ಮುದ್ದಣ ಮನೋರಮೆಯ ಸಲ್ಲಾಪ : ರಾಮಾಶ್ವಮೇಧಂ
ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು by ಎಸ್.ವಿ.ರಂಗಣ್ಣ ಲೇಖಕರ ಪರಿಚಯ : ಪ್ರೊಫೆಸರ್ ಎಸ್.ವಿ.ರಂಗಣ್ಣನವರು ಆಧುನಿಕ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸುವಲ್ಲಿ ದುಡಿದ ಮಹನೀಯರಲ್ಲಿ ಒಬ್ಬರು. ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅವರು ಮಾಡಿದ ಸೇವೆ ಅನುಪಮವಾದುದು. ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯ ಮಾನದಂಡಗಳಿಂದ ಅಳೆದು ಅದರ ಅಧ್ಯಯನಕ್ಕೆ ಹೊಸ ರೂಪ ಕೊಟ್ಟವರು. ವಿದ್ಯಾರ್ಥಿ ದಿಸೆಯಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದರೂ, ಎ.ಆರ್.ಕೃಷ್ಣಶಾಸ್ತ್ರಿಗಳ ಒತ್ತಾಸೆಯಿಂದ ಕನ್ನಡದ ಕಡೆ ತಿರುಗಿದರು. ಎಸ್.ವಿ.ರಂಗಣ್ಣನವರು 25ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ವಿಮರ್ಶೆ, ನಾಟಕ, ಕಾವ್ಯ ಹೀಗೆ ಇನ್ನೂ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಇವರ ಕೃತಿ ರಚಿತವಾಗಿದೆ. ವಿಮರ್ಶಕರಾಗಿ ಎಸ್.ವಿ.ರಂಗಣ್ಣನವರದ್ದು ಗಮನಾರ್ಹ ಸಾಧನೆ. ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳನ್ನು ಅಧ್ಯಯನಕ್ಕೆ ಎತ್ತಿಕೊಂಡು, ಅವುಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡಿ ಬೆಲೆ ಕಟ್ಟಿರುವುದು ಅವರ ವಿಮರ್ಶೆಯಲ್ಲಿ ಎದ್ದು ಕಾಣುವ ಗುಣ. ಎಸ್.ವಿ.ರಂಗಣ್ಣನವರ ವಿಮರ್ಶಕನ ದೃಷ್ಟಿ ಹರಿತವಾದುದು. ಅಲ್ಲಿ ದಾಕ್ಷಿಣ್ಯಕ್ಕೆ ಎಡೆ ಇಲ್ಲ. ಅವರ ವಿಮರ್ಶೆಯ ಗುಣದಿಂದ ಆವರ...