ಪೋಸ್ಟ್‌ಗಳು

ಔಚಿತ್ಯ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

"ಔಚಿತ್ಯ" : ಎಂ.ಎ.ಕನ್ನಡ

ಪೀಠಿಕೆ: ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕೊನೆಯದಾಗಿ ಗಮನಿಸಬೇಕಾದ ಮುಖ್ಯ ವಿಷಯ "ಔಚಿತ್ಯ" .  ನಮ್ಮ ಕಾವ್ಯ ಮೀಮಾಂಸೆಯ ಚರಿತ್ರೆಯಲ್ಲಿ "ಔಚಿತ್ಯ"ದ ವಿಷಯವನ್ನು ಕೊನೆಯದಾಗಿಯೇ ಏಕೆ ಅಧ್ಯಯನ ನಡೆಸಬೇಕು ಎನ್ನುವುದನ್ನು ಒಂದು ಹೋಲಿಕೆಯ ಮೂಲಕ ಮನವರಿಕೆ ಮಾಡಿಕೊಳ್ಳಬಹುದು.ಒಂದು ಮಗುವಿಗೆ ತಂದೆ-ತಾಯಿಯರು ಪ್ರಾಪಂಚಿಕ ಜ್ಞಾನ ನೀಡುವಾಗ ಹೀಗೆ ಮಾಡಬೇಡ, ಹಾಗೆ ಮಾಡು ಎಂದು ಉಚಿತಾನುಚಿತ ಸಲಹೆಗಳನ್ನು ಕೊಡುತ್ತಾರೆ. ಇದೇ ರೀತಿ ಯಾವುದೇ ವಿಷಯವನ್ನು ಕುರಿತು ಉಚಿತಾನುಚಿತಗಳನ್ನು ನಿರ್ಧರಿಸಲು ನಮಗೆ ಆ ವಿಷಯವನ್ನು ಕುರಿತು ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ.  ಹಾಗೆಯೇ ನಮ್ಮ ಭಾರತೀಯ ಕಾವ್ಯ ಮೀಮಾಂಸೆಯ ಶಾಸ್ತ್ರದಲ್ಲಿಯೂ ಔಚಿತ್ಯ ವನ್ನು ಕುರಿತು ನಾವು ಕೊನೆಯಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಕಾವ್ಯದ ಪ್ರಮುಖ ಅಂಗಗಳಾದ ಅಲಂಕಾರ, ಗುಣ, ರೀತಿ, ಧ್ವನಿ, ರಸ ಇವುಗಳನ್ನು ಹೇಗೆ ಉಚಿತವಾಗಿ ಬಳಸಿಕೊಳ್ಳಬೇಕು,ಕಾವ್ಯದ ಯಾವ ಸಂದರ್ಭದಲ್ಲಿ ಯಾವ ವಿಷಯಗಳಿಗೆ ಪ್ರಾಮುಖ್ಯತೆ ದೊರೆಯುತ್ತದೆ,ಯಾವುದು ಉಚಿತ ಯಾವುದು ಅನುಚಿತ ಎಂಬ ಪರಿಜ್ಞಾನ ನೀಡುವುದೇ "ಔಚಿತ್ಯ" ತತ್ವ .            ಈ ಔಚಿತ್ಯ ತತ್ವವನ್ನು ಕುರಿತು ಸಮಗ್ರವಾಗಿ ವಿವೇಚಿಸಿರುವ ಮೀಮಾಂಸಕರು ಎಂದರೆ ಆನಂದವರ್ಧನ ಮತ್ತು ಕ್ಷೇಮೇಂದ್ರ . ಭರತನ ನಾಟ್ಯ ಶಾಸ್ತ್ರದ ಮೂಲಕ ಸೂಚ್ಯವಾಗಿ ಹರಿದು ಬಂದ ಔಚಿತ್ಯವೆ...