೆಸಿದ
ಪೋರ್ಚುಗೀಸಿನ
ಪತ್ರಿಕೆಯೊಂದು
ಜಗತ್ತಿನ
ತಲೆಕೆಡಿಸಿದ
ಈ ಬಾಹ್ಯಾಕಾಶ
ಮನುಷ್ಯನ
ರಹಸ್ಯವನ್ನು
ಕೊನೆಗೂ
ಹೊರಗೆಡವಿತು.
1992 ರಲ್ಲಿ ಸ್ಪೇನಿನ
ಹೊಸ
ಚರ್ಚಿನ
ನವೀಕರಣ
ನಡೆಯುವಾಗ
ಚರ್ಚಿನ
ಗೋಡೆಯ
ಮೇಲೆ
ಹೊಸದಾಗಿ
ಕೆಲವು
ಕೆತ್ತನೆಗಳನ್ನು
ಸೇರಿಸಲಾಗಿತ್ತು.
ಅದರಲ್ಲಿ
ಈ ಬಾಹ್ಯಾಕಾಶ
ಮನುಷ್ಯನದ್ದೂ
ಒಂದು. ಪುರಾತನ
ಮತ್ತು
ಆಧುನಿಕತೆಗಳ
ಮಿಶ್ರಣ
ಮಾಡುವಾಗ
ಕೆತ್ತನೆ
ಮಾಡುವವನೊಬ್ಬ
ಆಧುನಿಕತೆಯ
ಸಂಕೇತಕ್ಕಾಗಿ
ಸ್ಪೇಸ್
ಸೂಟ್
ಧರಿಸಿದ್ದ
ಈ ಬಾಹ್ಯಾಕಾಶ
ಮನುಷ್ಯನ
ಚಿತ್ರವನ್ನು
ಆರಿಸಿದ್ದ. ಆದರೆ
ಈ ವಿಷಯ
ಅರಿತುಕೊಳ್ಳದೇ
ಈ ಒಂದು
ಚಿತ್ರ
ಜಗತ್ತಿನೆಲ್ಲೆಡೆ
ಸಂಚಲನ
ಮೂಡಿಸಿ
ಚರ್ಚೆಗೆ
ಗ್ರಾಸವಾದದ್ದು
ವಿಶೇಷ
ಸಂಗತಿ.
**********