ಪೋಸ್ಟ್‌ಗಳು

ನವೋದಯ ಕಾವ್ಯ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನವೋದಯ ಕಾವ್ಯದ ಸ್ವರೂಪ ಮತ್ತು ಲಕ್ಷಣಗಳು

ಪೀಠಿಕೆ : ಇಂಗ್ಲೀಷ್ ಸಾಹಿತ್ಯದಿಂದ ಪ್ರಭಾವಗೊಂಡು ಹುಟ್ಟಿದ ಹೊಸ ಸಾಹಿತ್ಯ ಪ್ರಕಾರಕ್ಕೆ ' ನವೋದಯ ' ಸಾಹಿತ್ಯ ಎಂದು ಕರೆಯಲಾಗಿದೆ. ದಾಖಲಾತಿಯ ಕಾರಣಕ್ಕೆ ಬಿ.ಎಂ.ಶ್ರೀ ಅವರ 'ಇಂಗ್ಲೀಷ್ ಗೀತಗಳು' ಕವನ ಸಂಕಲನವನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಘಟ್ಟವಾದ 'ನವೋದಯದ' ಪ್ರಾತಿನಿಧಿಕ ಕವನ ಸಂಕಲನವೆಂದು ಪರಿಗಣಿಸಲಾಗಿದೆ. ಈ ಮೂಲಕ ಬಿ.ಎಂ.ಶ್ರೀ ಅವರನ್ನು ನವೋದಯದ ಹರಿಕಾರ ಎಂದು ಗುರುತಿಸಲಾಗಿದೆ. ಬಿ.ಎಂ.ಶ್ರೀ-----> ನವೋದಯದ ಹರಿಕಾರ. ಇಂಗ್ಲೀಷ್ ಗೀತಗಳು: ಇಂಗ್ಲೀಷ್ ಗೀತಗಳು  ಆಧುನಿಕ ಕನ್ನಡ ಸಾಹಿತ್ಯಕ್ಕೆ ಒಂದು ಸ್ಪಷ್ಟವಾದ ಮಾದರಿಯ ಮಾರ್ಗವನ್ನು ತೋರಿಸಿತು ಎನ್ನಬಹುದು. ಆಗ ಆ ಮಾರ್ಗದ ಅವಶ್ಯಕತೆಯೂ ಇತ್ತು. ' ಇಂಗ್ಲೀಷ್ ಗೀತಗಳು ' ಕವನ ಸಂಕಲನದಲ್ಲಿನ ಕವನಗಳು ಇಂಗ್ಲೀಷ್ ಸಾಹಿತ್ಯದ ಅನುವಾದ ಅನ್ನುವುದಕ್ಕಿಂತ ಪ್ರೇರಣೆ ಪಡೆದು ರಚಿಸಿದ ಕವನಗಳು ಎನ್ನಬಹುದು. ಆದರೆ ಅವುಗಳಿಗೆ ಪ್ರೇರಣೆಯಾಗಿ ಪಡೆದಿದ್ದು ಪ್ರಸಿದ್ಧರ ಕವನಗಳನ್ನಲ್ಲ. ಬಿ.ಎಂ.ಶ್ರೀ ಅವರ ಪ್ರಕಾರ ಅವರ ಉದ್ದೇಶ ಇದ್ದಿದ್ದು ಇಷ್ಟೇ. ಇಂಗ್ಲೀಷಿನಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಹೊಸ ಸಾಹಿತ್ಯ ಪ್ರಕಾರವನ್ನು ಸೃಜಿಸುವುದು. ಅದನ್ನು "ಇಂಗ್ಲೀಷ್ ಗೀತಗಳು" ಯಶಸ್ವಿಯಾಗಿ ಮಾಡಿತು. ಭಾಷೆಯ ಶೈಲಿ, ಕಥಾವಸ್ತು, ಛಂದಸ್ಸು ಮೊದಲಾದ ವಿಷಯಗಳಲ್ಲಿ ಹೊಸ ಸಂಗತಿಗಳನ್ನು ಪ್ರಸ್ತಾಪಿಸಿ...