ಪೋಸ್ಟ್‌ಗಳು

ಪೌರಾಣಿಕ-ಲೇಖನ : ಏಕಲವ್ಯ (ಓ ಮನಸೇ)

ಇಮೇಜ್
ಮಹಾಭಾರತ ಎಂದರೆ ಎಲ್ಲರೂ ಬರೇ ದಾಯಾದಿಗಳ ದ್ವೇಷದ ಕಥೆ ಅಂತಲೇ ತಿಳಿಯುತ್ತಾರೆ. ಅದರ ಹಿಂದಿನ ಸತ್ಯ ಯಾರಿಗೂ ಬೇಕಿಲ್ಲ. ಏಕಲವ್ಯನ ಬಗ್ಗೆಯೂ ಹಾಗೆಯೇ ತಿಳಿಯುತ್ತಾರೆ. ದ್ರೋಣರು ಅರ್ಜುನನ ಮೇಲಿನ ಪ್ರೀತಿಯಿಂದ, ತಮ್ಮ ಮೆಚ್ಚಿನ ಶಿಷ್ಯನಾದ ಅರ್ಜುನನನ್ನು ಮಾತ್ರವೇ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಏಕಮಾತ್ರ ಕಾರಣದಿಂದಾಗಿ ಏಕಲವ್ಯನಿಂದ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು ಅಂತ. ಆದರೆ ವಾಸ್ತವ ಬೇರೆಯೇ ಇದೆ. ಮಹಾಭಾರತದ ಸಮಯದಲ್ಲಿ ಹಸ್ತಿನಾವತಿಯನ್ನು ದುರ್ಯೋಧನ ಆಳುತ್ತಿದ್ದ. ಎಲ್ಲ ರೀತಿಯಿಂದ ಅರ್ಹರಾಗಿದ್ದ ಪಾಂಡವರು ಕಾಡಿನಲ್ಲಿದ್ದರು. ದುರ್ಯೋಧನನ ನಿಯಮದಂತೆ ಪಾಂಡವರು ವನವಾಸ, ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ಅವರಿಗೆ ಅವರ ನೆಲ ಕೊಡಲಿಲ್ಲ. ಹಾಗಾಗಿ ಯುದ್ಧ ನಡೆಯಿತು. ಹಾಗಾದರೆ ಕೇವಲ ನೆಲಕ್ಕಾಗಿ ಯುದ್ಧ ನಡೆಯಿತೇ? ಖಂಡಿತಾ ಇಲ್ಲ. ಪಾಂಡವರು ತಮ್ಮ ನೆಲವನ್ನು ವಾಪಸ್ ಪಡೆಯದಿದ್ದರೆ ಯುಗಾಂತರದವರೆಗೂ ದುರ್ಯೋಧನನ ವಂಶಸ್ಥರೇ ಭರತ ಭೂಮಿಯನ್ನು ಆಳುತ್ತಿದ್ದರು. ಆಗ ಭೂಮಿಯಲ್ಲಿ ಕೇವಲ ಅಧರ್ಮವೇ ತಾಂಡವವಾಡುತ್ತಿತ್ತು. ಅದನ್ನು ತಪ್ಪಿಸಿ ಭೂಮಿಯಲ್ಲಿ ಧರ್ಮ ನೆಲೆಸುವಂತೆ ಮಾಡಲು ಹಸ್ತಿನಾವತಿ ಪಾಂಡವರಿಗೆ ದೊರೆಕಲೇ ಬೇಕಿತ್ತು. ಅದೂ ನ್ಯಾಯಯುತವಾಗಿ ಅವರದನ್ನು ಪಡೆಯಬೇಕಿತ್ತು. ಈ ನಿಟ್ಟಿನಲ್ಲಿ ಐವರು ಪಾಂಡವರೂ ಒಬ್ಬೊಬ್ಬರೂ ಒಂದೊಂದು ವಿದ್ಯೆಯಲ್ಲಿ ನಿಷ್ಣಾತರಾಗಿದ್ದರು. ಅವರಲ್ಲಿ ಅರ್ಜುನ ಬಿಲ್ಲುಗ

