ಪೋಸ್ಟ್‌ಗಳು

ಕನ್ನಡ ಕವನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೀರು ಲೋಹದ ಚಿಂತೆ - ಕವನ ಸಂಕಲನ (ಎಂ.ಎ.ಕನ್ನಡ)

ಲೇಖಕರ ಪರಿಚಯ : 'ನೀರು ಲೋಹದ ಚಿಂತೆ' ಕವನ ಸಂಕಲನವನ್ನು ಬರೆದಿರುವವರು " ವಿಜಯಾ ದಬ್ಬೆ " ರವರು. ಇವರು ಆಧುನಿಕ ಮಹಿಳಾ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾದ ಲೇಖಕಿ.‌ ಕನ್ನಡದಲ್ಲಿ ಸ್ರ್ತೀ ಸಾಹಿತ್ಯವನ್ನು ಬೆಳೆಸುವಲ್ಲಿ ಇವರ ಪಾತ್ರ ದೊಡ್ಡದು. " ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ " ಎಂಬ ಕೂಗು ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ವಿಜಯಾ ದಬ್ಬೆ ರವರು ಬರವಣಿಗೆಗೆ ಇಳಿದರು. ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಗ್ರಂಥ ಸಂಪಾದನೆ, ಅನುವಾದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದರು. ಇವರನ್ನು ಕೇವಲ ಕವಿ ಎಂದೋ ಅಥವಾ ವಿಮರ್ಶಕಿಯೆಂದೋ ಗುರುತಿಸುವುದು ಕಷ್ಟ. ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವುದರಿಂದ ಇವರನ್ನು ಅನನ್ಯ ಲೇಖಕಿ ಎನ್ನಬಹುದಾಗಿದೆ. ಕನ್ನಡ ಎಂ.ಎ ಅನ್ನು ಮಾನಸ ಗಂಗೋತ್ರಿಯಲ್ಲಿ ಮುಗಿಸಿದ ವಿಜಯ ದಬ್ಬೆಯವರು ಮುಂದೆ ಸುಪ್ರಸಿದ್ಧ ಸಾಹಿತಿಯಾದ ಡಾ. ಹಾ.ಮಾ.ನಾಯಕರ ನೇತೃತ್ವದಲ್ಲಿ " ನಾಗಚಂದ್ರ: ಒಂದು ಅಧ್ಯಯನ " ಎಂಬ ವಿಷಯದ ಮೇಲೆ ಅಧ್ಯಯನ ಕೈಗೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ವಿಜಯ ದಬ್ಬೆ ರವರ ಕವನಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಭಾಷೆಯ ಹಿತಮಿತವಾದ ಬಳಕೆ ಅವರ ಕವನಗಳಲ್ಲಿ ಎದ್ದು ಕಾಣುವ ಗುಣ. ಮತ್ತೊಂದು ಗುಣವೆಂದರೆ ಸಮಾನತೆಯ ದೃಷ್ಟಿಕೋನ. ಸ್ತ್ರೀತ್ವದ ಬಗೆಗಿನ ಪಾಪಪ್ರಜ್ಞೆಯಾಗಲೀ, ಗಂಡ...

