ಪೋಸ್ಟ್‌ಗಳು

ಕೋಡಿಮಠದ ಶಾಸನದ ಭಾಷಿಕ ಮತ್ತು ಸಾಹಿತ್ಯಿಕ ಮಹತ್ವ

  ಪೀಠಿಕೆ :  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.                    ಶಾಸನ    : ಕೋಡಿಮಠದ ಶಾಸನ ಶಾಸನ ದೊರೆತ ಸ್ಥಳ  : ಶಿವಮೊಗ್ಗ ಜಿಲ್ಲೆಯ                                     ಶಿಕಾರಿಪುರ                                   ತಾಲ್ಲೂಕಿನ ಬಳ್ಳಿಗಾವೆ         ಶಾಸನದ ಕಾಲ   : ಕ್ರಿ ಶ 12 ನೇ ಶತಮಾನ      ಶಾಸನದ ಎತ್ತರ    : 8 ಅಡಿ ಎತ್ತರ                                4  ಅಡಿ 3 ಅಂಗುಲ ಅಗಲ     ಕಂಡುಹಿಡಿದವರು   : ಬಿ. ಎಲ್. ರೈಸ್     ಪ್ರಕಟಿಸಿದ ವರ್ಷ    : 1902 ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ. ನಂತರ...

ದೇಕಬ್ಬೆಯ ಶಾಸನದ ಹಿನ್ನೆಲೆಯಲ್ಲಿ ಸತಿ ಪದ್ಧತಿಯ ಪರಿಚಯ

ಪೀಠಿಕೆ :  ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ.  ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು.  ಚಿತೆಯನ್ನು ಸಿದ್ಧಪಡಿಸಲಾಯ್ತು.  ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು. ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು. ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ.  ...

ಕೋಡಿಮಠ ಒಂದು ಸಾಂಸ್ಕೃತಿಕ ಕೇಂದ್ರ

ಪೀಠಿಕೆ :  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.                    ಶಾಸನ    : ಕೋಡಿಮಠದ ಶಾಸನ ಶಾಸನ ದೊರೆತ ಸ್ಥಳ  : ಶಿವಮೊಗ್ಗ ಜಿಲ್ಲೆಯ                                     ಶಿಕಾರಿಪುರ                                   ತಾಲ್ಲೂಕಿನ ಬಳ್ಳಿಗಾವೆ         ಶಾಸನದ ಕಾಲ  : ಕ್ರಿ ಶ 12 ನೇ ಶತಮಾನ      ಶಾಸನದ ಎತ್ತರ    : 8 ಅಡಿ ಎತ್ತರ                                4  ಅಡಿ 3 ಅಂಗುಲ ಅಗಲ     ಕಂಡುಹಿಡಿದವರು   : ಬಿ. ಎಲ್. ರೈಸ್     ಪ್ರಕಟಿಸ...

