ಪೋಸ್ಟ್‌ಗಳು

ಅಚ್ಛೋದ ವೈಶಂಪಾಯನ ಸರೋವರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಚ್ಛೋದ ಮತ್ತು ವೈಶಂಪಾಯನ ಸರೋವರದ ವಿಶ್ಲೇಷಣೆ : ಎಂ.ಎ.ಕನ್ನಡ

ಕವಿ ಪರಿಚಯ: ಕುವೆಂಪು ಅವರು ಬೇಂದ್ರೆಯವರು ಹೇಳುವ ಹಾಗೆ “ಯುಗದ ಕವಿ; ಜಗದ ಕವಿ”. ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆಯಿಂದಾಗಿ ಕವಿಯ ಬದುಕಿನ ದಿಕ್ಕೇ ಬದಲಾಯ್ತು. ತಮ್ಮ ಮೊದಲ ಕೃತಿಯಾದ “ಅಮಲನ ಕಥೆ”ಯನ್ನು ಕಿಶೋರಚಂದ್ರವಾಣಿ ಎಂಬ ಕಾವ್ಯನಾಮದಿಂದ ಹೊರತಂದವರು, ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆದರು. 1922ರಿಂದ 1985ರವರೆಗೆ ನಿರಂತರವಾಗಿ ಬರೆದರು ಕುವೆಂಪು. ಹೆಸರು: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕಾವ್ಯನಾಮ: ಕುವೆಂಪು ಜನನ : 1904 ಜ್ಞಾನಪೀಠ ಬಂದ ವರ್ಷ : 1968 ಜ್ಞಾನಪೀಠ ಬಂದ ಕೃತಿ: ಶ್ರೀ ರಾಮಾಯಣ ದರ್ಶನಂ ಕುವೆಂಪು ಮೂಲತಃ ಕವಿ. ಕವಿಗಿಂತಲೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರರು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಕುವೆಂಪು ಶ್ರೇಷ್ಠ ಕವಿಯೂ ಹೌದು, ಶ್ರೇಷ್ಠ ಕಾದಂಬರಿಕಾರರೂ ಹೌದು ಮತ್ತು ವಿಮರ್ಶಕರೂ ಹೌದು. ಕುವೆಂಪು ಅವರ ವಿಮರ್ಶೆ ಇತರ ವಿಮರ್ಶೆಗಳಂತಲ್ಲ. ಅವುಗಳಲ್ಲಿ ದಾರ್ಶನಿಕತೆಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಕುವೆಂಪು ಅವರದ್ದು ದಾರ್ಶನಿಕ ವಿಮರ್ಶೆ. ಲೌಕಿಕ ಮತ್ತು ಪಾರಮಾರ್ಥಿಕ ಎರಡಕ್ಕೂ ಸೇತುವೆ ಕಟ್ಟಿ ಕೊಟ್ಟವರು ಕುವೆಂಪು. ಅವರ ಬರಹಗಳು ಆಧ್ಯಾತ್ಮ ಮತ್ತು ವೈಚಾರಿಕತೆಯಿಂದ ಕೂಡಿರುತ್ತವೆ. ವಿಷಯಗಳ ತಲಸ್ಪರ್ಶಿ ಅಧ್ಯಯನ, ತಾತ್ವಿಕ ವಾದ ಮಂಡನೆ, ಉಚಿತ ಪುರಾವೆಗಳಿಂದ ಸಮರ್ಥನೆ, ನಿಖರವಾದ ನಿಲುವು ಇವು ಕುವೆಂಪು ಅವರ ವಿಮರ್ಶಾ ಲೇಖನದ ಲಕ್ಷಣವಾಗಿದೆ. ಸರೋವ...