ಕವನ: "ನಾನು-ನೀನು"


ನೀನೇ ನಾನಾಗಿ
ನಾನೇ ನೀನಾಗಿ
ನಿನ್ನೊಳಗೆ ನಾನೋ
ನನ್ನೊಳಗೆ ನೀನೋ
ಅರಿಯುವ ಪರಿಯೆಂತು ಗೆಳೆಯಾ..

ನನ್ನಲ್ಲಿ ನಾನಿರದೆ
ನಿನ್ನಲ್ಲಿ ನೀನಿರದೆ
ನನ್ನಲ್ಲಿರುವ ನಿನ್ನನ್ನು
ನಿನ್ನಲ್ಲಿರುವ ನನ್ನನ್ನೂ
ಗುರುತಿಸುವ ಪರಿಯೆಂತು ಗೆಳೆಯಾ..

ಕನ್ನಡಿಯ ಮುಂದೆ
ನಿನ್ನ ಪ್ರತಿರೂಪ
ನನ್ನ ಕಣ್ಣಿನಲ್ಲಿ
ನಿನ್ನದೇ ಪ್ರತಿಬಿಂಬ
ಸದಾ ನನ್ನಲ್ಲೇ ಇರುವ ನಿನ್ನನ್ನು
ಕಳೆದುಕೊಳ್ಳುವ ಪರಿಯೆಂತು ಗೆಳೆಯಾ...

ನಾ ನಕ್ಕರೆ ಅದಕೆ ನೀ ಕಾರಣ
ಅತ್ತರೂ ನೀನೇ ಕಾರಣ
ಮೈಮರೆಯಲು ಬೇಕು ನಿನ್ನ ಧ್ಯಾನ
ನನ್ನ ಮಾತೇ ಕೇಳದ ನನ್ನ ಮನಸು
ನಿನ್ನ ವಶವಾಗಿರುವ ಬಗೆಯನ್ನು
ತಿಳಿಸುವೆಯಾ ಗೆಳೆಯಾ....

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾರತೀಯ ಕಾವ್ಯ ಮೀಮಾಂಸೆ : ವಿವಿಧ ಘಟ್ಟಗಳು (ಎಂ.ಎ.ಕನ್ನಡ)