ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವನ: "ಆತ್ಮ"

ನಾ ಹೆಣ್ಣಲ್ಲ ನಾ ಗಂಡಲ್ಲ ಆದರೂ ಗಂಡೆಂದು ಹೆಣ್ಣೆಂದು ಅಭಿಮಾನ ಪಡುತ್ತೇನೆ.. ನನಗೆ ಶರೀರವಿಲ್ಲ ಅಹಂಕಾರವಿಲ್ಲ ಆದರೂ ಮಾಡಿದ್ದೆಲ್ಲ ನಾನೆಂದು ಅಭಿಮಾನ ಪಡುತ್ತೇನೆ.. ನನಗೆ ಹೆಸರಿಲ್ಲ ಅಲಂಕಾರವಿಲ್ಲ ಆದರೂ ನಾನು ಚಿರಂಜೀವಿಯೆಂದು ಅಭಿಮಾನ ಪಡುತ್ತೇನೆ.. ನನಗೆ ಸಂಬಂಧಗಳಿಲ್ಲ ನನಗೆಂದು ಯಾರಿಲ್ಲ ಆದರೂ ಎಲ್ಲರೂ ನನ್ನವರೆಂದು ಅಭಿಮಾನ ಪಡುತ್ತೇನೆ.. ನನಗೆ ಪ್ರೀತಿಯಿಲ್ಲ ದ್ವೇಷ ಮತ್ಸರಗಳಿಲ್ಲ ಆದರೂ ರಾಗ-ದ್ವೇಷಗಳಲ್ಲಿ ಮುಳುಗಿ ನರಳುತ್ತೇನೆ.. ನನಗೆ ಹಿಂದಿಲ್ಲ ಮುಂದಿಲ್ಲ ಆದರೂ ಎಲ್ಲೆಡೆ ನಾನಿದ್ದೇನೆಂದು ಭ್ರಮೆ ಪಡುತ್ತೇನೆ.. ನನಗೆ ಹುಟ್ಟಿಲ್ಲ ಸಾವಿಲ್ಲ ಆದರೂ ಎಲ್ಲರ ಮನಸ್ಸೂ ನಾನೆಂದು ಅಭಿಮಾನ ಪಡುತ್ತೇನೆ.. * * * * * * * * * * * * * * * * * * * * * * * * ಕೆ.ಎ.ಸೌಮ್ಯ ಮೈಸೂರು  

ವಾತಾಪಿ ಗಣಪತಿ : ಎಂ.ಎ.ಕನ್ನಡ

  ಬಾದಾಮಿಯ ಮೊದಲ ಹೆಸರು “ ವಾತಾಪಿ ”. ಉತ್ತರ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯಲ್ಲಿನ ಬಾದಾಮಿ ಪಟ್ಟಣವು ಕ್ರಿ.ಶ. ಆರನೇ ಶತಮಾನದಿಂದ ಕ್ರಿ.ಶ. ಎಂಟನೇ ಶತಮಾನದವರೆಗೂ ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯರ ಸಾಮ್ರಾಜ್ಯವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳನ್ನು ಒಳಗೊಂಡಿತ್ತು. ಇದು ದಕ್ಷಿಣ ಭಾರತದಲ್ಲಿಯೇ ವೈವಿಧ್ಯಮಯವಾದ ದೇವಾಲಯಗಳ ನಿರ್ಮಾಣಕ್ಕೆ ಸಾಕ್ಷಿಯಾದ ಪಟ್ಟಣವಾಗಿದೆ. “ ವಾತಾಪಿ ಗಣಪತಿಂ ಭಜೇಹಂ ” ಎಂಬ ಪ್ರಖ್ಯಾತವಾದ ಈ ರಚನೆ ಹಂಸಧ್ವನಿ ರಾಗದಲ್ಲಿದೆ. ಇದರ ರಚನಕಾರರು ಮುತ್ತುಸ್ವಾಮಿ ದೀಕ್ಷಿತರು.  ಇವರು ಕರ್ನಾಟಕದ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರು. ಮುತ್ತುಸ್ವಾಮಿ ದೀಕ್ಷಿತರು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಆ ರಚನೆಗಳಲ್ಲಿ ಎರಡು ಅಥವಾ ಮೂರು ರಚನೆಗಳು ಮಾತ್ರ ತೆಲುಗು ಅಥವಾ **ಮಣಿಪ್ರವಾಳದಲ್ಲಿದ್ದು, ಉಳಿದ ರಚನೆಗಳೆಲ್ಲಾ ಸಂಸ್ಕೃತದಲ್ಲಿದೆ. ಇವರ ರಚನೆಗಳು ಸಂಗೀತಸುಧೆಯಿಂದ ತುಂಬಿವೆ. ಮುತ್ತುಸ್ವಾಮಿ ದೀಕ್ಷಿತರ ಹುಟ್ಟೂರು ತಂಜಾವೂರಿನ ಬಳಿಯ ತಿರುವಾರೂರು. ಇವರು ನಮ್ಮ ದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿನ ದೇವಾನುದೇವತೆಗಳ ಬಗ್ಗೆ ಸಂಗೀತ ರಚಿಸಿದ್ದಾರೆ. “ವಾತಾಪಿ ಗಣಪತಿ”ಗೆ ಹಾಗೆ ಹೆಸರು ಬರಲು ಒಂದು ಕಾರಣವಿದೆ. ಚಾಲುಕ್ಯರು ಕರ್ನಾಟಕವನ್ನು ಆಳುತ್ತಿದ್ದ ಕಾಲದಲ್ಲಿ, ಚಾಲುಕ್ಯರ ಪ್ರಖ್ಯಾತ ದೊರೆಯಾದ ಇಮ್ಮಡಿ ಪುಲಿಕೇಶಿಯು ತನ್ನ ಸಾಮ್ರ