ಕುವೆಂಪುರವರ ಪಕ್ಷಿಕಾಶಿ (PakshiKashi) ಕವನ ಸಂಕಲನ : Kannada MA

ಕವಿ ಪರಿಚಯ: ಪಕ್ಷಿಕಾಶಿ ಕವನ ಸಂಕಲನದ ಕವಿ ರಾಷ್ಟ್ರಕವಿ ಕುವೆಂಪು ರವರು.  ರಾಷ್ಟ್ರಕವಿ ಎನ್ನುವುದು ಸರ್ಕಾರ ಅವರಿಗೆ ಕೊಟ್ಟ ಬಿರುದಾದರೆ, ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಎಂಬುದು ಅವರ ಕಾವ್ಯನಾಮ. ಬೇಂದ್ರೆಯವರು ಹೇಳುವ ಹಾಗೆ ಕುವೆಂಪುರವರು " ಯುಗದ ಕವಿ.. ಜಗದ ಕವಿ.." ಎಂದೇ ಪ್ರಸಿದ್ಧರು.  ಐರ್ಲೆಂಡಿನ ಕವಿ ಜೇಮ್ಸ್ ಕಸಿನ್ಸ್ ರವರ ಪ್ರೇರಣೆ ಕವಿಯ ಬದುಕನ್ನೇ ಬದಲಾಯಿಸಿತು. ತಮ್ಮ ಮೊದಲ ಕೃತಿಯಾದ ಅಮಲನ ಕಥೆಯನ್ನು " ಕಿಶೋರ ಚಂದ್ರವಾಣಿ " ಎಂಬ ಕಾವ್ಯನಾಮದಿಂದ ಅಚ್ಚು ಹಾಕಿಸಿದರು. ನಂತರ ಕುವೆಂಪು ಎಂಬ ಕಾವ್ಯನಾಮದಿಂದ ಬರೆಯಲು ಆರಂಭಿಸಿದರು.‌ 1922 ರಿಂದ 1985 ವರೆಗೆ ಸುಮಾರು ಅರವತ್ತು ವರ್ಷಗಳಷ್ಟು ಕಾಲ ನಿರಂತರವಾಗಿ ಬರೆದರು. ನಾಟಕ, ಕಾವ್ಯ, ಮಕ್ಕಳ ಕಥೆ, ಕಾದಂಬರಿ, ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು.‌ 1945 ರಲ್ಲಿ ಬರೆದಿದ್ದ " ಶ್ರೀರಾಮಾಯಣ ದರ್ಶನಂ " ಮಹಾಕಾವ್ಯಕ್ಕೆ 1968 ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪಕ್ಷಿಕಾಶಿ ಕವನಗಳು: ಪಕ್ಷಿಕಾಶಿಯಲ್ಲಿ ಸುಮಾರು 47 ಕವನಗಳಿವೆ. ಅವುಗಳ ಆಶಯಕ್ಕೆ ತಕ್ಕಂತೆ ಅವುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ: * ಸೂರ್ಯೋದಯ ಕುರಿತ ಗೀತೆಗಳು    (ಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ.      ಈ ಜಗಹೃದಯ, ಭಾದ್ರಪದದ...

ಕವನ : "ಮುಟ್ಟು"

ಯಾರು ಹೇಳಿದರು ಹನಿರಕ್ತವೂ ಅಮೂಲ್ಯವೆಂದು ಸೋರಿ ಹೋಗುತ್ತಿದೆ ಇಲ್ಲಿ ನಮ್ಮ ನರಳಾಟದಲ್ಲಿ ಒಂದೊಂದು ಹನಿಯೂ ಹೊರಬರುವಾಗ ಕಾಡಿಸಿ ನರಳಿಸಿ ಪೀಡಿಸಿ ಬರುತ್ತಿದೆ ಯಾರ ಕಣ್ಣಿಗೂ ಕಾಣದೇ ಯಾರಿಗೂ ಗೊತ್ತಾಗದೇ.... ನಮ್ಮ ನೋವು ನಮಗಷ್ಟೇ ಗೊತ್ತು ಒಡಲಿನ ಸಂಕಟ ನುಲಿದಾಟದ ಗಮ್ಮತ್ತು ಹೊರಗೆ ತೋರಿಸುವಂತಿಲ್ಲ ಒಳಗೆ ಅನುಭವಿಸುವಂತಿಲ್ಲ.. ಎಷ್ಟೇ ಅಸಹನೆಯಾಗುತ್ತಿದ್ದರೂ ಕಣ್ಣು ಕತ್ತಲಿಡುತ್ತಿದ್ದರೂ ನಗುನಗುತ್ತಲೇ ಅಡ್ಡಾಡಬೇಕು ಹೊಟ್ಟೆ ಬಟ್ಟೆಯಂತೆ ನುಲಿದು ಹಿಂಸೆಯಾಗುತ್ತಿದ್ದರೂ ಬೆನ್ನು ಬಾಗಿಸದೇ ಓಡಾಡಬೇಕು ಏಕೆಂದರೆ ಮೂರು ದಿನಗಳ ರಜೆಯಿಲ್ಲ ನಮಗೀಗ ಗಂಡಸರಿಗೆ ಸಮಾನರು ನಾವು ಅವರು ಹಾಕಿದ್ದ ಬೇಲಿಯನ್ನು ಕಿತ್ತು ಹೊರಗಡಿ ಇಟ್ಟಿರುವೆವು.. ಆದರೆ ಕಿತ್ತ ಬೇಲಿಯನ್ನು ಮತ್ತೆ ಕೊರಳಿಗೇ ಸುತ್ತುಕೊಂಡಿರುವೆವು.. ಈಗ ಬೇಲಿ ಕೀಳಲೂ ಆಗದೇ ಹಿಂದಡಿ ಇಡಲೂ ಆಗದೇ ಒದ್ದಾಡುತ್ತಿರುವೆವು.. ***** Published in Sakhi magazine 30.06.2012 ಕೆ.ಎ.ಸೌಮ್ಯ ಮೈಸೂರು