ಪೋಸ್ಟ್‌ಗಳು

ಮಧ್ಯಕಾಲೀನ ಕನ್ನಡ ಸಾಹಿತ್ಯ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಧ್ಯಕಾಲೀನ ಕನ್ನಡ ಸಾಹಿತ್ಯ : ಎಂ.ಎ.ಕನ್ನಡ

ಭಾಷೆಯ ಮೂಲರೂಪವನ್ನು ಪೂರ್ವದ ಹಳೆಗನ್ನಡ ಎಂದುಕೊಂಡರೆ, ನಂತರದ ರೂಪವನ್ನು ಹಳೆಗನ್ನಡ ರೂಪ ಎಂದೂ, ಅದರ ಮುಂದಿನ ಸ್ವರೂಪವನ್ನು ನಡುಗನ್ನಡ ಸ್ವರೂಪವೆಂದು, ಅದರ ನಂತರದ ರೂಪವನ್ನು ಹೊಸಗನ್ನಡ ರೂಪವೆಂದು ಗುರುತಿಸಲಾಗುತ್ತದೆ. * ಪೂರ್ವದ ಹಳೆಗನ್ನಡ * ಹಳೆಗನ್ನಡ * ನಡುಗನ್ನಡ * ಹೊಸಕನ್ನಡ " ಮಧ್ಯಕಾಲೀನ ಕನ್ನಡ ಸಾಹಿತ್ಯ " ದ ಕಾಲದ ಭಾಷೆಯನ್ನು ನಡುಗನ್ನಡ ಭಾಷೆ ಎಂದು ಗುರುತಿಸಬಹುದಾಗಿದೆ. ಈ ಭಾಷೆಯ ಮೊದಲ ಹಂತವು ವಚನಕಾರರ ಉಗಮದೊಂದಿಗೆ ಆರಂಭವಾಗಿದೆ. ಸಂಸ್ಕೃತದ ಪ್ರಭಾವ : ಕನ್ನಡ ಮಾತ್ರವಲ್ಲ, ಇತರ ಎಲ್ಲಾ ಭಾರತೀಯ ಭಾಷೆಗಳ ಮೇಲೆಯೂ ಸಂಸ್ಕೃತ ಪ್ರಭಾವ ಬೀರಿದ್ದ ಕಾಲವದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ಸಹ ಸಂಸ್ಕೃತದಿಂದ ಸ್ವತಂತ್ರವಾಗಿ ಯೋಚಿಸಲಾರದಷ್ಟು ಅನಿವಾರ್ಯತೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಸಾಹಿತ್ಯವು ಕೇವಲ ರಾಜಪರಂಪರೆಗಷ್ಟೇ ಸೀಮಿತವಾಗಿದ್ದುದರಿಂದ ಭಾಷೆಯು ಕ್ಲಿಷ್ಟವೂ, ಸಂಕೀರ್ಣವೂ ಆಗಿತ್ತು. ಸಾಹಿತ್ಯಕ್ಕೆ ಸಂಸ್ಕೃತ-ಪ್ರಾಕೃತಗಳೇ ಮೂಲ ಆಕರಗಳಾದುದರಿಂದ ಭಾಷೆಯು ಸಹಜವಾಗಿ ಸಾಕಷ್ಟು ಪ್ರೌಢವಾಗಿತ್ತು. ಜನಸಾಮಾನ್ಯನಂತೂ ಸಾಹಿತ್ಯದಿಂದ ತುಂಬಾ ದೂರ ಉಳಿದುಬಿಟ್ಟಿದ್ದ.  ಒಟ್ಟಿನಲ್ಲಿ ಸಂಸ್ಕೃತ ಭಾಷೆಯ ಶಿಷ್ಟತೆ ಕನ್ನಡ ಸಾಹಿತ್ಯದ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಯಾವುದೇ ಒಂದು ಸೃಜನಶೀಲ ಭಾಷೆಯ ಬೆಳವಣಿಗೆಗೆ ಈ ರೀತಿಯ ಪ್ರಭಾವ-ಪ್ರೇರಣೆಗಳು ಅವಶ್ಯಕ. ಇದರಿಂದ ಭಾಷೆ ಪಡೆದು...