ಅಕ್ಕಮಹಾದೇವಿಯ (Akka Mahadevi) ಕವನಗಳ ವೈಶಿಷ್ಟ್ಯ : ಎಂ.ಎ.ಕನ್ನಡ

ಇಮೇಜ್
ಅಕ್ಕಮಹಾದೇವಿ ಮೂಲತಃ ಆಧ್ಯಾತ್ಮ ಸಾಧಕಳು. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವಳ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಆಕೆ ಬಾಲ್ಯದಿಂದಲೂ ಹಂಬಲಿಸಿದಳು. ಅವಳ ಆ ಹಂಬಲಿಕೆಯ ಪ್ರತಿಬಿಂಬವೇ ಈ ವಚನಗಳು. ಈ ದಾರಿಯಲ್ಲಿ ಸಾಗುವಾಗ ಅನೇಕ ಅಡ್ಡಿ-ಆತಂಕಗಳನ್ನು ದಿಟ್ಟೆಯಾಗಿ ಎದುರಿಸಿದವಳು ಅಕ್ಕ. ಆಕೆಯದು ಸಿದ್ಧಿಸಿಕೊಂಡ ವೈರಾಗ್ಯವೇ ಹೊರತು ಸಿದ್ಧ ವೈರಾಗ್ಯವಲ್ಲ. ಸಿದ್ಧಿಯ ಮೆಟ್ಟಿಲನ್ನು ಏರುವಾಗ ಸಹಜವಾದ ಘರ್ಷಣೆ ಆಕೆಗಿತ್ತು. ಅದಕ್ಕೆಂದೇ ಅಕ್ಕ ತನ್ನನ್ನು ತಾನೇ ಕಠೋರ ವಿಮರ್ಶೆಗೆ ಒಳಪಡಿಸಿಕೊಂಡು ಅದನ್ನು ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಅಭಿವ್ಯಕ್ತಿಸಿದ್ದಾಳೆ. ತನ್ನನ್ನು ಈ ಮತ್ರ್ಸದ ಸೆಳೆತದಿಂದ ಕಾಪಾಡುವಂತೆ ಚೆನ್ನಮಲ್ಲಿಕಾರ್ಜುನನಲ್ಲಿ ಮೊರೆ ಹೋಗುತ್ತಾಳೆ.  “ ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲನ್ನು ತಾನೇ ಸುತ್ತಿ ಸುತ್ತಿ ಸಾವ ತೆರನಂತೆ” ಈ ವಚನದಲ್ಲಿ ಭಕ್ತಿಯ ಕ್ರಿಯಾಹೀನತೆಯ ಬಗ್ಗೆ ಹೇಳಲಾಗಿದೆ. ಆದರೆ ತನ್ನದು ಅನನ್ಯವಾದ ಭಕ್ತಿ, ತಾನು ಬೇರೆಯಲ್ಲ, ಚನ್ನಮಲ್ಲಿಕಾರ್ಜುನ ಬೇರೆಯಲ್ಲ ಎಂಬ ಅರಿವು ತನಗಿದೆ ಎನ್ನುತ್ತಾಳೆ.  ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ಪ್ರಕೃತಿಯ ಚರಾಚರ ವಸ್ತುಗಳನ್ನೂ ತನ್ನ ಕವನದಲ್ಲಿ ದೃಷ್ಟಾಂತವನ್ನಾಗಿಸುತ್ತಾಳೆ.  “ ಈಳೆ, ನಿಂಬೆ, ಮಾವು ಮೊದಲಕ್ಕೆ  ಹುಳಿನೀರನೆರೆದವರಾರಯ್ಯ? ತೆಂಗು, ಹಲಸು, ಬಾಳೆ, ನಾ

