ಪೋಸ್ಟ್‌ಗಳು

ಮದುವೆಯಾದ ನಂತರ ಬದಲಾಗುವ ಹೆಂಡತಿ VK

ಇಮೇಜ್
ಮದುವೆಯಾದ ಮೇಲೆ ಮುಗಿಯಿತು, ಇನ್ನು ಗಂಡ ತನ್ನವನೇ ಎಂಬ ತುಂಟ ನಿರ್ಲಕ್ಷ್ಯ ಹೆಂಡತಿಯದ್ದು. ತಾನು ಈಗ ಹೇಗೇ ಇದ್ದರೂ ಗಂಡನಾದವನು ತನ್ನನ್ನು ಇದ್ದ ಹಾಗೆಯೇ ಒಪ್ಪಬೇಕು ಎಂಬುದು ಅವಳ ವಾದ. ಮದುವೆಗೆ ಮುಂಚೆ ಮಾಡುತ್ತಿದ್ದ ಡಯಟ್ ಈಗ ಮಾಡಬೇಕು ಅಂತ ಅನ್ನಿಸುವುದಿಲ್ಲ ಅವಳಿಗೆ. ತನ್ನ ಡ್ರೆಸ್ ಬಗ್ಗೆ ವಹಿಸುತ್ತಿದ್ದ ಅತಿಯಾದ ಕಾಳಜಿ ಈಗಿಲ್ಲ. ಎಲ್ಲಿಗೆ ಹೋಗಬೇಕೆಂದರೂ ಯಾವುದೋ ಒಂದು ಡ್ರೆಸ್ ತೆಗೆದು ಮೈಗೆ ಸುತ್ತಿಕೊಂಡು ಹೊರಡುತ್ತಿದ್ದಾಳೆ ಆಕೆ. ತಾನು ಹೇಗೆ ಕಾಣುತ್ತಿರಬಹುದು ಎಂಬ ಕುತೂಹಲವೇ ಆಕೆಗೆ ಇಲ್ಲ. ಹೇಗಿದ್ದರೇನು? ಮದುವೆ ಆಗಿ ಆಯ್ತಲ್ಲ ಎಂಬುದೇ ಅವರ ತುಂಟ ಉತ್ತರ. ಮದುವೆ ಆಗುವವರೆಗೂ ಅತಿಯಾಗಿ ಕಾಳಜಿ ವಹಿಸಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳುವ ಮಹಿಳೆಯರು ಮದುವೆಯ ನಂತರ ಡ್ರೆಸ್ ಸೆನ್ಸ್ ಅನ್ನು ಮರೆತುಬಿಡುತ್ತಾರೆ. ಮದುವೆಯಾದ ನಂತರ ಪ್ರತೀ ಮಹಿಳೆ ಈ ರೀತಿಯ ಮನೋಭಾವಕ್ಕೆ ಒಳಗಾಗುತ್ತಾಳೆ. ಚಿಕ್ಕಂದಿನಿಂದಲೂ ಆಕೆಗೆ ಮದುವೆಯೇ ಆಕೆಯ ಜೀವನದ ಪರಮೋದ್ದೇಶ ಎಂದು ಹೇಳಿಕೊಟ್ಟಿರುವುದರಿಂದಲೋ ಏನೋ? ಮದುವೆಯ ನಂತರ ತಾನು ಚಂದ ಕಂಡು ಸಾಧಿಸುವುದೇನಿದೆ ಎಂಬ ಅಭಿಪ್ರಾಯ ಬಹುತೇಕರದ್ದು. ಮಕ್ಕಳಾದ ಮೇಲೆ ಅಂತೂ ಯಾರಿಗಾಗಿ ತಾನು ಅಲಂಕಾರ ಮಾಡಿಕೊಳ್ಳಬೇಕು ಎಂಬ ಹತಾಶೆ ಎದುರಾಗುತ್ತದೆ. ಜೀವನದಲ್ಲಿ ಜವಾಬ್ದಾರಿ ಹೆಚ್ಚುತ್ತಾ ಹೋದಂತೆ ತನ್ನ ಕಡೆ ಗಮನ ಕೊಡುವುದನ್ನೇ ಕಡಿಮೆ ಮಾಡಿಬಿಡುತ್ತಾಳೆ ಹೆಣ್ಣು. ಪರಿಣಾಮ ಆಕೆಯ ಸೌಂದರ್ಯದ ಜೊತೆ ಆರ