ಪೌರಾಣಿಕ-ಲೇಖನ : shoorpanakhi

      ರಾಮಾಯಣದ ಎಲ್ಲಾ ಘಟನೆಗಳಿಗೂ ಮೂ¯ ಕಾರಣರಾದವರು ಇಬ್ಬರು. ಒಬ್ಬಳು ರಾಮನನ್ನು ಕಾಡಿಗಟ್ಟಿದ ಕೈಕೇಯಿಯಾದರೆ ಮತ್ತೊಬ್ಬಳು ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖಿ. ಶೂರ್ಪನಖಿ ಲಂಕಾಧಿಪತಿ ರಾವಣನ ತಂಗಿ. ರಾಮಾಯಣದ ಅನುಸಾರ ಶೂರ್ಪನಖಿಗೆ ಮದುವೆಯಾಗಿರುತ್ತದೆ. ಆದರೆ ಅವಳ ಗಂಡನನ್ನು ರಾವಣನೇ ಕೊಲ್ಲಿಸಿರುತ್ತಾನೆ. ಹಾಗಾಗಿ ಅಣ್ಣನ ಮೇಲಿನ ಕೋಪದಿಂದ ದಂಡಕಾರಣ್ಯದಲ್ಲಿ ತಿರುಗುತ್ತಿರುತ್ತಾಳೆ. ಹೀಗೆ ಅರಣ್ಯದಲ್ಲಿ ತಿರುಗಾಡುತ್ತಿದ್ದಾಗ ಪಂಚವಟಿಯಲ್ಲಿ ಕಂಡ ರಾಮನಿಗೆ ಮನಸೋಲುತ್ತಾಳೆ ಶೂರ್ಪನಖಿ. ಆದರೆ ತನ್ನ ಮನದಾಸೆಯನ್ನು ರಾಮನಲ್ಲಿ ಹೇಳಿ. ನಂತರ ಆ ಬಯಕೆಯು ಕೈಗೂಡದೆ ತನ್ನ ಕಿವಿ-ಮೂಗು ಕಳೆದುಕೊಳ್ಳುತ್ತಾಳೆ. ಆದ ಅಪಮಾನ ತಾಳಲಾಗದೇ ಈ ಬಗ್ಗೆ ತನ್ನ ಅಣ್ಣ ಖರಾಸುರನಿಗೆ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ಧ ಮಾಡಿ ಮಡಿಯುತ್ತಾನೆ. ನಂತರ ಶೂರ್ಪನಖಿಯು ಲಂಕೆಯಲ್ಲಿರುವ ತನ್ನ ಅಣ್ಣ ರಾವಣನಲ್ಲಿಗೆ ದೂರು ಕೊಡಲು ಹೋದವಳು, ಸೀತೆಯ ಗುಣ ಮತ್ತು ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ-ರಾವಣರ ಯುದ್ಧದಲ್ಲಿ ಕೊನೆಯಾಗುತ್ತದೆ. ಕಾಡಿನಲ್ಲಿ ತಿರುಗಾಡುತ್ತಿದ್ದಾಗ ಶೂರ್ಪನಖಿ ರಾಮನನ್ನು ಕಂಡು ಇಷ್ಟ ಪಟ್ಟದ್ದು ತಪ್ಪಲ್ಲ. ಹೆಣ್ಣು-ಗಂಡುಗಳು ಭಿನ್ನಲಿಂಗಿಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆಗೊಳಗಾಗುವುದು ಸಹಜ. ಆದರೆ ಪ್ರೀತಿಸಲು ಅಥವಾ ಪ್ರೇಮಿಸಲು ಅವರೂ ತಮ್ಮ