ಅಚ್ಛೋದ ಮತ್ತು ವೈಶಂಪಾಯನ ಸರೋವರದ ವಿಶ್ಲೇಷಣೆ : ಎಂ.ಎ.ಕನ್ನಡ

ಕವಿ ಪರಿಚಯ: ಕುವೆಂಪು ಅವರು ಬೇಂದ್ರೆಯವರು ಹೇಳುವ ಹಾಗೆ “ಯುಗದ ಕವಿ; ಜಗದ ಕವಿ”. ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆಯಿಂದಾಗಿ ಕವಿಯ ಬದುಕಿನ ದಿಕ್ಕೇ ಬದಲಾಯ್ತು. ತಮ್ಮ ಮೊದಲ ಕೃತಿಯಾದ “ಅಮಲನ ಕಥೆ”ಯನ್ನು ಕಿಶೋರಚಂದ್ರವಾಣಿ ಎಂಬ ಕಾವ್ಯನಾಮದಿಂದ ಹೊರತಂದವರು, ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆದರು. 1922ರಿಂದ 1985ರವರೆಗೆ ನಿರಂತರವಾಗಿ ಬರೆದರು ಕುವೆಂಪು. ಹೆಸರು: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕಾವ್ಯನಾಮ: ಕುವೆಂಪು ಜನನ : 1904 ಜ್ಞಾನಪೀಠ ಬಂದ ವರ್ಷ : 1968 ಜ್ಞಾನಪೀಠ ಬಂದ ಕೃತಿ: ಶ್ರೀ ರಾಮಾಯಣ ದರ್ಶನಂ ಕುವೆಂಪು ಮೂಲತಃ ಕವಿ. ಕವಿಗಿಂತಲೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರರು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಕುವೆಂಪು ಶ್ರೇಷ್ಠ ಕವಿಯೂ ಹೌದು, ಶ್ರೇಷ್ಠ ಕಾದಂಬರಿಕಾರರೂ ಹೌದು ಮತ್ತು ವಿಮರ್ಶಕರೂ ಹೌದು. ಕುವೆಂಪು ಅವರ ವಿಮರ್ಶೆ ಇತರ ವಿಮರ್ಶೆಗಳಂತಲ್ಲ. ಅವುಗಳಲ್ಲಿ ದಾರ್ಶನಿಕತೆಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಕುವೆಂಪು ಅವರದ್ದು ದಾರ್ಶನಿಕ ವಿಮರ್ಶೆ. ಲೌಕಿಕ ಮತ್ತು ಪಾರಮಾರ್ಥಿಕ ಎರಡಕ್ಕೂ ಸೇತುವೆ ಕಟ್ಟಿ ಕೊಟ್ಟವರು ಕುವೆಂಪು. ಅವರ ಬರಹಗಳು ಆಧ್ಯಾತ್ಮ ಮತ್ತು ವೈಚಾರಿಕತೆಯಿಂದ ಕೂಡಿರುತ್ತವೆ. ವಿಷಯಗಳ ತಲಸ್ಪರ್ಶಿ ಅಧ್ಯಯನ, ತಾತ್ವಿಕ ವಾದ ಮಂಡನೆ, ಉಚಿತ ಪುರಾವೆಗಳಿಂದ ಸಮರ್ಥನೆ, ನಿಖರವಾದ ನಿಲುವು ಇವು ಕುವೆಂಪು ಅವರ ವಿಮರ್ಶಾ ಲೇಖನದ ಲಕ್ಷಣವಾಗಿದೆ. ಸರೋವರದ ಸಿರಿಗನ್ನಡ