ಮದುವೆಗೆ ಯಾರ ಒಪ್ಪಿಗೆ ಬೇಕು? (ವಿಜಯ ಕರ್ನಾಟಕ)

ಇಮೇಜ್
           ಅವಳಿಗೆ ಮನೆಯಲ್ಲಿ ಉಸಿರಾಡಲೂ ಸಹ ಆಗದ ಹಾಗೆ ಮಾಡಿ ಬಿಟ್ಟಿದ್ದರು. ಒಬ್ಬೊಬ್ಬ ಗಂಡು ಬಂದು ನೋಡಿಕೊಂಡು ಹೋದಾಗಲೂ ಮನೆಯ ಎಲ್ಲರ ದೃಷ್ಟಿ ಅವಳ ಮೇಲೆ. ಅವಳ ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲ ಬಂದ ಗಂಡುಗಳೆಲ್ಲಾ ಅವಳನ್ನು ಒಪ್ಪಿಕೊಂಡು ಬಿಡುತ್ತಿದ್ದರು. ಈಗ ಚೆಂಡು ಅವಳ ಅಂಗಳದಲ್ಲಿ!! ಅವಳು ಹೂ ಎನ್ನಲೂ ಆಗದೇ ಉಹುಂ ಎನ್ನಲೂ ಆಗದೇ ಕಣ್ಣು ಕಣ್ಣು ಬಿಡುತ್ತಿದ್ದಳು. ಕಾಲ ಬದಲಾಗಿದೆ ನಿಜ. ಮೊದಲಾಗಿದ್ದರೆ ಮದುವೆಯ ವಿಚಾರದಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯ ಕೇಳುತ್ತಲೇ ಇರಲಿಲ್ಲ. ಆದರೆ ಈಗ ಅವಳ ತೀರ್ಮಾನವೇ ಅಂತಿಮ. ಅವಳ ಇಷ್ಟಕ್ಕೆ ವಿರುದ್ಧವಾಗಿ ಯಾರೂ ಆಕೆಯನ್ನು ಯಾರಿಗೂ ಮದುವೆ ಮಾಡಿ ಕೊಡಲು ಸಾಧ್ಯವಿಲ್ಲ. ಆದರೆ ತನ್ನಿಷ್ಟದ ಗಂಡು ಸಿಗುವವರೆಗೂ ಕಾಯುವ ತಾಳ್ಮೆ ಆಕೆಗೆ ಇರುವಷ್ಟು ಮನೆಯವರಿಗಿಲ್ಲ. ಅವರಿಗೆ ಒಟ್ಟು ತಮ್ಮ ಮನೆಯ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿ ಬಿಡಬೇಕಷ್ಟೇ. ಮದುವೆ ಎಂಬ ಒಂದು ಪದವೇ ಹೆಚ್ಚಿನದು ಅವರಿಗೆ. "ಮಗಳಿಗೆ ಇನ್ನೂ ಮದುವೆ ಮಾಡಿಲ್ವಾ?" ಎಂಬ ಜನರ ಕೊಂಕು ಮಾತನ್ನು ತಪ್ಪಿಸಿಕೊಳ್ಳಬೇಕು ಎನ್ನುವುದೊಂದೇ ಅವರ ಉದ್ದೇಶ. ಹೇಗಿದ್ದರೂ ಮದುವೆಯಾದ ಮೇಲೆ ಎಲ್ಲವೂ ಸರಿಯಾಗುತ್ತೆ ಎಂಬ ಆಶಾಭಾವ ಅವರದ್ದು. ಆದರೆ ಆಕೆಯ ಭಾವವೇ ಬೇರೆ. ಮದುವೆಯ ನಂತರವೇ ತನ್ನ ನಿಜವಾದ ಜೀವನ ಶುರುವಾಗುತ್ತದೆ ಎಂಬ ಅರಿವು ಆಕೆಗಿದೆ. ಬೆಳಿಗ್ಗೆ ತಡವಾಗಿ ಏಳುವ ತನ್ನ ದಿನಚರಿ ಮದುವೆಯ