ಪೌರಾಣಿಕ-ಲೇಖನ : ಹಿಡಿಂಬೆ

ಇಮೇಜ್
ಎಲ್ಲಾ ಕ್ರಿಯೆಗಳಿಗೂ ಒಂದು ಮೂಲ ಕಾರಣ ಅಂತ ಇದ್ದೇ ಇರುತ್ತದೆ. ಎಂದೋ ಸಂಭವಿಸಬೇಕಾದ ಒಂದು ಮಹಾಯುದ್ಧಕ್ಕೆ ಬಹಳ ಪೂರ್ವದಿಂದಲೇ ತಯಾರಿ ಪ್ರಾರಂಭವಾಗಿರುತ್ತದೆ. ಕುರುಕ್ಷೇತ್ರ ಯುದ್ಧ ನಡೆದದ್ದು ಕೌರವ-ಪಾಂಡವರ ನಡುವೆಯಾದರೂ ಅದಕ್ಕೆ ಮುನ್ನುಡಿ ಬರೆದವಳು ಸತ್ಯವತಿ. ಶಂತನು ಸತ್ಯವತಿಯನ್ನು ಕಂಡು ಮೋಹಗೊಳ್ಳದಿದ್ದರೆ, ಸತ್ಯವತಿ ಅವನಿಗೆ ಮದುವೆಯಾಗಲು ಷರತ್ತು ಹಾಕದಿದ್ದರೆ, ಭೀಷ್ಮ ಆಜೀವ ಬ್ರಹ್ಮಚರ್ಯದ ಕಠಿಣ ನಿರ್ಧಾರ ಕೈಗೊಳ್ಳದಿದ್ದರೆ ಮಹಾಭಾರತ ಯುದ್ಧ ನಡೆಯುತ್ತಲೇ ಇರಲಿಲ್ಲ. ಹಾಗೆಯೇ ಆ ಮಹಾಯುದ್ಧದಲ್ಲಿ ಅರ್ಜುನನು ಕರ್ಣನ ಶಕ್ತ್ಯಾಯುಧಕ್ಕೆ ಬಲಿಯಾಗದಂತೆ ತಡೆಯಲು ಪರೋಕ್ಷ ಕಾರಣನಾಗುವವನು ಘಟೋತ್ಕಚ. ಇವನು ಹಿಡಿಂಬೆಯ ಮಗ.  ಹಿಡಿಂಬೆ ಹುಟ್ಟಿನಿಂದ ರಾಕ್ಷಸಿಯಾದರೂ ಮಾನವರ ಸಕಲ ಗುಣ ಉಳ್ಳವಳು. ಉದಾರಿ, ಪ್ರೇಮಮಯಿ, ವೇದವ್ಯಾಸರ ಒಪ್ಪಂದದಂತೆ ತನಗೆ ಮಗ ಹುಟ್ಟುವವರೆಗೆ ಮಾತ್ರವೇ ಭೀಮನನ್ನು ಗಂಡನಾಗಿ ಪಡೆದಿದ್ದರೂ, ಜೀವನ ಪೂರ್ತಿ ಅವನ ನೆನಪಿನಲ್ಲಿಯೇ ಕಳೆಯುತ್ತಾಳೆ. ಆದರ್ಶ ನಾರಿಯಾಗಿ ಗಮನ ಸೆಳೆಯುತ್ತಾಳೆ. ಇದು ರಾಕ್ಷಸರ ಸ್ವಚ್ಚಂದ ಮನೋಭಾವದ ವಿರೋಧಾಭಾಸವಾಗಿ ಕಂಡು ಬರುತ್ತದೆ. ಎಲ್ಲೋ ನಿಮಿತ್ತವಾಗಿ ಬರುವ ಹಿಡಿಂಬೆ ಭೀಮ ಅವಳಿಂದ ದೂರಾದಾಗ ಓದುಗರ ಮನಸ್ಸಿನಿಂದಲೂ ಮರೆಯಾಗುತ್ತಾಳೆ.  ಪಂಚ ಪಾಂಡವರು ತಮ್ಮ ತಾಯಿ ಕುಂತಿಯೊಂದಿಗೆ ಅರಗಿನ ಅರಮನೆಯ ಗುಪ್ತದ್ವಾರದಿಂದ ತಪ್ಪಿಸಿಕೊಂಡು ರಾತ್ರೋ ರಾತ್ರಿ ಕಾಡಿನಲ್ಲಿ ನಡೆಯುತ್ತಾ ಮುನ

ಕವನ: "ಆತ್ಮ"