ಲಯ, ಯತಿ, ಪ್ರಾಸ: ಎಂ.ಎ.ಕನ್ನಡ

ಲಯ:           ಲಯ ಎಂಬ ಪದ ಸಂಸ್ಕೃತದ ’ಲಯ್’ ಎಂಬ ಧಾತುವಿನಿಂದ ನಿಷ್ಪನ್ನಗೊಂಡಿದೆ.                     ಲಯ- - - - > ನಡಿಗೆ, ಚಲನೆ, ಶೃತಿ       'ಲಯ’ ಎಂಬ ಪದಕ್ಕೆ ನುಡಿ, ಚಲನೆ, ಶೃತಿ ಎಂಬ ಅರ್ಥವಿದೆ. ಇಂಗ್ಲೀಷಿನ RYTHM ಎನ್ನುವುದು ಇದಕ್ಕೆ ಸಂವಾದಿಯಾದ ಪದ. ’ಲಯ’ ಎಂಬ ಪದಕ್ಕೆ ಪ್ರಳಯ, ನಾಶವಾಗು, ಕರಗು ಮುಂತಾದ ಅರ್ಥಗಳೂ ಇವೆ. ಆದುದರಿಂದ ’ಲಯ’ ಎನ್ನುವುದಕ್ಕೆ ನಡೆ/ ಗತಿ ಎಂಬುದನ್ನು ವಿಶಾಲಾರ್ಥದಲ್ಲಿ ಸ್ವೀಕರಿಸಲಾಗಿದೆ.     ’ಲಯ’ವನ್ನು ಪದ್ಯ-ಗದ್ಯ ಎರಡರಲ್ಲಿಯೂ ಪರಿಗಣಿಸಬಹುದು. ಸಂಗೀತದ ಭಾಷೆಯಲ್ಲಿ ’ಲಯ’ ಎನ್ನುವುದು ಒಂದು ಕಾಲಮಾನ. ಇಂಗ್ಲೀಷಿನಲ್ಲಿ RYTHM ಎನ್ನುವುದು ಪದ್ಯದ ಅನಿವಾರ್ಯ. ಪದ್ಯ-ಗದ್ಯ ಎರಡರಲ್ಲಿಯೂ ಲಯ ಇರುತ್ತದೆ. ಗದ್ಯದಲ್ಲಿ ಲಯ ಅನಿಯತವಾಗಿದ್ದರೆ, ಪದ್ಯದಲ್ಲಿ ನಿಯತವಾಗಿರುತ್ತದೆ. ಪದ್ಯದಲ್ಲಿ ಹಾಡುವ ಲಯವಿದ್ದರೆ, ಗದ್ಯದಲ್ಲಿ ಓದುವ ಲಯವಿರುತ್ತದೆ.                              ಲಯ                                /\                           ಪದ್ಯ   ಗದ್ಯ                            /       \             ಹಾಡುವ ಲಯ         ಓದುವ ಲಯ  ಮೂರು ಮಾತ್ರೆಯ ಲಯವನ್ನು ಸಾಮಾನ್ಯವಾಗಿ ಉತ್ಸಾಹ ರಗಳೆಯಲ್ಲಿ ಗುರುತಿಸಲಾಗುವುದು. ಉದಾ:           U   U U| -- U | -- U| U U U           ಮೊದಲ ತಾಯ ಹಾಲಕುಡಿದು        

