ಪೋಸ್ಟ್‌ಗಳು

ಹಲ್ಮಿಡಿ ಶಾಸನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಲ್ಮಿಡಿ ಶಾಸನದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ ಸಂಗತಿ

ಪೀಠಿಕೆ :  ಹಲ್ಮಿಡಿ ಶಾಸನವು ಕನ್ನಡದ ಮೊಟ್ಟಮೊದಲ ಉಪಲಬ್ಧ ಶಾಸನವಾಗಿದೆ. ಈ ಶಾಸನವನ್ನು ಸಂಪಾದಿಸಿದವರು ಎಂ.ಎಚ್.ಕೃಷ್ಣ ಅವರು. ಈ ಶಾಸನವು ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳಿ ದೊರೆತಿದೆ. ಈ ಶಾಸನದ ಕಾಲ ಸುಮಾರು ಕ್ರಿ.ಶ. 450. ಈ ಶಾಸನದ ಕಾಲದಲ್ಲಿ ಕದಂಬ ವಂಶದ ಕಾಕುತ್ಸ್ಥವರ್ಮನು ಆಳ್ವಿಕೆ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ.  ಶಾಸನವು ಗದ್ಯ ರೂಪದಲ್ಲಿ ಇರುವುದರಿಂದ ಕನ್ನಡ ಗದ್ಯ ಇತಿಹಾಸದ ಅಧ್ಯಯನಕ್ಕೆ ನಾವು ಹಲ್ಮಿಡಿ ಶಾಸನವನ್ನು ಗಮನಿಸಲೇಬೇಕಾಗುತ್ತದೆ.  ಇದೊಂದು ಪ್ರಶಸ್ತಿ ಶಾಸನವಾಗಿದ್ದು, ವೀರನೊಬ್ಬನ ಶೌರ್ಯಕ್ಕೆ ಮೆಚ್ಚಿ ಆತನಿಗೆ ಉಡುಗೊರೆ ನೀಡಿರುವ ವಿವರಗಳನ್ನು ಒಳಗೊಂಡ ಶಾಸನವಾಗಿದೆ. 'ವಿಜ ಅರಸ' ಎಂಬುವವನೇ ಆ ಗೌರವಕ್ಕೆ ಪಾತ್ರನಾದ ವ್ಯಕ್ತಿ. ಆತ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಪಲ್ಮಿಡಿ ಮತ್ತು ಮೂನವಳ್ಳಿ ಗ್ರಾಮಗಳನ್ನು ಬಾಳ್ಗಚ್ಚು ಕೊಡುಗೆಯಾಗಿ ನೀಡಿರುವುದಾಗಿ ಶಾಸನದಿಂದ ತಿಳಿದುಬರುತ್ತದೆ.  ಹಲ್ಮಿಡಿ ಶಾಸನದ ಚಾರಿತ್ರಿಕ ಮಹತ್ವ :  ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳ್ವಿಕೆ ನಡೆಸುತ್ತಿದ್ದ ಎಂದು ತಿಳಿದು ಬರುತ್ತದೆ. ಈ ಶಾಸನ ಸಿಗುವವರೆಗೆ ಬಾದಾಮಿಯ ಚಾಳುಕ್ಯರ ಅರಸನಾದ ಮಂಗಳೇಶನ ವೈಷ್ಣವ ಗುಹಾಶಾಸನವೇ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿಯಲಾಗಿತ್ತು. ಈಗ ಹಲ್ಮಿಡಿ ಶಾಸನವು ' ಕನ್ನಡದ ಪ್ರಾಚೀನತಮ ...