ನಾ ಹೆಣ್ಣಲ್ಲ ನಾ ಗಂಡಲ್ಲ ಆದರೂ ಗಂಡೆಂದು ಹೆಣ್ಣೆಂದು ಅಭಿಮಾನ ಪಡುತ್ತೇನೆ.. ನನಗೆ ಶರೀರವಿಲ್ಲ ಅಹಂಕಾರವಿಲ್ಲ ಆದರೂ ಮಾಡಿದ್ದೆಲ್ಲ ನಾನೆಂದು ಅಭಿಮಾನ ಪಡುತ್ತೇನೆ.. ನನಗೆ ಹೆಸರಿಲ್ಲ ಅಲಂಕಾರವಿಲ್ಲ ಆದರೂ ನಾನು ಚಿರಂಜೀವಿಯೆಂದು ಅಭಿಮಾನ ಪಡುತ್ತೇನೆ.. ನನಗೆ ಸಂಬಂಧಗಳಿಲ್ಲ ನನಗೆಂದು ಯಾರಿಲ್ಲ ಆದರೂ ಎಲ್ಲರೂ ನನ್ನವರೆಂದು ಅಭಿಮಾನ ಪಡುತ್ತೇನೆ.. ನನಗೆ ಪ್ರೀತಿಯಿಲ್ಲ ದ್ವೇಷ ಮತ್ಸರಗಳಿಲ್ಲ ಆದರೂ ರಾಗ-ದ್ವೇಷಗಳಲ್ಲಿ ಮುಳುಗಿ ನರಳುತ್ತೇನೆ.. ನನಗೆ ಹಿಂದಿಲ್ಲ ಮುಂದಿಲ್ಲ ಆದರೂ ಎಲ್ಲೆಡೆ ನಾನಿದ್ದೇನೆಂದು ಭ್ರಮೆ ಪಡುತ್ತೇನೆ.. ನನಗೆ ಹುಟ್ಟಿಲ್ಲ ಸಾವಿಲ್ಲ ಆದರೂ ಎಲ್ಲರ ಮನಸ್ಸೂ ನಾನೆಂದು ಅಭಿಮಾನ ಪಡುತ್ತೇನೆ.. * * * * * * * * * * * * * * * * * * * * * * * * ಕೆ.ಎ.ಸೌಮ್ಯ ಮೈಸೂರು  

ವಾತಾಪಿ ಗಣಪತಿ : ಎಂ.ಎ.ಕನ್ನಡ

  ಬಾದಾಮಿಯ ಮೊದಲ ಹೆಸರು “ ವಾತಾಪಿ ”. ಉತ್ತರ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯಲ್ಲಿನ ಬಾದಾಮಿ ಪಟ್ಟಣವು ಕ್ರಿ.ಶ. ಆರನೇ ಶತಮಾನದಿಂದ ಕ್ರಿ.ಶ. ಎಂಟನೇ ಶತಮಾನದವರೆಗೂ ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯರ ಸಾಮ್ರಾಜ್ಯವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳನ್ನು ಒಳಗೊಂಡಿತ್ತು. ಇದು ದಕ್ಷಿಣ ಭಾರತದಲ್ಲಿಯೇ ವೈವಿಧ್ಯಮಯವಾದ ದೇವಾಲಯಗಳ ನಿರ್ಮಾಣಕ್ಕೆ ಸಾಕ್ಷಿಯಾದ ಪಟ್ಟಣವಾಗಿದೆ. “ ವಾತಾಪಿ ಗಣಪತಿಂ ಭಜೇಹಂ ” ಎಂಬ ಪ್ರಖ್ಯಾತವಾದ ಈ ರಚನೆ ಹಂಸಧ್ವನಿ ರಾಗದಲ್ಲಿದೆ. ಇದರ ರಚನಕಾರರು ಮುತ್ತುಸ್ವಾಮಿ ದೀಕ್ಷಿತರು.  ಇವರು ಕರ್ನಾಟಕದ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರು. ಮುತ್ತುಸ್ವಾಮಿ ದೀಕ್ಷಿತರು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ರಚನೆಗಳನ್ನು ಮಾಡಿದ್ದಾರೆ. ಆ ರಚನೆಗಳಲ್ಲಿ ಎರಡು ಅಥವಾ ಮೂರು ರಚನೆಗಳು ಮಾತ್ರ ತೆಲುಗು ಅಥವಾ **ಮಣಿಪ್ರವಾಳದಲ್ಲಿದ್ದು, ಉಳಿದ ರಚನೆಗಳೆಲ್ಲಾ ಸಂಸ್ಕೃತದಲ್ಲಿದೆ. ಇವರ ರಚನೆಗಳು ಸಂಗೀತಸುಧೆಯಿಂದ ತುಂಬಿವೆ. ಮುತ್ತುಸ್ವಾಮಿ ದೀಕ್ಷಿತರ ಹುಟ್ಟೂರು ತಂಜಾವೂರಿನ ಬಳಿಯ ತಿರುವಾರೂರು. ಇವರು ನಮ್ಮ ದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿನ ದೇವಾನುದೇವತೆಗಳ ಬಗ್ಗೆ ಸಂಗೀತ ರಚಿಸಿದ್ದಾರೆ. “ವಾತಾಪಿ ಗಣಪತಿ”ಗೆ ಹಾಗೆ ಹೆಸರು ಬರಲು ಒಂದು ಕಾರಣವಿದೆ. ಚಾಲುಕ್ಯರು ಕರ್ನಾಟಕವನ್ನು ಆಳುತ್ತಿದ್ದ ಕಾಲದಲ್ಲಿ, ಚಾಲುಕ್ಯರ ಪ್ರಖ್ಯಾತ ದೊರೆಯಾದ ಇಮ್ಮಡಿ ಪುಲಿಕೇಶಿಯು ತನ್ನ ಸಾಮ್ರ