ಧ್ವನಿ ಸಿದ್ಧಾಂತ: ಎಂ.ಎ.ಕನ್ನಡ

ಪೀಠಿಕೆ:           ಧ್ವನಿ ಎನ್ನುವುದು ಕಾವ್ಯದ ಅಂತರಂಗಕ್ಕೆ ವಿಶಿಷ್ಟವಾದ ಶಕ್ತಿಯನ್ನು ತಂದುಕೊಡುವ ಪ್ರಭೆಯಾಗಿದೆ. ಧ್ವನಿತತ್ತ್ವದ ಪ್ರತಿಪಾದನೆ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಇದನ್ನು ಆನಂದವರ್ಧನ ತನ್ನ "ಧ್ವನ್ಯಾಲೋಕ" ಎಂಬ ಕೃತಿಯ ಮೂಲಕ ಪ್ರತಿಪಾದಿಸಿದ್ದಾನೆ.       ಕಾವ್ಯದ ಶರೀರ ಬೇರೆ, ಆತ್ಮ ಬೇರೆ. ಶರೀರದಂತೆ ಆತ್ಮವು ಗೋಚರವಾಗುವುದಿಲ್ಲ. ಆದರೆ ಆತ್ಮವು ಶರೀರದಲ್ಲಿ ಪ್ರಕಾಶಗೊಂಡು ಸಾರ್ಥಕವಾಗುತ್ತದೆ. " ಧ್ವನಿ ಸಿದ್ಧಾಂತ "ವು ಕಾವ್ಯದಲ್ಲಿ ಯಾವುದು ಶರೀರ, ಅದರ ಮೂಲಕ ಆತ್ಮವು ಹೇಗೆ ಪ್ರಕಾಶಿತವಾಗುತ್ತದೆ ಎಂದು ತಿಳಿಸಿಕೊಡುತ್ತದೆ. ಧ್ವನಿ ಸಿದ್ಧಾಂತ:      "ಧ್ವನಿ" ಎಂಬುದು ಭಾಷೆಯನ್ನು ಅವಲಂಬಿಸಿ ಅನುಭವಕ್ಕೆ ಬರುವ ಒಂದು ಶಕ್ತಿ. ಅದನ್ನು ಆನಂದವರ್ಧನನು ಹೀಗೆ ಹೇಳಿದ್ದಾನೆ.         "ಮಹಾಕವಿಗಳ ವಾಣಿಯಲ್ಲಿ ವ್ಯಾಚ್ಯಾರ್ಥಕ್ಕಿಂತ ಬೇರೆಯಾಗಿ ಪ್ರತೀತಮಾನವಾಗುವ ಅರ್ಥವೊಂದು ಇದ್ದೇ ಇರುತ್ತದೆ. ಲಲನೆಯರಲ್ಲಿ ಸ್ಫುಟವಾದ ಅವಯವಗಳಿಗಿಂತ ಬೇರೆಯಾಗಿರುವ ಲಾವಣ್ಯದ ಹಾಗೆ ಅದು ಹೊಳೆಯುತ್ತದೆ" ಅಲ್ಲದೇ ಆನಂದವರ್ಧನನು "ಧ್ವನಿ&quo

"ಔಚಿತ್ಯ" : ಎಂ.ಎ.ಕನ್ನಡ

ಪೀಠಿಕೆ: ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕೊನೆಯದಾಗಿ ಗಮನಿಸಬೇಕಾದ ಮುಖ್ಯ ವಿಷಯ "ಔಚಿತ್ಯ" .  ನಮ್ಮ ಕಾವ್ಯ ಮೀಮಾಂಸೆಯ ಚರಿತ್ರೆಯಲ್ಲಿ "ಔಚಿತ್ಯ"ದ ವಿಷಯವನ್ನು ಕೊನೆಯದಾಗಿಯೇ ಏಕೆ ಅಧ್ಯಯನ ನಡೆಸಬೇಕು ಎನ್ನುವುದನ್ನು ಒಂದು ಹೋಲಿಕೆಯ ಮೂಲಕ ಮನವರಿಕೆ ಮಾಡಿಕೊಳ್ಳಬಹುದು.ಒಂದು ಮಗುವಿಗೆ ತಂದೆ-ತಾಯಿಯರು ಪ್ರಾಪಂಚಿಕ ಜ್ಞಾನ ನೀಡುವಾಗ ಹೀಗೆ ಮಾಡಬೇಡ, ಹಾಗೆ ಮಾಡು ಎಂದು ಉಚಿತಾನುಚಿತ ಸಲಹೆಗಳನ್ನು ಕೊಡುತ್ತಾರೆ. ಇದೇ ರೀತಿ ಯಾವುದೇ ವಿಷಯವನ್ನು ಕುರಿತು ಉಚಿತಾನುಚಿತಗಳನ್ನು ನಿರ್ಧರಿಸಲು ನಮಗೆ ಆ ವಿಷಯವನ್ನು ಕುರಿತು ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ.  ಹಾಗೆಯೇ ನಮ್ಮ ಭಾರತೀಯ ಕಾವ್ಯ ಮೀಮಾಂಸೆಯ ಶಾಸ್ತ್ರದಲ್ಲಿಯೂ ಔಚಿತ್ಯ ವನ್ನು ಕುರಿತು ನಾವು ಕೊನೆಯಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಕಾವ್ಯದ ಪ್ರಮುಖ ಅಂಗಗಳಾದ ಅಲಂಕಾರ, ಗುಣ, ರೀತಿ, ಧ್ವನಿ, ರಸ ಇವುಗಳನ್ನು ಹೇಗೆ ಉಚಿತವಾಗಿ ಬಳಸಿಕೊಳ್ಳಬೇಕು,ಕಾವ್ಯದ ಯಾವ ಸಂದರ್ಭದಲ್ಲಿ ಯಾವ ವಿಷಯಗಳಿಗೆ ಪ್ರಾಮುಖ್ಯತೆ ದೊರೆಯುತ್ತದೆ,ಯಾವುದು ಉಚಿತ ಯಾವುದು ಅನುಚಿತ ಎಂಬ ಪರಿಜ್ಞಾನ ನೀಡುವುದೇ "ಔಚಿತ್ಯ" ತತ್ವ .            ಈ ಔಚಿತ್ಯ ತತ್ವವನ್ನು ಕುರಿತು ಸಮಗ್ರವಾಗಿ ವಿವೇಚಿಸಿರುವ ಮೀಮಾಂಸಕರು ಎಂದರೆ ಆನಂದವರ್ಧನ ಮತ್ತು ಕ್ಷೇಮೇಂದ್ರ . ಭರತನ ನಾಟ್ಯ ಶಾಸ್ತ್ರದ ಮೂಲಕ ಸೂಚ್ಯವಾಗಿ ಹರಿದು ಬಂದ ಔಚಿತ್ಯವೆಂಬ ವಿಷಯವು ಆನಂದವರ್ಧನ ಮತ್ತು ಕ್ಷೇಮೇಂದ್ರರ

