ಪೋಸ್ಟ್‌ಗಳು

ಅರಿಸ್ಟಾಟಲ್ ಅನುಕರಣ ಸಿದ್ಧಾಂತ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅರಿಸ್ಟಾಟಲ್’ನ ಅನುಕರಣ ಸಿದ್ಧಾಂತ : ಎಂ.ಎ.ಕನ್ನಡ

ಅನುಕರಣಾವಾದ : 19ನೆಯ ಶತಮಾನದವರೆಗೆ ಯುರೋಪಿನ ಎಲ್ಲಾ ಭಾಷೆಗಳ ಸಾಹಿತ್ಯ ವಿಮರ್ಶೆಯಲ್ಲಿಯೂ ಅತ್ಯಂತ ಪ್ರಭಾವಶಾಲಿಯಾಗಿದ್ದ ಒಂದು ಮೌಖಿಕ ಪರಿಕಲ್ಪನೆ " ಅನುಕರಣಾವಾದ " ( THEORY OF IMITATION ). " ಪ್ಲೇಟೋ " ಮತ್ತು " ಅರಿಸ್ಟಾಟಲ್ " ಇಬ್ಬರೂ ಕಾವ್ಯದ ಸ್ವರೂಪವನ್ನು ಚರ್ಚಿಸುವ ಸಂದರ್ಭದಲ್ಲಿ "ಇಮಿಟೇಶನ್" ಶಬ್ದವನ್ನು ಬಳಸುತ್ತಾರೆ. ' ಇಮಿಟೇಶನ್ ’ ಎಂಬ ಶಬ್ದವು ಗ್ರೀಕ್ ಭಾಷೆಯ 'ಮಿಮೆಸಿಸ್’ ಶಬ್ದಕ್ಕೆ ಪರ್ಯಾಯವಾಗಿದೆ. ಪ್ಲೇಟೋ " ಅನುಕರಣ " ಶಬ್ದವನ್ನು ಅದರ ಸಂಕುಚಿತ ಅರ್ಥದಲ್ಲಿ "ಪ್ರತಿರೂಪ" ಅಥವಾ "ನಕಲು" ಎಂದು ಉಪಯೋಗಿಸುತ್ತಾನೆ. ಪ್ಲೇಟೋ ಹೇಳುತ್ತಾನೆ: ೧) ಕಲೆ ನಮ್ಮಲ್ಲಿನ ಹೀನ ವಾಸನೆಗಳಿಗೆ ಪುಷ್ಟಿ ನೀಡುತ್ತದೆ. ಕಾಮ ಕ್ರೋಧಗಳನ್ನು ಪೋಷಿಸುತ್ತವೆ. ೨) ಕಲಾವಿದರು ದೇವದೇವತೆಗಳನ್ನು ಮತ್ತು ಮಹಾ ಪುರುಷರನ್ನು  ಸಾಮಾನ್ಯರಂತೆ ಚಿತ್ರಿಸಿ ಅವರ ಮಹತ್ವಕ್ಕೆ ಚ್ಯುತಿ  ತರುತ್ತಾರೆ. ಈ ಕಾರಣಗಳಿಂದ ತಾತ್ವಿಕ ಮತ್ತು ನೈತಿಕ ನೆಲೆಗಳಲ್ಲಿ ಪ್ಲೇಟೋ ಕಲೆಯನ್ನು ನಿರಾಕರಿಸುತ್ತಾನೆ. ಆದರೆ ಪ್ಲೇಟೋವಿನ ವಿದ್ಯಾರ್ಥಿ " ಅರಿಸ್ಟಾಟಲ್ " ತನ್ನ ಗುರುವಿನ ಆರೋಪವನ್ನು ಅಲ್ಲಗೆಳೆದು,"ಕಲೆ"ಯ ಪಾತ್ರವನ್ನು ಸಮರ್ಥಿಸಲು "ಅನುಕರಣ"ದ ಪರಿಕಲ್ಪನೆಯನ್ನು ಉ...