ಕವಿ ಮತ್ತು ಕಾವ್ಯದ ಮೇಲೆ William Wordsworth ನ ವಿಚಾರಧಾರೆ ಎಂ.ಎ.ಕನ್ನಡ
Wordsworth (1770) ಇಂಗ್ಲೀಷ್ ಭಾಷೆಯ ಒಬ್ಬ ಶ್ರೇಷ್ಠ ಕವಿ. ಕನ್ನಡ ನವೋದಯದ ಕವಿಗಳ ಮೆಚ್ಚುಗೆ ಪಡೆದವನು. Wordsworth ನಿಗೆ ಚಿಕ್ಕ ವಯಸ್ಸಿನಿಂದಲೂ ನಿಸರ್ಗದಲ್ಲಿ ಅಪಾರವಾದ ಪ್ರೇಮ. ಒಂದು ರೀತಿಯಾದ ಅಸಾಧಾರಣ ಆಕರ್ಷಣೆ. ಫ್ರಾನ್ಸಿನ ಮಹಾಕ್ರಾಂತಿಯ ತತ್ವಗಳಿಂದ ಆಕರ್ಷಿತನಾಗಿದ್ದವನು, ಈ ಕ್ರಾಂತಿಯಿಂದ ಉಂಟಾದ ಕ್ರೌರ್ಯ, ರಕ್ತಪಾತಗಳನ್ನು ಕಂಡು ರೋಸಿದವನು. 1839 ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯ ಈತನಿಗೆ ಗೌರವ ಡಾಕ್ಟರೇಟ್ ನೀಡಿದೆ. Wordsworth ಕಾವ್ಯ ಜೀವನದಲ್ಲಿ ಗಾಢ ಪ್ರಭಾವವನ್ನು ಬೀರಿದವರಲ್ಲಿ ಇಬ್ಬರು ಪ್ರಮುಖರು. ಅವರೆಂದರೆ ಒಬ್ಬಳು ಅವನ ತಂಗಿ ಡೊರೋಥಿ, ಮತ್ತೊಬ್ಬ ಶ್ರೇಷ್ಠ ಕವಿ-ವಿಮರ್ಶಕ ಎಸ್.ಟಿ.ಕೊಲರಿಜ್. 1798ರಲ್ಲಿ “ ಲಿರಿಕಲ್ ಬ್ಯಾಲೆಡ್ಸ್ ” ಎಂಬ Wordsworthನ ಕವನ ಸಂಕಲನ ಹೊರಬಂತು. ಈ ಕವನ ಸಂಕಲನವು “ರೊಮ್ಯಾಂಟಿಕ್ ಕಾವ್ಯ” ದ ಉದಯವನ್ನು ಸ್ಪಷ್ಟವಾಗಿ ಸಾರಿತು. ಇದರಲ್ಲಿ Wordsworth ಮತ್ತು ಕೊಲರಿಜ್ ಇಬ್ಬರ ಕವನಗಳೂ ಇವೆ. Wordsworth ಅತಿ ಸಾಮಾನ್ಯ ಎನ್ನಿಸುವಂತಹ ವಿಷಯದ ಮೇಲೆಯೂ ಕವನ ಬರೆದಿದ್ದಾನೆ. ಈ ಮೂಲಕ ರೊಮ್ಯಾಂಟಿಕ್ ಚಳುವಳಿಯ ನಾಯಕನಾಗಿದ್ದಾನೆ. ಕಾವ್ಯಭಾಷೆಯ ಕೃತಕತೆ ನಿವಾರಿಸಿ ಕಾವ್ಯ ಭಾಷೆಯನ್ನು ಸಹಜಗೊಳಿಸಿದ್ದಾನೆ. Wordsworth ಕವನಗಳು: ಪ್ರಿಲ್ಯೂಡ್ ದಿ ಡಫೋಡಿಲ್ಸ್ ಮೈಕೆಲ್ ರೆಸಲ್ಯೂಷನ್ ಅಂಡ್ ಇಂಡಿಪೆಂಡೆನ್ಸ್ Wordsw...