ಪೌರಾಣಿಕ-ಲೇಖನ : "ಕುಂತಿ" published in PRERANA on Nov 2013

‘ಕುತೂಹಲ’ ಎನ್ನುವುದು ಮಾನವ ಸಹಜ ಗುಣ. ಎಲ್ಲಾ ವಿಷಯಗಳನ್ನು ತಿಳಿಯಬೇಕು ಎಂಬ ಮಾನವನ ಮಹತ್ವಾಕಾಂಕ್ಷೆಯೇ ಇಂದು ಸೃಷ್ಟಿಯ ರಹಸ್ಯವನ್ನು ಭೇದಿಸುವತ್ತ ಸಾಗಿದೆ. ಅದರಲ್ಲೂ ಗುಟ್ಟಾದ ವಿಷಯಗಳನ್ನು ತಿಳಿಯುವುದೆಂದರೆ ಮಾನವರಿಗೆ ಎಲ್ಲಿಲ್ಲದ ಕುತೂಹಲ. ಈ ಕುತೂಹಲ ಅತಿಯಾದರೆ ಆಗುವ ಅನಾಹುತವನ್ನು ಮಹಾಭಾರತದ “ಕುಂತಿ”ಯ ಮೂಲಕ ತಿಳಿಯಬಹುದು. ಕುಂತಿಭೋಜನ ಸಾಕು ಮಗಳಾದ ಕುಂತಿ ಒಂದು ಮಹತ್ತರ ಕಾರ್ಯಕ್ಕಾಗಿ ಜನ್ಮ ತಳೆದವಳು. ಹಸ್ತಿನಾವತಿಯ ಸಿಂಹಾಸನವನ್ನು ಕೌರವರಿಂದ ಮತ್ತೆ ಪಾಂಡುವಿನ ಮಕ್ಕಳಿಗೆ ಸಿಗುವಂತೆ ಮಾಡುವ ಪ್ರಭಾವೀ ಪಾತ್ರ ಅವಳದ್ದು. ಆದರೆ ಅವಳ ಜೀವನ ಅಷ್ಟೇ ದುಃಖದಾಯಕವೂ ಹೌದು. ಚಿಕ್ಕವಳಿದ್ದಾಗ ಅವಳ ತಂದೆಯ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯವರನ್ನು ಆದರದಿಂದ ಉಪಚರಿಸಿದ ಪರಿಣಾಮ, ದೂರ್ವಾಸರು ಅವಳ ಸೇವೆಗೆ ಸಂತೃಪ್ತರಾಗಿ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದರಂತೆ ಅವಳು ತನಗೆ ಇಷ್ಟವಾದ ಐದು ದೇವತೆಗಳನ್ನು ಪ್ರತ್ಯಕ್ಷ ಮಾಡಿಕೊಂಡು ಅವರಿಂದ ಮಕ್ಕಳನ್ನು ಪಡೆಯಬಹುದಾಗಿರುತ್ತದೆ. ದೂರ್ವಾಸರು ಅವಳ ಜೀವನದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರಗಳನ್ನು ನೀಡಿರುತ್ತಾರೆ. ಮುಂದೆ ಈ ವರಗಳಿಂದ ಕುಂತಿಗೆ ಬಹಳ ಪ್ರಯೋಜನವಾಗುತ್ತದೆ. ನಿಜ. ಆದರೆ ಈ ಮಂತ್ರಗಳನ್ನು ಹೇಳಿದರೆ ತನಗಿಷ್ಟವಾದ ದೇವರು ಪ್ರತ್ಯಕ್ಷನಾಗುತ್ತನೆಯೋ ಇಲ್ಲವೋ ಎಂಬ “ಕುತೂಹಲ”ವೇ ಕುಂತಿಯನ್ನು ಆಜೀವಪರ್ಯಂತ ದುಃಖಕ್ಕೆ ದೂಡುತ್ತದೆ. ಹುಡುಗಾಟಿಕೆಯ ವಯಸ್ಸಿನ ಕುಂತಿಯು ಸ

