ಕವನ: "ಆತ್ಮ"

ನಾ ಹೆಣ್ಣಲ್ಲ
ನಾ ಗಂಡಲ್ಲ
ಆದರೂ ಗಂಡೆಂದು ಹೆಣ್ಣೆಂದು
ಅಭಿಮಾನ ಪಡುತ್ತೇನೆ..

ನನಗೆ ಶರೀರವಿಲ್ಲ
ಅಹಂಕಾರವಿಲ್ಲ
ಆದರೂ ಮಾಡಿದ್ದೆಲ್ಲ ನಾನೆಂದು
ಅಭಿಮಾನ ಪಡುತ್ತೇನೆ..

ನನಗೆ ಹೆಸರಿಲ್ಲ
ಅಲಂಕಾರವಿಲ್ಲ
ಆದರೂ ನಾನು ಚಿರಂಜೀವಿಯೆಂದು
ಅಭಿಮಾನ ಪಡುತ್ತೇನೆ..

ನನಗೆ ಸಂಬಂಧಗಳಿಲ್ಲ
ನನಗೆಂದು ಯಾರಿಲ್ಲ
ಆದರೂ ಎಲ್ಲರೂ ನನ್ನವರೆಂದು
ಅಭಿಮಾನ ಪಡುತ್ತೇನೆ..


ನನಗೆ ಪ್ರೀತಿಯಿಲ್ಲ
ದ್ವೇಷ ಮತ್ಸರಗಳಿಲ್ಲ
ಆದರೂ ರಾಗ-ದ್ವೇಷಗಳಲ್ಲಿ
ಮುಳುಗಿ ನರಳುತ್ತೇನೆ..

ನನಗೆ ಹಿಂದಿಲ್ಲ
ಮುಂದಿಲ್ಲ
ಆದರೂ ಎಲ್ಲೆಡೆ ನಾನಿದ್ದೇನೆಂದು
ಭ್ರಮೆ ಪಡುತ್ತೇನೆ..

ನನಗೆ ಹುಟ್ಟಿಲ್ಲ
ಸಾವಿಲ್ಲ
ಆದರೂ ಎಲ್ಲರ ಮನಸ್ಸೂ ನಾನೆಂದು
ಅಭಿಮಾನ ಪಡುತ್ತೇನೆ..

* * * * * * * * * * * * * * * * * * * * * * * *
ಕೆ.ಎ.ಸೌಮ್ಯ

ಮೈಸೂರು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)