ದೇಕಬ್ಬೆ ಶಾಸನ : ಟಿಪ್ಪಣಿ

ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿಯಾದ ದೇಕಬ್ಬೆ ರವಿಗ ಮತ್ತು ಪೊನ್ನಕ್ಕರ ಮಗಳು. ಆಕೆ ವಿವಾಹವಾದುದು ನವಲೆನಾಡಿನ ಪ್ರಭುವಾದ ಏಚನನ್ನು. ಏಚ ತನ್ನ ಪತ್ನಿಯೊಡನೆ ಸುಖವಾಗಿ ಬಾಳುತ್ತಿದ್ದ. ಆತ ಒಬ್ಬ ಜಟ್ಟಿ, ಕುಸ್ತಿ ಪಟುವಾಗಿದ್ದ. ಯಾವುದೋ ಒಂದು ಸ್ಪರ್ಧೆಯಲ್ಲೋ ಅಥವಾ ಹೋರಾಟದಲ್ಲಿಯೋ ತನ್ನ ಎದುರಾಳಿಯನ್ನು ಏಚ ಇರಿದು ಕೊಂದುಬಿಟ್ಟ. ಅದಕ್ಕಾಗಿ ಆತನಿಗೆ ಮರಣದಂಡನೆ ಶಿಕ್ಷೆಯಾಯ್ತು. ಆತ ಮೃತನಾದ.  ದೇಕಬ್ಬೆಗೆ ಗಂಡನ ಸಾವಿನ ಸುದ್ದಿ ತಿಳಿದೊಡನೆ ಆಕೆ ಇಹಲೋಕವನ್ನು ತ್ಯಜಿಸಲು ನಿರ್ಧರಿಸಿದಳು .  ಚಿತೆಯನ್ನು ಸಿದ್ಧಪಡಿಸಲಾಯ್ತು.  ದೇಕಬ್ಬೆಯ ತಂದೆ, ತಾಯಿ, ಬಂಧು, ಬಳಗ, ಆಪ್ತೇಷ್ಟರು ಎಲ್ಲರೂ ಸೇರಿ ಆಕೆ ತನ್ನ ಸಂಕಲ್ಪ ಕೈ ಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರು. ಕಾಲು ಹಿಡಿದು ಕೇಳಿಕೊಂಡರು.‌ ದೇಕಬ್ಬೆ ವಿಚಲಿತಳಾಗಲಿಲ್ಲ. ಕೊಟ್ಟ ಮನೆಗೂ ಸೇರಿದ ಮನೆಗೂ ಶೋಭೆ ತರದ ಕೆಲಸ ತಾನು ಮಾಡುವುದಿಲ್ಲ ಎಂದು ದೇಕಬ್ಬೆ ಹೇಳಿಬಿಟ್ಟಳು. ನಂತರ ಜನರಿಗೆ ತನ್ನಲ್ಲಿರುವ ಬಟ್ಟೆ, ಬರೆ, ಆಭರಣ, ಹಣ ಎಲ್ಲವನ್ನೂ ಜನರಿಗೆ ಹಂಚಿ, ಬರಿಗೈಯಲ್ಲಿ ದೇವರಿಗೆ ನಮಿಸಿ, ಉರಿಯುತ್ತಿದ್ದ ಚಿತೆ ಹೊಕ್ಕಳು ದೇಕಬ್ಬೆ. ನಂತರ ಸತಿಯಾದಳು. ಈ ಶಾಸನದಲ್ಲಿ ದೇಕಬ್ಬೆಯ ಗುಣ ಪ್ರಶಂಸೆ ಮಾಡಲಾಗಿದೆ. ತನ್ನ ಮಗಳ ಸ್ಮಾರಕವಾಗಿ ಶಾಸನ ಸಹಿತವಾದ ಶಿಲಾಸ್ತಂಭವನ್ನು ಮಾಡಿಸಿದ್ದು ಆಕೆಯ ತಂದೆ ರವಿಗ.  ಪತಿಯ ಶವದ ಜೊತೆಯಲ್ಲಿಯೇ ಚಿತೆಯೇರಿ ಮರಣ ಹೊಂದುವ...

ಬಳ್ಳಿಗಾವೆಯ ಕೋಡಿಮಠದ ಶಾಸನ (ಟಿಪ್ಪಣಿ)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನದ ಪ್ರಾಕಾರದಲ್ಲಿ ಇರುವ ಅನೇಕ ಶಿಲಾಶಾಸನಗಳಲ್ಲಿ ಇದೂ ಒಂದು.                    ಶಾಸನ    : ಕೋಡಿಮಠದ ಶಾಸನ ಶಾಸನ ದೊರೆತ ಸ್ಥಳ : ಶಿವಮೊಗ್ಗ ಜಿಲ್ಲೆಯ                                     ಶಿಕಾರಿಪುರ                                   ತಾಲ್ಲೂಕಿನ ಬಳ್ಳಿಗಾವೆ         ಶಾಸನದ ಕಾಲ   : ಕ್ರಿ ಶ 12 ನೇ ಶತಮಾನ     ಶಾಸನದ ಎತ್ತರ    : 8 ಅಡಿ ಎತ್ತರ                                4  ಅಡಿ 3 ಅಂಗುಲ ಅಗಲ     ಕಂಡುಹಿಡಿದವರು   : ಬಿ. ಎಲ್. ರೈಸ್     ಪ್ರಕಟಿಸಿದ ವರ್ಷ    : 1902 ಶಾಸನವು ಶಿವನಮನದ ಮೂಲಕ ಆರಂಭವಾಗುತ್ತದೆ.  ನಂತರ ಶಿವನು ದೊರೆ ಬಿಜ್ಜಳನ ಆಸೆಗಳನ್ನು ಪೂರೈಸಲಿ ಎ...

