ಪಿ.ಬಿ.ಷೆಲ್ಲಿಯ ಕಾವ್ಯ ಸಮರ್ಥನೆ
ಕವಿ ಪರಿಚಯ : ಷೆಲ್ಲಿಯು ಇಂಗ್ಲೆಂಡಿನ ಒಂದು ಹಳ್ಳಿಯಲ್ಲಿ ಜನಿಸಿದ. ತಂದೆ ತಾಯಿಗೆ ಮೊದಲ ಮಗ ಷೆಲ್ಲಿ. ಹುಟ್ಟೂರಿನಲ್ಲಿಯೇ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ ಸಿಯಾನ್ ಹೌಸ್ ಅಕಾಡೆಮಿ ಎಂಬ ಶಾಲೆ ಸೇರಿದ. ಅದ್ಭುತ ಪವಾಡದ ಕಥೆಗಳನ್ನು ಓದಿದ. ಸಹಪಾಠಿಗಳೊಂದಿಗೆ ಆಟಕ್ಕೆ ಸೇರದೇ ಶತಪಥ ತಿರುಗುತ್ತ ಚಿಂತನೆ ನಡೆಸಿದ. ಪರರ ದುಃಖ ಕಂಡು ಕಣ್ಣೀರು ಸುರಿಸುತ್ತಿದ್ದ. ಪ್ರಕೃತಿ ಪ್ರೇಮಿಯಾಗಿದ್ದ. ಪುಸ್ತಕಗಳನ್ನು ಹೆಚ್ಚೆಚ್ಚು ಓದುತ್ತಿದ್ದ. ನಂತರ ಈಟಾನ್ ಎಂಬ ಶಾಲೆಗೆ ಸೇರಿದವನು, ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸಿದ. ರಸಾಯನ ಶಾಸ್ತ್ರದ ವ್ಯಾಸಂಗದ ಜೊತೆ ನಾಟಕದ ರಚನೆ, ಅಭಿನಯ ಸಹ ಮಾಡಿದ. ಆದರೂ ಅವನಿಗೆ ಪ್ರಯೋಗ ಶಾಲೆಯಲ್ಲಿ ರಸಾಯನ ಶಾಸ್ತ್ರದ ಪ್ರಯೋಗ ನಡೆಸುವುದೇ ಹೆಚ್ಚು ಇಷ್ಟದ ವಿಷಯವಾಗಿತ್ತು. "ರಾಜಕೀಯ ನ್ಯಾಯ" ಎಂಬ ಗ್ರಂಥದಿಂದ ಪ್ರೇರಿತನಾಗಿ ಕ್ರಾಂತಿಕಾರಕನಾಗಿ ಭಾಷಣ ಮಾಡಿದ. ಶಾಲೆಯ ವಿದ್ಯಾರ್ಥಿ ಸೇವಾ ಪದ್ಧತಿ ವಿರುದ್ಧ ತಿರುಗಿಬಿದ್ದ. ಸ್ವಲ್ಪ ವರ್ಷಗಳಲ್ಲಿ " ನಾಸ್ತಿಕ್ಯದ ಅವಶ್ಯಕತೆ " ಎಂಬ ಕಿರುಹೊತ್ತಿಗೆ ಪ್ರಕಟಿಸಿದ. ಅದರಿಂದಾಗಿ ತಾನು ಓದುತ್ತಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಹೊರದೂಡಲ್ಪಟ್ಟ. ಲಂಡನ್ನಿಗೆ ಬಂದವನು ಹ್ಯಾರಿಯೆಟ್‌ಳನ್ನು ವಿವಾಹವಾದ. ಲಂಡನ್ನಿನಲ್ಲಿ ವಿಲಿಯಂ ಗಾಡ್ವಿಯನ್ನು ಭ...