ಅಕ್ಕಮಹಾದೇವಿಯ (Akka Mahadevi) ಕವನಗಳ ವೈಶಿಷ್ಟ್ಯ : ಎಂ.ಎ.ಕನ್ನಡ

ಇಮೇಜ್
ಅಕ್ಕಮಹಾದೇವಿ ಮೂಲತಃ ಆಧ್ಯಾತ್ಮ ಸಾಧಕಳು. ತನ್ನ ಇಷ್ಟ ದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವಳ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಆಕೆ ಬಾಲ್ಯದಿಂದಲೂ ಹಂಬಲಿಸಿದಳು. ಅವಳ ಆ ಹಂಬಲಿಕೆಯ ಪ್ರತಿಬಿಂಬವೇ ಈ ವಚನಗಳು. ಈ ದಾರಿಯಲ್ಲಿ ಸಾಗುವಾಗ ಅನೇಕ ಅಡ್ಡಿ-ಆತಂಕಗಳನ್ನು ದಿಟ್ಟೆಯಾಗಿ ಎದುರಿಸಿದವಳು ಅಕ್ಕ. ಆಕೆಯದು ಸಿದ್ಧಿಸಿಕೊಂಡ ವೈರಾಗ್ಯವೇ ಹೊರತು ಸಿದ್ಧ ವೈರಾಗ್ಯವಲ್ಲ. ಸಿದ್ಧಿಯ ಮೆಟ್ಟಿಲನ್ನು ಏರುವಾಗ ಸಹಜವಾದ ಘರ್ಷಣೆ ಆಕೆಗಿತ್ತು. ಅದಕ್ಕೆಂದೇ ಅಕ್ಕ ತನ್ನನ್ನು ತಾನೇ ಕಠೋರ ವಿಮರ್ಶೆಗೆ ಒಳಪಡಿಸಿಕೊಂಡು ಅದನ್ನು ತನ್ನ ವಚನಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ಅಭಿವ್ಯಕ್ತಿಸಿದ್ದಾಳೆ. ತನ್ನನ್ನು ಈ ಮತ್ರ್ಸದ ಸೆಳೆತದಿಂದ ಕಾಪಾಡುವಂತೆ ಚೆನ್ನಮಲ್ಲಿಕಾರ್ಜುನನಲ್ಲಿ ಮೊರೆ ಹೋಗುತ್ತಾಳೆ.  “ ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲನ್ನು ತಾನೇ ಸುತ್ತಿ ಸುತ್ತಿ ಸಾವ ತೆರನಂತೆ” ಈ ವಚನದಲ್ಲಿ ಭಕ್ತಿಯ ಕ್ರಿಯಾಹೀನತೆಯ ಬಗ್ಗೆ ಹೇಳಲಾಗಿದೆ. ಆದರೆ ತನ್ನದು ಅನನ್ಯವಾದ ಭಕ್ತಿ, ತಾನು ಬೇರೆಯಲ್ಲ, ಚನ್ನಮಲ್ಲಿಕಾರ್ಜುನ ಬೇರೆಯಲ್ಲ ಎಂಬ ಅರಿವು ತನಗಿದೆ ಎನ್ನುತ್ತಾಳೆ.  ಅಕ್ಕಮಹಾದೇವಿ ಪ್ರಕೃತಿ ಪ್ರೇಮಿ. ಪ್ರಕೃತಿಯ ಚರಾಚರ ವಸ್ತುಗಳನ್ನೂ ತನ್ನ ಕವನದಲ್ಲಿ ದೃಷ್ಟಾಂತವನ್ನಾಗಿಸುತ್ತಾಳೆ.  “ ಈಳೆ, ನಿಂಬೆ, ಮಾವು ಮೊದಲಕ್ಕೆ  ಹುಳಿನೀರನೆರೆದವರಾರಯ್ಯ? ತೆಂಗು, ಹಲಸು, ಬಾಳೆ, ನಾ