ಆಧುನಿಕ ಕನ್ನಡ ಕಾವ್ಯದಲ್ಲಿ ಸಮಾಜ : ಡಿ.ಆರ್.ನಾಗರಾಜ್

ಡಿ.ಆರ್.ನಾಗರಾಜ್ :  ಡಿ.ಆರ್.ನಾಗರಾಜ್ ರವರು ದೊಡ್ಡಬಳ್ಳಾಪುರದಲ್ಲಿ ಹುಟ್ಟಿದರು. ಪ್ರಸ್ತುತ ಲೇಖನವನ್ನು ಅವರ ಸಂಶೋಧನಾ ಕೃತಿಯಾದ "ಶಕ್ತಿ ಶಾರದೆಯ ಮೇಳ" ಎಂಬ ಗ್ರಂಥದಿಂದ ಆರಿಸಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಆನರ್ಸ್ ಮತ್ತು ಎಂ.ಎ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಸೇವೆ ಆರಂಭಿಸಿದವರು, ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಭಾರತೀಯ ಭಾಷಾ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.  ಡಿ.ಆರ್.ನಾಗರಾಜ್ ಅವರು ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ಸಂಪಾದಕರಾಗಿ, ಪ್ರಾಧ್ಯಾಪಕರಾಗಿ ಇನ್ನೂ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಹೆಸರು : ಡಿ.ಆರ್.ನಾಗರಾಜ್ ಹುಟ್ಟಿದ ಸ್ಥಳ : ದೊಡ್ಡಬಳ್ಳಾಪುರ DOB : 20th Feb 1954 ತಂದೆ : ರಾಮಯ್ಯ ತಾಯಿ : ಅಕ್ಕಯ್ಯಮ್ಮ ನಂತರ ಡಿ.ಆರ್.ನಾಗರಾಜ್ ರವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ , ಬೆಂಗಳೂರು ವಿಶ್ವವಿದ್ಯಾಲಯದ ತೌಲನಿಕ ಸಾಹಿತ್ಯ ಕೇಂದ್ರ ವಿದ್ವಾಂಸರು, ಬೆಂಗಳೂರು ವಿಶ್ವವಿದ್ಯಾಲಯದ ಕೈಲಾಸಂ ಪೀಠದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಡಿ.ಆರ್.ನಾಗರಾಜ್ ಅವರ ಕೃತಿಗಳು :  ಅಮೃತ ಮತ್ತು ಗರುಡ ಶಕ್ತಿ ಶಾರದೆಯ ಮೇಳ ಪಾಶ್ಚಾತ್ಯ ಸಾಹಿತ್ಯ ದರ್ಶನ ಉರ್ದು ಸಾಹಿತ್ಯ ಪ್ರಶಸ್ತಿಗಳು :  ವರ್ಧಮಾನ ಪ್ರಶಸ್ತಿ ಶಿವ...

ಹೊಸ ಕವಿ, ಹೊಸ ಕಾವ್ಯ - ಪಿ. ಲಂಕೇಶ್

ಕವಿ ಪರಿಚಯ :  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ‌ ಕಂಡ ಅನನ್ಯ ಲೇಖಕ ಪಿ. ಲಂಕೇಶ್. ಸಾಮಾಜಿಕ ಕಳಕಳಿಯ ಜೊತೆಗೆ ಸೃಜನಶೀಲ ಪ್ರತಿಮಯನ್ನು ಪ್ರಾಮಾಣಿಕವಾಗಿ ದುಡಿಸಿಕೊಂಡ ಅಪರೂಪದ ಸಾಹಿತಿ. ಎಡಪಂಥೀಯ ನಿಲುವಿನೊಂದಿಗೆ ತಮ್ಮ ಪ್ರಜ್ಞೆ ರೂಪಿಸಿಕೊಂಡ ಲಂಕೇಶ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ, ಕಥೆ, ಕಾದಂಬರಿ, ನಾಟಕಕಾರರಾಗಿ, ವಿಮರ್ಶಕ, ಅನುವಾದಕರಾಗಿ, ನಟರಾಗಿ, ಸಿನೆಮಾ ನಿರ್ದೇಶಕರಾಗಿ, ಪತ್ರಕರ್ತರಾಗಿ ತಮ್ಮ ಛಾಪು ಮೂಡಿಸಿದವರು. ಕನ್ನಡ ನವ್ಯ ಸಾಹಿತ್ಯ ಕಾಲಘಟ್ಟದಲ್ಲಿ ತಮ್ಮ ಸೃಜನಶೀಲ ಬರಹಗಳ ಮೂಲಕ ಆರೋಗ್ಯಕರ ಸಂವಾದವನ್ನು ಹುಟ್ಟು ಹಾಕಿದ ಮಹತ್ವದ ಚಿಂತಕ.‌ ಹೆಸರು   :           ಪಿ. ಲಂಕೇಶ್ DOB    :            1935 ಸ್ಥಳ      :             ಶಿವಮೊಗ್ಗ ವಿದ್ಯಾಭ್ಯಾಸ :     ಇಂಗ್ಲಿಷ್ ಎಂ.ಎ ನಿರ್ದೇಶನ :        ಎಲ್ಲಿಂದಲೋ ಬಂದವರು, ಪಲ್ಲವಿ,                        ...