"ಫೋಟೋ ಪುರಾಣ" 17.10.2018

ಬೆಳಗ್ಗಿನ ಜಾವದ ಸವಿಯಾದ ನಿದ್ದೆಯಲ್ಲಿದ್ದೆ . ಅಷ್ಟರಲ್ಲಿ ಅಪ್ಪನೂ ಅಮ್ಮನೂ ಏನೋ ಮಾತನಾಡಿಕೊಳ್ಳುತ್ತಿದ್ದುದು ಅಸ್ಪಷ್ಟವಾಗಿ ಕೇಳಿಸುತ್ತಿತ್ತು . " ಫೋಟೋ .. ಫೋಟೋ .." ಅಂತಿದ್ರು ಇಬ್ಬರೂ . ಯೆಸ್ ‌... ನನ್ನ ನಿದ್ದೆ ಹಾರಿ ಹೋಯಿತು . ನಮ್ಮಪ್ಪ ಅಮ್ಮನ ಏಕೈಕ ಪುತ್ರಿಯಾದ ಮತ್ತು ಮದುವೆಯಾಗಲು ಸಕಲ ಅರ್ಹತೆಯುಳ್ಳ ನನ್ನ ಫೋಟೋ ಅಲ್ಲದೇ ಮತ್ಯಾರ ಬಗ್ಗೆ ಮಾತನಾಡಲು ಸಾಧ್ಯ ? ಹೋದ ವಾರ ತಾನೇ ಮ್ಯಾಟ್ರಿಮೋನಿಯಲ್ಲಿನಲ್ಲಿ ನನ್ನ ಹೆಸರು ನೊಂದಾಯಿಸಿ ಬಂದಿದ್ದೆವು . ಆನ್ಲೈನ್ ಸೈಟುಗಳ ಬಗ್ಗೆ ಅಮ್ಮನಿಗೆ ಎಳ್ಳಷ್ಟೂ ನಂಬಿಕೆ ಇರಲಿಲ್ಲ . ಪ್ರೀತಿಸಿ ಮದುವೆಯಾಗುವುದರಲ್ಲಿ ಅಪ್ಪನಿಗೆ ನಂಬಿಕೆ ಇರಲಿಲ್ಲ . ಹಾಗಾಗಿ ವಿಧಿ ಇಲ್ಲದೇ ನನ್ನ ಜಾತಕವನ್ನು ಒಬ್ಬ ಅಪರಿಚಿತರ ಕೈಗೆ ಒಪ್ಪಿಸಿ ಬಂದಿದ್ದೆ . ಈಗ ಮಾತನಾಡುತ್ತಿರುವುದು ಅದರ ಬಗ್ಗೆಯೇ ಅಂತ ಗೊತ್ತಾಯ್ತು . ಮ್ಯಾಟ್ರಿಮೋನಿಯಲ್ ನಲ್ಲಿ ಮೊದಲು ಆಕರ್ಷಣೆಗೆ ಒಳಗಾಗುವುದೇ ನಮ್ಮ ಫೋಟೋ . ಅದು ಇಷ್ಟವಾದರೆ ಉಳಿದ ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ . ನಾವೂ ಸಹ ಹಾಗೆಯೇ ತಾನೇ ..? ಮದುವೆಯಾಗಬೇಕಾದ ಹುಡುಗನನ್ನು ಮೊದಲು ಫೋಟೋ ನೋಡಿಯೇ ತಾನೇ ಒಪ್ಪುವುದು . ಹುಡುಗರ ಫೋಟೋ ಯಾವತ್ತಿಗೂ ಒಂದೇ ಥರ . ನೋ ಚೇಂಜ್ . ಆದರೆ ನಮ್ಮದು ಹಾಗಲ್ಲ . ಏಕೆಂದರೆ ಹುಡುಗಿಯರ ಫೋಟೋ ಎಂದರೆ