Article about Aliens-ಮನುಷ್ಯನೆಂಬ ಅಹಂಕಾರ

ಲೇಖನ: "ಮನುಷ್ಯನೆಂಬ ಅಹಂಕಾರ" ಭೂಮಿಯಿಂದ ದೂರವಿರುವ ಯಾವುದೋ ಗ್ರಹದಲ್ಲಿ ಜೀವಿಗಳು ಇರುವ ಕುರುಹು ಕಾಣಿಸಿದೆ. ಆ ಕುರುಹು ನೀರಿನಲ್ಲಿ ವಾಸಿಸಬಲ್ಲ ಸೂಕ್ಷ್ಮಾಣುಗಳದ್ದು. ಅಂದರೆ ಈ ಜೀವಿಗಳು ಇನ್ನೂ ಮೊದಲ ಹಂತದಲ್ಲಿವೆ. ಅಲ್ಲದೇ ಇವು ಸ್ವತಂತ್ರವಾಗಿ ಯೋಚಿಸಲಾಗದ ಜೀವಿಗಳ ಗುಂಪು. ಮುಂದೆ ಇವು ಅನೇಕ ಅನೇಕ ಕೋಶ ಜೀವಿಗಳಾಗಿ ಬೆಳೆದು, ಅಲ್ಲಿನ ಪರಸರಕ್ಕೆ ತಕ್ಕ ಪ್ರಾಣಿಗಳಾಗಿ, ನಂತರ ಸ್ವತಂತ್ರವಾಗಿ ಯೋಚಿಸಬಲ್ಲ (ಮಾನವನಂತೆ) ಪ್ರಾಣಿಯಾಗಲು ಬಹಳಷ್ಟು ಸಮಯವಿದೆ. ಅಲ್ಲಿಯತನಕ ಆ ಜೀವಿಗಳ ಪಾಡೇನು? ಅದರ ಆಹಾರವೇನು? ಅದರ ನಿದ್ರೆ ಮತ್ತಿತರ ನೈಸರ್ಗಿಕ ಅವಶ್ಯಕತೆಗಳೇನು? ಅದು ಒಂದೇ ಇದ್ದರೆ ಸಂತಾನೋತ್ಪತ್ತಿ ಹೇಗಾಗುತ್ತದೆ. ಅದೆಲ್ಲವೂ ಅತ್ತಗಿರಲಿ... ಆ ಪ್ರಾಣಿ ಅಥವಾ ಮಾನವ ಇರಲು ಮನೆಯಿಲ್ಲದೇ, ಓಡಾಡಲು ಕಾರ್-ಬಸ್ ಇಲ್ಲದೇ ಯಾವ ಮನೋರಂಜನೆಯೂ ಇಲ್ಲದೇ ಹೇಗೆ ಇರಲು ಸಾಧ್ಯ? ಹಾಗಿದ್ದರೆ........ ಹಾರುವ ತಟ್ಟೆಗಳಲ್ಲಿ ಆಗಾಗ ನಮಗೆ ದರ್ಶನ ಕೊಡುವವರು ಯಾರು??? ನಮ್ಮ ಕಲ್ಪನೆಯಲ್ಲಿ ಏಲಿಯನ್ಸ್ ಎಂದರೆ ಬೇರೆ ಗ್ರಹದ ಜೀವಿಗಳಿಗೆ ಮನುಷ್ಯನಿಗಿಂತಲೂ ತುಂಬಾ ಮುಂದುವರೆದ ಸ್ಥಾನ ಕೊಟ್ಟಿದ್ದೀವಿ. ನಮ್ಮ ಪ್ರಕಾರ ಅವರು ತಂತ್ರಜ್ಞಾನದ ಪರಾಕಾಷ್ಠೆ ತಲುಪಿದವರು. ತಮ್ಮ ಮೆದುಳಿನ ನೂರಕ್ಕೆ ನೂರು ಭಾಗದಷ್ಟು ಶಕ್ತಿಯನ್ನು ಪೂರ್ತಿಯಾಗಿ ಉಪಯೋಗಿಸಿಕೊಂಡವರು. ಒಂದ...