ಪೋಸ್ಟ್‌ಗಳು

ಜೈನ ಕವಿ ಆಂಡಯ್ಯ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜೈನ ಕವಿ "ಆಂಡಯ್ಯ" Andaiah (Jain Poet)

ಇಮೇಜ್
ಆಂಡಯ್ಯ ಒಬ್ಬ ಜೈನ ಕವಿ.  ಇವನ ಕಾಲ ಸುಮಾರು ಕ್ರಿ.ಶ. 1235.  ಇವನು ಧಾರವಾಡದವನು. ಕದಂಬ ವಂಶಕ್ಕೆ ಸೇರಿದ ಕಾಮದೇವ ಇವನ ಆಶ್ರಯದಾತ. ಆಂಡಯ್ಯನು ಪಂಪ-ರನ್ನರಂತೆ ರಾಮಾಯಣ-ಮಹಾಭಾರತವನ್ನು ಆಧರಿಸಿದ ಲೌಕಿಕ ಗ್ರಂಥಗಳನ್ನು ಬರೆದಿಲ್ಲ. ಬದಲಾಗಿ ಇವನ ಕೃತಿಯಾದ ‘ ಕಬ್ಬಿಗರ ಕಾವ’ ಒಂದು ಕಾಲ್ಪನಿಕ ಕೃತಿಯಾಗಿದೆ. ‘ಕಬ್ಬಿಗರ ಕಾವಂ’ ಎಂದರೆ ಸಂಸ್ಕೃತದ ಸಹಾಯವಿಲ್ಲದೇ ಅಚ್ಚ ಕನ್ನಡದಲ್ಲಿ ಬರೆದು ಕವಿಗಳನ್ನು ಕಾಪಾಡಿದವನು ಎಂಬರ್ಥ ಬರುತ್ತದೆ .  ಸಂಸ್ಕೃತದ ಒಂದೂ ಪದವನ್ನು ಬೆರೆಸದೇ, ಅಚ್ಚ ಕನ್ನಡದ ದೇಸೀ ಪದಗಳನ್ನು ಬಳಸಿ ಕಾವ್ಯ ರಚನೆ ಮಾಡಿರುವುದು ಇವನ ಹೆಗ್ಗಳಿಕೆ. ಈ ಕೃತಿಗೆ “ಕಾವನ ಗೆಲ್ಲ”, “ಮದನ ವಿಜಯ”, “ಸೊಬಗಿನ ಸುಗ್ಗಿ” ಅಂತ ಹೆಸರುಗಳಿವೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.  ಇದು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಒಂದು ಮಹತ್ವದ ಕೃತಿಯಾಗಿದೆ. ಆ ಕಾಲದಲ್ಲಿ ಕಾವ್ಯ ರಚನೆ ಕೇವಲ ಪಂಡಿತರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಕಾವ್ಯ ಅರ್ಥವಾಗಬೇಕು ಎಂದು ಭಾವಿಸಿದ ನಮ್ಮ ಕವಿಗಳು ಕವನದಲ್ಲಿ ದೇಸೀಯತೆಯನ್ನು ತಂದರು. ಅಲ್ಲದೇ ಸಂಸ್ಕೃತದಿಂದ ತದ್ಭವವನ್ನು ಮಾತ್ರ ಬಳಸಿದರು, ತತ್ಸಮ ಬಳಸುವುದಕ್ಕೆ ತಮಗೆ ತಾವೇ ನಿರ್ಬಂಧ ಹೇರಿಕೊಂಡರು.  ಅಂತಹ ಸಮಯದಲ್ಲಿ ಆಂಡಯ್ಯನ ಈ ಕೃತಿ ಪೂರ್ಣಗೊಂಡಿದ್ದು ಒಂದು ಮಹತ್ತರ ಸಾಧನೆಯಾಗಿದೆ. ಕಬ್ಬಿಗರ ಕಾವ :   “ಕನ್ನಡದೊಳ್ಪಿನ ನುಡಿಯಂ! ...