ಅರಿಸ್ಟಾಟಲ್’ನ ಅನುಕರಣ ಸಿದ್ಧಾಂತ : ಎಂ.ಎ.ಕನ್ನಡ

ಅನುಕರಣಾವಾದ : 19ನೆಯ ಶತಮಾನದವರೆಗೆ ಯುರೋಪಿನ ಎಲ್ಲಾ ಭಾಷೆಗಳ ಸಾಹಿತ್ಯ ವಿಮರ್ಶೆಯಲ್ಲಿಯೂ ಅತ್ಯಂತ ಪ್ರಭಾವಶಾಲಿಯಾಗಿದ್ದ ಒಂದು ಮೌಖಿಕ ಪರಿಕಲ್ಪನೆ " ಅನುಕರಣಾವಾದ " ( THEORY OF IMITATION ). " ಪ್ಲೇಟೋ " ಮತ್ತು " ಅರಿಸ್ಟಾಟಲ್ " ಇಬ್ಬರೂ ಕಾವ್ಯದ ಸ್ವರೂಪವನ್ನು ಚರ್ಚಿಸುವ ಸಂದರ್ಭದಲ್ಲಿ "ಇಮಿಟೇಶನ್" ಶಬ್ದವನ್ನು ಬಳಸುತ್ತಾರೆ. ' ಇಮಿಟೇಶನ್ ’ ಎಂಬ ಶಬ್ದವು ಗ್ರೀಕ್ ಭಾಷೆಯ 'ಮಿಮೆಸಿಸ್’ ಶಬ್ದಕ್ಕೆ ಪರ್ಯಾಯವಾಗಿದೆ. ಪ್ಲೇಟೋ " ಅನುಕರಣ " ಶಬ್ದವನ್ನು ಅದರ ಸಂಕುಚಿತ ಅರ್ಥದಲ್ಲಿ "ಪ್ರತಿರೂಪ" ಅಥವಾ "ನಕಲು" ಎಂದು ಉಪಯೋಗಿಸುತ್ತಾನೆ. ಪ್ಲೇಟೋ ಹೇಳುತ್ತಾನೆ: ೧) ಕಲೆ ನಮ್ಮಲ್ಲಿನ ಹೀನ ವಾಸನೆಗಳಿಗೆ ಪುಷ್ಟಿ ನೀಡುತ್ತದೆ. ಕಾಮ ಕ್ರೋಧಗಳನ್ನು ಪೋಷಿಸುತ್ತವೆ. ೨) ಕಲಾವಿದರು ದೇವದೇವತೆಗಳನ್ನು ಮತ್ತು ಮಹಾ ಪುರುಷರನ್ನು  ಸಾಮಾನ್ಯರಂತೆ ಚಿತ್ರಿಸಿ ಅವರ ಮಹತ್ವಕ್ಕೆ ಚ್ಯುತಿ  ತರುತ್ತಾರೆ. ಈ ಕಾರಣಗಳಿಂದ ತಾತ್ವಿಕ ಮತ್ತು ನೈತಿಕ ನೆಲೆಗಳಲ್ಲಿ ಪ್ಲೇಟೋ ಕಲೆಯನ್ನು ನಿರಾಕರಿಸುತ್ತಾನೆ. ಆದರೆ ಪ್ಲೇಟೋವಿನ ವಿದ್ಯಾರ್ಥಿ " ಅರಿಸ್ಟಾಟಲ್ " ತನ್ನ ಗುರುವಿನ ಆರೋಪವನ್ನು ಅಲ್ಲಗೆಳೆದು,"ಕಲೆ"ಯ ಪಾತ್ರವನ್ನು ಸಮರ್ಥಿಸಲು "ಅನುಕರಣ"ದ ಪರಿಕಲ್ಪನೆಯನ್ನು ಉಪಯೋಗಿಸುತ್ತಾನೆ. ಆದರೆ ಅರಿಸ್ಟಾ