ಅಚ್ಛೋದ ಮತ್ತು ವೈಶಂಪಾಯನ ಸರೋವರದ ವಿಶ್ಲೇಷಣೆ : ಎಂ.ಎ.ಕನ್ನಡ

ಕವಿ ಪರಿಚಯ: ಕುವೆಂಪು ಅವರು ಬೇಂದ್ರೆಯವರು ಹೇಳುವ ಹಾಗೆ “ಯುಗದ ಕವಿ; ಜಗದ ಕವಿ”. ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆಯಿಂದಾಗಿ ಕವಿಯ ಬದುಕಿನ ದಿಕ್ಕೇ ಬದಲಾಯ್ತು. ತಮ್ಮ ಮೊದಲ ಕೃತಿಯಾದ “ಅಮಲನ ಕಥೆ”ಯನ್ನು ಕಿಶೋರಚಂದ್ರವಾಣಿ ಎಂಬ ಕಾವ್ಯನಾಮದಿಂದ ಹೊರತಂದವರು, ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆದರು. 1922ರಿಂದ 1985ರವರೆಗೆ ನಿರಂತರವಾಗಿ ಬರೆದರು ಕುವೆಂಪು. ಹೆಸರು: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕಾವ್ಯನಾಮ: ಕುವೆಂಪು ಜನನ : 1904 ಜ್ಞಾನಪೀಠ ಬಂದ ವರ್ಷ : 1968 ಜ್ಞಾನಪೀಠ ಬಂದ ಕೃತಿ: ಶ್ರೀ ರಾಮಾಯಣ ದರ್ಶನಂ ಕುವೆಂಪು ಮೂಲತಃ ಕವಿ. ಕವಿಗಿಂತಲೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರರು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಕುವೆಂಪು ಶ್ರೇಷ್ಠ ಕವಿಯೂ ಹೌದು, ಶ್ರೇಷ್ಠ ಕಾದಂಬರಿಕಾರರೂ ಹೌದು ಮತ್ತು ವಿಮರ್ಶಕರೂ ಹೌದು. ಕುವೆಂಪು ಅವರ ವಿಮರ್ಶೆ ಇತರ ವಿಮರ್ಶೆಗಳಂತಲ್ಲ. ಅವುಗಳಲ್ಲಿ ದಾರ್ಶನಿಕತೆಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಕುವೆಂಪು ಅವರದ್ದು ದಾರ್ಶನಿಕ ವಿಮರ್ಶೆ. ಲೌಕಿಕ ಮತ್ತು ಪಾರಮಾರ್ಥಿಕ ಎರಡಕ್ಕೂ ಸೇತುವೆ ಕಟ್ಟಿ ಕೊಟ್ಟವರು ಕುವೆಂಪು. ಅವರ ಬರಹಗಳು ಆಧ್ಯಾತ್ಮ ಮತ್ತು ವೈಚಾರಿಕತೆಯಿಂದ ಕೂಡಿರುತ್ತವೆ. ವಿಷಯಗಳ ತಲಸ್ಪರ್ಶಿ ಅಧ್ಯಯನ, ತಾತ್ವಿಕ ವಾದ ಮಂಡನೆ, ಉಚಿತ ಪುರಾವೆಗಳಿಂದ ಸಮರ್ಥನೆ, ನಿಖರವಾದ ನಿಲುವು ಇವು ಕುವೆಂಪು ಅವರ ವಿಮರ್ಶಾ ಲೇಖನದ ಲಕ್ಷಣವಾಗಿದೆ. ಸರೋವರದ ಸಿರಿಗನ್ನಡ