ಹಲ್ಮಿಡಿ ಶಾಸನದ ಐತಿಹಾಸಿಕ, ಭಾಷಿಕ, ಸಾಂಸ್ಕೃತಿಕ ಮಹತ್ವ

ಪೀಠಿಕೆ :  ಕನ್ನಡ ಶಾಸನಗಳಲ್ಲಿ ಹಲ್ಮಿಡಿ ಶಾಸನವು ತನ್ನ ಕಾಲದ ದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿದೆ. ಶಾಸನಗಳ ಅಧ್ಯಯನಕ್ಕೆ ತೊಡಗುವ ಯಾವ ವಿದ್ಯಾರ್ಥಿಯೇ ಆಗಲಿ, ಈ ಶಾಸನವನ್ನು ಅದರ ಪ್ರಾಚೀನತೆಯ ಕಾರಣಕ್ಕಾಗಿ ಪರಿಚಯಿಸಿಕೊಂಡೇ ಮುಂದೆ ಸಾಗಬೇಕಿದೆ.  ಹಲ್ಮಿಡಿ ಶಾಸನವು ಒಂದು ದಾನಶಾಸನವಾಗಿದೆ.  ಈ ಶಾಸನವು ಬೇಲೂರು ತಾಲ್ಲೂಕಿನ ಹನುಮಿಂಡಿ ಗ್ರಾಮದಲ್ಲಿ ದೊರೆತಿದೆ. ಗ್ರಾಮಸ್ಥರಿಂದ ಅಲಕ್ಷ್ಯಕ್ಕೆ ಒಳಗಾಗಿದ್ದ ಶಾಸನವನ್ನು ಮೈಸೂರು ಶಾಸನ‌ ಇಲಾಖೆಯು ಸಂರಕ್ಷಿಸಿದೆ. ಹಲ್ಮಿಡಿ ಶಾಸನದ ಪಾಠವನ್ನು ಹಲವು ಬಾರಿ ಪ್ರಕಟಿಸಲಾಗಿದೆ.  ಮೊದಲ ಬಾರಿ ಶಾಸನದ ಪಾಠ ಪ್ರಕಟವಾದದ್ದು ಮೈಸೂರು ಶಾಸನ ಇಲಾಖೆಯ 1936ರ ವಾರ್ಷಿಕ ವರದಿಯಲ್ಲಿ.     ಎರಡನೇ ಬಾರಿ ಶಾಸನದ ಪಾಠ ಪ್ರಕಟವಾದದ್ದು ಸ್ವಲ್ಪ ಪರಿಷ್ಕಾರದೊಂದಿಗೆ 'ಪ್ರಬುದ್ಧ ಕರ್ನಾಟಕ'ದ ಮಾಲಿಕೆಯಲ್ಲಿ.   ಮೂ ರನೇ ಬಾರಿ ಶಾಸನದ ಪಾಠ ಪ್ರಕಟವಾದದ್ದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ 'ಎಪಿಗ್ರಾಫಿಯಾ ಕರ್ನಾಟಿಕಾ'ದ ಪರಿಷ್ಕೃತ ಆವೃತ್ತಿಯಲ್ಲಿ. ಈ ಪಾಠವು ಪ್ರಬುದ್ಧ ಕರ್ನಾಟಕ'ದಲ್ಲಿ ಪ್ರಕಟಿಸಿದ ಶಾಸನ ಪಾಠಕ್ಲೆ ಅನುಗುಣವಾಗಿದೆ.    ನಾಲ್ಕನೆ ಬಾರಿ ಶಾಸನದ ಪಾಠ ಪ್ರಕಟವಾದದ್ದು  ಜಿ.ಎಸ್.ಗಾಯಿ ಅವರ 'ಹಲ್ಮಿಡಿ ಶಾಸನ: ಒಂದು ಅಧ್ಯಯನ' ಎಂಬ ಲೇಖನದಲ್ಲಿ ಪ್ರಕಟವಾಗಿದೆ.  ಶಾಸನ ಪ್ರಕಟಿಸಿದವರು...