A C Bradley's ಕಾವ್ಯಕ್ಕಾಗಿ ಕಾವ್ಯ : ಎಂ.ಎ.ಕನ್ನಡ

ಕವಿ ಪರಿಚಯ: ಎ.ಸಿ. ಬ್ರ್ಯಾಡ್ಲೀ (1851) ಇಂಗ್ಲೀಷ್ ಸಾಹಿತ್ಯದ ವಿದ್ವಾಂಸ. ತಮ್ಮ ತಂದೆಯ ಇಪ್ಪತ್ತೊಂದು ಮಕ್ಕಳಲ್ಲಿ ಕೊನೆಯವರು.ಓದಿನ ನಂತರ "ಲಿವರ್ ಪೂಲ್" ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾದರು. ನಂತರ ಲಿವರ್ ಪೂಲ್, ಗ್ಲಾಸ್ಗೋ, ಎಡಿನ್ ಬರ್ಗ್, ಡರ್ಹಾಮ್ ವಿಶ್ವವಿದ್ಯಾನಿಲಯಗಳು ನೀಡಲು ಬಂದ ಗೌರವ ಡಾಕ್ಟರೇಟ್ ಅನ್ನು ನಿರಾಕರಿಸಿದರು. ಬ್ರಾಡ್ಲೀ ಮದುವೆ ಮಾಡಿಕೊಂಡಿಲ್ಲ, ಅವಿವಾಹಿತರು. ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ರಿಸರ್ಚ್ ಫೆಲೋಶಿಪ್ ಸ್ಥಾಪಿಸಿದ್ದಾರೆ. ಬ್ರಾಡ್ಲೀ ಅವರು ಬರೆದಿರುವ " ಷೇಕ್ಸ್ ಪಿಯರಿಯನ್ ಟ್ರಾಜೆಡಿ " ಕೃತಿಯು ಎಲ್ಲರಿಂದಲೂ ಅತ್ಯಂತ ಕಟು ಟೀಕೆಗೆ ಒಳಗಾಗಿದ್ದರೂ, ಇಂದಿಗೂ ಸಹ ಅತ್ಯುತ್ತಮ ಮತ್ತು ಪ್ರಭಾವಿ ಕೃತಿಯಾಗಿದೆ. ಈ ಕೃತಿಯು ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚು ಬಾರಿ ಮರು ಮುದ್ರಣ ಕಂಡಿದೆ.  ಬ್ರಾಡ್ಲೀಯ ಸಿದ್ಧಾಂತವಾದ " ಕಾವ್ಯಕ್ಕಾಗಿ ಕಾವ್ಯ " ವಿಷಯವು, ಆತ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ್ದ ಒಂದು ಆರಂಭಿಕ ಉಪನ್ಯಾಸವಾಗಿತ್ತು. ಮತ್ತು ಅದೇ ವರ್ಷ ಆತ ಅದನ್ನು ಪ್ರಕಟಿಸಿದ. ಬ್ರಾಡ್ಲೀಯ ಕೃತಿಗಳು:       ೧) ಷೇಕ್ಸ್ ಪಿಯರಿಯನ್ ಟ್ರಾಜೆಡಿ       ೨) ಆಕ್ಸ್ ಫರ್ಡ್ ಲೆಕ್ಚರರ್ಸ್       ೩) ಹೆಲೆನಿಕಾ       ೪) ಕಾವ್ಯಕ್ಕಾಗಿ ಕಾವ್ಯ್       ೫) ಮೆಮೋರಿಯಂ       ೬) ಟೆನಿಸನ್ ನ ಒ