ಪೋಸ್ಟ್‌ಗಳು

ಮತ್ತೊಂದು ಪ್ರಪಂಚ ನಿಜಕ್ಕೂ ಇದೆಯೇ?

ಒಂದು ಕತ್ತಲ ರಾತ್ರಿ .            ಒಬ್ಬಳು ಹುಡುಗಿ ಒಂಟಿಯಾಗಿ ಕಾರ್ ಡ್ರೈವ್ ಮಾಡುತ್ತಾ ಬರುತ್ತಿದ್ದಾಳೆ . ಇದ್ದಕ್ಕಿದ್ದಂತೆ ಕಾರಿನಲ್ಲಿದ್ದ ರೇಡಿಯೋದಲ್ಲಿ ಈಗ ನಾವಿರುವ ಭೂಮಿಯ ಪಕ್ಕದಲ್ಲೇ ಮತ್ತೊಂದು ಭೂಮಿ ಕಾಣಿಸಿಕೊಂಡಿರುವ ಬಗ್ಗೆ ಸುದ್ದಿ ಪ್ರಸಾರವಾಗುತ್ತೆ . ಹೌದಾ ಅಂತ ದಿಗ್ಭ್ರಮೆಯಿಂದ ಕಾರ್ ನಿಲ್ಲಿಸದೇ ಕಾರಿನ ಕಿಟಕಿಯಿಂದಾಚೆ ನೋಡ್ತಾಳೆ .           ನಿಜ !!!!            ಆಕಾಶದಲ್ಲಿ ನಮ್ಮ ಭೂಮಿಯದ್ದೇ ಪ್ರತಿರೂಪದ ಮತ್ತೊಂದು ಆಕಾಶಕಾಯ ಇರುತ್ತೆ . ಅದನ್ನೇ ನೋಡ್ತಾ ನೋಡ್ತಾ ಅರಿಯದೇ ಎದುರಿನಲ್ಲಿ ನಿಂತಿದ್ದ ಕಾರಿಗೆ ಗುದ್ದಿ ಬಿಡುತ್ತಾಳೆ . ಒಂದೇ ನಿಮಿಷದಲ್ಲಿ ಆ ಎದುರಿನ ಕಾರಿನಲ್ಲಿದ್ದ ಸಂಸಾರ ನುಚ್ಚು ನೂರಾಗಿ ಬಿಡುತ್ತೆ . ಹೆಂಡತಿ , ಮಗು ಮತ್ತು ಅವಳ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡ ಗಂಡ ಒಬ್ಬನೇ ಅನಾಥನಾಗಿ ಆಸ್ಪತ್ರೆ ಸೇರುತ್ತಾನೆ . ಇವಳಿಗೆ ಜೈಲು ಶಿಕ್ಷೆ ಆಗುತ್ತದೆ . ಜೈಲಿನಿಂದ ಬಿಡುಗಡೆಯಾದ ಮೇಲೆ ಅಪಘಾತದಲ್ಲಿ ಬದುಕುಳಿದ ಆ ವ್ಯಕ್ತಿಯನ್ನು ಹುಡುಕಿ ಅವನ ವಿಶ್ವಾಸ ಸಂಪಾದಿಸುತ್ತಾಳೆ .                   ಅಷ್ಟರಲ್ಲಿ ಆ ಹೊಸದಾಗಿ ಪತ್ತೆಯಾಗಿರುವ ಭೂಮಿಯನ್ನು ಹೋಲುವ ಗ್ರಹಕ್ಕೆ ಹೋಗಲು ಒಂದು ಖಾಸಗಿ ಕಂಪೆನಿಯವರು ಪ್ರಬಂಧ ಸ್ಪರ್ಧೆಯನ್ನು ಇಡುತ್ತಾರೆ . ಅದರಲ್ಲಿ ಆಕೆ ಭಾಗವಹಿಸಿ