ಪೋಸ್ಟ್‌ಗಳು

Commitment Phobia: Published in VK 25.06.2017

ಅವರೊಂದು ರೀತಿಯ ಸದಾ ಅತೃಪ್ತರು . ಯಾರನ್ನೂ ಸುಲಭವಾಗಿ ನಂಬುವುದಿಲ್ಲ . ಸಂಬಂಧಗಳಲ್ಲಂತೂ ನಂಬಿಕೆ ಎನ್ನುವುದೇ ಇಲ್ಲ . ಸದಾ ಪರಿಪೂರ್ಣತೆಯ ಹುಡುಕಾಟದಲ್ಲಿರುವ ಅವರಿಗೆ ಎಲ್ಲಿಯೂ ಪೂರ್ಣತೆ ಲಭ್ಯವಾಗದೇ ಕೈಗೆ ಸಿಕ್ಕಿದ್ದನ್ನೂ ಸಹ ದೂರ ತಳ್ಳುತ್ತಾರೆ . ತಮ್ಮ ಜೀವನ ಸಂಗಾತಿಯೊಂದಿಗೆ ಏಕಾಂತದಲ್ಲಿ ಇದ್ದಾಗಲೂ ಅವರಿಂದ ಹೇಗೆ ಬಿಡಿಸಿಕೊಳ್ಳುವುದು ಎಂದೇ ಯೋಚಿಸುತ್ತಿರುತ್ತಾರೆ . ಯಾರೊಂದಿಗೂ ಭಾವನಾತ್ಮಕವಾದ ಸಂಬಂಧ ಬೆಳೆಸಿಕೊಳ್ಳದೇ ಅಂತರ ಕಾಯ್ದುಕೊಂಡಿರುತ್ತಾರೆ . ಸ್ವಲ್ಪ ಭಿನ್ನಾಭಿಪ್ರಾಯ ಬಂದರೂ ಸಾಕು ಆ ಸಂಬಂಧವನ್ನೇ ಕಡಿದುಕೊಳ್ಳುತ್ತಾರೆ . ಇದೊಂದು ರೀತಿಯ ಫೋಬಿಯಾ : ಹಾಗಂತ ಅವರಿಗೆ ಭಾವನೆಗಳಿಲ್ಲವೆಂದಲ್ಲ . ಅವರಿಗೂ ಭಾವನೆಗಳಿವೆ , ಭಾವನೆ ಹಂಚಿಕೊಳ್ಳುವ ಮನಸ್ಸಿದೆ , ತಮ್ಮ ಭಾವನೆಯನ್ನು ಕೇಳುವ ಸಂಗಾತಿಯ ಅವಶ್ಯಕತೆಯೂ ಇದೆ . ಪ್ರೀತಿ , ಪ್ರೇಮ , ಕಾಮ ಎಲ್ಲದರಲ್ಲಿಯೂ ಆಸಕ್ತಿಯಿದೆ . ಆದರೆ ಇದಕ್ಕಾಗಿ ಯಾರನ್ನೂ ಬಿಟ್ಟಿರಲಾರದಂತೆ ಹಚ್ಚಿಕೊಳ್ಳಲು ಅವರು ತಯಾರಿಲ್ಲ . ಅಲ್ಲದೇ ತಮ್ಮ ಸಂಗಾತಿ ತಮ್ಮನ್ನು ಗಾಢವಾಗಿ ಇಷ್ಟ ಪಡುತ್ತಿದ್ದಾರೆ ಎಂದು ಗೊತ್ತಾದರೆ ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಿ ಬಿಡುತ್ತಾರೆ .            ಒಂದು ರೀತಿಯ ಭಯ ಅವರಿಗೆ !!!            ಈ ಭಯ ಹೆಣ್ಣು ಗಂಡು ಇಬ್ಬರನ್ನೂ ಕಾಡುತ್ತದೆ . ಎಲ್ಲಿ