ಪೋಸ್ಟ್‌ಗಳು

ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ

ಪೀಠಿಕೆ :  ಶಾ ಸನ ಎಂಬುದು ' ಶಾಸ್ ' ಎಂಬ ಸಂಸ್ಕೃತ ಧಾತುವಿನಿಂದ ನಿಷ್ಪನ್ನವಾದ ಪದ. ಇದರರ್ಥ ಆಜ್ಞೆ.  ಶಾಸನ >>> ಶಾಸ್ (ಸಂಸ್ಕೃತ) >>> ಆಜ್ಞೆ ರಾಜಾಜ್ಞೆಗಳನ್ನು ಶಾಸನ ಎಂದು ಕರೆಯಲಾಗುತ್ತದೆ. ಮೂಲದಲ್ಲಿ ರಾಜಾಜ್ಞೆಗಳನ್ನು ಮಾತ್ರವೇ "ಶಾಸನ" ಎಂದು ಕರೆಯುತ್ತಿದ್ದರು. ನಂತರ ಈ ಪದದ ವ್ಯಾಪ್ತಿ ಹಿರಿದಾಯಿತು. ರಾಜನಲ್ಲದ ಇತರರು ಹಾಕಿಸಿದ ಬರಹಗಳನ್ನು ಕೂಡ ಶಾಸನಗಳೆಂದು ಕರೆಯುವ ರೂಢಿ ಬಂದಿತು. ಯಾವುದೇ ಒಂದು ವಿಷಯವಾಗಲೀ ಕಲ್ಲು ಅಥವಾ ಮರ ಅಥವಾ ಲೋಹಗಳ ಮೇಲೆ ಕೆತ್ತಿಸಿದ ಬರಹಗಳು " ಶಾಸನ " ದ ವ್ಯಾಪ್ತಿಗೆ ಸೇರತೊಡಗಿದವು. ಇಂಗ್ಲೀಷಿನಲ್ಲಿ ಇದಕ್ಕೆ Inscription, Epigraph ಎನ್ನುತ್ತಾರೆ. ಶಾಸನ ಪದದ ಅರ್ಥ ಮತ್ತು ವ್ಯಾಪ್ತಿ :  ಶಾಸನ ಎಂಬುದು ಸಂಸ್ಕೃತ ಪದ. ಇದನ್ನು ಕಾನೂನು ಎಂಬರ್ಥದಲ್ಲಿ ಇಂದಿಗೂ ನಾವು ಬಳಸುತ್ತಿದ್ದೇವೆ. 'ಶಾಸಕ' ಎಂಬ ಪದವೂ ಇದರೊಂದಿಗೆ ಸಂಬಂಧ ಇರಿಸಿಕೊಂಡಿದೆ. 'ಶಾಸಕ' ಎಂದರೆ ಕಾನೂನು ರೂಪಿಸುವವನು, ಕಾನೂನು ಅನುಸಾರ ಅಧಿಕಾರ ನಡೆಸುವವರು ಎಂಬರ್ಥ ಬರುತ್ತದೆ.  ಶಾಸನ ಎಂಬ ಪದದ ಅರ್ಥ ಶಾಸ್ ಎಂಬ ಧಾತುವಿನಿಂದ ಬಂದಿದ್ದು. 'ಶಾಸ್' ಎಂಬ ಪದದಿಂದ ನಿಷ್ಪನ್ನವಾದ 'ಶಾಸನ' ಪದಕ್ಕೆ ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ.  "ಶಾಸನ ಎಂಬ ಪದ ರಾಜಾಜ್ಞೆಗಳನ್ನು ತಿಳಿಸುವ ಬರ...