ಪೋಸ್ಟ್‌ಗಳು

Dil Ne Phir Yad Kiya-2016 (Hye Bangalore)

ಇಮೇಜ್
“ ಮೊದಲ ಬಾರಿ …”              ಮದುವೆ ಆಗುವಾಗ ಎಲ್ಲರಿಗೂ ಏನೋ ಒಂದು ರೀತಿಯ ಉತ್ಸಾಹ ಇರುತ್ತದೆ . ಮುಂದಿನ ಜವಾಬ್ದಾರಿಗಳ ಯೋಚನೆ ಯಾರಿಗೂ ಇರೋಲ್ಲ . ಬರೇ ಮದುವೆಯಂದು ಉಡುವ ಬಟ್ಟೆ , ತೊಡುವ ಆಭರಣಗಳ ಕಡೆಯೇ ಗಮನವಿರುತ್ತದೆ .  ನಾನೂ ಅಷ್ಟೇ ..  ಬರೇ ಕನಸು ಕಾಣುತ್ತಾ ಮದುವೆಯಾದವಳು . ಬಹುತೇಕ ನಮ್ಮ ಈ ಕನಸುಗಳು ಸಿನೆಮಾಗಳನ್ನು ಅವಲಂಬಿಸಿರುತ್ತದೆ . ಸಿನೆಮಾದಲ್ಲಿ ಎಷ್ಟೋ ಕಷ್ಟಗಳನ್ನು ಅನುಭವಿಸಿ ಹೀರೋ - ಹೀರೋಯಿನ್ ಮದ್ವೆ ಆದ ತಕ್ಷಣ ಶುಭಂ ಅಂತಾರಲ್ಲ .. ಹಾಗೆ ಒಂದ್ಸಲ ಮದ್ವೆ ಆದ್ರೆ ಮುಗೀತು ಅಂತ ತಿಳಿದಿದ್ದವಳು . ಜೊತೆಗೆ ನಮಗೂ ಮದ್ವೆ ಮಾಡಬೇಕು ಅಂತ ಅಂದ್ಕೊಂಡಾಗಿಂದಲೂ ಗಂಡುಗಳನ್ನು ನೋಡಿ ನೋಡಿ ಸಾಕಾಗಿ ಇವನ್ಯಾರೋ ಒಪ್ಪಿರುವುದೇ ನಮಗೆ ಹೆಚ್ಚಾಗಿ ಬೇರೆ ಚಿಂತೆ ಮಾಡಲು ಹೋಗುವುದಿಲ್ಲ .            ನನಗೆ ಮದುವೆಯ ಬಿಸಿ ತಾಕಿದ್ದು ಮದುವೆಯಾದ ಒಂದು ವಾರಕ್ಕೆ . ಅಂದು ಮನೆಯಲ್ಲಿ ಚಪ್ಪರ ವಿಸರ್ಜನೆ ಕಾರ್ಯಕ್ರಮವಿತ್ತು . ಮದುವೆಗೆ ಬಂದಿದ್ದ ಬಂಧುಗಳು ಇನ್ನೂ ಇದ್ದರು . ಬೆಳಿಗ್ಗೆ ಸ್ನಾನ ಮಾಡಿದ ಕೂಡಲೇ ಮದುಮಕ್ಕಳನ್ನು ಕರೆದು ಚಪ್ಪರದ ಮುಂದೆ ಕೂರಿಸಿದರು .  ಅಲ್ಲಿಯವರೆಗೂ ನನಗೆ ಎಲ್ಲವೂ ಚೆಂದವಿತ್ತು .  ಅಲ್ಲಿಂದ ಶುರುವಾಯಿತು . ನನ್ನ ಗಂಡನೇ ಪೂಜೆ ಮಾಡಿಸುತ್ತಿದ್ದುದು . ಹಾಗಾಗಿ ಎಲ್ಲವೂ ಸರಿಯಾಗಿ ಅಣಿ

ಶುಕ್ರಗ್ರಹದ ಜೀವನ- published in Hosa digantha News paper 16.10.2016

ಕವನ : "ಶುಕ್ರಗ್ರಹದ ಜೀವನ " ಭೂಮಿ ಮೇಲಿದ್ದ ಜನರನ್ನು ರಾತ್ರೋ ರಾತ್ರಿ ಏಕಾಏಕಿ ಹೊತ್ತೊಯ್ದು ಶುಕ್ರ ಗ್ರಹಕ್ಕೆ ಎತ್ತಂಗಡಿ ಮಾಡಲಾಯಿತು ... ನಮ್ಮ ಜನರೇನು ಹೆದರುವರೇ ? ಅಲ್ಲಿಯೂ ಅದೇ ಸೂರ್ಯ .. ಅದೇ ನಕ್ಷತ್ರ .. ಅದೇ ಕತ್ತಲು .. ಅದೇ ಆಕಾಶ .. ಚಂದ್ರನಿಲ್ಲ ಅಷ್ಟೇ .. ಹೊಸ ಜೀವನ ಶುರು ಮಾಡಿಯೇ ಬಿಟ್ಟರು .. ಗ್ರಹ ನಕ್ಷತ್ರ ದಿಕ್ಕು ದೆಸೆ ನೋಡಿ ಹೊಸ ಪಂಚಾಂಗ ಬರೆದೇ ಬಿಟ್ಟರು .. ಇಲ್ಲಿ ಎಲ್ಲವೂ ಹೊಸತಾಗಿರುವುದರಿಂದ ಎಲ್ಲವನ್ನೂ ಮೊದಲಿನಿಂದ ಲೇ ಸರಿಯಾಗಿ ಮಾಡುವ ಅವಕಾಶ ಇರುವುದೆಂದು ಅರಿತರು .. ಭೂಮಿಯ ಮೇಲಿನ ಹಾಗೆ ಸರಿ ಇಲ್ಲದಿರುವುದನ್ನು ಕೆಡವಿ ಸರಿಪಡಿಸುವ ಬದಲು ಹೊಸದಾಗಿ ಸರಿಯಾಗಿ ಕಟ್ಟುವುದೇ ಲೇಸೆಂದು ಬಗೆದರು .. ಸಿಕ್ಕ ಅವಕಾಶದಿಂದ ಕುಣಿದರು .. ಪಂಚಾಂಗ ನೋಡುತ್ತಾ ವಾಸ್ತುಶಾಸ್ತ್ರ ಚೂರೂ ಬಿಡದೇ ಯಾವ ಯಾವ ದಿಕ್ಕಿನಲ್ಲಿ ಏನಿರಬೇಕೋ ಅಲ್ಲಲ್ಲಿ ಅದನ್ನೇ ನಿಂತು ನಿರ್ಮಿ ಸಿದರು .. ಪ್ರತಿ ನಿತ್ಯ ಹುಟ್ಟುವ ಸೂರ್ಯನಿಗೆ ನಮಸ್ಕರಿಸಿ ಮೂಲೆಮೂಲೆಗಳನ್ನು ಗುರುತಿಸಿ ಮನೆ - ಕಟ್ಟಡ - ಆಸ್ಪತ್ರೆ - ಶಾಲೆ ಕಟ್ಟಿದರು .. ಬಾನಿನಿಂದ ಸೂರ್ಯ ಇವರ ಆರ್ಭಟ ನೋಡಿ ನಗುತ್ತಿದ್ದ .. ಕಾರಣ ಅವನಿಗಷ್ಟೇ ಗೊತ್ತಿತ್ತು .. ಭೂಮಿಯ ಮೇಲಿನ ಈ ಜನರಿಗೆ ಸೂರ್ಯ ಹುಟ