ಹಲ್ಮಿಡಿ ಶಾಸನ (ಟಿಪ್ಪಣಿ)

ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮದಲ್ಲಿ ಈ ಶಾಸನ ಕಂಡು ಬಂದಿದೆ. ಇದೊಂದು ವೀರಗಲ್ಲು . ಈ ಶಾಸನವನ್ನು ಹಾಕಿಸಿದ್ದ ಕಾಲದಲ್ಲಿ ಕದಂಬ ವಂಶದ ದೊರೆ ಕಾಕುತ್ಸ್ಥವರ್ಮ ಆಳುತ್ತಿದ್ದನೆಂದು ಶಾಸನದಿಂದ ತಿಳಿದುಬರುತ್ತದೆ. ಈತನ ಕಾಲ ಐದನೆಯ ಶತಮಾನ. ಹಾಗಾಗಿ ಈ ಶಾಸನ ಹುಟ್ಟಿದ ಕಾಲ ಸುಮಾರು ಕ್ರಿ.ಶ.450. ಹಲ್ಮಿಡಿ ಶಾಸನದ ಕಾಲ --> ಕ್ರಿ.ಶ.450 ಹಲ್ಮಿಡಿ ಶಾಸನ ಗಾತ್ರದಲ್ಲಿ ಚಿಕ್ಕದಾದರೂ, ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ಮಹತ್ವದ್ದೆಂದು ಭಾವಿಸಬೇಕಾಗಿದೆ. ಹಲ್ಮಿಡಿ ಶಾಸನ ನಮಗೆ ದೊರೆಯುವವರೆಗೂ ಚಾಲುಕ್ಯ ರಾಜ ಮಂಗಳೇಶನ ವೈಷ್ಣವ ಗುಹಾಶಾಸನವನ್ನೇ ಕನ್ನಡದ ಪ್ರಾಚೀನತಮ ಶಾಸನ ಎಂದು ತಿಳಿಯಲಾಗಿತ್ತು. ಹಲ್ಮಿಡಿ ಶಾಸನ ದೊರೆತ ಮೇಲೆ ಅದು ಕನ್ನಡದ ಪ್ರಾಚೀನ ಶಿಲಾಶಾಸನ ಎಂಬ ಮನ್ನಣೆ ದೊರಕಿಸಿಕೊಂಡಿತು.  ಹಲ್ಮಿಡಿ --> ಕನ್ನಡದ ಮೊಟ್ಟಮೊದಲ ಶಾಸನ ಈ ಶಾಸನದ ಮೂಲಕ ಐದು ಆರನೆಯ ಶತಮಾನಗಳಷ್ಟು ಹಿಂದೆ ಕನ್ನಡ ಭಾಷೆಯ ರಚನೆಗಳು ಯಾವ ರೀತಿಯಲ್ಲಿ ಇದ್ದವೆಂದು ನಾವು ತಿಳಿಯಬಹುದಾಗಿದೆ. ಕನ್ನಡ ಭಾಷೆಯ ಆರಂಭದ ಶಾಸನಗಳು ಪದ್ಯನಿಬದ್ಧವಾಗಿದ್ದರೆ, ಹಲ್ಮಿಡಿ ಶಾಸನ ಗದ್ಯನಿಬದ್ಧವಾಗಿದೆ. ಕನ್ನಡ ಸಾಹಿತ್ಯದಲ್ಲಿ ಗದ್ಯದ ಉಗಮ ಮತ್ತು ವಿಕಾಸಗಳನ್ನು ಕುರಿತು ಚರ್ಚೆ ಮಾಡುವಾಗ ಅವಶ್ಯಕವಾಗಿ ಹಲ್ಮಿಡಿ ಶಾಸನವನ್ನು ಗಮನಿಸಬೇಕಾಗುತ್ತದೆ‌  ಈ ಶಾಸನದಲ್ಲಿ ವೀರನೊಬ್ಬನಿಗೆ ಗೌರವ ಸಮರ್ಪಣೆ ಮಾಡಿದ ಸಂಗತಿಯಿದ...