ಪೋಸ್ಟ್‌ಗಳು

origin of the language ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಾಷೆಯ ಉಗಮ (origin of language) : ಎಂ.ಎ.ಕನ್ನಡ

ಇಮೇಜ್
“ ಭಾಷೆ ” ಎಂದರೆ ಮಾಹಿತಿಯ ಸಂವನಕ್ಕಾಗಿ ರೂಪಿತವಾಗಿರುವ ಒಂದು ಸಂಕೇತಗಳ ಮಾಧ್ಯಮ. ಈ ಸಂಕೇತಗಳು ಉಚ್ಚರಿತವಾಗಬಹುದು ಅಥವಾ ಲಿಖಿತ ರೂಪದಲ್ಲಿರಬಹುದು. ಮಾನವ ತನ್ನ ಭಾವನೆ , ಚಿಂತನೆ , ಆಲೋಚನೆಗಳನ್ನು ಮತ್ತೊಬ್ಬರ ಬಳಿ ಹಂಚಿಕೊಳ್ಳಲು ರೂಢಿಸಿಕೊಂಡಿರುವ ಹಲವು ಮಾಧ್ಯಮಗಳಲ್ಲಿ “ ಭಾಷೆ ” ಪ್ರಧಾನವಾದುದು. ಪ್ರಾಣಿಗಳಲ್ಲಿ ಮನುಷ್ಯ ಅತ್ಯಂತ ವೇಗವಾಗಿ ವಿಕಸಿತಗೊಂಡ ಪ್ರಾಣಿ. ಭಾಷೆಯು ಮನುಷ್ಯನನ್ನು ಪ್ರಾಣಿ ಜಗತ್ತಿನಿಂದ ಬೇರ್ಪಡಿಸುತ್ತದೆ. ಭಾಷೆಯಿಂದ ಚಿಂತನೆ ಮಾಡಲು ಸಾಧ್ಯ. “ ಭಾಷೆ ” ಮತ್ತು “ ಚಿಂತನೆ ” ಇಲ್ಲದಿದ್ದರೆ ಅವನು ಇತರ ಪ್ರಾಣಿಗಳಂತೆ ಇದ್ದು ಬಿಡುತ್ತಿದ್ದ. ಹಾಗೆಂದ ಮಾತ್ರಕ್ಕೆ ಪ್ರಾಣಿಗಳು ಮಾತನಾಡುವುದೇ ಇಲ್ಲವೆಂದಲ್ಲ. ಪ್ರಾಣಿಗಳಲ್ಲಿಯೂ ಸಹ ಪರಸ್ಪರ ಸಂವಹನಕ್ಕಾಗಿ ಸಂಕೇತಗಳ ಭಾಷೆಯೊಂದಿದೆ.  ಅಲ್ಲದೇ ಗಿಡಮರಗಳಿಗೂ ಸಹ ಸಂವಹನ ಸಾಧ್ಯವಿದೆ.  ಉದಾಹರಣೆಗೆ ಗಿಡಗಳು ಕೀಟಗಳ ಆಕ್ರಮಣ ಮುಂತಾದ ಅಪಾಯಗಳನ್ನು ಅನೇಕ ಮಾರ್ಗಗಳಲ್ಲಿ ಅಂದರೆ ತಮ್ಮ ಎಲೆಗಳನ್ನು ಮಡಿಚುವುದರ ಮೂಲಕ , ಹೂಗಳನ್ನು ಮಡಿಚುವುದರ ಮೂಲಕ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಈ ಆಕ್ರಮಣದ ಬಗ್ಗೆ ಸಂದೇಶ ರವಾನಿಸುತ್ತವೆ. ಅದರೆ ಅವುಗಳ ಭಾಷೆಗೆ ವ್ಯಾಕರಣವಿಲ್ಲ. ಯಾವ ಭಾಷೆಯೂ ಯಾರಿಗೂ ಹುಟ್ಟಿದೊಡನೆ ಬರುವುದಿಲ್ಲ. ಭಾಷೆಯು ಮೂಲತಃ ಮನುಷ್ಯನಿಗೆ ಅನುಕರಣೆಯಿಂದ ಲಭ್ಯವಾಗುತ್ತದೆ. ನಾವು ಪ್ರತಿಯೊಂದು ಭಾಷೆಯನ್...